HITಮ್ಯಾನ್ ಡಬಲ್ ಸೆಂಚುರಿ ಫಿಕ್ಸ್ – ಕೊಹ್ಲಿ ಭವಿಷ್ಯ ನಿಜವಾಗುತ್ತಾ?
2ನೇ ಪಂದ್ಯದಲ್ಲೇ ಸರಣಿ ಕೈವಶ?

ಸೌತ್ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಕ್ಲೀನ್ ಸ್ವೀಪ್ ಆಗಿದ್ದ ಭಾರತ ಏಕದಿನ ಮಾದರಿಯಲ್ಲಿ ಫಸ್ಟ್ ಮ್ಯಾಚಲ್ಲೇ ಭರ್ಜರಿ ಗೆಲುವು ದಾಖಲಿಸಿದೆ. ಌಂಡ್ ಸರಣಿ ಗೆದ್ದು ರಿವೇಂಜ್ ತಗೊಳ್ಳೋ ಟಾರ್ಗೆಟ್ನಲ್ಲಿದೆ. ನಾಳೆ ಸರಣಿಯ ಎರಡನೇ ಪಂದ್ಯ ರಾಯ್ಪುರದಲ್ಲಿ ನಡೆಯಲಿದ್ದು ಈ ಮ್ಯಾಚ್ ಗೆದ್ರೆ ಇನ್ನೂ ಒಂದು ಪಂದ್ಯ ಬಾಕಿ ಇದ್ದಂತೆಯೇ ಸರಣಿ ಕೈವಶವಾಗುತ್ತೆ. ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯವನ್ನು ಗೆದ್ದಿರುವ ಟೀಮ್ ಇಂಡಿಯಾ ಇದೀಗ ಎರಡನೇ ಪಂದ್ಯದ ಮೇಲೆ ಕಣ್ಣಿಟ್ಟಿದೆ. ಡಿಸೆಂಬರ್ 3 ರಂದು ರಾಯ್‌ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಮ್ಯಾಚ್ ಫಿಕ್ಸ್ ಆಗಿದೆ. ಆಲ್ರೆಡಿ ಸೋಮವಾರ ಸಂಜೆಯೇ ಭಾರತ ತಂಡದ ಆಟಗಾರರು ರಾಯ್ಪುರ ತಲುಪಿದ್ದು ಪ್ರಾಕ್ಟೀಸ್ ನಡೆಸ್ತಿದ್ದಾರೆ. ಇಂಟ್ರೆಸ್ಟಿಂಗ್ ಅಂದ್ರೆ ಈ ಪಂದ್ಯದ ಆರಂಭಕ್ಕೂ ಮುನ್ನ ಕೊಹ್ಲಿ ಹೇಳಿದ್ದ ಮಾತು ಸಿಕ್ಕಾಪಟ್ಟೆ ಕ್ರೇಜ್ ಹೆಚ್ಚಿಸಿದೆ. ರೋಹಿತ್ ಶರ್ಮಾ ಡಬಲ್ ಸೆಂಚುರಿ ಈಸ್ ಲೋಡಿಂಗ್ ಎನ್ನುವಂಥ ಸಿಚುಯೇಷನ್ ಕ್ರಿಯೇಟ್ ಆಗಿದೆ.
ಇದನ್ನೂ ಓದಿ : ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲೂ ವೈಭವ್ ಸೂರ್ಯವಂಶಿ ಅಬ್ಬರ – 61 ಎಸೆತಗಳಲ್ಲಿ ಔಟಾಗದೇ 108 ರನ್
ರಾಯ್ ಪುರದಲ್ಲಿ ರೋಹಿತ್ ಡಬಲ್ ಸೆಂಚುರಿ ಬಾರಿಸ್ತಾರಾ?
ರಾಂಚಿಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಒನ್ ಮ್ಯಾನ್ ಶೋ ಥರ ಫರ್ಮಾಮ್ ಮಾಡಿದ್ರು. 135 ರನ್ ಬಾರಿಸಿ ಸೌತ್ ಆಫ್ರಿಕಾ ಬೌಲರ್ಗಳ ಚೆಂಡಾಡಿದ್ರು. ಕೊಹ್ಲಿ ರಣಾರ್ಭಟದ ಮುಂದೆ ಉಳಿದೆಲ್ಲಾ ಆಟಗಾರರು ಮಂಕಾಗಿದ್ರು. ಹೀಗಾಗಿ ಮುಂದಿನ ಪಂದ್ಯದಲ್ಲೂ ಕೊಹ್ಲಿ ಬಿಗ್ ಹಿಟ್ ಬರ್ಲಿ ಅನ್ನೋದು ಎಲ್ಲರ ನಿರೀಕ್ಷೆ ಆಗಿದೆ. ಹಾಗೇ ಎರಡನೇ ಪಂದದಲ್ಲಿ ರೋಹಿತ್ ಶರ್ಮಾ ಡಬಲ್ ಸೆಂಚುರಿ ಬಾರಿಸ್ತಾರಾ ಅನ್ನೋ ನಿರೀಕ್ಷೆ ಇದೆ. ಅದಕ್ಕೆ ಕಾರಣ ವಿರಾಟ್ ಕೊಹ್ಲಿ ಕೊಟ್ಟಿದ್ದ ಸ್ಟೇಟ್ಮೆಂಟ್. ಮೊದಲ ಪಂದ್ಯದ ಬಳಿಕ ಮಾತ್ನಾಡಿದ್ದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಏಕದಿನ ಕ್ರಿಕೆಟ್‌ನಲ್ಲಿ ಡಬಲ್ ಸೆಂಚುರಿ ಬಾರಿಸಬಹುದು. ಹಾಗೇ ಇನ್ನು ಎರಡು ದಿನಗಳಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅದನ್ನು ಗಳಿಸಬಹುದು ಎಂದು ನಾನು ಭಾವಿಸುತ್ತೇನೆ ಎಂದಿದ್ರು. ಸೋ ಕೊಹ್ಲಿ ಭವಿಷ್ಯ ನಿಜವಾಗುತ್ತಾ ಅಂತಾ ಫ್ಯಾನ್ಸ್ ಕೂಡ ಕಾಯ್ತಿದ್ದಾರೆ. ಯಾಕಂದ್ರೆ ಏಕದಿನ ಮಾದರಿಯಲ್ಲಿ ಕೊಹ್ಲಿಯಂತೆಯೇ ರೋಹಿತ್ ಕೂಡ ಪವರ್ ಹಿಟ್ಟರ್. ಹಲವು ದಾಖಲೆಗಳ ಸರದಾರ ಕೂಡ.
ಏಕದಿನ ಮಾದರಿಯಲ್ಲಿ 3 ದ್ವಿಶತಕ ಸಿಡಿಸಿದ ವಿಶ್ವದ ಏಕೈಕ ಬ್ಯಾಟರ್!
ಏಕದಿನ ಮಾದರಿಯಲ್ಲಿ ಸೆಂಚುರಿ ಹೊಡ್ಯೋದೇ ಸಾಧನೆ. ಅಂತಾದ್ರಲ್ಲಿ ಡಬಲ್ ಸೆಂಚುರಿ ಅಂದ್ರೆ ಅದು ದೊಡ್ಡ ತಪಸ್ಸು. ಅದ್ರಲ್ಲೂ ಮೂರ್ಮೂರು ಡಬಲ್ ಸೆಂಚುರಿ ಅಂದ್ರೆ ರೋಹಿತ್ ಎಂಥಾ ಬ್ಯಾಟರ್ ಅನ್ನೋದು ನಿಮ್ಗೇ ಗೊತ್ತಾಗುತ್ತೆ. ಜಗತ್ತಿನಲ್ಲೇ ಒಡಿಐನಲ್ಲಿ ಮೂರು ದ್ವಿಶತಕ ಸಿಡಿಸಿದ ಏಕೈಕ ಬ್ಯಾಟರ್ ರೋಹಿತ್ ಶರ್ಮಾ. ಈ ಲಿಸ್ಟ್ನಲ್ಲಿ ಸಿಂಗಲ್ ಡಬಲ್ ಸೆಂಚುರಿ ಸುಮಾರು ಇದೆಯಾದ್ರೂ ಎರಡು ಡಬಲ್ ಸೆಂಚುರಿಯೂ ಯಾರಿಂದಲೂ ಬಂದಿಲ್ಲ. ಅಲ್ದೇ ಹೈಯೆಸ್ಟ್ ಸಿಕ್ಸರ್ಗಳ ಪಟ್ಟಿಯಲ್ಲೂ ರೋಹಿತ್ ನಂಬರ್ 1 ಇದ್ದಾರೆ. 352 ಸಿಕ್ಸ್ ಸಿಡಿಸೋ ಮೂಲಕ ನಂಬರ್ 1 ಪಟ್ಟಕ್ಕೇರಿದ್ದಾರೆ. ಹೀಗಾಗಿ ಕೊಹ್ಲಿ ಕೂಡ ರೋಹಿತ್ರಿಂದ ಮತ್ತೊಂದು ದ್ವಿಶತಕ ನಿರೀಕ್ಷೆ ಮಾಡ್ಬೋದು ಎಂದಿದ್ದಾರೆ.
ಸೋಲು-ಗೆಲುವಿನಲ್ಲಿ ಜೊತೆಯಲ್ಲೇ ಇರುವ ಜೋಡೆತ್ತು!
ಟೀಂ ಇಂಡಿಯಾದಲ್ಲಿ ರೋಹಿತ್ ಮತ್ತು ಕೊಹ್ಲಿ ಏಕದಿನ ಮಾದರಿಯಲ್ಲಿ ಮಾತ್ರನೇ ಆಡ್ತಿರೋದು. 2027ರ ಐಸಿಸಿ ವಿಶ್ವಕಪ್ವರೆಗೂ ಆಡ್ಬೇಕು ಅನ್ಕೊಂಡಿದ್ದಾರೆ. ಬಟ್ ಬಿಸಿಸಿಐ ಇದಕ್ಕೆ ಒಪ್ಪುತ್ತಾ ಅನ್ನೋದೇ ಈಗಿರೋ ಪ್ರಶ್ನೆ. ಆದ್ರೆ ಪ್ರತೀ ಹಂತದಲ್ಲೂ ರೋಹಿತ್ ಮತ್ತು ಕೊಹ್ಲಿ ಒಬ್ಬರನ್ನ ಒಬ್ಬರು ಬಿಟ್ಟುಕೊಡಲ್ಲ. ವೀ ಆರ್ ಬ್ರದರ್ಸ್ ಫ್ರಂ ಅನದರ್ ಮದರ್ಸ್ ಅನ್ನೋ ಥರನೇ ಇದ್ದಾರೆ. ಒಟ್ಟೊಟ್ಟಿಗೆ ಆಡಿ ಬಂದವರು ಟಿ-20ಐ ಹಾಗೇ ಟೆಸ್ಟ್ ಗೂ ಒಂದೇ ಸಲ ನಿವೃತ್ತಿ ಘೋಷಿಸಿದ್ದಾರೆ. ಌಂಡ್ ಮೈದಾನದಲ್ಲಿ ಆಡುವಾಗಲೂ ಒಬ್ಬರ ಗೆಲುವನ್ನ ಮತ್ತೊಬ್ಬರು ಸೆಲೆಬ್ರೇಟ್ ಮಾಡ್ತಾನೇ ಇದ್ದಾರೆ. ಆಸೀಸ್ ನೆಲದಲ್ಲಿ ರೋಹಿತ್ ಶತಕ ಬಾರಿಸಿದಾಗ ವಿರಾಟ್ ಕೊಹ್ಲಿ ಜೊತೆಗೇ ಇದ್ದು ಬೆನ್ನು ತಟ್ಟಿದ್ರು. ಈಗ ಸೌತ್ ಆಫ್ರಿಕಾ ವಿರುದ್ಧ ಕೊಹ್ಲಿ ಶತಕ ಬಾರಿಸಿದಾಗ ಡಗೌಟ್ನಲ್ಲಿದ್ದ ರೋಹಿತ್ ಫುಲ್ ಅಗ್ರೆಸ್ಸಿವ್ ಮೋಡ್ನಲ್ಲೇ ಸೆಲೆಬ್ರೇಟ್ ಮಾಡಿದ್ರು. ಹೀಗಾಗಿ ಇವ್ರಿಬ್ಬರ ಪರ್ಫಾಮೆನ್ಸ್ ಮೇಲೆ ಎಲ್ಲರ ಕಣ್ಣಿದೆ.
2ನೇ ಪಂದ್ಯ ಗೆದ್ರೆ ಸರಣಿ ಕೈವಶ!
ಇನ್ನು ರಾಯ್ಪುರದಲ್ಲಿ ನಾಳೆ ನಡೆಯಲಿರೋ ಎರಡನೇ ಪಂದ್ಯದಲ್ಲಿ ಭಾರತ ಗೆದ್ರೆ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿ ಕೈವಶವಾಗುತ್ತೆ. ಮತ್ತೊಂದೆಡೆ ದಕ್ಷಿಣ ಆಫ್ರಿಕಾಗೆ ಸರಣಿ ಜೀವಂತವಿರಿಸಿಕೊಳ್ಳಬೇಕಾದ ಒತ್ತಡದಲ್ಲಿದೆ. ಹೀಗಾಗಿ ಈ ಪಂದ್ಯದಲ್ಲಿ ಟಫ್ ಫೈಟ್ ನಿರೀಕ್ಷೆ ಮಾಡ್ಬೋದು. ಹಾಗೇ ಟೆಂಬಾ ಬವುಮಾ ತಂಡಕ್ಕೆ ಕಮ್ ಬ್ಯಾಕ್ ಮಾಡಲಿದ್ದು ಹರಿಣಗಳ ಪಡೆ ಮತ್ತಷ್ಟು ಸೂಪರ್ ಸ್ಟ್ರಾಂಗ್ ಆಗಲಿದೆ. ಆದ್ರೆ ಭಾರತ ತಂಡದ ಪ್ಲೇಯಿಂಗ್ 11ನಲ್ಲಿ ಯಾವುದೇ ಬದಲಾವಣೆ ಇರಲ್ಲ. ಕಳೆದ ಪಂದ್ಯದ ಆಟಗಾರರೇ ಇಲ್ಲಿನ ಪಂದ್ಯಕ್ಕೂ ಕಂಟಿನ್ಯೂ ಆಗುವ ನಿರೀಕ್ಷೆ ಇದೆ. ಇನ್ನು ಪಿಚ್ ಬಗ್ಗೆ ನೋಡೋದಾದ್ರೆ ಇದುವರೆಗೆ ಕೇವಲ ಒಂದೇ ಒಂದು ಒಡಿಐ ಪಂದ್ಯ ನಡೆದಿದೆ. 2023ರಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ 8 ವಿಕೆಟ್ ಅಂತರದಿಂದ ಗೆದ್ದಿತ್ತು. ಐಪಿಎಲ್ ಮತ್ತು ಟಿ20 ಪಂದ್ಯಗಳ ರಿಸಲ್ಟ್ ನೋಡಿದ್ರೆ ಬೌಲಿಂಗ್ ಸ್ನೇಹಿ ಪಿಚ್ ಮತ್ತು ಲೋ ಸ್ಕೋರಿಂಗ್ ಮೈದಾನವಾಗಿದೆ. ಬೌಲರ್‌ಗಳು ಹೆಚ್ಚಿನ ಸ್ವಿಂಗ್ ಪಡೆಯಬಹುದು.

ನೋಡಿರಿ

