ಬಗ್ಗದ ಭಾರತ.. ಜಗ್ಗದ ದ.ಆಫ್ರಿಕಾ – Action & Reaction ಪವರ್ ಶೋ
2ನೇ ಟೆಸ್ಟ್.. ಫಸ್ಟ್ ಡೇ ಹೇಗಿತ್ತು?

ಬಗ್ಗದ ಭಾರತ.. ಜಗ್ಗದ ದ.ಆಫ್ರಿಕಾ – Action & Reaction ಪವರ್ ಶೋ2ನೇ ಟೆಸ್ಟ್.. ಫಸ್ಟ್ ಡೇ ಹೇಗಿತ್ತು?

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಟೆಸ್ಟ್ ಮ್ಯಾಚ್ ಗುವಾಹಟಿಯಲ್ಲಿ ನಡೀತಿದೆ. ಶುಭ್​ಮನ್ ಗಿಲ್ ಇಂಜುರಿ ಕಾರಣಕ್ಕೆ ಈ ಮ್ಯಾಚ್​ನ ವೈಸ್ ಕ್ಯಾಪ್ಟನ್ ರಿಷಭ್ ಪಂತ್ ಲೀಡ್ ಮಾಡ್ತಿದ್ದಾರೆ. ಬಟ್ ಬ್ಯಾಡ್​ಲಕ್ ಏನಂದ್ರೆ ಭಾರತ ತಂಡಕ್ಕೆ ಯಾರೇ ಕ್ಯಾಪ್ಟನ್ ಆದ್ರೂ ಟಾಸ್ ಸೋಲು ಮಾತ್ರ ತಪ್ತಿಲ್ಲ. ಇವತ್ತಿನ ಮ್ಯಾಚಲ್ಲೂ ಅದೇ ಆಯ್ತು. ಗುವಾಹಟಿಯ ಬರ್ಸಪಾರ ಕ್ರಿಕೆಟ್ ಕ್ರೀಡಾಂಗಣದಲ್ಲಿ ಎರಡನೇ ಟೆಸ್ಟ್ ಪಂದ್ಯ ನಡೀತಿದೆ. ಆಲ್ರೆಡಿ ಮೊದಲ ಪಂದ್ಯವನ್ನ ಗೆದ್ದಿರೋ ಸೌತ್ ಆಫ್ರಿಕಾ ಈ ಮ್ಯಾಚ್​ನೂ ಗೆದ್ದು ಸರಣಿಯಲ್ಲಿ ಕ್ಲೀನ್ ಸ್ವೀಪ್ ಸಾಧಿಸೋಕೆ ಎದುರು ನೋಡ್ತಿದೆ. ಆದ್ರೆ ಭಾರತ ಶತಾಯ ಗತಾಯ ಗೆದ್ದು ಸರಣಿ ಡ್ರಾ ಮಾಡಿಕೊಳ್ಳೋ ಯೋಜನೆಯಲ್ಲಿದೆ.

ಇದನ್ನೂ ಓದಿ : 2026ಕ್ಕೆ GT ಪರ ಆಡಲ್ವಾ ಗಿಲ್? – ಟೀಂ ಇಂಡಿಯಾಗಾಗಿ IPL ತ್ಯಾಗ?

2ನೇ ಟೆಸ್ಟ್ ಪಂದ್ಯದಲ್ಲಿ ರಿಷಭ್ ಪಂತ್ ಭಾರತವನ್ನ ಮುನ್ನಡೆಸುತ್ತಿದ್ದಾರೆ. ಪಂತ್​ಗೂ ಕೂಡ ಟಾಸ್ ಕೈಕೊಟ್ಟಿದೆ. ದಕ್ಷಿಣ ಆಫ್ರಿಕಾ ತಂಡದ ನಾಯಕ ಟೆಂಬಾ ಬವುಮಾ ಟಾಸ್ ಗೆದ್ದು ಮೊದಲ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ್ರು. ಹೀಗಾಗಿ ಭಾರತ ಫಸ್ಟ್ ಬೌಲಿಂಗ್ ಮಾಡ್ತಿದೆ. ಇನ್ನು ಇವತ್ತಿನ ಪಂದ್ಯಕ್ಕೆ ಭಾರತದ ಪ್ಲೇಯಿಂಗ್ 11 ನಲ್ಲಿ ಎರಡು ಬದಲಾವಣೆ ಮಾಡಲಾಗಿದೆ. ಟೆಸ್ಟ್ ತಂಡದ ನಾಯಕ ಶುಭ್​ಮನ್ ಗಿಲ್ ಇಂಜುರಿಯಿಂದಾಗಿ ತಂಡದಿಂದ ಹೊರ ಬಿದ್ದಿದ್ದು ಅವ್ರ ಸ್ಥಾನಕ್ಕೆ ಸಾಯಿ ಸುದರ್ಶನ್​ರನ್ನ ಆಯ್ಕೆ ಮಾಡಲಾಗಿದೆ. ಹಾಗೇ ಆಲ್​ರೌಂಡರ್ ಅಕ್ಷರ್ ಪಟೇಲ್​ರನ್ನ ಕೈಬಿಟ್ಟು ಅಕ್ಷರ್ ಪಟೇಲ್​ಗೆ ಅವಕಾಶ ನೀಡಲಾಗಿದೆ. ಉಳಿದಂತೆ ಸೇಮ್ ಟೀಂ ಕಂಟಿನ್ಯೂ ಆಗಿದೆ.

ದಕ್ಷಿಣ ಆಫ್ರಿಕಾ ಪರ ಮಾರ್ಕ್ರಂ & ರಿಕಲ್ಟನ್ ಒಳ್ಳೆ ಓಪನಿಂಗ್!

ಟಾಸ್ ಗೆದ್ದು ಫಸ್ಟ್ ಬ್ಯಾಟಿಂಗ್​ಗೆ ಬಂದ ದಕ್ಷಿಣ ಆಫ್ರಿಕಾ ಪರ ಆಡಂ ಮಾರ್ಕ್ರಂ ಹಾಗೇ ರಿಯಾನ್ ರಿಕಲ್ಟನ್ ಇನ್ನಿಂಗ್ಸ್ ಆರಂಭಿಸಿದ್ರು. 80 ಪ್ಲಸ್ ಪಾರ್ಟ್ನರ್​ಶಿಪ್​ನೊಂದಿಗೆ ತುಂಬಾನೇ ಡೇಂಜರಸ್ ಆಗಿ ಕಾಣ್ತಿದೆ. ಮೊದಲ ವಿಕೆಟ್ ಜೊತೆಯಾಟಕ್ಕೆ ಒಂದೊಳ್ಳೆ ಸ್ಕೋರ್​ ಜೊತೆಯಾಟವಾಡಿದ್ರು. ತಂಡದ ಮೊತ್ತ 82 ಆಗಿದ್ದಾಗ ಮೊದಲ ವಿಕೆಟ್ ಕಳ್ಕೊಳ್ತಾರೆ. ಭಾರತದ ಬ್ರಹ್ಮಾಸ್ತ್ರ ಜಸ್ಪ್ರೀತ್ ಬುಮ್ರಾ ಮೊದಲ ಬ್ರೇಕ್ ಥ್ರ್ಯೂ ತಂದುಕೊಟ್ರು. 38 ರನ್ ಗಳಿಸಿದ್ದ ಮಾರ್ಕ್ರಂ ಬೌಲ್ಡ್ ಆದ್ರು. ಆ ಬಳಿಕ ನೆಕ್ಸ್​ಟ್ ಓವರ್​ನಲ್ಲೇ ಕುಲ್ದೀಪ್ ಯಾದವ್ ಕೂಡ ವಿಕೆಟ್ ಎಗರಿಸಿದ್ರು. 35 ರನ್ ಗಳಿಸಿ ಸೆಟಲ್ ಆಗಿದ್ದ ರಿಯಾನ್ ರಿಕಲ್ಟನ್​ಗೆ ಪೆವಿಲಿಯನ್ ದಾರಿ ತೋರಿಸಿದ್ರು. ಆ ನಂತ್ರ 3ನೇ ವಿಕೆಟ್​ಗೆ ಜೊತೆಯಾದ ಟ್ರಿಸ್ಟನ್ಸ್ ಸ್ಟಬ್ಸ್ ಮತ್ತು ನಾಯಕ ಟೆಂಬಾ ಬವುಮಾ ಅದ್ಭುತವಾಗಿ ಜತೆಯಾಟವಾಡಿದ್ರು. 64 ರನ್​ಗಳ ಜೊತೆಯಾಟ ಬಂತು. ಈ ಟೈಮಲ್ಲಿ ಭಾರತದ ಸ್ಟಾರ್ ಆಲ್​ರೌಂಡರ್ ರವೀಂದ್ರ ಜಡೇಜಾ ಟೆಂಬಾ ಬವುಮಾ ವಿಕೆಟ್ ಎಗರಿಸಿದ್ರು. 41 ರನ್ ಗಳಿಸಿ ಟೆಂಬಾ ವಿಕೆಟ್ ಕೊಟ್ರು. ಇನ್ನು 49 ರನ್ ಗಳಿಸಿದ್ದ ಟ್ರಿಸ್ಟನ್ ಸ್ಟಬ್ಸ್ ಕುಲ್ದೀಪ್ ಬೌಲಿಂಗ್​ನಲ್ಲಿ ಕ್ಯಾಚ್ ಕೊಟ್ರು. ಹಾಗೇ ವಿಯಾನ್ ಮುಲ್ಡರ್​ಗೂ ಕುಲ್ದೀಪ್ ಪೆವಿಲಿಯನ್ ದಾರಿ ತೋರಿಸಿದ್ರು. ಇನ್ನು ಲಾಸ್ಟ್ ಬಟ್ ನಾಟ್ ದಿ ಲೀಸ್ಟ್ ಅನ್ನೋ ಹಾಗೇ ಸಿರಾಜ್ ದಿನದಾಂತ್ಯದ ವೇಳೆಗೆ ವಿಕೆಟ್ ತೆಗೀತಾರೆ. ಪಂತ್ ಅದ್ಭುತ ಕ್ಯಾಚ್ ಹಿಡಿದ್ರು. 28 ರನ್ ಗಳಿಸಿದ್ದ ಟೋನಿ ಡಿ ಜೋರ್ಜಿ ವಿಕೆಟ್ ಒಪ್ಪಿಸಿದ್ರು. ಮೊದಲ ದಿನದಾಟದ ಅಂತ್ಯಕ್ಕೆ ಸೌತ್ ಆಫ್ರಿಕಾ 6 ವಿಕೆಟ್ ನಷ್ಟಕ್ಕೆ 247 ರನ್​ಗಳನ್ನ ಕಲೆ ಹಾಕಿದೆ. ಮುತ್ತುಸ್ವಾಮಿ ಮತ್ತು ವೆರೇನ್ ಕ್ರೀಸ್​ ಕಾಯ್ದುಕೊಂಡಿದ್ದಾರೆ. ಇನ್ನು ಶನಿವಾರದ ಆಟದಲ್ಲಿ ಏನೆಲ್ಲಾ ಹೈಲೆಟ್ ಆಯ್ತು ಅನ್ನೋದನ್ನ ನೋಡ್ತಾ ಹೋಗೋಣ. ಮೊದ್ಲಿಗೆ

ಮೊದಲ ದಿನದಾಟ ಹೇಗಿತ್ತು?

ಟಾಸ್ ಗೆದ್ದ ಸೌತ್ ಆಫ್ರಿಕಾಗೆ ಬ್ಯಾಟರ್ ಗಳ ಬಲ

ಯಾವುದೇ ಬ್ಯಾಟರ್ ಸಿಂಗಲ್ ಡಿಜಿಟ್ ಬರಲಿಲ್ಲ

ಮೊದಲ ದಿನದಾಟದಲ್ಲಿ ಬೌಲರ್ಸ್ ಗೆ ಸ್ವಲ್ಪ ಕಷ್ಟ

ಫಿಫ್ಟಿ ಪ್ಲಸ್ ರನ್ಸ್ ಕಲೆ ಹಾಕೋಕೆ ಬಿಡದ ಭಾರತ

ಬುಮ್ರಾ, ಜಡ್ಡು, ಸಿರಾಜ್ ತಲಾ 1 ವಿಕೆಟ್.. ಕುಲ್ದೀಪ್ ಮಿಂಚು

ಸೋ ಅಲ್ಲಿಗೆ ಮೊದಲ ದಿನದಾಟದ ಸ್ಕೋರ್ ನೋಡ್ದಾಗ ಇಲ್ಲಿ ಸೌತ್ ಆಫ್ರಿಕಾನೂ ಕಂಪ್ಲೀಟ್ ಡಾಮಿನೇಟ್ ಮಾಡಿದೆ ಅಂತಾ ಹೇಳೋಕಾಗಲ್ಲ. ಹಾಗೇ ಭಾರತ ಕೂಡ ಮೇಲುಗೈ ಸಾಧಿಸಿದೆ ಅನ್ನೋದನ್ನ ಹೇಳೋಕಾಗಲ್ಲ. ಭಾರತಕ್ಕೆ ವಿಕೆಟ್ಸ್ ಬಂದಿದೆ. ಅತ್ತ ಸೌತ್ ಆಫ್ರಿಕಾಗೆ ರನ್ಸ್ ಬಂದಿದೆ. ಹೀಗಾಗಿ ಎರಡನೇ ದಿನದಾಟದಲ್ಲಿ ಯಾರು ಲೀಡ್ ತಗೊಳ್ತಾರೆ ಅನ್ನೋದನ್ನ ನೋಡ್ಬೇಕಾಗುತ್ತೆ. ಅದೆಲ್ಲಕ್ಕಿಂತ ಹೆಚ್ಚಾಗಿ ಭಾರತ ಈ ಪಂದ್ಯವನ್ನ ಗೆಲ್ಲೋದು ತುಂಬಾನೇ ಇಂಪಾರ್ಟೆಂಟ್ ಇದೆ. ಜೊತೆಗೆ ಗೌತಮ್ ಗಂಭೀರ್ ಸೇಫ್ ಆಗ್ಬೇಕು ಅಂದ್ರೆ ಗೆಲ್ಲಲೇಬೇಕಿದೆ.

ಸೌತ್ ಆಫ್ರಿಕಾ ಗೆದ್ರೆ ಟೆಸ್ಟ್ ತಂಡಕ್ಕೆ ಹೊಸ ಕೋಚ್?

ನ್ಯೂಜಿಲೆಂಡ್ ವಿರುದ್ಧ ವೈಟ್​ವಾಶ್ ಆಗಿದ್ದ ಟೀಮ್ ಇಂಡಿಯಾ, ಸೌತ್ ಆಫ್ರಿಕಾ ವಿರುದ್ಧ ಎರಡನೇ ಪಂದ್ಯವನ್ನೂ ಸೋತ್ರೆ ಕೋಚ್ ಗಂಭೀರ್ ತಲೆತಂಡ ಪಕ್ಕಾ ಎನ್ನಲಾಗ್ತಿದೆ. ಟೆಸ್ಟ್ ತಂಡಕ್ಕೆ ಹೊಸ ಕೋಚ್ ಹುಡುಕೋದೆ ಸೂಕ್ತ ಅನ್ನೋದು, ಬಿಗ್​ಬಾಸ್​ಗಳ ಲೆಕ್ಕಾಚಾರವಾಗಿದೆ. ಕೊಲ್ಕತ್ತಾ ಟೆಸ್ಟ್ ಸೋಲಿನ ಬಳಿಕ ವರ್ಲ್ಡ್​​​ ಟೆಸ್ಟ್​ ಚಾಂಪಿಯನ್​ಶಿಪ್ ಪಾಯಿಂಟ್ ಟೇಬಲ್​ನಲ್ಲಿ ಭಾರೀ ಬದಲಾವಣೆ ಆಗಿದೆ. ಸದ್ಯ ಟೀಮ್ ಇಂಡಿಯಾ, ಪಾಯಿಂಟ್ ಟೇಬಲ್​ನಲ್ಲಿ ಆಸ್ಟ್ರೇಲಿಯಾ, ಸೌತ್ ಆಫ್ರಿಕಾ ಮತ್ತು ಶ್ರೀಲಂಕಾ ನಂತರದ ಸ್ಥಾನದಲ್ಲಿದೆ. ಒಂದು ವೇಳೆ ಗುವಾಹಟಿ ಟೆಸ್ಟ್ ಪಂದ್ಯ ಸೋತ್ರೆ, ಮತ್ತೆ WTC ಪಾಯಿಂಟ್ ಟೇಬಲ್​ನಲ್ಲಿ ಮತ್ತಷ್ಟು ಕುಸಿತವಾಗುತ್ತೆ. ಗುವಾಹಟಿ ಟೆಸ್ಟ್ ಪಂದ್ಯವನ್ನ ಟೀಮ್ ಇಂಡಿಯಾ ಗೆದ್ರೆ, ಮೂರನೇ ಸ್ಥಾನಕ್ಕೇರುವ ಅವಕಾಶ ಇರುತ್ತದೆ. ಒಂದು ವೇಳೆ ಸೋತ್ರೆ 5ನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್ ತಂಡಕ್ಕಿಂತ ಕೆಳಗೆ ಜಾರೋ ಸಾಧ್ಯತೆ ಇದೆ. ಒಟ್ನಲ್ಲಿ ಭಾರತಕ್ಕೆ ಈ ಪಂದ್ಯ ಡು ಆರ್ ಡೈನಂತೆಯೆ ಇದೆ. ಮೊದಲ ದಿನದಾಟ ನೋಡಿದ್ರೆ ಯಾರೂ ಕೂಡ ಡಾಮಿನೇಷನ್ ಮಾಡಿದ್ರು ಅನ್ಸಲ್ಲ. ಌಕ್ಷನ್ ಌಂಡ್ ರಿಯಾಕ್ಷನ್ ಎರಡೂ ಇತ್ತು.

Shantha Kumari