ಇಂದಿನಿಂದ ದ. ಆಫ್ರಿಕಾ ವಿರುದ್ಧದ ಟಿ20 ಸರಣಿ ಆರಂಭ – ಹರಿಣ ಪಡೆಯನ್ನ ಕಟ್ಟಿ ಹಾಕುತ್ತಾ ಟೀಂ IND

ಭಾರತ ಮತ್ತು ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ 5 ಪಂದ್ಯಗಳ ಟಿ20 ಸರಣಿಗೆ ಇಂದಿನಿಂದ ಆರಂಭ ಆಗಲಿದೆ. ಕಟಕ್ನ ಬಾರಾಬತಿ ಸ್ಟೇಡಿಯಂನಲ್ಲಿ ಮೊದಲ ಪಂದ್ಯ ನಡೆಯಲಿದೆ. ಮುಂದಿನ ವರ್ಷದ ಟಿ20 ವಿಶ್ವಕಪ್ ಸಿದ್ಧತೆಯ ದೃಷ್ಟಿಯಿಂದ ಈ ಸರಣಿ ಎರಡು ತಂಡಗಳಿಗೂ ಮಹತ್ವದ್ದಾಗಿದೆ.
ಕಟಕ್ ಮೈದಾನದಲ್ಲಿ ಭಾರತದ ಟಿ20 ದಾಖಲೆ ಹೇಗಿದೆ
ಕಟಕ್ ಮೈದಾನದಲ್ಲಿ ಭಾರತದ ಟಿ20 ದಾಖಲೆ ಅಷ್ಟು ಉತ್ತಮವಾಗಿಲ್ಲ. ಅದರಲ್ಲೂ ದಕ್ಷಿಣ ಆಫ್ರಿಕಾ ವಿರುದ್ಧ. ಹೌದು, ಭಾರತ ತಂಡ ಕಟಕ್ನಲ್ಲಿ ಇದುವರೆಗೆ ಆಡಿರುವ 3 ಟಿ20 ಪಂದ್ಯಗಳಲ್ಲಿ 1ರಲ್ಲಿ ಮಾತ್ರ ಗೆದ್ದಿದ್ದು, 2ರಲ್ಲಿ ಸೋಲು ಅನುಭವಿಸಿದೆ. ಈ ಎರಡೂ ಸೋಲು ದಕ್ಷಿಣ ಆಫ್ರಿಕಾ ವಿರುದ್ಧವೇ ಬಂದಿವೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಭಾರತಕ್ಕೆ ದೊಡ್ಡ ಸವಲಾಗಲಿದೆ.
ಇದನ್ನೂ ಓದಿ: ಗಿಲ್ಲಿ ಬೆನ್ನಿಗೆ ಚೂರಿ ಹಾಕಿದ್ರಾ ಕಾವ್ಯ? – ಕಾವು ನಿರ್ಧಾರಕ್ಕೆ ರಣರಂಗವಾಯ್ತು ಬಿಗ್ಬಾಸ್ ಮನೆ!
ದಾಖಲೆ ನಿರ್ಮಿಸಲಿದೆ ದಕ್ಷಿಣ ಆಫ್ರಿಕಾ
ದಕ್ಷಿಣ ಆಫ್ರಿಕಾ ತಂಡ ಈ ಸರಣಿಯಲ್ಲಿ ಮಹತ್ವದ ದಾಖಲೆಯೊಂದನ್ನು ನಿರ್ಮಿಸುವ ಸನಿಹದಲ್ಲಿದೆ. 5 ಪಂದ್ಯಗಳ ಸರಣಿಯಲ್ಲಿ ಒಂದು ಪಂದ್ಯ ಗೆದ್ದರೂ, ಭಾರತ ವಿರುದ್ಧ ಗರಿಷ್ಠ ಟಿ20 ಪಂದ್ಯ ಗೆದ್ದ ತಂಡವೆನಿಸಲಿದೆ. ಸದ್ಯ ಆಸ್ಟ್ರೆಲಿಯಾ, ಇಂಗ್ಲೆಂಡ್ ಜತೆ ಗರಿಷ್ಠ ತಲಾ 12 ಗೆಲುವಿನ ದಾಖಲೆ ಹಂಚಿಕೊಂಡಿದೆ. ಉಭಯ ತಂಡಗಳು 31 ಬಾರಿ ಮುಖಾಮುಖಿಯಾಗಿದ್ದು, ಭಾರತ 18 ಗೆಲುವು, ದಕ್ಷಿಣ ಆಫ್ರಿಕಾ 12 ಗೆಲುವು ಸಾಧಿಸಿದೆ. 1 ರದ್ದು ರದ್ದುಗೊಂಡಿದೆ.
ಪಂದ್ಯಕ್ಕೆ ಮಳೆ ಭೀತಿ
ಪಂದ್ಯಕ್ಕೆ ಮಳೆ ಭೀತಿ ಇರದ ಕಾರಣ ಪಂದ್ಯ ಸಂಪೂರ್ಣವಾಗಿ ನಡೆಯಲಿದೆ. ಆದರೆ ತಾಪಮಾನವು 12 ಡಿಗ್ರಿ ಸೆಲ್ಸಿಯಸ್ಗೆ ಇಳಿಯುವುದರಿಂದ ಇದು ತುಂಬಾ ಚಳಿಯ ವಾತಾವರಣ ಇರಲಿದೆ. ಇದು ಬೌಲರ್ಗಳು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಬಹುಶಃ ಎರಡೂ ಇನ್ನಿಂಗ್ಸ್ಗಳಲ್ಲಿ ಇಬ್ಬನಿ ಇರಲಿದೆ. ಈ ಪಿಚ್ ಬೌಲರ್ಗಳಿಗೆ, ವಿಶೇಷವಾಗಿ ಸ್ಪಿನ್ನರ್ಗಳಿಗೆ ಸಹಕಾರಿಯಾಗಿದೆ.
ಭಾರತದ ಸಂಭಾವ್ಯ ಆಟಗಾರರು : ಅಭಿಷೇಕ್, ಗಿಲ್, ಸೂರ್ಯಕುಮಾರ್ (ನಾಯಕ), ತಿಲಕ್ ವರ್ಮ, ಜಿತೇಶ್/ಸ್ಯಾಮ್ಸನ್ (ವಿ.ಕೀ), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಹರ್ಷಿತ್ ರಾಣಾ/ವಾಷಿಂಗ್ಟನ್/ಶಿವಂ ದುಬೆ, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ.
ದಕ್ಷಿಣ ಆಫ್ರಿಕಾದ ಸಂಭಾವ್ಯ ಆಟಗಾರರು : ಡಿ ಕಾಕ್ (ವಿ.ಕೀ), ಮಾರ್ಕ್ರಮ್ (ನಾಯಕ), ರೀಜಾ ಹೆಂಡ್ರಿಕ್ಸ್, ಬ್ರೆವಿಸ್, ಡೇವಿಡ್ ಮಿಲ್ಲರ್, ಸ್ಟಬ್ಸ್, ಬಾಷ್/ಲಿಂಡೆ, ಯಾನ್ಸೆನ್, ಕೇಶವ್, ಎನ್ಗಿಡಿ, ನೋರ್ಕಿಯಾ.

ನೋಡಿರಿ

