IND-PAK ಪಂದ್ಯಗಳಲ್ಲ.. ಯುದ್ಧ – ನೋ ಶೇಕ್ ಹ್ಯಾಂಡ್.. ಕಣ್ಣಲ್ಲೇ ವಾರ್
2025ರಲ್ಲಿ ಮೈದಾನದಲ್ಲಿ ಅದೆಷ್ಟು ಕಿರಿಕ್?

ಭಾರತ ಮತ್ತು ಪಾಕಿಸ್ತಾನ ನಡುವೆ ಮ್ಯಾಚ್ ಗಳು ಇದ್ದಾಗ ಕಿರಿಕ್, ಕಾಂಟ್ರವರ್ಸಿಗಳು ಇದ್ದದ್ದೇ. ಸಣ್ಣ ಪುಟ್ಟ ಕ್ಲಾಶ್ ಕೂಡ ದೊಡ್ಡ ಇಶ್ಯೂ ಆಗುತ್ತೆ. ದಶಕದಿಂದ್ಲೂ ಇದು ನಡ್ಕೊಂಡ್ ಬಂದಿರೋದೇ. ಬಟ್ ಈ ವರ್ಷ ಇನ್ನೂ ಜಾಸ್ತಿ ಆಗಿದೆ. ನೋ ಶೇಕ್ಹ್ಯಾಂಡ್ ಅನ್ನೋ ಹೊಸ ಪಾಲಿಸಿಯೂ ಬಂದಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಗಳು ಅಂದಾಗ್ಲೇ ಹೈಲೆವೆಲ್ ಹೀಟಪ್ ಇರುತ್ತೆ. ಈ ವರ್ಷ ಎರಡೂ ತಂಡಗಳ ನಡುವೆ ಮೈದಾನದಲ್ಲಿ ಸಾಕಷ್ಟು ವಿಚಾರಗಳಲ್ಲಿ ಕಾಂಟ್ರವರ್ಸಿಗಳು ಆಗಿವೆ. ಚಾಂಪಿಯನ್ಸ್ ಟ್ರೋಫಿ, ಏಷ್ಯಾಕಪ್, ವುಮೆನ್ಸ್ ವಿಶ್ವಕಪ್, ಅಂಡರ್ 19 ಟೀಂಗಳ ಪಂದ್ಯಗಳಲ್ಲೂ ಕ್ಯಾತೆಗಳಾಗಿವೆ.
ಚಾಂಪಿಯನ್ಸ್ ಟ್ರೋಫಿಗಾಗಿ ಪಾಕ್ ಗೆ ಹೋಗದ ಭಾರತ!
ಈ ವರ್ಷ ಭಾರತ ಮತ್ತು ಪಾಕಿಸ್ತಾನ ಮೊದಲು ಮುಖಾಮುಖಿಯಾಗಿದ್ದ ಚಾಂಪಿಯನ್ಸ್ ಟ್ರೋಫಿಯಲ್ಲಿ. ಈ ಟೂರ್ನಿ ಪಾಕಿಸ್ತಾನದಲ್ಲಿ ಆಯೋಜನೆಗೊಂಡಿತ್ತು. ಆದ್ರೆ ಪಾಕಿಸ್ತಾನಕ್ಕೆ ಕಾಲಿಡಲು ಒಪ್ಪದ ಭಾರತ ಚಾಂಪಿಯನ್ಸ್ ಟ್ರೋಫಿಯನ್ನೇ ಬಹಿಷ್ಕಾರ ಮಾಡೋದಾಗಿ ವಾರ್ನ್ ಮಾಡಿತ್ತು. ಈ ವಿವಾದ ಕೆಲವು ತಿಂಗಳುಗಳ ಕಾಲ ಮುಂದುವರೆದಿತ್ತು, ನಂತರ ಐಸಿಸಿ ಮಧ್ಯಪ್ರವೇಶಿಸಿ ಟೂರ್ನಮೆಂಟ್ ಅನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸಲಾಯಿತು. ಅಂದರೆ ಭಾರತ ತನ್ನ ಎಲ್ಲಾ ಪಂದ್ಯಗಳನ್ನು ಯುಎಇಯಲ್ಲಿ ಆಡಿತು.
ಭಾರತ & ಪಾಕ್ ನಡುವೆ ನೋ ಶೇಕ್ ಹ್ಯಾಂಡ್!
ಇನ್ನು ಈ ವರ್ಷ ಅತೀ ಹೆಚ್ಚು ವಿವಾದ ಉಂಟು ಮಾಡಿದ್ದೇ ಈ ನೋಶೇಕ್ಹ್ಯಾಂಡ್. ಇಷ್ಟು ವರ್ಷ ಭಾರತ ಮತ್ತು ಪಾಕ್ ನಡುವೆ ಎಷ್ಟೇ ರಾಜತಾಂತ್ರಿಕ ವೈಮನಸ್ಸುಗಳಿದ್ರೂ ಕ್ರಿಕೆಟ್ ಅಂತಾ ಬಂದಾಗ ಎರಡೂ ತಂಡದವರೂ ನಾರ್ಮಲ್ ಆಗಿಯೇ ಮ್ಯಾಚ್ಗಳನ್ನ ಆಡ್ತಿದ್ರು. ಪರಸ್ಪರ ಮಾತಾಡೋದು, ಫೋಟೋಸ್ ತಗೊಳ್ಳೋದು, ಶೇಕ್ ಹ್ಯಾಂಡ್ ಮಾಡೋದು ಎಲ್ಲವೂ ಇರ್ತಿತ್ತು. ಆದ್ರೆ ಈ ವರ್ಷ ಪೆಹಲ್ಗಾಮ್ ಅಟ್ಯಾಕ್ ಆದ್ಮೇಲೆ ಕ್ರಿಕೆಟ್ನಲ್ಲೂ ಭಾರತ ಸೇಡು ತೀರಿಸಿಕೊಳ್ತಿದೆ. ಪಾಕ್ ಆಟಗಾರರ ಜೊತೆ ಮಾತಿಲ್ಲ, ಶೇಕ್ ಹ್ಯಾಂಡ್ ಕೂಡ ಇಲ್ಲ. ಏಷ್ಯಾಕಪ್ನಲ್ಲಿ ಶುರುವಾದ ಈ ರಿವೇಂಜ್ ಎಲ್ಲಾ ಮಾದರಿಗೂ ಬಂದಿದೆ. ವುಮೆನ್ಸ್ ವಿಶ್ವಕಪ್, ಅಂಡರ್ 19ತಂಡದಲ್ಲೂ ಕಂಟಿನ್ಯೂ ಆಗಿದೆ.
ಅಭಿಷೇಕ್ ಶರ್ಮಾ ಮತ್ತು ಹ್ಯಾರಿಸ್ ರೌಫ್ ನಡುವೆ ಕಿರಿಕ್!
ಏಷ್ಯಾಕಪ್ ಸಮಯದಲ್ಲಿ ಅಭಿಷೇಕ್ ಶರ್ಮಾ ಮತ್ತು ಹ್ಯಾರಿಸ್ ರೌಫ್ ನಡುವೆ ತೀವ್ರ ವಾಗ್ವಾದ ನಡೆದು ಅಂಪೈರ್‌ಗಳು ಮಧ್ಯಪ್ರವೇಶಿಸಬೇಕಾದ ಹಂತಕ್ಕೆ ತಲುಪಿತು. ರೌಫ್ ಬೌನ್ಸರ್ ಎಸೆದು ಅಭಿಷೇಕ್‌ಗೆ ಏನೋ ಹೇಳಿದ್ರಿಂದ ಸಿಟ್ಟಾದ ಅಭಿಷೇಕ್ ಸ್ಪಾಟ್ನಲ್ಲೇ ತಿರುಗೇಟು ಕೊಟ್ಟಿದ್ರು. ಹಾಗೇ ಇದೇ ಪಂದ್ಯದಲ್ಲಿ ಹ್ಯಾರಿಸ್ ರೌಫ್ ನಾವು ಭಾರತದ ಐದು ರಫೇಲ್ಗಳನ್ನ ಕ್ರಾಶ್ ಮಾಡಿದ್ದೇವೆ ಅನ್ನೋ ಥರ ಸಿಂಬಲ್ ತೋರಿಸಿದ್ದ. ಇದೂ ಕೂಡ ದೊಡ್ಡ ಮಟ್ಟದಲ್ಲಿ ಕಾಂಟ್ರವರ್ಸಿಯಾಗಿ ಐಸಿಸಿ ದಂಡ ಕೂಡ ಹಾಕಿತ್ತು. ಹಾಗೇ 2 ಪಂದ್ಯಗಳಿಂದ ಬ್ಯಾನ್ ಮಾಡಿತ್ತು.
ಭಾರತ ಏಷ್ಯಾಕಪ್ ಗೆದ್ರೂ ಟ್ರೋಫಿ ನೀಡದ ನಖ್ವಿ!
ಇನ್ನು ಇದೆಲ್ಲದ್ರ ನಡುವೆ ಭಾರತ ಏಷ್ಯಾಕಪ್ ಟ್ರೋಫಿ ಗೆದ್ದ ಮೇಲೆ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಕೈಯಿಂದ ಟ್ರೋಫಿ ಪಡೆಯೋಕೆ ಒಪ್ಪಿರಲಿಲ್ಲ. ಬೇರೆ ಯಾರಿಂದಲಾದರೂ ಹಸ್ತಾಂತರ ಮಾಡಿಸುವಂತೆ ಹೇಳಿದ್ರು. ಆದ್ರೆ ಇದಕ್ಕೆ ಒಪ್ಪಿದ ನಖ್ವಿ ಟ್ರೋಫಿ ಜೊತೆ ಎಸ್ಕೇಪ್ ಆಗಿದ್ರು. ಅಲ್ಲಿಂದ ಇಲ್ಲಿವರೆಗೂ ಟ್ರೋಫಿ ಭಾರತದ ಕೈಸೇರಿ;ಲ್ಲ. ಇದಕ್ಕಾಗಿ ಫೈಟ್ ನಡೀತಾನೇ ಇದೆ.
ಅಂಡರ್ 19 ತಂಡದಲ್ಲೂ ಮುಂದುವರಿದಿದ್ದ ಕಿರಿಕ್!
ಇನ್ನು ಹಿರಿಯರ ಟೀಮ್ನಂತೆಯೇ ಅಂಡರ್ 19 ತಂಡದಲ್ಲೂ ಕಿರಿಕ್ ಕಂಟಿನ್ಯೂ ಆಗಿದೆ. ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಭಾರತದ ಓಪನರ್ ವೈಭವ್ ಸೂರ್ಯವಂಶಿ ಮತ್ತು ಪಾಕ್ ಬೌಲರ್ ಅಲಿ ರಾಜಾ ನಡುವೆ ವಾಗ್ವಾದ ನಡೆದಿತ್ತು. ಈ ವೇಳೆ ವೈಭವ್ ಶೂ ತೋರಿಸಿ ಬೈದಿದ್ರು. ಅಷ್ಟೇ ಅಲ್ಲದೆ ಪಂದ್ಯ ಮುಗಿದ ಮೇಲೆ ಎಸಿಸಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಕೈಯಿಂದ ಮೆಡಲ್ ಪಡೆಯಲು ಭಾರತದ ಆಟಗಾರರು ಒಪ್ಪಿರಲಿಲ್ಲ. ಹೀಗಾಗಿ ಎಸಿಸಿ ಕಾರ್ಯದರ್ಶಿಗಳು ಮೆಡಲ್ ಹಸ್ತಾಂತರ ಮಾಡಿದ್ರು. ಹೀಗೆ ಭಾರತ ಮತ್ತು ಪಾಕಿಸ್ತಾನ ನಡುವೆ ಈ ವರ್ಷ ತುಂಬಾನೇ ವಿವಾದಗಳು ಆಗಿವೆ. ಇನ್ನು ನೆಕ್ಸ್ಟ್ ಟಿ-20 ವಿಶ್ವಕಪ್ನಲ್ಲಿ ಉಭಯ ತಂಡಗಳು ಮುಖಾಮುಖಿ ಆಗಲಿವೆ. ಅಲ್ಲಿ ಇನ್ನೇನಲ್ಲ ಆಗುತ್ತೆ ನೋಡ್ಬೇಕು.

ನೋಡಿರಿ

