ಹರಿಣಗಳ ಬೆಂಡೆತ್ತಿದ ಭಾರತ – 10 ಸಿಕ್ಸ್.. 7 ಫೋರ್.. ಸಂಜು ಹೀರೋ
ಟಿ-20 ಓಕೆ.. ಸೀನಿಯರ್ಸ್ ಗೆ ಏನಾಗಿದೆ?
ಕ್ರಿಕೆಟ್ ಅಂದ್ರೆ ಟೀಂ ಗೇಮ್. ಒಬ್ರು ಆಡ್ಲಿಲ್ಲ ಅಂದ್ರೂ ಮತ್ತೊಬ್ರು ರೆಸ್ಪಾನ್ಸಿಬಿಲಿಟಿ ತಗೊಳ್ಬೇಕು. ಇಡೀ ತಂಡವನ್ನ ಗೆಲುವಿನತ್ತ ನಡೆಸ್ಬೇದು. ಈ ಲಾಜಿಕ್ ನ ಸದ್ಯ ಟೀಂ ಇಂಡಿಯಾದಲ್ಲಿ ಸೀನಿಯರ್ಸ್ ಮರೆತೇ ಬಿಟ್ಟಿದ್ದಾರೆ. ಬಟ್ ಯಂಗ್ ಸ್ಟರ್ಸ್ ಮಾತ್ರ ನೀನಿಲ್ಲ ಅಂದ್ರೂ ನಾನಿದ್ದೇನೆ ಅಂತಾ ಹೊಡಿಬಡಿ ಆಟವಾಡುತ್ತಾ ಎದುರಾಳಿಗಳನ್ನ ಬೆಂಡೆತ್ತುತ್ತಿದ್ದಾರೆ. ಸೌತ್ ಆಫ್ರಿಕಾ ವಿರುದ್ಧದ ಮೊದಲ ಟಿ-20 ಫೈಟ್ನಲ್ಲಿ ಬೌಲಿಂಗ್ ಮತ್ತು ಬ್ಯಾಟಿಂಗ್ನಲ್ಲೂ ಅಬ್ಬರಿಸಿ ಮತ್ತೊಂದು ವಿಕ್ಟರಿ ಬಾರಿಸಿದ್ದಾರೆ. ಅಷ್ಟಕ್ಕೂ ಅವರ ತವರಲ್ಲೇ ಹರಿಣಗಳನ್ನ ಬೇಟೆಯಾಗಿದ್ದೇಗೆ ಭಾರತ? ಸಂಜು ಸ್ಯಾಮ್ಸನ್ ದಾಖಲೆಗಳೆಷ್ಟು? ಆರ್ ಸಿಬಿ ಬೌಲರ್ಸ್ ಗೆ ಯಾಕೆ ಚಾನ್ಸ್ ಕೊಡ್ಲಿಲ್ಲ? ಸೀನಿಯರ್ಸ್ ಟೀಂ ಎಡವುತ್ತಾ ಇರೋದೆಲ್ಲಿ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಕೀರ್ತಿ ಕಮ್‌ಬ್ಯಾಕ್.. ಕಾವೇರಿ ಕೃತ್ಯಕ್ಕೆ ಬ್ರೇಕ್ – ವೈಷ್ಣವ್ ನ ಬಿಟ್ಟುಕೊಟ್ಟ ಲಕ್ಷ್ಮೀ?
ಡರ್ಬನ್‌ನಲ್ಲಿ ನಡೆದ ಭಾರತ ವರ್ಸಸ್ ದಕ್ಷಿಣ ಆಫ್ರಿಕಾ ನಡುವಿನ ಮೊದಲ T20 ಪಂದ್ಯದಲ್ಲೇ ಸೂರ್ಯಕುಮಾರ್ ಬಳಗ ಆರ್ಭಟಿಸಿದೆ. ಟಾಸ್ ಗೆದ್ದ ಸೌತ್ ಆಫ್ರಿಕಾ ಕ್ಯಾಪ್ಟನ್ ಐಡೆನ್ ಮಾರ್ಕ್ರಾಮ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ರು. ಹೀಗಾಗಿ ಸೂರ್ಯಕುಮಾರ್ ನೇತೃತ್ವದ ಟೀಂ ಇಂಡಿಯಾ ಬ್ಯಾಟಿಂಗ್ಗೆ ಇಳಿದಿತ್ತು. ತವರಿನಲ್ಲಿ ಭಾರತೀಯರನ್ನ ಕಟ್ಟಿಹಾಕ್ಬೇಕು ಅನ್ಕೊಂಡಿದ್ದ ಹರಿಣಗಳ ಪ್ರಯತ್ನ ಫಲಿಸಲೇ ಇಲ್ಲ. ಈ ಮೂಲಕ 4 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆಯನ್ನು ಪ್ರವಾಸಿ ಭಾರತ ಕಾಯ್ದುಕೊಂಡಿದೆ. ಅದೆಲ್ಲಕ್ಕಿಂತ ಹೆಚ್ಚಾಗಿ ಸಂಜು ಸ್ಯಾಮ್ಸನ್ ಬ್ಯಾಟಿಂಗ್ ಅಬ್ಬರ ಟೀಂ ಇಂಡಿಯಾ ಅಭಿಮಾನಿಗಳಿಗೆ ಹಬ್ಬದೂಟ ಬಡಿಸಿದಂತಿತ್ತು.
ಸಿಕ್ಸ್, ಫೋರ್ ಗಳ ಸೂಪರ್ ಹೀರೋ ಸಂಜು ಸ್ಯಾಮ್ಸನ್!
ಸೌತ್ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಸೂಪರ್ ಹೀರೋ ಆಗಿದ್ದು ಸಂಜು ಸ್ಯಾಮ್ಸನ್. ಇನ್ನೇನು ಟೀಂ ಇಂಡಿಯಾದಲ್ಲಿ ಸಂಜು ಕರಿಯರ್ ಮುಗಿಯುತ್ತೇನೋ ಅನ್ಕೊಳ್ತಿರುವಾಗ್ಲೇ ಗ್ರೇಟ್ ಕಮ್ ಬ್ಯಾಕ್ ಮಾಡಿದ್ರು. ಬ್ಯಾಕ್ ಟು ಬ್ಯಾಕ್ ಪಂದ್ಯಗಳಲ್ಲಿ 2 ಸೆಂಚುರಿ ಸಿಡಿಸಿ ತಮ್ಮಲ್ಲಿನ್ನೂ ಆಡುವ ಪವರ್ ಇದೆ ಅಂತಾ ಪ್ರೂವ್ ಮಾಡಿದ್ದಾರೆ. ಓಪನರ್ ಆಗಿ ಕಣಕ್ಕಿಳಿದ ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಆರಂಭದಲ್ಲಿ ರಕ್ಷಣಾತ್ಮಕ ಇನ್ನಿಂಗ್ಸ್ ಆರಂಭಿಸಿದ್ರು. ಬಟ್ 2 ಓವರ್ಗಳ ಬಳಿಕ ಬ್ಯಾಟ್ ಬೀಸೋಕೆ ಶುರು ಮಾಡಿದ್ರು. ಅಷ್ಟ್ರಲ್ಲೇ ಅಭಿಷೇಕ್ ವಿಕೆಟ್ ಉರುಳಿತ್ತು. ಆ ಬಳಿಕ ನಾಯಕ ಸೂರ್ಯ ಕುಮಾರ್ ಯಾದವ್ ಜೊತೆಗೂಡಿ ಅಬ್ಬರಿಸಿದ ಸಂಜು ಸಿಕ್ಸ್, ಫೋರ್ಗಳ ಸುರಿಮಳೆಗೈದ್ರು. 47 ಎಸೆತಗಳಲ್ಲಿ ಭರ್ಜರಿ ಶತಕ ಸಿಡಿಸಿದ್ರು. 7 ಬೌಂಡರಿ ಹಾಗೂ 10 ಸಿಕ್ಸರ್‌ಗಳೇ ಮೇನ್ ಹೈಲೆಟ್. ಒಟ್ಟಾರೆ 50 ಎಸೆತಗಳಲ್ಲಿ 107 ರನ್ ಗಳಿಸಿ ಕ್ಯಾಚ್ ಔಟ್ ಆದ್ರು. ಇನ್ನು ಸೂರ್ಯ 21 ರನ್ ಹೊಡೆದ್ರೆ ತಿಲಕ್ ವರ್ಮಾ 33 ರನ್ ಸಿಡಿಸಿದ್ರು. ಆ ಬಳಿಕ ಬಂದ ಬ್ಯಾಟರ್ಗಳ್ಯಾರು ಸದ್ದು ಮಾಡ್ಲಿಲ್ಲ. ಅಂತಿಮವಾಗಿ ಟೀಂ ಇಂಡಿಯಾ 20 ಓವರ್‌ಗಳಲ್ಲಿ ವಿಕೆಟ್‌ಗೆ 202 ರನ್ ಗಳಿಸಿತು. ದಕ್ಷಿಣ ಆಫ್ರಿಕಾ ತಂಡವು 17. 5 ಓವರ್‌ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು141 ರನ್ ಗಳಿಸಲು ಮಾತ್ರ ಶಕ್ತವಾಯಿತು.
ಸೌತ್ ಆಫ್ರಿಕಾದಲ್ಲಿ ದಾಖಲೆಗಳ ಸರಮಾಲೆ ಕಟ್ಟಿದ ಸಂಜು!
ದಕ್ಷಿಣ ಆಫ್ರಿಕಾ ವಿರುದ್ಧದ ಈ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್ ಮಾಡಿದ ಸಂಜು ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ, ಕೇವಲ 27 ಎಸೆತಗಳಲ್ಲಿ 50 ರನ್ ಪೂರೈಸಿದ ಸಂಜು, ಆ ನಂತರ ಕೇವಲ 47 ಎಸೆತಗಳಲ್ಲಿ ಶತಕ ಪೂರೈಸಿದರು. ಇದು ಸಂಜು ಸ್ಯಾಮ್ಸನ್ ಅವರ ಟಿ20 ವೃತ್ತಿಜೀವನದ ಸತತ ಎರಡನೇ ಶತಕವಾಗಿರುವುದು ಇಲ್ಲಿ ವಿಶೇಷ. ಈ ಶತಕದೊಂದಿಗೆ ತಮ್ಮ ಟಿ20 ವೃತ್ತಿಜೀವನದಲ್ಲಿ 3ನೇ ಬಾರಿಗೆ 50 ಕ್ಕೂ ಅಧಿಕ ರನ್ ಕಲೆಹಾಕಿದ ಭಾರತದ ವಿಕೆಟ್‌ಕೀಪರ್‌ಗಳ ಪಟ್ಟಿಯಲ್ಲಿ ಎಂಎಸ್ ಧೋನಿ ಅವರನ್ನು ಹಿಂದಿಕ್ಕಿದ್ದಾರೆ. ವಿಕೆಟ್‌ಕೀಪರ್ ಆಗಿ ಟಿ20ಯಲ್ಲಿ ಅತಿ ಹೆಚ್ಚು ಬಾರಿ 50+ ಸ್ಕೋರ್ ಗಳಿಸಿದ ವಿಷಯದಲ್ಲಿ ಇಶಾನ್ ಕಿಶನ್ ಅವರೊಂದಿಗೆ ಜಂಟಿಯಾಗಿ ಮೊದಲ ಸ್ಥಾನವನ್ನು ತಲುಪಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ಟಿ20ಯಲ್ಲಿ 50+ ರನ್ ಗಳಿಸಿದ ಭಾರತದ ಎರಡನೇ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್. ಅಲ್ದೇ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಸತತ ಎರಡು ಪಂದ್ಯಗಳಲ್ಲಿ ಶತಕ ಸಿಡಿಸಿದ ಭಾರತದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ.
ಬೌಲಿಂಗ್ ನಲ್ಲಿ ಮಿಂಚಿದ ವರುಣ್ ಮತ್ತು ಬಿಷ್ಣೋಯ್!
ಮೊದಲು ಬ್ಯಾಟಿಂಗ್ ಮಾಡಿ ಭಾರತ ನೀಡಿದ 203 ರನ್ ಗಳ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಆರಂಭದಲ್ಲೇ ಮೂರು ವಿಕೆಟ್ ಕಳೆದುಕೊಂಡು ಆಘಾತ ಎದುರಿಸಿತು. ನಾಯಕ ಐಡೆನ್ ಮಾರ್ಕರಮ್ 8 ರನ್ ಗಳಿಸಿ ಬೇಗನೇ ಪೆವಿಲಿಯನ್ ಸೇರ್ಕೊಂಡ್ರು. 8 ರನ್ ಆಗುವಷ್ಟರಲ್ಲೇ ಆರಂಭಿಕ ಜೋಡಿಯನ್ನು ಮುರಿದರು ಆರ್ಷದೀಪ್ ಸಿಂಗ್. ನಂತರ ತ್ರಿಷ್ಟನ್ ಸ್ಟಬ್ಸ್ 11 ರನ್, ರಿಯಾನ್ ರೆಕೆಲ್ಟನ್ 21 ರನ್ ಗೆ ವಿಕೆಟ್ ಒಪ್ಪಿಸಿದ್ರು. ಆ ಬಳಿಕ 25 ರನ್ ಬಾರಿಸಿದ್ದ ಹೆನ್ರಿಚ್ ಕ್ಲಾಸೆನ್ ಗೆ ವರುಣ್ ಚಕ್ರವರ್ತಿ ಪೆವಿಲಿಯನ್ ದಾರಿ ತೋರಿಸಿದ್ರು. ಡೇವಿಡ್ ಮಿಲ್ಲರ್ 18 ರನ್ ಗಳಿಸಿ ಆಡುವಾಗ ಮತ್ತೊಮ್ಮೆ ವರುಣ್ ವಿಕೆಟ್ ಬೇಟೆಯಾಡಿದ್ರು. ಆನಂತರ ಕ್ರೀಸ್ಗೆ ಬಂದ ಪ್ಯಾಟ್ರಿಕ್ ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ. ಆಂಡಿಲೇ ಸಿಮೆಲೇನ್, ಮಾರ್ಕೋ ಜಾನ್ಸನ್ ಕೂಡ ಬೇಗನೇ ಔಟ್ ಆದ್ರು. ಈ ಮೂವರ ವಿಕೆಟ್‌ಗಳನ್ನು ಕಬಳಿಸಿದ್ದು ರವಿ ಬಿಷ್ಣೋಯ್. 93 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡು ದಕ್ಷಿಣ ಆಫ್ರಿಕಾ ಸೋಲಿನ ದವಡೆಗೆ ಸಿಲುಕಿತು. ಅಂತಿಮವಾಗಿ 141 ರನ್‌ಗಳಿಗೆ ಆಲೌಟ್ ಆಯ್ತು. ಭಾರತದ ಪರ ವರುಣ್ ಚಕ್ರವರ್ತಿ ಮತ್ತು ರವಿ ಬಿಷ್ಣೋಯ್ ತಲಾ ಮೂರು ವಿಕೆಟ್ಗಳನ್ನ ಕಿತ್ತು ಮಿಂಚಿದ್ರು.
ಒಟ್ನಲ್ಲಿ ಟಿ-20 ವಿಶ್ವಕಪ್ನಿಂದ ಹಿಡಿದು ಈವರೆಗೂ ಭಾರತ ಟಿ-20 ಅಂತಾರಾಷ್ಟ್ರೀಯ ಸರಣಿಯಲ್ಲಿ ಒಂದೂ ಸರಣಿ ಸೋತಿಲ್ಲ. ಜಿಂಬಾಬ್ವೆ ಪ್ರವಾಸ ಗೆದ್ದು ಶ್ರೀಲಂಕಾವನ್ನ ದಹನ ಮಾಡಿ ತವರಿನಲ್ಲಿ ಬಾಂಗ್ಲಾ ಪಡೆಗೆ ಕ್ಲೀನ್ ಸ್ವೀಪ್ ಬಿಸಿ ಮುಟ್ಟಿಸಿದ್ದ ಚುಟುಕು ಸಮರದ ವೀರರ ಇದೀಗ ಹರಿಣಗಳ ನೆಲದಲ್ಲೂ ವಿಜಯಯಾತ್ರೆ ಮುಂದುವರಿಸಿದ್ದಾರೆ. 4 ಸರಣಿಗಳ ಮೊದಲ ಪಂದ್ಯದಲ್ಲೇ ಗೆದ್ದು ಮುನ್ನಡೆ ಕಾಯ್ದುಕೊಂಡಿದ್ದಾರೆ. ಯಂಗ್ಸ್ಟರ್ಗಳ ಅಬ್ಬರ ನೋಡ್ತಿದ್ರೆ ಸೌತ್ ಆಫ್ರಿಕಾಗೂ ಕ್ಲೀನ್ ಸ್ವೀಪ್ ಶಾಕ್ ತಟ್ಟೋ ಎಲ್ಲಾ ಲಕ್ಷಣ ಕಾಣ್ತಿದೆ. ಆದ್ರೆ ನ್ಯೂಜಿಲೆಂಡ್ ವಿರುದ್ಧದ ಸರಣಿ ಸೋತಿರೋ ಸೀನಿಯರ್ಸ್ ಬಳಗ ಇದೀಗ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಗೆ ರೆಡಿಯಾಗ್ತಿದ್ದಾರೆ. ಆಸಿಸ್ ನೆಲದಲ್ಲಾದ್ರೂ ಚೆನ್ನಾಗಿ ಆಡ್ತಾರಾ? ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ಗೆ ಮತ್ತೊಮ್ಮೆ ಪ್ರವೇಶ ಪಡೆಯುತ್ತಾರಾ ಕಾದು ನೋಡ್ಬೇಕು.