IND V/s PAK.. ಕಿಂಗ್ ದೇ ಭಯ! – ಕೊಹ್ಲಿ ಕಂಡ್ರೆ ಪಾಕ್ ನಡುಗೋದ್ಯಾಕೆ?
ಪಾಕ್ ಬೌಲರ್ಸ್ ನ ಕಾಡಿದ್ದೇಗೆ ವಿರಾಟ್?
ಇಂಡಿಯಾ ವರ್ಸಸ್ ಪಾಕಿಸ್ತಾನ್.. ಕ್ರಿಕೆಟ್ ಲೋಕದ ಬದ್ಧ ದುಷ್ಮನ್ಸ್ ಟೀಂ ಕಾದಾಟಕ್ಕೆ ಸಜ್ಜಾಗಿವೆ.. ಇಂಡಿಯಾ – ಪಾಕ್ ಮ್ಯಾಚ್ ಅಂದಾಗ ನೆನಪಾಗೋದೇ ಕಿಂಗ್ ಕೊಹ್ಲಿ.. ಯಾಕಂದ್ರೆ ಈ ಹಿಂದಿನ ಮ್ಯಾಚ್‌ಗಳಲ್ಲಿ ವಿರಾಟ್ ದರ್ಬಾರ್ ನಡೆಸಿದ್ದಾರೆ.. ಇವತ್ತು ನಡೆಯೋ ಮೆಗಾ ಬ್ಯಾಟಲ್ ನಲ್ಲಿ ಕಿಂಗ್ ಕೊಹ್ಲಿ ಪರಮವೈರಿ ಪಾಕಿಸ್ತಾನಕ್ಕೆ ನರಕ ತೋರಿಸಲು ಸಜ್ಜಾಗಿದ್ದಾರೆ. ಪಾಕ್ ಎಷ್ಟೇ ಪ್ಲಾನ್ ಮಾಡಿದ್ರೂ ವಿರಾಟರೂಪದ ಮುಂದೆ ಠುಸ್ ಪಟಾಕಿ ಆಗೋದು ಗ್ಯಾರಂಟಿ.
ವಿರಾಟ್ ಕೊಹ್ಲಿ ಅಪ್ರತಿಮ ಆಟಗಾರ. ಎದುರಾಳಿ ತಂಡ ಯಾವುದೇ ಆಗಿರ್ಲಿ. ಕೊಹ್ಲಿ ಬ್ಯಾಟ್ ಘರ್ಜಿಸಲು ಶುರುಮಾಡಿದ್ರೆ ಗೆಲುವು ಫಿಕ್ಸ್ ಅಂತಾನೇ ಲೆಕ್ಕ.. ಎಂತಹದ್ದೇ ಟಫ್ ಸಿಚುವೇಶನ್ ಇರ್ಲಿ. ಟೊಂಕಕಟ್ಟಿ ಹೋರಾಡ್ತಾರೆ. ಅಂತ್ರದಲ್ಲಿ ಬದ್ಧವೈರಿ ಪಾಕ್ ಎದುರಾಳಿ ಅಂದ್ರೆ ಕೇಳ್ಬೇಕಾ? ಆಟದ ವೈಖರಿ ನೆಕ್ಸ್ಟ್ ಲೆವೆಲ್ನಲ್ಲಿ ಇರುತ್ತೆ. ಟಿ20 ವಿಶ್ವಕಪ್ ಸಂಗ್ರಾಮದಲ್ಲಿ ರನ್ ಮಷೀನ್ ಪಾಕ್ ವಿರುದ್ಧ ಕಟ್ಟಿದ ಸೂಪರ್ ಡೂಪರ್ ಇನ್ನಿಂಗ್ಸ್ಗಳನ್ನ ಯಾರೊಬ್ಬ ಕ್ರಿಕೆಟ್ ಪ್ರೇಮಿ ಮರೆಯಲು ಸಾಧ್ಯವಿಲ್ಲ. ಹೀಗಾಗಿ ಇವತ್ತು ನಡೆಯಲಿರುವ ಪಂದ್ಯದಲ್ಲಿ ಎಲ್ಲರ ಪೋಕಸ್ ಕಿಂಗ್ ಕೊಹ್ಲಿ ಕಡೆ ಶಿಫ್ಟ್ ಆಗಿದೆ. ಅದಕ್ಕೆ ಕಾರಣವು ಇದೆ. ಹಿಂದೆ ಪಾಕ್ ವಿರುದ್ಧ ಆಡಿದಾಗಲೆಲ್ಲಾ ರನ್ ಶಿಖರ ಏರಿದ್ದಾರೆ. ಬ್ಯಾಟ್ ಅನ್ನೋ ಅಸ್ತ್ರದಿಂದ ಸಿಡಿದು ಬದ್ಧವೈರಿಯನ್ನ ಉಡೀಸ್ ಮಾಡಿದ್ದಾರೆ.
2022ರ ಟಿ20 ವಿಶ್ವಕಪ್ನಲ್ಲಿ ಭಾರತ ಸೋಲಿನ ಸುಳಿಯಲ್ಲಿತ್ತು. ಮೆಲ್ಬರ್ನ್ ಮೈದಾನದಲ್ಲಿ ಸಿಡಿದೆದ್ದ ಕೊಹ್ಲಿ ಗೆಲುವಿಗಾಗಿ ಟೊಂಕಕಟ್ಟಿ ಹೋರಾಡಿದ್ರು. 53 ಎಸೆತಗಳಲ್ಲಿ ಸ್ಪೋಟಕ ಅಜೇಯ 82 ರನ್ ಚಚ್ಚಿ, ಭಾರತದ ರಣರೋಚಕ ಗೆಲುವಿಗೆ ಕಾರಣರಾಗಿದ್ರು. ಇದು ಟಿ20 ವಿಶ್ವಕಪ್ನಲ್ಲಿ ಕಿಂಗ್ ಕೊಹ್ಲಿ ಕಟ್ಟಿದ ಗ್ರೇಟೆಸ್ಟ್ ಇನ್ನಿಂಗ್ಸ್ ಅಂತಾನೇ ಹೇಳಬಹುದು.
ಇನ್ನು 2021ರ ಟಿ20 ವಿಶ್ವಕಪ್ ಸಮರ. ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತಕ್ಕೆ ನಂಬಿಕಸ್ತ ಬ್ಯಾಟ್ಸ್ಮನ್ ಅನ್ನಿಸಿಕೊಂಡೋರೆಲ್ಲಾ ಕೈಕೊಟ್ರು. ಆದರೆ ಕೊಹ್ಲಿ ಸಂಕಷ್ಟದಲ್ಲಿ ತಂಡದ ಬೆನ್ನಿಗೆ ನಿಂತ್ರು. ಅಮೋಘ 57 ರನ್ ಗಳಿಸಿ ಸ್ಪರ್ಧಾತ್ಮಕ ಸ್ಕೋರ್ ಕಲೆಹಾಕಲು ಕಾರಣರಾದ್ರು. ಆದರೆ ಈ ಪಂದ್ಯದಲ್ಲಿ ಭಾರತ ಪರಾಭವಗೊಳ್ತು. ಸೋಲಿನಲ್ಲಿ ಕಿಂಗ್ ಕೊಹ್ಲಿ ಇನ್ನಿಂಗ್ಸ್ ಎಲ್ಲರ ಹೃದಯ ಗೆದ್ದಿದ್ರು..
ಇದಂತೂ ಕ್ಲಾಸ್ ಇನ್ನಿಂಗ್ಸ್ ಬಿಡಿ. 147 ಟಾರ್ಗೆಟ್ ಬೆನ್ನಟ್ಟಿದ ಭಾರತ ಆರಂಭಿಕರನ್ನೇ ಬೇಗನೆ ಕಳೆದುಕೊಳ್ತು. ಆಗ ಕಿಂಗ್ ಕೊಹ್ಲಿ ಕ್ರೀಸ್ನಲ್ಲಿ ನೆಲಕಚ್ಚಿ ನಿಂತ್ರು. ಟಫ್ ಸಿಚುವೇಶನ್ನಲ್ಲಿ ದಿಟ್ಟ ಆಟವಾಡಿದ ಕೊಹ್ಲಿ 34 ರನ್ ಗಳಿಸಿ ತಂಡಕ್ಕೆ ಗೆಲುವಿನ ಸರಾಮಾಲೆ ಧರಿಸಿದ್ರು. ಒಂದು ವೇಳೆ ಕೊಹ್ಲಿ ಬೇಗನೆ ಔಟಾಗಿದ್ರೆ ಗೆಲುವು ಮರೀಚಿಕೆ ಆಗ್ತಿತ್ತು.
ಇನ್ನು 2016ರ ಟಿ20 ವಿಶ್ವಕಪ್ನಲ್ಲಿ ಭಾರತ-ಪಾಕ್ ತಂಡಗಳು ಈಡನ್ ಗಾರ್ಡನ್ಸ್ನಲ್ಲಿ ಮುಖಾಮುಖಿಯಾಗಿದ್ವು. ಇಲ್ಲಿ ಕೂಡ ಕೊಹ್ಲಿ ವೀರಾವೇಶ ತೋರಿದ್ರು. 37 ಎಸೆತಗಳಲ್ಲಿ 7 ಬೌಂಡ್ರಿ, 1 ಸಿಕ್ಸರ್ ಸಹಿತ 55 ರನ್ ಗಳಿಸಿದ್ರು. ವಿರಾಟ್ ಆರ್ಭಟಕ್ಕೆ ಬೆಚ್ಚಿಬಿದ್ದ ಪಾಕ್ ತಂಡ ಹೀನಾಯ ಸೋಲು ಕಾಣ್ತು.
2012ರ ಟಿ20 ವಿಶ್ವಕಪ್ನಲ್ಲಿ ಕೊಹ್ಲಿ, ಬದ್ಧವೈರಿ ಪಾಕ್ಗೆ ಸೋಲಿನ ದರ್ಶನ ಮಾಡಿಸಿದ್ರು. ಅಲ್ಪ ಗುರಿ ತಂಡದ ಮುಂದಿದ್ರೂ, ಸಿಡಿಗುಂಡು ವಿರೇಂದ್ರ ಸೆಹ್ವಾಗ್, ಗಂಭೀರ್ ಬೇಗನೇ ಪೆವಿಲಿಯನ್ ಸೇರಿಸಿದ್ರು. ಆದರೂ ಕೊಹ್ಲಿ ದೃತಿಗೆಡಲಿಲ್ಲ. 61 ಎಸೆತಗಳಲ್ಲಿ ಸಿಡಿಲಬ್ಬರದ 78 ರನ್ ಸಿಡಿಸಿ ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ರು.
ಹೀಗಾಗಿಯೇ ಇವತ್ತು ನಡೆಯೋ ಮಹಾ ಸಮರದಲ್ಲಿ ಎಲ್ಲರ ಚಿತ್ತ ವಿರಾಟ್ ಕೊಹ್ಲಿಯತ್ತ ನೆಟ್ಟಿದೆ.. ಈ ಮಹಾ ಸಮರದಲ್ಲಿ ಕೊಹ್ಲಿ ಮತ್ತೊಂದು ರಾಕಿಂಗ್ ಪರ್ಫಾಮೆನ್ಸ್ ಮಾಡಲಿ ಅನ್ನೋದು ಎಲ್ಲರ ಆಶಯವಾಗಿದೆ.