IND Vs PAK ಟಿಕೆಟ್ಸ್ UNSOLD – RO-KO, RizBar ಇಲ್ಲದ್ದೇ ಮೈನಸ್
ಹೈವೋಲ್ಟೇಜ್ ಫೈಟ್ ಕ್ರೇಜ್ ಕಳ್ಕೊಳ್ತಾ?

ಭಾರತ ತಂಡ ಈಗಾಗ್ಲೇ ಯುಎಇ ವಿರುದ್ಧ ಮೊದಲ ಪಂದ್ಯ ಆಡಿ ಭರ್ಜರಿಯಾಗಿ ಗೆದ್ದು ಬೀಗಿದೆ. ಆದ್ರೆ ಪಾಕಿಸ್ತಾನ ಶುಕ್ರವಾರ ಒಮನ್ ತಂಡದ ವಿರುದ್ಧ ತನ್ನ ಮೊದಲ ಪಂದ್ಯವನ್ನ ಆಡಲಿದೆ. ಆ ಬಳಿಕ ಉಭಯ ತಂಡಗಳು ಇದೇ ಭಾನುವಾರ ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ. ಮೊದ್ಲೆಲ್ಲಾ ಭಾರತ ಪಾಕಿಸ್ತಾನ ಪಂದ್ಯ ಇದೆ ಅಂದ್ರೆ ಕೆಲವೇ ನಿಮಿಷಗಳಲ್ಲಿ ಟಿಕೆಟ್ಗಳೆಲ್ಲಾ ಸೋಲ್ಡ್ಔಟ್ ಆಗ್ತಿದ್ವು. ಬಟ್ ಈ ಸಲ ಟಿಕೆಟ್ಸ್ ಇನ್ನೂ ಸೇಲ್ ಆಗಿಲ್ಲ. ಇದಕ್ಕೆ ಸಾಕಷ್ಟು ಕಾರಣಗಳೂ ಕೇಳಿ ಬರ್ತಿವೆ. ಅದ್ರಲ್ಲೂ ಸ್ಟಾರ್ ಆಟಗಾರರು ಇಲ್ಲದ್ದೇ ಕ್ರೇಜ್ ಕುಗ್ಗಿಸಿತಾ ಅನ್ನೋ ಚರ್ಚೆಯೂ ನಡೀತಿದೆ.
ಇದನ್ನೂ ಓದಿ : ವಿಶ್ವದ ನಂ 1 ಶ್ರೀಮಂತ ಪಟ್ಟಿಯಲ್ಲಿ ಎಲಾನ್ ಮಾಸ್ಕ್ ರನ್ನ ಹಿಂದಿಕ್ಕಿದ ಲ್ಯಾರಿ ಎಲಿಸನ್ – ಲ್ಯಾರಿ ಆಸ್ತಿ ಎಷ್ಟು ಬಿಲಿಯನ್ ಗೊತ್ತಾ?
ದಶಕದ ಬಳಿಕ ರೋ-ಕೊ ಇಲ್ಲದೆ ಏಷ್ಯಾಕಪ್ ಗಿಳಿದ ಭಾರತ!
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟೀಂ ಇಂಡಿಯಾ ಅಷ್ಟೇ ಅಲ್ಲ ಇಡೀ ಕ್ರಿಕೆಟ್ ಜಗತ್ತೇ ಕಂಡ ಆಧುನಿಕ ಕ್ರಿಕೆಟ್ನ ಲೆಜೆಂಡರ್ಸ್. ಜಗತ್ತಿನಾದ್ಯಂತ ಅಭಿಮಾನಿ ಬಳಗ ಇದೆ. ಬಟ್ ಬೇಸರದ ಸಂಗತಿ ಅಂದ್ರೆ ಇಬ್ರೂ ಕೂಡ ನಿವೃತ್ತಿಯ ಅಂಚಿನಲ್ಲಿದ್ದು ಈಗಾಗ್ಲೇ ಟಿ-20ಐ ಮತ್ತು ಟೆಸ್ಟ್ ಫಾರ್ಮೆಟ್ಗೆ ಗುಡ್ ಬೈ ಹೇಳಿದ್ದಾರೆ. ಈ ಸಲ ಏಷ್ಯಾಕಪ್ ಟಿ-20 ಮಾದರಿಯಲ್ಲಿ ನಡೀತಾ ಇರೋದ್ರಿಂದ ಈ ಇಬ್ಬರು ಆಟಗಾರರ ಆಬ್ಸೆನ್ಸ್ನಲ್ಲಿ ಭಾರತ ಏಷ್ಯಾಕಪ್ಗಿಳಿದಿದೆ. ರೋ-ಕೊ ಜೋಡಿ ಇಲ್ಲದ್ದಕ್ಕೆ ಫ್ಯಾನ್ಸ್ ಮ್ಯಾಚ್ ನೋಡೋಕೆ ಇಂಟ್ರೆಸ್ಟ್ ತೋರಿಸ್ತಿಲ್ಲ ಎನ್ನಲಾಗ್ತಿದೆ.
ರೋ-ಕೊ, ಜಡ್ಡು ಇಲ್ಲದ್ದೇ ಕಾರಣನಾ?
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ರವೀಂದ್ರ ಜಡೇಜಾ ಇಲ್ಲ
ಏಷ್ಯಾಕಪ್ ನಲ್ಲಿ 2016 ಮತ್ತು 2022ರಲ್ಲಿ 2 ಆವೃತ್ತಿ ಚುಟುಕು ಮಾದರಿ
ರೋಹಿತ್ ಶರ್ಮಾ 2008 ರಿಂದ 2023 ರವರೆಗಿನ ಪ್ರತಿಯೊಂದು ಆವೃತ್ತಿ
2008, 2010, 2012, 2014, 2016, 2022, ಮತ್ತು 2023ರಲ್ಲಿ ಏಷ್ಯಾಕಪ್
ವಿರಾಟ್ ಕೊಹ್ಲಿ 2018 ರ ಸೀಸನ್ ಹೊರತುಪಡಿಸಿ 2010 ರಿಂದ ಪ್ರತಿ ಆವೃತ್ತಿ
ರವೀಂದ್ರ ಜಡೇಜಾ 2010 ರಿಂದ ಪ್ರತಿ ಆವೃತ್ತಿಯಲ್ಲೂ ಆಡಿದ್ದಾರೆ
ಇದು ಭಾರತದ ಕಥೆಯಾದ್ರೆ ಅತ್ತ ಪಾಕಿಸ್ತಾನ ಟೀಮ್ನಲ್ಲೂ ಈ ಸಲ ಸಾಕಷ್ಟು ಬದಲಾವಣೆಗಳಾಗಿವೆ. ಪಾಕ್ನಲ್ಲಿ ಸ್ಟಾರ್ ಆಟಗಾರರಾಗಿರೋ ಮೊಹಮ್ಮದ್ ರಿಜ್ವಾನ್ ಮತ್ತು ಬಾಬರ್ ಅಜಂ ಇಲ್ಲದೆಯೇ ತಂಡವನ್ನ ಘೋಷಣೆ ಮಾಡಲಾಗಿದೆ. ಹಾಗೇ ಮೊಹಮ್ಮದ್ ಅಲಿ ಅಘಾ ನಾಯಕತ್ವದ ಟೀಂ ಬಗ್ಗೆ ಅಷ್ಟೇನು ಕ್ರೇಜ್ ಇಲ್ಲ. ರಿಜ್ವಾನ್ ಮತ್ತು ಬಾಬರ್ ಪಾಕ್ ಮಟ್ಟಿಗೆ ದೊಡ್ಡ ಆಟಗಾರರು. ಇದೊಂದು ಕಡೆಯಾದ್ರೆ ಟಿಕೆಟ್ ಪ್ರೈಸ್ ಜಾಸ್ತಿ ಇರೋದು ಕೂಡ ಮತ್ತೊಂದು ಕಾರಣವಾಗಿದೆ.
ಭಾರತ – ಪಾಕ್ ಪಂದ್ಯಕ್ಕೆ ಮಾತ್ರ ಟಿಕೆಟ್ ದುಬಾರಿ!
ಮೊದ್ಲಿಂದಲೂ ಕೂಡ ಟೂರ್ನಿ ಆಯೋಕಕರಿಗೆ ಪಾಕ್ ಮತ್ತು ಭಾರತದ ಪಂದ್ಯ ಅಂದ್ರೆ ಚಿನ್ನದ ಮೊಟ್ಟೆ ಇಡೋ ಕೋಳಿ. ಇಲ್ಲೂ ಅದೇ ಆಗಿದೆ. ಭಾರತ ಪಾಕ್ ಪಂದ್ಯಕ್ಕೆ ವಿಐಪಿ ಸೂಟ್ಸ್ ಈಸ್ಟ್‌ನಲ್ಲಿ ಎರಡು ಆಸನಗಳ ಬೆಲೆ 2,57,815 ರೂಪಾಯಿ ನಿಗದಿಪಡಿಸಲಾಗಿದೆ.. ಇನ್ನು ರಾಯಲ್ ಬಾಕ್ಸ್‌ನ ಬೆಲೆ 2,30,700 ರೂಪಾಯಿ ಮತ್ತು ಸ್ಕೈ ಬಾಕ್ಸ್ ಈಸ್ಟ್‌ನ ಬೆಲೆ 1,67,851 ರೂಪಾಯಿ ಇದೆ. ಹಾಗಂತ ಮಧ್ಯಮ ಶ್ರೇಣಿಯ ಟಿಕೆಟ್‌ಗಳ ಬೆಲೆಯೂ ಕಡಿಮೆ ಏನಿಲ್ಲ. ಪ್ಲಾಟಿನಂ ಟಿಕೆಟ್ ಬೆಲೆಯೇ ಸುಮಾರು 75,659 ರೂಪಾಯಿ ನಿಗದಿಪಡಿಸಲಾಗಿದೆ. ಗ್ರಾಂಡ್ ಲಾಂಜ್ ಬೆಲೆ 41,153 ರೂಪಾಯಿ ಮತ್ತು ಪೆವಿಲಿಯನ್ ವೆಸ್ಟ್ ಬೆಲೆ 28,174 ರೂಪಾಯಿ ಇದೆ. ಕಡಿಮೆ ಟಿಕೆಟ್ ಆದ ಜನರಲ್ ಈಸ್ಟ್ ಬೆಲೆ ಕೂಡ ಸುಮಾರು 10,000 ರೂಪಾಯಿ ಆಗಿದೆ. ಸ್ಟಾರ್ಟಿಂಗ್ ಪ್ರೈಸೇ 10 ಸಾವಿರ ಆಗಿರೋದ್ರಿಂದ ನೋಡುಗರ ಸಂಖ್ಯೆ ಕಡಿಮೆಯಾಗಿದೆ ಎನ್ನಲಾಗಿದೆ.
ಇನ್ನು ಇದೆಲ್ಲದ್ರ ನಡುವೆ ಪೆಹಲ್ಗಾಮ್ ಅಟ್ಯಾಕ್ ಪಂದ್ಯದ ಕ್ರೇಜ್ ಕಡಿಮೆ ಮಾಡ್ತಾ ಅನ್ನೋ ಮಾತುಗಳೂ ಇವೆ. ಭಾರತ-ಪಾಕ್ ಮ್ಯಾಚ್ ಇದ್ದಾಗ ಹೈಯೆಸ್ಟ್ ಫ್ಯಾನ್ಸ್ ಇರೋದು ಭಾರತೀಯರು. ಜಗತ್ತಿನ ಯಾವ್ದೇ ಮೂಲೆಯಲ್ಲಿದ್ರೂ ಎಷ್ಟೇ ದುಡ್ಡಾದ್ರೂ ಹೋಗಿ ನೋಡ್ತಾರೆ. ಆದ್ರೆ ಪೆಹಲ್ಗಾಮ್ ಮೇಲೆ ದಾಳಿ ನಡೆದಾಗ ಇದ್ರ ಹಿಂದೆ ಇರೋದು ಪಾಕಿಸ್ತಾನ ಅನ್ನೋದು ಗೊತ್ತಾಗಿತ್ತು. ಹೀಗಾಗಿ ಪಾಕ್ ವಿರುದ್ಧ ಕ್ರಿಕೆಟ್ನೂ ಆಡದಂತೆ ಹಲವರು ಒತ್ತಾಯಿಸಿದ್ರು. ಇದೇ ಕಾರಣಕ್ಕೆ ಪಂದ್ಯವನ್ನ ನೋಡೋಕೆ ಆಸಕ್ತಿ ತೋರಿಸ್ತಿಲ್ಲ ಅನ್ನೋ ಮಾತುಗಳೂ ಕೇಳಿ ಬರ್ತಿವೆ.

ನೋಡಿರಿ

