ಸೆ. 21ಕ್ಕೆ ಮತ್ತೆ IND Vs PAK – UAE ವಿರುದ್ಧ ಪಾಕ್ ನೌಟಂಕಿ
ವೈರಿಗಳ ನೀರಿಳಿಸಲು ಭಾರತ ರೆಡಿ

ಸೆ. 21ಕ್ಕೆ ಮತ್ತೆ IND Vs PAK – UAE ವಿರುದ್ಧ ಪಾಕ್ ನೌಟಂಕಿವೈರಿಗಳ ನೀರಿಳಿಸಲು ಭಾರತ ರೆಡಿ

ಏಷ್ಯಾಕಪ್​ ಟೂರ್ನಿಯ 8 ತಂಡಗಳ ಪೈಕಿ ಸದ್ಯ 2 ಟೀಮ್​ಗಳು ಅಧಿಕೃತವಾಗಿ ಸೂಪರ್ 4ಗೆ ಕಾಲಿಟ್ಟಿವೆ. ಎ ಗುಂಪಿನಲ್ಲಿ ಭಾರತ ಮತ್ತು ಪಾಕಿಸ್ತಾನ ಮುಂದಿನ ಹಂತಕ್ಕೆ ಸೆಲೆಕ್ಟ್ ಆಗಿದ್ರೆ ಒಮಾನ್ ಮತ್ತು ಯುಎಇ ಟೀಮ್​ಗಳು ಹೊರಬಿದ್ದಿದೆ. ಇನ್ನು ಬಿ ಗ್ರೂಪ್​ನಲ್ಲಿ ಟಾಪ್ ಟು ಸ್ಥಾನಕ್ಕಾಗಿ ಮೂರು ಟೀಮ್​ಗಳ ನಡುವೆ ಪೈಪೋಟಿ ನಡೀತಿದೆ. ಶ್ರೀಲಂಕಾ ಮತ್ತು ಬಾಂಗ್ಲಾದೇಶ 4 ಪಾಯಿಂಟ್ಸ್ ಗಳಿಸಿದ್ರೆ ಅಫ್ಘಾನಿಸ್ತಾನಕ್ಕೆ ಇನ್ನೊಂದು ಪಂದ್ಯ ಬಾಕಿ ಇದ್ದು ಅವ್ರು ಕೂಡ ರೇಸ್​ನಲ್ಲಿದ್ದಾರೆ. ಈ ಮೂರು ರಾಷ್ಟ್ರಗಳ ಪೈಕಿ ಟಾಪ್ 2 ಯಾರು ಅನ್ನೋದನ್ನ ಇವತ್ತಿನ ಶ್ರೀಲಂಕಾ ವರ್ಸಸ್ ಅಫ್ಘಾನಿಸ್ತಾನ ನಡುವಿನ ಪಂದ್ಯ ನಿರ್ಧಾರ ಮಾಡುತ್ತೆ. ಇತ್ತ ಮೂರಕ್ಕೆ ಮೂರೂ ಪಂದ್ಯಗಳನ್ನ ಸೋತು ಹಾಂಗ್ ಕಾಂಗ್ ತಂಡ ರೇಸ್​ನಿಂದ ಹೊರ ಬಿದ್ದಿದೆ. ಬಟ್ ಇಲ್ಲಿ ಎ ಗುಂಪಿನಲ್ಲಿ ಪಾಕಿಸ್ತಾನ ಸೂಪರ್ 4ಗೆ ಕಾಲಿಡೋ ಮುನ್ನ ನೌಟಂಕಿ ಆಟ ಆಡಿದೆ. ಪಂದ್ಯವನ್ನ ಬಹಿಷ್ಕಾರಗೊಳಿಸ್ತೇವೆ ಅಂತಾ ಐಸಿಸಿ ಮುಂದೆ ಪಟ್ಟು ಹಿಡಿದಿದ್ದ ಪಾಕಿಸ್ತಾನ ಕ್ಲೈಮ್ಯಾಕ್ಸ್​ನಲ್ಲಿ ಯು ಟರ್ನ್ ಹೊಡ್ದು ಪಂದ್ಯ ಗೆದ್ದಿದೆ.

ಇದನ್ನೂ ಓದಿ : IND Vs PAK.. ಮತ್ತೆ 2 ಮ್ಯಾಚ್? – ಸೂಪರ್ 4ನಲ್ಲೂ ಶೇಕ್ ಹ್ಯಾಂಡ್ ಇಲ್ವಾ?

ಹ್ಯಾಂಡ್ ಶೇಕ್ ವಿವಾದ.. ಮ್ಯಾಚ್ ರೆಫರಿ ವಜಾಗೆ ಪಟ್ಟು.. ಬೆದರಿಕೆ!

ಕಳೆದ ಭಾನುವಾರ ಭಾರತದ ಆಟಗಾರರು ಪಾಕಿಸ್ತಾನದ ಆಟಗಾರಿಗೆ ಹ್ಯಾಂಡ್ ಶೇಕ್ ಮಾಡದೆ ಇದ್ದಿದ್ದು ನಿಮ್ಗೆಲ್ಲಾ ಗೊತ್ತೇ ಇದೆ. ಇದ್ರಿಂದ ಶೇಪ್ ಔಟ್ ಆಗಿರೋ ಪಿಸಿಬಿ ಅದನ್ನ ಪ್ಯಾಚ್​ಅಪ್ ಮಾಡೋಕೆ ಏನೇನೋ ಗಿಮಿಕ್ ಮಾಡ್ತಿದೆ. ಅದ್ರ ಒಂದು ಭಾಗವೇ ಮ್ಯಾಚ್​ ರೆಫ್ರಿ ಆ್ಯಂಡಿ ಪೈಕ್ರಾಫ್ಟ್ ರನ್ನು ಏಷ್ಯಾಕಪ್​ನಿಂದ ವಜಾ ಮಾಡಿ ಅನ್ನೋದು. ಹಾಗೇ ನಿನ್ನೆ ಪಂದ್ಯಕ್ಕೂ ಪೈಕ್ರಾಫ್ಟ್​ ಅವರನ್ನೇ ಮ್ಯಾಚ್​ ರೆಫ್ರಿ ಆಗಿ ನೇಮಿಸಿದ್ದು ಪಾಕ್​ಗೆ ಮತ್ತಷ್ಟು ಅವಮಾನ ಮಾಡಿದಂತಾಗಿತ್ತು. ಇದೇ ರೀಸನ್ ಇಟ್ಕೊಂಡು ಬುಧವಾರ ಯುಎಇ ವಿರುದ್ಧದ ಪಂದ್ಯ ಬಹಿಷ್ಕಾರ ಮಾಡೋದಾಗಿ ಪಿಸಿಬಿ ಐಸಿಸಿಗೆ ಎರಡನೇ ಸಲ ಲೆಟರ್ ಬರೆದಿತ್ತು. ಆದ್ರೆ ಪಿಸಿಬಿ ಬೇಡಿಕೆಯನ್ನ ನಿರಾಕರಿಸಿದ ಐಸಿಸಿ ಆ್ಯಂಡಿ ಪೈಕ್ರಾಫ್ಟ್​ ಅವರನ್ನು ವಜಾಗೊಳಿಸಲು ಸಾದ್ಯವಿಲ್ಲ ಎಂದಿತ್ತು. ಇದ್ರಿಂದ ಮತ್ತೆ ಸೆಟ್​ಬ್ಯಾಕ್ ಆದಂತಾಗಿ ಪಾಕಿಸ್ತಾನ ತಂಡ ಇನ್​ ಟೈಮ್​ಗೆ ಕ್ರೀಡಾಂಗಣಕ್ಕೆ ಹೋಗಲಿಲ್ಲ. ಇದ್ರಿಂದ ಪಾಕ್ ಟೂರ್ನಿ ಬಾಯ್ಕಾಟ್ ಮಾಡಿದ್ರಾ ಅನ್ನೋ ಟಾಕ್ ಶುರುವಾಗಿತ್ತು. ಈ ವೇಳೆ ಪಿಸಿಬಿ ಚೇರ್​ಮನ್ ಮೊಹ್ಸಿನ್ ನಖ್ವಿ ಜೊತೆ ಐಸಿಸಿ ಸಿಇಒ ಸಂಜೋಗ್ ಗುಪ್ತಾ ಕಾನ್ಫರೆನ್ಸ್ ಕಾಲ್​ನಲ್ಲಿ ಮಾತ್ನಾಡಿ ಪ್ರೈಕ್ರಾಫ್ಟ್ ಪಂದ್ಯದ ರೆಫರಿಯಾಗಿ ಕಂಟಿನ್ಯೂ ಆಗ್ತಾರೆ ಅನ್ನೋದನ್ನ ಸ್ಪಷ್ಟಪಡಿಸಿದ್ರು. ಹಾಗೇ ಪೈಕ್ರಾಫ್ಟ್ ಅವರನ್ನು ಪ್ರಧಾನ ಕಚೇರಿಗೆ ಕರೆಸಿ ಇಡೀ ಪ್ರಕರಣವನ್ನು ಸಂಪೂರ್ಣವಾಗಿ ತನಿಖೆ ಮಾಡಿರೋದಾಗಿ ಪಿಸಿಬಿಗೆ ಲಿಖಿತವಾಗಿ ತಿಳಿಸಲಾಯ್ತು. ಕೊನೆಗೆ ಪಾಕ್ ಆಟಗಾರರು ಮೈದಾನಕ್ಕೆ ಬಂದ್ರು. ಮತ್ತೊಂದೆಡೆ ಭಾರತ ವಿರುದ್ಧದ ಪಂದ್ಯದಲ್ಲಿ ನಡೆದ ಬೆಳವಣಿಗೆಗಳಿಗೆ ಌಂಡಿ ಪೈಕ್ರಾಫ್ಟ್ ಪಾಕಿಸ್ತಾನ ವ್ಯವಸ್ಥಾಪಕರಿಗೆ ಕ್ಷಮೆಯಾಚಿಸಿದ್ದಾರೆ ಎಂದು ಪಿಸಿಬಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ. ಆದ್ರೆ ಐಸಿಸಿ ಆಗಲಿ, ಎಸಿಸಿ ಆಗಲಿ ಈ ಬಗ್ಗೆ ಕ್ಲಾರಿಟಿ ಕೊಟ್ಟಿಲ್ಲ. ಸೋ ಇಷ್ಟೆಲ್ಲಾ ಹೈಡ್ರಾಮಾ ಬಳಿಕ ಪಾಕ್ & ಯುಎಇ ಮ್ಯಾಚ್ ಸ್ಟಾರ್ಟ್ ಆಯ್ತು.

ಬುಧವಾರದ ಪಂದ್ಯದಲ್ಲಿ ಟಾಸ್ ಗೆದ್ದ ಯುಎಇ ಟೀಂ ಬೌಲಿಂಗ್ ಆಯ್ಕೆ ಮಾಡಿಕೊಳ್ತು. ಸೋ ಫಸ್ಟ್ ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡಕ್ಕೆ ಒನ್ಸ್ ಅಗೇನ್ ಓಪನರ್ಸ್ ಕೈಕೊಟ್ರು. ಸೈಮ್ ಅಯೂಬ್ ಸತತ ಮೂರನೇ ಸಲ ಸೊಹ್ನೆ ಸುತ್ತಿದ್ರೆ ಸಾಹಿಬ್ಜಾದಾ ಫರ್ಹಾನ್ 5 ರನ್​ಗಳಿಗೆ ಸುಸ್ತಾದ್ರು. ಇನ್ನು ಫಖರ್ ಜಮಾನ್ ಅರ್ಧಶತಕ ಬಾರಿಸಿದ್ದು ಬಿಟ್ರೆ ಉಳಿದವರಿಂದ ಹೇಳಿಕೊಳ್ಳುವಂತ ಪ್ರದರ್ಶನ ಬರ್ಲಿಲ್ಲ. ಅಂತಿಮವಾಗಿ 20 ಓವರ್​ಗಳಿಗೆ ಪಾಕ್ ಟೀಂ 9 ವಿಕೆಟ್ ನಷ್ಟಕ್ಕೆ 146 ರನ್​ಗಳನ್ನ ಕಲೆ ಹಾಕಿತು. ಪಾಕ್ ನೀಡಿದ್ದ 147 ರನ್‌ಗಳ ಟಾರ್ಗೆಟ್ ಬೆನ್ನಟ್ಟಿದ ಯುಎಇ ತಂಡ 17.4 ಓವರ್‌ಗಳಲ್ಲಿ 105 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಪಾಕಿಸ್ತಾನ 41 ರನ್​ಗಳಿಂದ ಪಂದ್ಯವನ್ನ ಗೆದ್ದುಕೊಳ್ತು. ಈ ಮೂಲಕ ಸೂಪರ್ 4ಗೂ ಅಧಿಕೃತವಾಗಿ ಎಂಟ್ರಿ ಕೊಡ್ತು.

ಸೆಪ್ಟೆಂಬರ್ 21ಕ್ಕೆ ಭಾರತ ಮತ್ತು ಪಾಕಿಸ್ತಾನ ಮತ್ತೆ ಮುಖಾಮುಖಿ!

ಯುಎಇ ವಿರುದ್ಧ ಗೆಲ್ಲೋ ಮೂಲಕ ಸೂಪರ್ 4ಗೆ ಪಾಕಿಸ್ತಾನ ಸೆಲೆಕ್ಟ್ ಆಗಿದೆ. ಈ ಮೂಲಕ ಭಾರತದ ವಿರುದ್ಧ ಮತ್ತೊಂದು ಪಂದ್ಯವಾಡಬೇಕಾಗುತ್ತೆ. ಸೆಪ್ಟೆಂಬರ್ 20ರಿಂದ ಸೂಪರ್ 4 ಹಂತದ ಪಂದ್ಯಗಳು ಶುರುವಾಗುತ್ತವೆ. ಸೆಪ್ಟೆಂಬರ್ 21ರಂದು ಗ್ರೂಪ್ ಎ ನಲ್ಲಿ ಟಾಪ್ 2 ತಂಡಗಳು ಮುಖಾಮುಖಿಯಾಗಬೇಕಾಗುತ್ತೆ. ಹೀಗಾಗಿ ಭಾನುವಾರ ಎ ಗುಂಪಿನಲ್ಲಿರೋ ಭಾರತ ಮತ್ತು ಪಾಕಿಸ್ತಾನ ನಡುವೆ ಫೈಟ್ ನಡೆಯಲಿದೆ. ಈ ಮ್ಯಾಚ್​ನಲ್ಲೂ ಕೂಡ ಭಾರತವೇ ಡಾಮಿನೇಟ್ ಮಾಡೋದು ಪಕ್ಕಾ. ಈಗಾಗ್ಲೇ ಲೀಗ್ ಹಂತದಲ್ಲಿ ಪಾಕಿಸ್ತಾನವನ್ನ ಸೋಲಿಸಿರೋ ಭಾರತ ಸೂಪರ್ 4 ಸ್ಟೇಜ್​ನಲ್ಲೂ ನೀರಿಳಿಸೋಕೆ ರೆಡಿಯಾಗಿದೆ.

Shantha Kumari