ಪಾಂಡ್ಯ FIRE.. ಬೌಲರ್ಸ್ POWER – ಫಸ್ಟ್ ಮ್ಯಾಚಲ್ಲೇ ಪಲ್ಟಿ ಹೊಡೆದ SA
T-20Iನಲ್ಲಿ ಟಚ್ ಕೂಡ ಮಾಡಂಗಿಲ್ಲ!

ಟೆಸ್ಟ್ ನಲ್ಲಿ ಸೋಲಿಸ್ಬೋದು.. ಏಕದಿನದಲ್ಲಿ ಏರಿಳಿತ ಇರ್ಬೋದು. ಬಟ್ ಟಿ20ಐ ಅಂತಾ ಬಂದಾಗ ಟೀಂ ಇಂಡಿಯಾವನ್ನ ಟಚ್ ಕೂಡ ಮಾಡೋಕ್ ಆಗಲ್ಲ ಅನ್ನೋದು ಮತ್ತೊಮ್ಮೆ ಪ್ರೂವ್ ಆಯ್ತು. ಸೌತ್ ಆಫ್ರಿಕಾ ವಿರುದ್ಧದ ಮೊದಲ ಟಿ-20ಐ ಪಂದ್ಯದಲ್ಲಿ ಒನ್ ಸೈಡೆಡ್ ಆಗಿ ಭಾರತ ಭರ್ಜರಿ ಗೆಲುವು ಸಾಧಿಸಿದೆ. 5 ಪಂದ್ಯಗಳ ಸರಣಿಯಲ್ಲಿ ಫಸ್ಟ್ ಮ್ಯಾಚ್ ಗೆದ್ದು ಲೀಡ್ ಸಾಧಿಸಿದೆ.
ಇದನ್ನೂ ಓದಿ : ಅಭಿ & ಸಂಜು BEST ಓಪನರ್ಸ್ – ಗಿಲ್ ನಂಬಿ ಕಾಂಬಿನೇಷನ್ ಫೇಲ್
ಭಾರತ ಮತ್ತು ಸೌತ್ ಆಫ್ರಿಕಾ ನಡುವಿನ ಮೊದಲ ಟಿ20ಐ ಪಂದ್ಯ ಕಟಕ್ನ ಬಾರಬತಿ ಸ್ಟೇಡಿಯಂನಲ್ಲಿ ನಡೀತು. ಈ ಪಂದ್ಯದಲ್ಲಿ ಭಾರತದ ಪ್ಲೇಯಿಂಗ್ 11ನಲ್ಲಿ ಹಾರ್ದಿಕ್ ಪಾಂಡ್ಯ ಕಂ ಬ್ಯಾಕ್ ಮಾಡಿದ್ರೆ ಸಂಜು ಬದಲಿಗೆ ಜಿತೇಶ್ ಶರ್ಮಾ ವಿಕೆಟ್ ಕೀಪರ್ ಆಗಿ ಸ್ಥಾನ ಪಡೆದಿದ್ರು. ಉಳಿದಂತೆ ದೊಡ್ಡ ಬದಲಾವಣೆ ಏನೂ ಇರ್ಲಿಲ್ಲ. ಇನ್ನು ಈ ಮ್ಯಾಚಲ್ಲಿ ಒನ್ಸ್ ಅಗೇನ್ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ಗೆ ಟಾಸ್ ಕೈಕೊಡ್ತು. ಟಾಸ್ ಗೆದ್ದ ಹರಿಣಪಡೆ ಫಸ್ಟ್ ಬೌಲಿಂಗ್ ಚೂಸ್ ಮಾಡಿಕೊಳ್ತು. ಆದ್ರೆ ಬ್ಯಾಟಿಂಗ್ಗೆ ಬಂದ ಭಾರತದ ಪರ ಹೀರೋ ಆಗಿದ್ದು ಹಾರ್ದಿಕ್ ಪಾಂಡ್ಯ ಮಾತ್ರನೇ.
ಭಾರತದ ಪರ ಅದ್ಭುತ ಪ್ರದರ್ಶನ ನೀಡಿದ ಪಾಂಡ್ಯ!
ಟಾಸ್ ಸೋತು ಬ್ಯಾಟಿಂಗ್ಗೆ ಬಂದ ಭಾರತದ ಪರ ಅಭಿಷೇಕ್ ಶರ್ಮಾ ಹಾಗೇ ಶುಭ್ಮನ್ ಗಿಲ್ ಇನ್ನಿಂಗ್ಸ್ ಆರಂಭಿಸಿದ್ರು. ಆದ್ರೆ ಇವತ್ತಿನ ಮ್ಯಾಚಲ್ಲೂ ಗಿಲ್ ಕ್ಲಿಕ್ ಆಗ್ಲಿಲ್ಲ. ಫಸ್ಟ್ ಓವರ್ನಲ್ಲೇ ಲುಂಗಿ ಎನ್ಗಿಡಿಗೆ ವಿಕೆಟ್ ಒಪ್ಪಿಸಿದ್ರು. ನೆಕ್ಸ್ಟ್ ಅಭಿಷೇಕ್ ಸೂರ್ಯ ಜೋಡಿ ಸ್ಕೋರ್ ಬಿಲ್ಡ್ ಮಾಡ್ತಾರೆ ಅನ್ಕೊಂಡ್ರೆ 12 ರನ್ಗಳಿಗೆ ಸೂರ್ಯ ಕೂಡ ಪೆವಿಲಿಯನ್ ಸೇರ್ಕೊಂಡ್ರು. ಅಭಿಷೇಕ್ 17 ರನ್ಗಳಿಗೆ ಔಟಾದ್ರೆ ಸ್ಕೋವಾಗಿ ಆಡಿದ ತಿಲಕ್ ವರ್ಮಾ 26 ರನ್ ಗಳಿಸಿ ಕ್ಯಾಚ್ ಕೊಟ್ರು. ಇನ್ನು ಅಕ್ಷರ್ ಪಟೇಲ್ ಮತ್ತು ಹಾರ್ದಿಕ್ ಪಾಂಡ್ಯ ಜೋಡಿ ಜವಾಬ್ದಾರಿಯುತವಾಗಿ ಆಡುವಾಗ್ಲೇ 23 ರನ್ಗಳಿಗೆ ಅಕ್ಷರ್ ಆಟ ಕೂಡ ಮುಗೀತು. ಬಟ್ ವಿಕೆಟ್ಗಳು ಬೀಳ್ತಿದ್ರೂ ಪಾಂಡ್ಯ ಮಾತ್ರ ಒನ್ ಮ್ಯಾನ್ ಶೋ ಥರ ಸೌತ್ ಆಫ್ರಿಕಾ ಬೌಲರ್ಗಳನ್ನ ಅಟ್ಟಾಡಿಸಿದ್ರು. 28 ಎಸೆತಗಳಲ್ಲಿ 6 ಫೋರ್ ಹಾಗೇ 4 ಸಿಕ್ಸರ್ಗಳ ಸಹಿತ 59 ರನ್ಸ್ ಕಲೆ ಹಾಕಿದ್ರು. ಇನ್ನು ದುಬೆ 11 ರನ್ ಹಾಗೇ ಜಿತೇಶ್ ಶರ್ಮಾ 10 ರನ್ ಗಳಿಸಿದ್ದು 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ ಭಾರತ 175 ರನ್ಗಳನ್ನ ಕಲೆ ಹಾಕಿತು. ಌಂಡ್ ಹರಿಣಪಡೆಗೆ 176 ರನ್ಗಳ ಟಾರ್ಗೆಟ್ ನೀಡಿದ್ರು.
74 ರನ್ ಗಳಿಗೆ ಆಲೌಟ್ ಆದ ಸೌತ್ ಆಫ್ರಿಕಾ!
ಭಾರತದ ಟಾಪ್ ಆರ್ಡರ್ ಬ್ಯಾಟರ್ಗಳನ್ನ ಬೇಗನೇ ಪೆವಿಲಿಯನ್ ಸೇರಿಸಿದ್ದ ಹರಿಣಪಡೆ ಬೌಲರ್ಸ್ 150ರನ್ಸ್ ಒಳಗೆ ಭಾರತವನ್ನ ಕಟ್ಟಿಹಾಕೋ ಪ್ಲ್ಯಾನ್ ಮಾಡಿದ್ರು. ಬಟ್ ಪಾಂಡ್ಯ ರಿದಮ್ಗೆ 170ರ ಗಡಿ ದಾಟಿತ್ತು. ಹೀಗಿದ್ರೂ ಚೇಸಿಂಗ್ ಮಾಡೋ ಟಾರ್ಗೆಟ್ನಲ್ಲೇ ಇನ್ನಿಂಗ್ಸ್ ಆರಂಭಿಸಿದವ್ರಿಗೆ ಅರ್ಶದೀಪ್ ಸಿಂಗ್ ಫಸ್ಟ್ ಓವರ್ನಲ್ಲೇ ವಿಕೆಟ್ ಎಗರಿಸಿ ಶಾಕ್ ಕೊಟ್ಟಿದ್ರು. ಌಂಡ್ ನೆಕ್ಸ್ಟ್ ಯಾವ ಬ್ಯಾಟರ್ ಕೂಡ ಕ್ರೀಸ್ ಕಚ್ಚಿ ನಿಲ್ಲೋಕೆ ಚಾನ್ಸೇ ಕೊಡ್ಲಿಲ್ಲ. ಭಾರತದ ಪರ ಬೌಲ್ ಮಾಡಿದವ್ರೆಲ್ಲಾ ವಿಕೆಟ್ ಎಗರಿಸ್ತಾನೇ ಹೋದ್ರು. ಹೀಗಾಗಿ ಡೆವಾಲ್ಡ್ ಬ್ರೇವಿಸ್ 22 ರನ್ ಗಳಿಸಿದ್ದೇ ಸೌತ್ ಆಫ್ರಿಕಾ ಪರ ಹೈಯೆಸ್ಟ್ ಸ್ಕೋರ್ ಆಯ್ತು. ಅಂತಿಮವಾಗಿ 12.3ನೇ ಓವರ್ನಲ್ಲೇ 74 ರನ್ಗಳಿಗೆ ಸೌತ್ ಆಫ್ರಿಕಾ ಆಲೌಟ್ ಆಯ್ತು. ಈ ಮೂಲಕ ಭಾರತ 101 ರನ್ಗಳು ಬಿಗ್ ಮಾರ್ಜಿನ್ನಿಂದ ಮ್ಯಾಚ್ ವಿನ್ ಆಯ್ತು. ಇನ್ನು ಈ ಪಂದ್ಯದಲ್ಲಿ ಭಾರತಕ್ಕೆ ಏನೆಲ್ಲಾ ಪ್ಲಸ್ ಆಯ್ತು ಅನ್ನೋದನ್ನ ನೋಡ್ತಾ ಹೋದ್ರೆ ಮೊದಲನೇದಾಗಿ..
ಭಾರತಕ್ಕೆ ಏನೆಲ್ಲಾ ಪ್ಲಸ್?
- ಬ್ಯಾಟಿಂಗ್ ನಲ್ಲಿ ಪಾಂಡ್ಯ ಒನ್ ಮ್ಯಾನ್ ಶೋ
- ಭಾರತದ ಪರ ಎಲ್ಲಾ ಬೌಲರ್ ಗಳು ವಿಕೆಟ್ ಬೇಟೆ
- ವಿಕೆಟ್ ಕೀಪಿಂಗ್ ನಲ್ಲಿ ಜಿತೇಶ್ ಶರ್ಮಾ 4 ಕ್ಯಾಚ್
- ಫೀಲ್ಡಿಂಗ್ ನಲ್ಲಿ ಆಟಗಾರರ ಅದ್ಭುತ ಪ್ರದರ್ಶನ
- ಸೌತ್ ಆಫ್ರಿಕಾ ಪರ ಬ್ಯಾಟರ್ಸ್ ಗಳ ವೈಫಲ್ಯ
ಭಾರತದ ಗೆಲುವಿಗೆ ಇದೆಲ್ಲಾ ಕಾರಣವಾಗಿದೆ. ಸದ್ಯ ಐದು ಪಂದ್ಯಗಳ ಸರಣಿಯಲ್ಲಿ 1 ಮ್ಯಾಚ್ ವಿನ್ ಆಗಿ ಆಯ್ತು. ನೆಕ್ಸ್ಟ್ ನಾಲ್ಕು ಪಂದ್ಯಗಳಿದ್ದು ಎರಡು ಮ್ಯಾಚ್ ಗೆದ್ರೂ ಸರಣಿ ಕೈವಶವಾಗುತ್ತೆ. ಬಟ್ ಉಳಿದಿರೋ ಎಲ್ಲಾ ಪಂದ್ಯಗಳನ್ನೂ ಗೆದ್ದು ಸೌತ್ ಆಫ್ರಿಕಾ ತಂಡವನ್ನ ಕ್ಲೀನ್ ಸ್ವೀಪ್ ಮಾಡಬೇಕಿದೆ. ಟೆಸ್ಟ್ ಕ್ಲೀನ್ ಸ್ವೀಪ್ಗೆ ಟಿ-20ಐನಲ್ಲಿ ಅದೇ ಥರ ರಿವೇಂಜ್ ತಗೊಳ್ಬೇಕಿದೆ.

ನೋಡಿರಿ

