IND Vs PAK ಸೇಡಿನ ಸಮರ – ಯಂಗ್ ಇಂಡಿಯನ್ಸ್ ಪಾಠ ಕಲಿಸ್ತಾರಾ?
ರೈಸಿಂಗ್ ಸ್ಟಾರ್ಸ್ FIRE ಯಾರದ್ದು?

IND Vs PAK ಸೇಡಿನ ಸಮರ – ಯಂಗ್ ಇಂಡಿಯನ್ಸ್ ಪಾಠ ಕಲಿಸ್ತಾರಾ?ರೈಸಿಂಗ್ ಸ್ಟಾರ್ಸ್ FIRE ಯಾರದ್ದು?

2026ರ ಏಷ್ಯಾಕಪ್ ರೈಸಿಂಗ್ ಸ್ಟಾರ್ ಟೂರ್ನಿಯ ರಂಗು ಜೋರಾಗ್ತಿದೆ. ಇಂಡೋ-ಪಾಕ್ ನಡುವೆ ಮಧ್ಯಾಹ್ನ 3.30ಕ್ಕೆ ಪಂದ್ಯ ಸ್ಟಾರ್ಟ್ ಆಗಲಿದ್ದು ಕಳೆದ ಆವೃತ್ತಿಯ ಸೋಲಿನ ಸೇಡನ್ನ ತೀರಿಸಿಕೊಳ್ಳೋಕೆ ಯಂಗ್ ಇಂಡಿಯನ್ಸ್ ರೆಡಿಯಾಗಿದ್ದಾರೆ. ಅಭಿಷೇಕ್ & ವೈಭವ್​ರನ್ನೇ ಟಾರ್ಗೆಟ್ ಮಾಡಿರೋ ಪಾಕಿಸ್ತಾನ ಇವ್ರಿಬ್ಬರ ವಿಕೆಟ್ ತೆಗೆಯೋಕೆ ಮಾಸ್ಟರ್ ಪ್ಲ್ಯಾನ್ ಮಾಡಿದೆ.

ಇದನ್ನೂ ಓದಿ : ಗಿಲ್ ಕೈಯಲ್ಲಿ ಸಿರಾಜ್ ಟೆಸ್ಟ್ ಭವಿಷ್ಯ ಸೆಹ್ವಾಗ್ 2.0 ಆಗಲ್ವಂತೆ ಆರ್ಯವೀರ್!

ಮೆನ್ಸ್, ವುಮೆನ್ಸ್, ಅಂಡರ್ 19 ಹೀಗೆ ಎಲ್ಲಾ ಮಾದರಿಯ ಏಷ್ಯಾಕಪ್​ನಲ್ಲೂ ಭಾರತವೇ ಹಾಲಿ ಚಾಂಪಿಯನ್ಸ್.. ಈಗ ರೈಸಿಂಗ್ ಸ್ಟಾರ್ ಏಷ್ಯಾಕಪ್​ನಲ್ಲೂ ಖದರ್ ತೋರಿಸೋಕೆ ಮುಂದಾಗಿದ್ದಾರೆ. ತಿಲಕ್ ವರ್ಮಾ ಕ್ಯಾಪ್ಟನ್ಸಿಯ ಭಾರತ ಎ ತಂಡ ಇವತ್ತು ಪಾಕಿಸ್ತಾನ-ಎ ತಂಡದ ವಿರುದ್ಧ ಅಖಾಡಕ್ಕಿಳಿಯಲಿದೆ. ಆದ್ರೆ ಪಾಕಿಸ್ತಾನವನ್ನ ಈಸಿಯಾಗಿಯೂ ಪರಿಗಣಿಸುವಂತಿಲ್ಲ. ಪಾಕಿಸ್ತಾನ ಕಳೆದ ಆವೃತ್ತಿಯ ಚಾಂಪಿಯನ್. ಮತ್ತೊಂದೆಡೆ ಭಾರತಕ್ಕೆ ಕಳೆದ ಆವೃತ್ತಿಯಲ್ಲಿ ಸೆಮಿಫೈನಲ್‌ನಲ್ಲೇ ನಿರಾಸೆಯಾಗಿತ್ತು. ಈ ಬಾರಿ 50 ಓವರ್ ಮಾದರಿಯಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಭಾರತ ತನ್ನ ಸಾಮರ್ಥ್ಯ ಸಾಬೀತುಪಡಿಸಬೇಕಿದೆ. ಹಾಗಂತ ಅದು ಅಷ್ಟು ಈಸಿ ಇಲ್ಲ. ಯಾಕಂದ್ರೆ ಕಳೆದ ಆವೃತ್ತಿಯಲ್ಲಿ ಅಂದ್ರೆ 2025ರ ಟೂರ್ನಮೆಂಟ್​ನಲ್ಲಿ ಗ್ರೂಪ್ ಸ್ಟೇಜ್​ನಲ್ಲಿ  ಭಾರತ ‘ಎ’ ತಂಡವು ಪಾಕಿಸ್ತಾನ ವಿರುದ್ಧ ಕೇವಲ 136 ರನ್‌ಗಳಿಗೆ ಆಲೌಟ್ ಆಗಿ 8 ವಿಕೆಟ್‌ಗಳ ಹೀನಾಯ ಸೋಲು ಕಂಡಿತ್ತು. ಪಾಕಿಸ್ತಾನ ತಂಡವು ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿಯುತ್ತಿರುವುದರಿಂದ, ಭಾರತ ಕಳೆದ ಸೋಲಿನ ಸೇಡು ತೀರಿಸಿಕೊಳ್ಳಬೇಕಿದೆ. ಮತ್ತೊಂದೆಡೆ ಅಬ್ದುಲ್ ಸಮದ್ ಕ್ಯಾಪ್ಟನ್ಸಿಯ ಪಾಕಿಸ್ತಾನ ಕೂಡ ಟಫ್ ಫೈಟ್ ಕೊಡೋಕೆ ರೆಡಿಯಾಗಿದ್ದಾರೆ.

ಭಾರತಕ್ಕೆ ಬೇಕು ತಾಳ್ಮೆ!

ತಂಡದಲ್ಲಿ ಆಲ್ಮೋಸ್ಟ್ ಯಂಗ್ ಸ್ಟರ್ಸ್ ಇದ್ದು ತಾಳ್ಮೆಯುತವಾಗಿ ಆಡಬೇಕು

50 ಓವರ್ ಗಳ ಫಾರ್ಮೆಟ್ ಆಗಿರೋದ್ರಿಂದ ಹೊಡಿಬಡಿ ಆಟ ಕಡಿಮೆ

ಅಭಿಷೇಕ್ ಶರ್ಮಾ & ಸೂರ್ಯವಂಶಿ ಓಪನಿಂಗ್ ಜೊತೆಯಾಟ ಕ್ರೂಶಿಯಲ್

ನೇಪಾಳ ವಿರುದ್ಧ 9 ರನ್ ಗಳಿಗೆ ವಿಕೆಟ್ ಒಪ್ಪಿಸಿದ್ದ ಅಭಿಷೇಕ್ ಶರ್ಮಾ

ಕೇವಲ 2 ರನ್ ಗಳಿಸಿ ನಿರಾಸೆ ಮೂಡಿಸಿದ್ದ ಆಯುಷ್ ಬದೋನಿ

ತಿಲಕ್ & ರಿಂಕು ಮಧ್ಯಮ ಓವರ್ ಗಳಲ್ಲಿ ರನ್ಸ್ ಕಲೆ ಹಾಕುವ ಚಾಲೆಂಜ್

ಹರ್ಷಿತ್ ರಾಣಾ ಮತ್ತು ಪ್ರಿನ್ಸ್ ಯಾದವ್ ಮೇಲೆ ಬೌಲಿಂಗ್ ಜವಾಬ್ದಾರಿ

ಮೊಹಮ್ಮದ್ ಹೊಸೈನ್, ಅಹ್ಮದ್ ದಾನಿಯಾಲ್ ಮತ್ತು ಅಲಿ ರಝಾ ಬೌಲಿಂಗ್

ಇನ್ನು ಟೂರ್ನಮೆಂಟ್​ನಲ್ಲಿ ಬಿ ಗುಂಪಿನಲ್ಲಿ ಭಾರತ, ಪಾಕಿಸ್ತಾನ, ನೇಪಾಳ ಮತ್ತು ಯುಎಇ ತಂಡಗಳಿದ್ದು, ಟಾಪ್ 2 ತಂಡಗಳು ಮಾತ್ರ ಸೆಮಿಫೈನಲ್ ಪ್ರವೇಶಿಸುತ್ತವೆ. ಹೀಗಾಗಿ ಪಾಕಿಸ್ತಾನ ವಿರುದ್ಧದ ಗೆಲುವು ಭಾರತ ನಿರ್ಣಾಯಕವಾಗಲಿದೆ. ಇನ್ನು ಪಾಕಿಸ್ತಾನ ಈ ಸಲವೂ ಕೂಡ ಭಾರತಕ್ಕೆ ಫೈಟ್ ಕೊಡೋ ಯೋಜನೆಯಲ್ಲಿದೆ. ಪಾಕಿಸ್ತಾನ ತಂಡದಲ್ಲಿ ಹೈದರ್ ಅಲಿ, ಅಬ್ದುಲ್ ಸಮದ್ ಮತ್ತು ಕಳೆದ ಬಾರಿ ಭಾರತದ ವಿರುದ್ಧ ಅಜೇಯ 79 ರನ್ ಸಿಡಿಸಿದ್ದ ಆರಂಭಿಕ ಆಟಗಾರ ಮಾಜ್ ಸದಾಕತ್ ಅವರಂತಹ ಡೇಂಜರಸ್ ಬ್ಯಾಟರ್‌ಗಳಿದ್ದಾರೆ. ಹಾಗೇ ದೋಹಾದ ವೆಸ್ಟ್ ಎಂಡ್ ಪಾರ್ಕ್ ಕ್ರೀಡಾಂಗಣದ ಪಿಚ್‌ನಲ್ಲಿ ಪಾಕಿಸ್ತಾನದ ಸ್ಪಿನ್ನರ್ ಸುಫಿಯಾನ್ ಮುಕಿಮ್ ಮತ್ತು ವೇಗಿ ಅಹ್ಮದ್ ದಾನಿಯಾಲ್ ಅವರ ದಾಳಿಯನ್ನು ಭಾರತದ ಯುವ ಬ್ಯಾಟರ್‌ಗಳು ಸಮರ್ಥವಾಗಿ ಎದುರಿಸಬೇಕಿದೆ. ಹಾಗೇ ಈ ಪಂದ್ಯ ಕೇವಲ ಎರಡು ತಂಡಗಳ ನಡುವಿನ ಪೈಪೋಟಿಯಷ್ಟೇ ಅಲ್ಲದೆ ಯುವ ಆಟಗಾರರು ತಮ್ಮ ಪ್ರತಿಭೆ ಮತ್ತು ಸಾಮರ್ಥ್ಯವನ್ನು ತೋರಿಸೋಕೆ ಬಿಗ್ ಸ್ಟೇಜ್.. ಭಾರತ ಮತ್ತು ಪಾಕ್ ಪಂದ್ಯ ಅಂದಾಗ ಎಮೋಷನಲಿ ಕೂಡ ಫ್ಯಾನ್ಸ್​ಗೆ ಜಾಸ್ತಿ ಕನೆಕ್ಟ್ ಆಗುತ್ತೆ. ಹೀಗಾಗಿ ಇವತ್ತಿನ ಪಂದ್ಯ ಹೈವೋಲ್ಟೇಜ್ ಮ್ಯಾಚ್ ಆಗೋದ್ರಲ್ಲಿ ಡೌಟೇ ಇಲ್ಲ.

Shantha Kumari

Leave a Reply

Your email address will not be published. Required fields are marked *