ದುಬೈನಲ್ಲಿ ಫ್ಲೈಟ್ ದರ, ಹೋಟೆಲ್, ಲಾಡ್ಜ್ ಬೆಲೆ ಹೆಚ್ಚಳ – ಭಾರತ & ಪಾಕ್ ಪಂದ್ಯ ಬಲು ದುಬಾರಿ!

ದುಬೈನಲ್ಲಿ ಫ್ಲೈಟ್ ದರ, ಹೋಟೆಲ್, ಲಾಡ್ಜ್ ಬೆಲೆ ಹೆಚ್ಚಳ – ಭಾರತ & ಪಾಕ್ ಪಂದ್ಯ ಬಲು ದುಬಾರಿ!

ಐಸಿಸಿ ಟೂರ್ನಿಯಲ್ಲಿ ಭಾಗಿಯಾಗಲಿರುವ 8 ತಂಡಗಳು 2 ಗುಂಪುಗಳಾಗಿ ಡಿವೈಡ್ ಆಗಿದ್ದು, ಈ ತಂಡಗಳು ಮೊದಲ ಸುತ್ತಿನಲ್ಲಿ ಲೀಗ್ ಪಂದ್ಯಗಳನ್ನಾಡಲಿದೆ. ಇಲ್ಲಿ ಆಯಾ ಗ್ರೂಪ್​ಗೆ ಪಾಯಿಂಟ್ಸ್ ಟೇಬಲ್​ ಇರಲಿದ್ದು, ಈ ಅಂಕ ಪಟ್ಟಿಯಲ್ಲಿ ಟಾಪ್ 2ನಲ್ಲಿರುವ ನಾಲ್ಕು ತಂಡಗಳು ಸೆಮಿಫೈನಲ್​ಗೆ ಲಗ್ಗೆ ಇಡಲಿವೆ. ಸೆಮಿಫೈನಲ್ ಪಂದ್ಯಗಳು ಮಾರ್ಚ್ 4 ಮತ್ತು 5 ರಂದು ನಡೆಯಲಿದೆ. ಹಾಗೇ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಮ್ಯಾಚ್ ಮಾರ್ಚ್ 9ಕ್ಕೆ ನಡೆಯಲಿವೆ. ಬಟ್ ಈ ಎಲ್ಲಾ ಮ್ಯಾಚ್​ಗಳಿಗಿಂತ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವೇ ಮೇನ್ ಹೈಲೆಟ್ ಆಗಿದೆ. ದುಬೈ ದುನಿಯಾವನ್ನ ಮತ್ತಷ್ಟು ದುಬಾರಿಯನ್ನಾಗಿಸುತ್ತಿದೆ.

ಇದನ್ನೂ ಓದಿ : 96 ಎಸೆತಗಳಲ್ಲಿ 12 ರನ್ ಗಳಿಸಿದ್ದ ರಾಹುಲ್ ದ್ರಾವಿಡ್ – ಟೆಸ್ಟ್ ಕ್ರಿಕೆಟ್ ಆಡೋದೇ ಹಿಂಗೆ!

ಹೈಬ್ರಿಡ್ ಮಾದರಿಯ ಈ ಟೂರ್ನಿಯಲ್ಲಿ ಭಾರತ ತನ್ನೆಲ್ಲಾ ಪಂದ್ಯಗಳನ್ನ ದುಬೈನಲ್ಲಿ ಆಡಲಿವೆ. ಫೆಬ್ರವರಿ 20ರಂದು ಟೂರ್ನಿಯ ತನ್ನ ಮೊದಲ ಪಂದ್ಯವನ್ನ ಬಾಂಗ್ಲಾದೇಶ ವಿರುದ್ಧ ಆಡಲಿದೆ. ಹಾಗೇ ಪಾಕಿಸ್ತಾನದ ವಿರುದ್ಧ ಫೆಬ್ರವರಿ 23ರಂದು ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಇನ್ನು ಮಾರ್ಚ್ 2ರಂದು ನ್ಯೂಜಿಲೆಂಡ್ ವಿರುದ್ಧ ತನ್ನ ಕೊನೆಯ ಲೀಗ್ ಹಂತದ  ಮ್ಯಾಚ್ ನಡೆಯುತ್ತಿದೆ. ಈ ಎಲ್ಲಾ ಪಂದ್ಯಗಳಿಗಿಂತ ಭಾರತ ಮತ್ತು ಪಾಕ್ ಕದನಕ್ಕೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಕ್ರಿಯೇಟ್ ಆಗಿದೆ.

ದುಬೈನಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ ಟ್ರೋಫಿಗಾಗಿ ದುಬೈ ಸರ್ಕಾರ ವಿಮಾನ ಹಾಗೂ ಹೋಟೆಲ್ ಬುಕ್ಕಿಂಗ್ ದರವನ್ನು ಹೆಚ್ಚಿಸಲು ಪ್ಲ್ಯಾನ್ ಮಾಡಿದೆ. ಈ ಮೂಲಕ ಕ್ರೀಡಾ ಅಭಿಮಾನಿಗಳಿಗೆ ಬಿಗ್ ಶಾಕ್ ಕೊಡ್ತಿದೆ. ಫೆಬ್ರವರಿ 23 ರಂದು ನಡೆಯಲಿರುವ ಭಾರತ ಪಾಕ್ ಪಂದ್ಯ ನೋಡಲು ಸಾಕಷ್ಟು ಮಂದಿ ದುಬೈಗೆ ಹೋಗಲು ಫ್ಲೈಟ್ ಹಾಗೂ ಹೋಟೆಲ್ಸ್ ಬುಕ್ ಆರಂಭಿಸಿದ್ದಾರೆ. ಇದನ್ನೇ ಅಡ್ವಾಂಟೇಜ್ ಆಗಿ ತೆಗೆದುಕೊಂಡು ದುಬೈ ಸರ್ಕಾರ ಬೆಲೆ ಏರಿಕೆ ಬರೆ ಎಳೀತಿದೆ. ಕೆಲ ಮಾಹಿತಿಗಳ ಪ್ರಕಾರ ಶೇ 50ರಷ್ಟು ವಿಮಾನ ಟಿಕೆಟ್ ದರ ಏರಿಕೆಯಾಗಲಿದೆ ಮತ್ತು ಕೊನೆಯ ಕ್ಷಣದಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಜೊತೆಗೆ ಹೋಟೆಲ್ ದರ ಏರಿಕೆಯನ್ನು ಕೂಡ ಹೆಚ್ಚಾಗುವ ನಿರೀಕ್ಷೆ ಇದೆ. ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಫೆಬ್ರವರಿ 23ರಂದು ಮಧ್ಯಾಹ್ನ 1:00 ಗಂಟೆಗೆ ಪಂದ್ಯ ಆರಂಭವಾಗಲಿದ್ದು, ಈ ಪಂದ್ಯಕ್ಕಾಗಿ ದುಬೈಗೆ ತೆರಳುವ ಜನರಿಗೆ ದುಬೈ ಸರ್ಕಾರ ಭಾರೀ ಶಾಕ್ ನೀಡಿದೆ.

ಭಾರತ-ಪಾಕಿಸ್ತಾನ ಪಂದ್ಯಕ್ಕೆ ಮುಂಚಿತವಾಗಿ ವಿಮಾನ ಮತ್ತು ಹೋಟೆಲ್ ಬುಕಿಂಗ್‌ಗಳಲ್ಲಿ ಭಾರಿ ಏರಿಕೆಯನ್ನು ಮಾಡಲಾಗಿದೆ. ಟ್ರಾವೆಲ್ ಕಂಪನಿಗಳು ಬೇಡಿಕೆ ಹೆಚ್ಚಾಗಿರೋ ಬಗ್ಗೆಯೂ ಮಾಹಿತಿ ನೀಡಿವೆ. ಭಾರತ, ಪಾಕಿಸ್ತಾನ ಮತ್ತು ಇತರ ಕ್ರಿಕೆಟ್ ಪ್ರಿಯ ರಾಷ್ಟ್ರಗಳ ಅಭಿಮಾನಿಗಳು ತಮ್ಮ ಪ್ರಯಾಣದ ಯೋಜನೆಯನ್ನು ಅಂತಿಮಗೊಳಿಸುತ್ತಿದ್ದಂತೆ ಹೋಟೆಲ್ ಬುಕಿಂಗ್ ದರಗಳು ಗಗನಕ್ಕೇರುತ್ತವೆ ಎಂದು ತಜ್ಞರು ಭವಿಷ್ಯ ನುಡಿದಿದ್ದಾರೆ. ಇದರಿಂದಾಗಿ ವಿಮಾನ ಪ್ರಯಾಣ ದರ ಶೇ.20ರಿಂದ 50ರಷ್ಟು ಏರಿಕೆಯಾಗಲಿದೆ. ಕೊನೆಯ ನಿಮಿಷಗಳಲ್ಲಿ ವಿಮಾನ ದರದಲ್ಲೂ ಭಾರಿ ಏರಿಕೆಯಾದ್ರೂ ಅಚ್ಚರಿ ಪಡ್ಬೇಕಿಲ್ಲ. ದುಬೈನ ಡೌನ್‌ಟೌನ್ ಮತ್ತು ದುಬೈ ಮರೀನಾದಂತಹ ಹೆಚ್ಚಿನ ಬೇಡಿಕೆಯಿರುವ ಐಷಾರಾಮಿ ಹೋಟೆಲ್‌ಗಳಲ್ಲಿ ಬಂಪರ್ ಬುಕ್ಕಿಂಗ್ ಗಳೇ ಆಗ್ತಿವೆ. ಬಜೆಟ್ ಪ್ರಿಯ ಹೋಟೆಲ್‌ಗಳು ಅತ್ಯಂತ ವೇಗವಾಗಿ ಮಾರಾಟವಾಗುತ್ತಿವೆ. ಹಿಂದಿನ ಭಾರತ-ಪಾಕಿಸ್ತಾನ ಪಂದ್ಯಗಳಿಗೆ ಹೋಲಿಸಿದರೆ ಹೋಟೆಲ್ ಬೆಲೆಗಳು 25 ರಿಂದ 50% ಮತ್ತು ಕೆಲವು ಕಡೆಗಳಲ್ಲಿ ಹತ್ತು ಪಟ್ಟು ಹೆಚ್ಚಾಗಿದೆ.

Shantha Kumari

Leave a Reply

Your email address will not be published. Required fields are marked *