ಫ್ಯಾನ್ಸ್ ಸಿಟ್ಟು.. ಶೇಕ್ ಹ್ಯಾಂಡ್ ಗಿಮಿಕ್ – ಹಣಕ್ಕಾಗಿ ಬೇಕಿತ್ತಾ ಮ್ಯಾಚ್?
ಇಂಥಾ ಡ್ರಾಮಾವೇಕೆ BCCI?

ಫ್ಯಾನ್ಸ್ ಸಿಟ್ಟು.. ಶೇಕ್ ಹ್ಯಾಂಡ್ ಗಿಮಿಕ್ – ಹಣಕ್ಕಾಗಿ ಬೇಕಿತ್ತಾ ಮ್ಯಾಚ್?ಇಂಥಾ ಡ್ರಾಮಾವೇಕೆ BCCI?

ಪಾಕಿಸ್ತಾನ ವಿರುದ್ಧ ಪಂದ್ಯ ಗೆದ್ದ ಬಳಿಕ ಭಾರತ ನಡೆದುಕೊಂಡ ರೀತಿಗೆ ಕೆಲವ್ರು ಶಹಬ್ಬಾಸ್ ಅಂತಿದ್ದಾರೆ. ಹೆಂಗೆ ನಾವು ಪಾಕಿಸ್ತಾನಕ್ಕೆ ಠಕ್ಕರ್ ಕೊಟ್ಟಿದ್ದು ಅಂತಾ ಬೆನ್ನು ತಟ್ಟಿ ಹೇಳ್ಕೊಳ್ತಿದ್ದಾರೆ. ಯಾಕಂದ್ರೆ ನಮ್ಮ ಆಟಗಾರರು ಮಾಡಿದ್ದೇ ಸರಿ ಅನ್ನೋದು ಅವ್ರ ವಾದ. ಆದ್ರೆ ರಿಯಾಲಿಟಿ ಬೇರೆನೇ ಇದೆ. ಕೆರಳಿರೋ ಅಭಿಮಾನಿಗಳ ಸಿಟ್ಟನ್ನ ತಣಿಸೋಕೆ ಬಿಸಿಸಿಐ ಮಾಡಿರೋ ಗಿಮಿಕ್ ಅಷ್ಟೇ ಇದು. ಹೊಳೆಯಂತೆ ಹರಿದು ಬರೋ ಹಣಕ್ಕಾಗಿ ಮ್ಯಾಚ್ ಆಡಿ ಕೊನೆಗೆ ನಾವು ಅವ್ರ ಕೈಕುಲುಕಿಲ್ಲ ಅಂತಾ ತೇಪೆ ಹಚ್ಚೋ ಕೆಲ್ಸ ಮಾಡಿದ್ದಾರೆ ಅಷ್ಟೇ.

ಇದನ್ನೂ ಓದಿ : ಪಾಕಿಸ್ತಾನವನ್ನು ಸರ್ವನಾಶ ಮಾಡ್ತಿದೆ ಭಾರತ – ನಖ್ವಿ ವಿರುದ್ಧ ರೊಚ್ಚಿಗೆದ್ದ ಫ್ಯಾನ್ಸ್

ಪಾಕ್ ವಿರುದ್ಧ ಪಂದ್ಯ ಆಡಿ ಕೈಕುಲುಕದಿದ್ರೆ ದೊಡ್ಡ ಸಾಧನೆನಾ?

ಌಕ್ಚುಲಿ ಏಷ್ಯಾಕಪ್ ನಲ್ಲಿ ಪಾಕಿಸ್ತಾನ ವಿರುದ್ಧ ಭಾರತದ ಪಂದ್ಯ ದಿಢೀರ್ ಅಂತಾ ಫಿಕ್ಸ್ ಆಗಿದ್ದೇನೂ ಅಲ್ಲ. ಮೊದ್ಲೇ ಡಿಸೈಡ್ ಆಗಿತ್ತು. ವಾರಗಳ ಮೊದ್ಲೇ ಶೆಡ್ಯೂಲ್ ಕೂಡ ಗೊತ್ತಿತ್ತು. ಹೀಗಿದ್ರೂ ಬಿಸಿಸಿಐ ಆಗ್ಲಿ ಅಥವಾ ಆಟಗಾರರಾಗಿ ನಾವು ಪಾಕ್ ವಿರುದ್ಧ ಮ್ಯಾಚ್ ಆಡಲ್ಲ ಅಂತಾ ಎಲ್ಲೂ ಹೇಳಲಿಲ್ಲ. ಬಾಯ್ಕಾಟ್ ಕೂಡ ಮಾಡ್ಲಿಲ್ಲ. ಹೌದು ನಾವು ಪಂದ್ಯ ಆಡ್ತೀವಿ ಅಂತಾ ಅವ್ರೇ ಮೆಂಟಲಿ ರೆಡಿ ಇದ್ರು. ಇತ್ತ ವಿಪಕ್ಷನಾಯಕರು, ಸಾಕಷ್ಟು ಅಭಿಮಾನಿಗಳು ಪಂದ್ಯ ಬಹಿಷ್ಕರಿಸಿ ಅಂದ್ರೂ ಕೇಳದೇ ಮ್ಯಾಚ್ ಆಡಿದ್ರು. ಆದ್ರೆ ಟಾಸ್ ಟೈಮಲ್ಲಿ ಕೈಕುಲುಕದೆ ಇದ್ದದ್ದು ಮ್ಯಾಚ್ ಮುಗಿದ್ಮೇಲೆ ಪಾಕಿಸ್ತಾನದ ಆಟಗಾರರಿಗೆ ಶೇಕ್ ಹ್ಯಾಂಡ್ ಮಾಡದೇ ಇದ್ದಿದ್ದನ್ನೇ ದೊಡ್ಡ ಸಾಧನೆ ಥರ ಬಿಂಬಿಸಿದ್ರಲ್ಲ ಅಲ್ಲಿಯೇ ಅಭಿಮಾನಿಗಳನ್ನ ಮಂಗ ಮಾಡಿದ್ದು ಅವ್ರು. ಮ್ಯಾಚ್ ಬಾಯ್ಕಾಟ್ ಮಾಡಿ ಅಂತಾ ಸಿಟ್ಟಾಗಿದ್ದವ್ರನ್ನ ತಣಿಸೋಕೆ ಈ ಕೆಲಸ ಮಾಡಿದ್ರು ಅಷ್ಟೇ. ಕೊನೆಗೆ ಪೋಸ್ಟ್ ಮ್ಯಾಚ್ ಪ್ರಸೆಂಟೇಷನ್ ವೇಳೆ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಬಾಯಿಂದ ಕೆಲ ಮಾತುಗಳನ್ನ ಹೇಳ್ಸಿದ್ರು. ನಮ್ಮ ಗೆಲುವನ್ನ ಪೆಹಲ್ಗಾಮ್ ಅಟ್ಯಾಕ್​ನಲ್ಲಿ ಮೃತಪಟ್ಟ ಕುಟುಂಬಗಳಿಗೆ ಅರ್ಪಿಸುತ್ತೇವೆ. ಹುತಾತ್ಮರಿಗೆ ಗೌರವ ಸಲ್ಲಿಸುತ್ತೇವೆ. ಇಂಡಿಯನ್ ಆರ್ಮಿ ಜೊತೆ ನಿಲ್ಲುತ್ತೇವೆ ಅನ್ನೋ ಮೂಲಕ ಅಷ್ಟೂ ವಿರೋಧಗಳಿಗೆ ತೇಪೆ ಹಚ್ಚೋ ಕೆಲಸ ಅಚ್ಚುಕಟ್ಟಾಗಿ ನಡೆದಿತ್ತು. ಇನ್ನು ಮೈದಾನಕ್ಕೆ ಹೋಗೋ ಮುನ್ನ ಕೋಚ್ ಗೌತಮ್ ಗಂಭೀರ್ ಪೆಹಲ್ಗಾಮ್ ಅಟ್ಯಾಕ್ ಮರಿಬೇಡಿ ಅಂದಿದ್ರಂತೆ. ಅಲ್ಲಿ ಪೆಹಲ್ಗಾಮ್ ಅಟ್ಯಾಕ್ ನಡೆದಿರಲಿಲ್ಲ ಅಂದ್ರೂ ಭಾರತವೇ ಮ್ಯಾಚ್ ಗೆಲ್ತಿತ್ತು ಅದು ಬೇರೆ ವಿಚಾರ.

ಪಾಕ್ ವಿರುದ್ಧದ ಪಂದ್ಯ ಹಣಕ್ಕಾಗಿಯೇ ಆಡಿತಾ ಭಾರತ?

ಌಕ್ಚುಲಿ ಇಲ್ಲಿ ಬಿಸಿಸಿಐ ಪಾಕಿಸ್ತಾನದ ವಿರುದ್ಧ ಪಂದ್ಯವನ್ನ ಅಷ್ಟು ಈಸಿಯಾಗಿ ಮಿಸ್ ಮಾಡಿಕೊಳ್ಳಲ್ಲ. ಯಾಕಂದ್ರೆ ಪಾಕ್ ವಿರುದ್ಧದ ಪಂದ್ಯಕ್ಕಿರೋ ಕ್ರೇಜ್, ಎಮೋಷನ್ಸ್​ನಿಂದ ಭಾರತಕ್ಕೆ ಹಣದ ಹೊಳೆಯೇ ಹರಿದು ಬರುತ್ತೆ. ಇಗಾಗ್ಲೇ ಜಗತ್ತಿನಲ್ಲೇ ಯಾವ ಕ್ರಿಕೆಟ್ ಬೋರ್ಡ್ ಬಳಿಯೂ ಇಲ್ಲದಷ್ಟು ಹಣ ಬಿಸಿಸಿಐ ಖಜಾನೆಯಲ್ಲಿದೆ. ಹೀಗಿದ್ರೂ ಪಾಕ್ ವಿರುದ್ಧದ ಪಂದ್ಯ ಗೆದ್ದಾಗ ಗೆಲುವನ್ನ ಅರ್ಪಣೆ ಮಾಡ್ತೇವೆ ಅಂತಾನೇ ಹೇಳಿದ್ರೋ ಹೊರತು ಎಲ್ಲೂ ಕೂಡ ನಾವು ಸಂತ್ರಸ್ತ ಕುಟುಂಬಗಳಿಗಾಗ್ಲಿ ಅಥವಾ ಹುತಾತ್ಮ ಯೋಧರ ಫ್ಯಾಮಿಲಿಗಳಿಗಾಗಿ ಇಲ್ಲ ಇಂಡಿಯನ್ ಆರ್ಮಿಗಾಗಿ ಫೈನಾನ್ಶಿಯಲ್ ಸಪೋರ್ಟ್ ಮಾಡ್ತೀವಿ ಅಂತಾ ಎಲ್ಲೂ ಹೇಳಲಿಲ್ಲ. ಯಾಕಂದ್ರೆ ಅವ್ರಿಗೆ ಹಣ ಅಷ್ಟೇ ಇಂಪಾರ್ಟೆಂಟ್. ನೋ ಫೀಲಿಂಗ್ಸ್.. ಹಾಗಂತ ಏಷ್ಯಾಕಪ್​ನ ಭಾರತ ಬಹಿಷ್ಕಾರ ಮಾಡೇ ಇಲ್ವಾ ಅಂದ್ರೆ ಯಾಕಿಲ್ಲ.. ಟೂರ್ನಿ ಆರಂಭವಾದ ಎರಡನೇ ಆವೃತ್ತಿಯನ್ನೇ ಭಾರತ ಬಾಯ್ಕಾಟ್ ಮಾಡಿತ್ತು. ಸೋ ಈ ಸಲವೂ ಬಹಿಷ್ಕಾರ ಮಾಡೋದೇನು ದೊಡ್ಡದಾಗಿರಲಿಲ್ಲ.

1986ರ ಏಷ್ಯಾಕಪ್ ಬಹಿಷ್ಕಾರ ಮಾಡಿದ್ದ ಭಾರತ!

1984ರಲ್ಲಿ ಏಷ್ಯಾಕಪ್​ ಟೂರ್ನಿ ಆರಂಭವಾಗಿ ಮೊದಲ ಆವೃತ್ತಿಯಲ್ಲೇ ಭಾರತ ಚಾಂಪಿಯನ್ ಆಗಿತ್ತು. ಬಟ್ ನೆಕ್ಸ್​ಟ್ ಸೀಸನ್ ಅಂದ್ರೆ 1986ರಲ್ಲೇ ಟೂರ್ನಿಯನ್ನ ಬಹಿಷ್ಕರಿಸಿತ್ತು. 1986ರಲ್ಲಿ ಶ್ರೀಲಂಕಾದಲ್ಲಿ ಟೂರ್ನಿ ಆಯೋಜನೆ ಮಾಡ್ಲಾಗಿತ್ತು. ಆ ಟೈಮಲ್ಲಿ ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಉಗ್ರಗಾಮಿಗಳು ಮತ್ತು ಸರ್ಕಾರದ ನಡುವಿನ ಅಂತರ್ಯುದ್ಧ ತಾರಕಕ್ಕೇರಿತ್ತು. ಹಿಂಸಾಚಾರಗಳು ಹೆಚ್ಚಾಗಿದ್ವು. 1985ರಲ್ಲಿ ಶ್ರೀಲಂಕಾದ ಅನುರಾಧಪುರದಲ್ಲಿ ನಡೆದಿದ್ದ ಹತ್ಯಾಕಾಂಡದಲ್ಲಿ 146 ಜನ ಪ್ರಾಣ ಬಿಟ್ಟಿದ್ರು.  ಹೀಗಾಗಿ ಆಟಗಾರರ ಸುರಕ್ಷತೆಯನ್ನು ಪರಿಗಣಿಸಿ, ಆಗಿನ ಕೇಂದ್ರ ಸರ್ಕಾರವು ಶ್ರೀಲಂಕಾದಲ್ಲಿ ನಡೆಯಲಿರುವ ಏಷ್ಯಾಕಪ್ ಕ್ರಿಕೆಟ್ ಸರಣಿಯನ್ನು ಬಹಿಷ್ಕರಿಸುವಂತೆ ಭಾರತ ತಂಡಕ್ಕೆ ಸಲಹೆ ನೀಡಿತು. ಈ ಕಾರಣಕ್ಕಾಗಿ, ಭಾರತವು 1986ರ ಏಷ್ಯಾ ಕಪ್‌ನಲ್ಲಿ ಭಾಗವಹಿಸಲಿಲ್ಲ. ಹೀಗೆ ಈ ಸಲ ಕೂಡ ಪೆಹಲ್ಗಾಮ್ ಅಟ್ಯಾಕ್​ನ ವಿರೋಧಿಸಿ ಪಾಕ್ ವಿರುದ್ಧ ಮ್ಯಾಚ್ ಆಡಲ್ಲ ಅನ್ನೋ ನಿರ್ಧಾರ ಮಾಡ್ಬೋದಿತ್ತು. ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ತಮ್ಮ ಅಧಿಕಾರವಧಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಬಿಕ್ಕಟ್ಟು ಶಮನಕ್ಕೆ ಕ್ರಿಕೆಟ್ ರಾಜತಾಂತ್ರಿಕತೆಯನ್ನ ಬಳಸಿದ್ರು. 2004 ರಲ್ಲಿ, ಅವರು ಭಾರತೀಯ ಕ್ರಿಕೆಟ್ ತಂಡದ ಪಾಕಿಸ್ತಾನ ಭೇಟಿಯನ್ನು ಪ್ರೋತ್ಸಾಹಿಸಿ ಬೆಂಬಲಿಸಿದರು. ಇದು ಮಹತ್ವದ ರಾಜತಾಂತ್ರಿಕ ಪ್ರಯತ್ನವಾಗಿತ್ತು.

ಭಾನುವಾರದ ಪಂದ್ಯದಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಭರ್ಜರಿಯಾಗೇ ಗೆದ್ದು ಬೀಗಿತ್ತು. ಸೋ ಮ್ಯಾಚ್ ಮುಗಿದ್ಮೇಲೂ ಅದನ್ನ ಅಷ್ಟೇ ಕಾನ್ಫಿಡೆಂಟಾಗಿ ಸೆಲೆಬ್ರೇಟ್ ಮಾಡ್ಬೋದಿತ್ತು. ಎದುರಾಳಿ ಆಟಗಾರರ ಕಣ್ಣಲ್ಲಿ ಕಣ್ಣಿಟ್ಟು ಇದು ನಮ್ಮ ತಾಕತ್ತು ಅಂತಾ ಅಲ್ಲೂ ತೋರಿಸಬಹುದಿತ್ತು. ಮೈದಾನದಲ್ಲಿದ್ದು ಇದು ನಮ್ಮ ಪವರ್ ಅನ್ನೋದನ್ನ ಸಾರಿ ಸಾರಿ ಹೇಳ್ಬೋದಿತ್ತು. ಆದ್ರೆ ಅದನ್ನ ಬಿಟ್ಟು ಪಂದ್ಯ ಗೆದ್ರೂ ಕೂಡ ಅಷ್ಟು ಬೇಗ ಬೇಗ ಹೋಗಿ ಬಾಗಿಲು ಹಾಕಿಕೊಳ್ಳೋ ಅವಸರ ಏನಿತ್ತು. ಇದ್ರಿಂದ ಏನ್ ಪ್ರೂವ್ ಮಾಡಿದಂತಾಯ್ತೋ ಗೊತ್ತಿಲ್ಲ. ಕ್ರಿಕೆಟ್​ನ ಕ್ರೀಡೆಯಾಗೇ ನೋಡ್ಬೇಕು. ಒಂದು, ಮ್ಯಾಚ್ ಆಡೋಕೆ ಅಂತಾ ನಿಂತ್ಮೇಲೆ ಏನ್ ಫಾರ್ಮಲಿಟೀಸ್ ಇದ್ಯೋ ಅದನ್ನ ಫಾಲೋ ಮಾಡ್ಬೇಕಿತ್ತು.

Shantha Kumari