IND Vs SA ಟೆಸ್ಟ್ ಫೈಟ್ – ನಿತೀಶ್ ರೆಡ್ಡಿ ದಿಢೀರ್ ಕೈ ಬಿಟ್ಟಿದ್ದೇಕೆ?
ಭಾರತದ ಪ್ಲೇಯಿಂಗ್ 11 ಹೇಗಿದೆ?

ಭಾರತ ಮತ್ತು ಸೌತ್ ಆಫ್ರಿಕಾ ನಡುವಿನ ಟೆಸ್ಟ್ ಸರಣಿಗೆ ಕೌಂಟ್ಡೌನ್ ಸ್ಟಾರ್ಟ್ ಆಗಿದೆ.. ನಾಳೆ ಮೊದಲ ಪಂದ್ಯ ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿದ್ದು, ಈ ಮ್ಯಾಚ್ ಉಭಯ ತಂಡಗಳಿಗೂ ಮೋಸ್ಟ್ ಇಂಪಾರ್ಟೆಂಟ್ ಆಗುತ್ತೆ. ಯಾಕಂದ್ರೆ ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ಪಾಯಿಂಟ್ಸ್ ಪಟ್ಟಿಯಲ್ಲಿ ಟಾಪ್ 2ಗೆ ಜಂಪ್ ಆಗೋಕೆ ಕಾರಣ ಆಗುತ್ತೆ. ಪಂದ್ಯದ ಆರಂಭಕ್ಕೂ ಮೊದ್ಲೇ ಭಾರತ ತಂಡದಲ್ಲಿ ಅತಿದೊಡ್ಡ ಬದಲಾವಣೆ ಮಾಡಿದ್ದಾರೆ. ಸ್ಟಾರ್ ಆಲ್ರೌಂಡರ್ನ ತಂಡದಿಂದಲೇ ಡ್ರಾಪ್ ಮಾಡಿದ್ದಾರೆ.
ಇದನ್ನೂ ಓದಿ : ವಧು-ವರನಿಗೆ ಆಶೀರ್ವದಿಸಲು ಮದುವೆ ಮಂಟಪಕ್ಕೆ ಬಂದ ತಿರುಪತಿ ತಿಮ್ಮಪ್ಪ!
ನವೆಂಬರ್ 14 ಅಂದ್ರೆ ಶುಕ್ರವಾರದಿಂದ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಮೊದಲ ಟೆಸ್ಟ್ ಮ್ಯಾಚ್ ಆರಂಭವಾಗಲಿದೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಹಾಲಿ ಚಾಂಪಿಯನ್ಸ್ ಆಗಿರೋ ಸೌತ್ ಆಫ್ರಿಕಾ ಪಡೆ ರೆಡ್ ಬಾಲ್ ಫಾರ್ಮೆಟ್ನಲ್ಲೇ ಅದೇ ಲೆಗಸಿಯನ್ನ ಕಂಟಿನ್ಯೂ ಮಾಡೋ ಇಂಟೆನ್ಷನ್ನಲ್ಲೇ ಕಣಕ್ಕಿಳಿಯಲಿದೆ. ಇತ್ತ ಹೋಂ ಪಿಚ್ ಅಡ್ವಾಂಟೇಜ್ನೊಂದಿಗೆ ಭಾರತ ತಂಡ ಕೂಡ ವೈಟ್ ವಾಶ್ ಟಾರ್ಗೆಟ್ನಲ್ಲಿದೆ. ಇಂಟ್ರೆಸ್ಟಿಂಗ್ ಅಂದ್ರೆ ಪಂದ್ಯದ ಆರಂಭಕ್ಕೆ ಇನ್ನೊಂದೇ ದಿನ ಬಾಕಿ ಇರುವಾಗ ತಂಡದಲ್ಲಿ ಬಿಗ್ ಟ್ವಿಸ್ಟ್ ಸಿಕ್ಕಿದೆ.
ನಿತೀಶ್ ಕುಮಾರ್ ರೆಡ್ಡಿಯನ್ನ ದಿಢೀರ್ ಕೈ ಬಿಟ್ಟಿದ್ದೇಕೆ?
ಮೊದಲ ಪಂದ್ಯದ ಆರಂಭಕ್ಕೆ ಒಂದೇ ದಿನ ಬಾಕಿ ಇರುವಾಗ ಟೀಮ್ ಇಂಡಿಯಾದ ಯುವ ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿಯನ್ನು ತಂಡದಿಂದ ಕೈ ಬಿಡಲಾಗಿದೆ. ಇದಕ್ಕೆ ಮುಖ್ಯ ಕಾರಣ ಪ್ಲೇಯಿಂಗ್ ಇಲೆವೆನ್ ಗೆ ಸೆಲೆಕ್ಟ್ ಆಗದೆ ಇರೋದು. ಯಾಕಂದ್ರೆ ಮೊದಲ ಪಂದ್ಯಕ್ಕೆ ಪ್ಲೇಯಿಂಗ್ 11ನಲ್ಲಿ ಧ್ರುವ್ ಜುರೆಲ್ ಸ್ಥಾನ ಪಡೆಯಲಿದ್ದಾರೆ. ಸೌತ್ ಆಫ್ರಿಕಾ ಎ ವಿರುದ್ಧದ ಪಂದ್ಯಗಳಲ್ಲಿ ಜುರೆಲ್ ಎರಡು ಅಜೇಯ ಶತಕಗಳನ್ನು ಬಾರಿಸಿದ್ರು. ಅದೂ ಅಲ್ದೇ ಈಡನ್ ಗಾರ್ಡನ್ಸ್ ಮೈದಾನವು ಸ್ಪಿನ್ ಫ್ರೆಂಡ್ಲಿ ಪಿಚ್ ಆಗಿದೆ. ಸೋ ಆಲ್ರೌಂಡರ್ ಆಲ್ರೌಂಡರ್ ಗಳಾಗಿ ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್ ರನ್ನ ಕಣಕ್ಕಿಳಿಯುವ ಸಾಧ್ಯತೆಯಿದೆ. ಜೊತೆಗೆ ಅಕ್ಷರ್ ಪಟೇಲ್ ಕೂಡ ತಂಡದಲ್ಲಿ ಇರೋದ್ರಿಂದ ನಿತೀಶ್ ರೆಡ್ಡಿನ ಬೆಂಚ್ ಕಾಯಿಸ್ಬೇಕು. ಅದ್ರ ಬದ್ಲು ಭಾರತ ಎ ಮತ್ತು ಸೌತ್ ಆಫ್ರಿಕಾ ಎ ನಡುವಿನ ಏಕದಿನ ಪಂದ್ಯದಲ್ಲಿ ಕಣಕ್ಕಿಳಿಯುವಂತೆ ಸೂಚಿಸಲಾಗಿದೆ.
ಭಾರತದ ಸಂಭಾವ್ಯ ಪ್ಲೇಯಿಂಗ್ 11
ಯಶಸ್ವಿ ಜೈಸ್ವಾಲ್
ಕೆಎಲ್ ರಾಹುಲ್
ಸಾಯಿ ಸುದರ್ಶನ್
ಶುಭ್ ಮನ್ ಗಿಲ್
ರಿಷಭ್ ಪಂತ್
ಧ್ರುವ್ ಜುರೇಲ್
ರವೀಂದ್ರ ಜಡೇಜಾ
ವಾಷಿಂಗ್ಟನ್ ಸುಂದರ್
ಕುಲ್ದೀಪ್ ಯಾದವ್
ಜಸ್ಪ್ರೀತ್ ಬುಮ್ರಾ
ಮೊಹಮ್ಮದ್ ಸಿರಾಜ್
ಉಳಿದಂತೆ ಆಕಾಶ್ ದೀಪ್ ಹಾಗೇ ಅಕ್ಷರ್ ಪಟೇಲ್ ಬೆಂಚ್ ಕಾಯಬಹುದು. ಌಂಡ್ ಅಕ್ಷರ್ ಅಥವಾ ಕುಲ್ದೀಪ್ ಅಂತಾ ಬಂದಾಗ ಯಾರಿಗೆ ಚಾನ್ಸ್ ಸಿಗುತ್ತೆ ಅನ್ನೋದೂ ಕೂಡ ಕುತೂಹಲ ಮೂಡಿಸಿದೆ. ಪ್ಯೂರ್ ಬೌಲರ್ ಬೇಕು ಅಂತಾದಾರ ಕುಲ್ದೀಪ್ ಫಸ್ಟ್ ಚಾಯ್ಸ್ ಆಯ್ತಾರೆ. ಇಲ್ಲ ಬ್ಯಾಟಿಂಗ್ಗೂ ಪ್ರಿಪರೆನ್ಸ್ ಕೊಡ್ಬೇಕು ಅಂದ್ರೆ ಅಕ್ಷರ್ ಪಟೇಲ್ಗೆ ಮಣೆ ಹಾಕ್ಬೋದು. ಆದ್ರಿಲ್ಲ ಟಾಪ್ 6 ಬ್ಯಾಟಿಂಗ್ ಆರ್ಡರ್ ವರೆಗೂ ಪ್ಯೂರ್ ಬ್ಯಾಟರ್ಸ್ ಇರೋದ್ರಿಂದ ಬಹುಶಃ ಕುಲ್ದೀಪ್ ಚಾನ್ಸ್ ಪಡೆಯೋದು ಜಾಸ್ತಿ ಇದೆ. ಌಂಡ್ ಕೊಲ್ಕತ್ತಾ ಪಿಚ್ ಕೂಡ ಸ್ಪಿನ್ ಫ್ರೆಂಡ್ಲಿಯಾಗಿದೆ.
ಸ್ಪಿನ್ ಫ್ರೆಂಡ್ಲಿ ಪಿಚ್ ನಲ್ಲಿ ಯಾರ ಮೇಲುಗೈ?
ಆರು ವರ್ಷಗಳ ಬಳಿಕ ಕೋಲ್ಕತಾದ ಈಡನ್ ಗಾರ್ಡನ್ಸ್‌ನಲ್ಲಿ ಟೆಸ್ಟ್ ಕ್ರಿಕೆಟ್ ಮ್ಯಾಚ್ ನಡೆಯಲಿದೆ. ಗಿಲ್ ನಾಯಕತ್ವದ ಭಾರತ ತಂಡವು ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಅಗ್ರಸ್ಥಾನದ ಟಾರ್ಗೆಟ್ ಹೊಂದಿದೆ. ಇತ್ತ ದಕ್ಷಿಣ ಆಫ್ರಿಕಾ ಭಾರತದ ನೆಲದಲ್ಲಿ ಮೊದಲ ಸರಣಿ ಗೆಲುವಿನ ನಿರೀಕ್ಷೆಯಲ್ಲಿದೆ. ಇನ್ನು ಕೊಲ್ಕತ್ತಾದ ಪಿಚ್ ಬಗ್ಗೆ ಹೇಳೋದಾದ್ರೆ ಕಪ್ಪು ಮಣ್ಣಿನಿಂದ ಮಾಡಿದ ಈ ಪಿಚ್‌ನಲ್ಲಿ ವೇಗಿಗಳಿಗೆ ರಿವರ್ಸ್ ಸ್ವಿಂಗ್ ಸಿಗುವ ಚಾನ್ಸಸ್ ಇರುತ್ತೆ. ಹಾಗೇ ಕಳೆದ ವರ್ಷ ನ್ಯೂಜಿಲೆಂಡ್ ವಿರುದ್ಧ ಸ್ಪಿನ್ ಪಿಚ್ ತಯಾರಿಸಿ ಭಾರತ ಮೂರಕ್ಕೆ ಮೂರೂ ಪಂದ್ಯಗಳನ್ನ ಸೋತಿದೆ. ಹೀಗಾಗಿ ಈ ಸರಣಿಗೆ ಅಲರ್ಟ್ ಆಗಿದೆ. ಜೊತೆಗೆ ದಕ್ಷಿಣ ಆಫ್ರಿಕಾದ ಸ್ಪಿನ್ ವಿಭಾಗ ಈ ಬಾರಿ ತುಂಬಾನೇ ಸ್ಟ್ರಾಂಗ್ ಆಗಿ ಕಾಣ್ತಿದೆ. ಕೇಶವ್ ಮಹಾರಾಜ್ ಸ್ಪಿನ್ ಬೌಲಿಂಗ್ ಮೂಲಕ ಕಾಟ ನೀಡಬಲ್ಲರು. ಪಾಕಿಸ್ತಾನದ ಸ್ಪಿನ್ ಪಿಚ್‌ನಲ್ಲಿ ದಕ್ಷಿಣ ಆಫ್ರಿಕಾ ಟೆಸ್ಟ್ ಮ್ಯಾಚ್ ಗೆದ್ದಿರೋದನ್ನ ಇಲ್ಲಿ ಮರೆಯೋಕಾಗಲ್ಲ. ಹೀಗಾಗಿ ಭಾರತ ಕೂಡ ಎಚ್ಚರಿಕೆಯಿಂದಲೇ ಆಡ್ಬೇಕಾಗುತ್ತೆ. ಪ್ರಸ್ತುತ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಅಂಕ ಪಟ್ಟಿಯಲ್ಲಿ ಭಾರತ 3ನೇ ಸ್ಥಾನದಲ್ಲಿದೆ. 2025-27ನೇ ಸಾಲಿನಲ್ಲಿ ಆಡಿರುವ 7 ಪಂದ್ಯಗಳಲ್ಲಿ 4ರಲ್ಲಿ ಗೆದ್ದು 2 ಸೋಲು ಕಂಡಿದೆ. ಹಾಗೇ 1ರಲ್ಲಿ ಡ್ರಾ ಸಾಧಿಸಿದ್ದು, ಗೆಲುವಿನ ಶೆಕಡಾವಾರು 61.90 ಆಗಿದೆ. ಇನ್ನು ದಕ್ಷಿಣ ಆಫ್ರಿಕಾ ಈ ರೇಸ್ನಲ್ಲಿ 2 ಟೆಸ್ಟ್ ಪಂದ್ಯಗಳನ್ನು ಆಡಿದ್ದು 1 ರಲ್ಲಿ ಗೆದ್ದು ಒಂದರಲ್ಲಿ ಸೋಲು ಕಂಡಿದೆ. ಶೇಕಡಾ 50ರಷ್ಟು ಗೆಲುವು ಹೊಂದಿದ್ದು ಐದನೇ ಸ್ಥಾನದಲ್ಲಿದೆ.

ನೋಡಿರಿ

