IND Vs PAK ಫೈನಲ್ ಫೈಟ್ – ಶೇಕ್ ಹ್ಯಾಂಡ್ ಮಾಡಲ್ಲ ಇಂಡಿಯಾ
ಅಭಿ & ವೈಭವ್ ಭಯ ಶುರುವಾಗಿದ್ಯಾ?

ಭಾರತ ಹಾಗೂ ಪಾಕಿಸ್ತಾನ ನಡುವಿನ ಮತ್ತೊಂದು ಹೈವೋಲ್ಟೇಜ್ ಮ್ಯಾಚ್ಗೆ ಕ್ರೀಡಾ ಜಗತ್ತು ರೆಡಿಯಾಗಿದೆ. ಏಷ್ಯನ್ ಗೇಮ್ಸ್ ಮೆನ್ಸ್ ಕ್ರಿಕೆಟ್ ಫೈನಲ್ ಪಂದ್ಯ ಶನಿವಾರ ನಡೆಯಲಿದ್ದು ಗೋಲ್ಡನ್ ಮೆಡಲ್ಗಾಗಿ ಬದ್ಧ ವೈರಿಗಳು ಗುದ್ದಾಡಲಿದ್ದಾರೆ. ಅಕ್ಟೋಬರ್ 3ಅಂದ್ರೆ ನಾಳೆ ಶನಿವಾರ ಟೀಂ ಇಂಡಿಯಾ ಫ್ಯಾನ್ಸ್ಗೆ ಡಬಲ್ ಧಮಾಕಾ. ಬೆಳಗ್ಗೆ ಏಷ್ಯನ್ ಗೇಮ್ಸ್ ಫೈನಲ್ನಲ್ಲಿ ಶ್ರೇಯಸ್ ಅಯ್ಯರ್ ಕ್ಯಾಪ್ಟನ್ಸಿಯಲ್ಲಿ ಟಿ-20ಐ ಟೀಂ ಅಖಾಡಕ್ಕಿಳಿದ್ರೆ ಮಧ್ಯಾಹ್ನ ಶುಭ್ಮನ್ ಗಿಲ್ ಲೀಡರ್ಶಿಪ್ನಲ್ಲಿ ವೆಸ್ಟ್ ಇಂಡೀಸ್ ತಂಡವನ್ನ ಕ್ಲೀನ್ ಸ್ವೀಪ್ ಮಾಡೋಕೆ ಏಕದಿನ ತಂಡ ಕೂಡ ರೆಡಿಯಾಗಿದೆ. ಅದ್ರಲ್ಲೂ ಇಂಡೋ-ಪಾಕ್ ಫೈಟ್ ನೋಡೋಕೆ ಫ್ಯಾನ್ಸ್ ಅಂತೂ ಫುಲ್ ಎಕ್ಸೈಟ್ ಆಗಿದ್ದಾರೆ.
ಇದನ್ನೂ ಓದಿ : ಐಸಿಸಿ 2027 ವಿಶ್ವಕಪ್ ವೇಳಾಪಟ್ಟಿ ಬಿಡುಗಡೆ – ಒಂದೇ ಗುಂಪಿನಲ್ಲಿ ಭಾರತ–ಪಾಕಿಸ್ತಾನ ಫೈಟ್
ಪಾಕ್ ಗೆ ಮಣ್ಣು ಮುಕ್ಕಿಸಿ ಗೋಲ್ಡ್ ಗೆ ಮುತ್ತಿಡ್ತಾರಾ ಇಂಡಿಯನ್ಸ್?
2026ರ ಏಷ್ಯನ್ ಗೇಮ್ಸ್ ಮೆನ್ಸ್ ಕ್ರಿಕೆಟ್ನ ಫೈನಲ್ ಪಂದ್ಯ ಶನಿವಾರ ಬೆಳಿಗ್ಗೆ 10:00 ಗಂಟೆಗೆ ಜಪಾನ್ನ ಕೊರೋಗಿ ಸ್ಪೋರ್ಟ್ಸ್ ಪಾರ್ಕ್ನಲ್ಲಿ ನಡೆಯಲಿದೆ. ಸೋನಿ ಸ್ಪೋರ್ಟ್ಸ್ ನೆಟ್ವರ್ಕ್ನಲ್ಲಿ ಈ ಮ್ಯಾಚ್ ಲೈವ್ ಟೆಲಿಕಾಸ್ಟ್ ಆಗಲಿದೆ. ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಆಗಿರುವ ಭಾರತ ತಂಡ ಈ ಬಾರಿಯೂ ಚಿನ್ನ ಗೆಲ್ಲೋ ಹುಮ್ಮಸ್ಸಿನಲ್ಲಿದೆ. 2022ರ ಹ್ಯಾಂಗ್ಝೌ ಏಷ್ಯನ್ ಗೇಮ್ಸ್ನಲ್ಲಿ ಭಾರತ ಚಿನ್ನದ ಪದಕ ಗೆದ್ದುಕೊಂಡಿತ್ತು. ಮತ್ತೊಂದೆಡೆ ಇತ್ತೀಚಿನ ದಿನಗಳಲ್ಲಿ ಮೈದಾನಗಳಲ್ಲಿ ಗೆಲ್ಲೋದನ್ನೇ ಮರೆತಿರೋ ಪಾಕಿಸ್ತಾನ ಭಾರತದ ವಿರುದ್ಧ ಈ ಸಲನಾದ್ರೂ ಗೆಲ್ಬೇಕು ಅಂತಿದ್ದಾರೆ. ಹಾಗೇ ತಮ್ಮ ಮೊದಲ ಏಷ್ಯನ್ ಗೇಮ್ಸ್ ಚಿನ್ನದ ಪದಕದ ನಿರೀಕ್ಷೆಯಲ್ಲಿದ್ದಾರೆ. ಏಷ್ಯನ್ ಗೇಮ್ಸ್ ಆರಂಭಕ್ಕೂ ಮುನ್ನ ಪಾಕ್ ತಂಡದ ಕೋಚ್ ಮೈಕ್ ಹೆಸನ್ ಭಾರತವನ್ನ ಸೋಲಿಸೋ ಸವಾಲು ಹಾಕಿದ್ರು. 2025ರ ಏಷ್ಯಾಕಪ್ನಲ್ಲಿ ನಾವು ತುಂಬಾ ಚೆನ್ನಾಗಿ ಪರ್ಫಾಮ್ ಮಾಡಿದ್ವು. ಆದ್ರೆ ಭಾರತ ನಮ್ಮ ವಿರುದ್ಧ ಗೆದ್ದು ಚಾಂಪಿಯನ್ಸ್ ಆಗಿದ್ರು. ಆದ್ರೆ ಏಷ್ಯನ್ ಗೇಮ್ಸ್ ಫೈನಲ್ ನಲ್ಲಿ ಸೇಡು ತೀರಿಸಿಕೊಳ್ತೇವೆ ಎಂದಿದ್ರು. ಆದ್ರೆ ಟೀಂ ಇಂಡಿಯಾ ಇರೋ ಫಾರ್ಮ್, ಪರ್ಫಾಮೆನ್ಸ್ ನೋಡ್ತಿದ್ರೆ ಭಾರತವೇ ಗೆಲ್ಲುವಂಥ ಫೇವರೆಟ್ ಟೀಂ ಆಗಿದೆ.
ಅಭಿಷೇಕ್ & ವೈಭವ್ ಡೆಡ್ಲಿ ಓಪನರ್ಸ್!
ಅಭಿಷೇಕ್ ಶರ್ಮಾ
ವೈಭವ್ ಸೂರ್ಯವಂಶಿ
ಸಂಜು ಸ್ಯಾಮ್ಸನ್
ಇಶಾನ್ ಕಿಶನ್
ಶ್ರೇಯಸ್ ಅಯ್ಯರ್
ತಿಲಕ್ ವರ್ಮಾ
ಶಿವಂ ದುಬೆ
ಅಕ್ಷರ್ ಪಟೇಲ್
ವಾಷಿಂಗ್ಟನ್ ಸುಂದರ್
ರವಿ ಬಿಷ್ಣೋಯ್
ಜಸ್ಪ್ರೀತ್ ಬುಮ್ರಾ
ಶ್ರೀಲಂಕಾ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಇದೇ ಟೀಂ ಭರ್ಜರಿಯಾಗಿ ಗೆದ್ದಿದೆ. ಇಶಾನ್ ಕಿಶನ್ 80 ರನ್ಸ್ ಬಾರಿಸಿ ಅಜೇಯರಾಗಿ ಉಳಿದ್ರೆ ಸೂರ್ಯವಂಶಿ ಕೂಡ ಚೆನ್ನಾಗಿ ಪರ್ಫಾಮ್ ಮಾಡಿದ್ರು. 170 ರನ್ಗಳ ಟಾರ್ಗೆಟ್ ನೀಡಿ ಲಂಕಾ ಪಡೆಯನ್ನ ಕೇವಲ 45 ರನ್ಗಳಿಗೆ ಆಲೌಟ್ ಮಾಡಿದ್ದ ಭಾರತ 124 ರನ್ಗಳ ಅಂತರದಲ್ಲಿ ಗೆದ್ದು ಬೀಗಿತ್ತು. ಹೀಗಾಗಿ ಭಾರತವೇ ಈ ಸಲ ಕೂಡ ಗೋಲ್ಡ್ ಗೆಲ್ಲೋ ಬಲಿಷ್ಠ ತಂಡವಾಗಿ ಕಾಣ್ತಿದೆ. ಇನ್ನು ಬಾಂಗ್ಲಾ ವಿರುದ್ಧ ಸೆಮೀಸ್ ಗೆದ್ದು ಬಂದಿರೋ ಪಾಕ್ಗೆ ಗೆಲ್ಭೇಕು ಅನ್ನೋ ಆಸೆಯೇನೋ ಇದೆ. ಆದ್ರೆ ತಂಡದಲ್ಲಿ ಹೊಸಬರೇ ಜಾಸ್ತಿ ಇದ್ದಾರೆ. ಸೈಮ್ ಅಯೂಬ್, ಅಬ್ರಾರ್ ಅಹ್ಮದ್ ಮತ್ತು ಸುಫ್ಯಾನ್ ಮುಖೀಮ್ ರಂತಹ ಕೆಲವೇ ಕೆಲ ಆಟಗಾರರಿಗೆ ಮಾತ್ರ ಭಾರತದ ವಿರುದ್ಧ ಆಡಿದ ಅನುಭವವಿದೆ. ಆದ್ರೆ ಇವ್ರ ಮೇಲೆ ಹೋಪ್ಸ್ ಇಡೋಕೆ ಆಗಲ್ಲ. ಬಾಂಗ್ಲಾದೇಶದ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಕೊನೆಯ 5 ಓವರ್ಗಳಲ್ಲಿ ಪಾಕ್ ಬೌಲರ್ಗಳು 58 ರನ್ ಬಿಟ್ಟುಕೊಟ್ಟಿದ್ದರು. ಹೀಗಾಗಿ ಭಾರತೀಯ ಬ್ಯಾಟರ್ಸ್ ಕೂಡ ಹೊಡಿಬಡಿ ಅಂತಾ ಭಾರಿಸೋಕೆ ರೆಡಿಯಾಗಿದ್ದಾರೆ. ಇನ್ನು 2025ರ ಏಷ್ಯಾಕಪ್ ನಿಂದ ಉಭಯ ತಂಡಗಳ ಆಟಗಾರರು ಶೇಕ್ ಹ್ಯಾಂಡ್ ಮಾಡ್ತಿಲ್ಲ. ಮೆನ್ಸ್ ಌಂಡ್ ವುಮೆನ್ಸ್ ಕ್ರಿಕೆಟ್ ತಂಡಗಳು ಟಾಸ್ ಟೈಮಲ್ಲಿ ಕ್ಯಾಪ್ಟನ್ಸ್ ಹಾಗೇ ಆಫ್ಟರ್ ದಿ ಮ್ಯಾಚ್ ಪ್ಲೇಯರ್ಸ್ ನಡುವೆ ನೋ ಶೇಕ್ ಹ್ಯಾಂಡ್ ಪಾಲಿಸಿ ಕಂಟಿನ್ಯೂ ಆಗ್ತಿದೆ. ಸೋ ಏಷ್ಯನ್ ಗೇಮ್ಸ್ನಲ್ಲೂ ಕೂಡ ಉಭಯ ತಂಡಗಳ ಆಟಗಾರರು ಪರಸ್ಪರ ಕೈಕುಲುಕಲ್ಲ. ಇನ್ನು ಭಾರತ ಮತ್ತು ಪಾಕ್ ತಂಡಗಳನ್ನ ಇಲ್ಲಿ ಕಂಪೇರ್ ಮಾಡೋಕೂ ಆಗಲ್ಲ. ಭಾರತ ಗೆಲ್ಲೋದನ್ನ ಹ್ಯಾಬಿಟ್ ಮಾಡಿಕೊಂಡಿದ್ರೆ ಪಾಕಿಸ್ತಾನ ಗೆಲ್ಲೋ ಛಲವನ್ನೇ ಮರೆತಾಗಿದೆ. ಹೀಗಾಗಿ ನಾಳಿನ ಪಂದ್ಯವನ್ನೂ ಭಾರತವೇ ಗೆಲ್ಲೋ ಎಲ್ಲಾ ಚಾನ್ಸಸ್ ಇದೆ. ಆದ್ರೆ ಇಲ್ಲಿ ಪಾಕಿಸ್ತಾನಕ್ಕೆ ಇರೋ ಲಾಸ್ಟ್ ಹೋಪ್ಸ್ ಅಂದ್ರೆ ಮಳೆ.
ಫೈನಲ್ ಪಂದ್ಯಕ್ಕೆ ಮಳೆ ಬಂದ್ರೆ ಎರಡೂ ತಂಡಗಳಿಗೆ ಗೋಲ್ಡ್ ಮೆಡಲ್!
ಜಪಾನ್ನಲ್ಲಿ ಸದ್ಯ ಬಾರೀ ಮಳೆಯಾಗ್ತಿರೋದು ಏಷ್ಯನ್ ಗೇಮ್ಸ್ನ ಸಾಕಷ್ಟು ಔಟ್ ಡೋರ್ ಮ್ಯಾಚಸ್ ರದ್ದಾಗಿವೆ. ನಿರಂತರವಾಗಿ ಮಳೆ ಸುರಿದಿದ್ದರಿಂದ ಈ ಬಾರಿಯ ಏಷ್ಯನ್ ಗೇಮ್ಸ್ ನಲ್ಲಿ ಸತತ ಆರು ಕ್ರಿಕೆಟ್ ಪಂದ್ಯಗಳು ರದ್ದಾಗಿದ್ದವು. ಕ್ವಾರ್ಟರ್ ಫೈನಲ್ ಹಂತದ ನಾಲ್ಕು ಪಂದ್ಯಗಳೂ ರದ್ದಾಗಿದ್ದರಿಂದ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಶ್ರೀಲಂಕಾ ತಂಗಳು ಐಸಿಸಿ ಶ್ರೇಯಾಂಕದ ಆಧಾರದ ಮೇಲೆ ಸೆಮಿಫೈನಲ್ ಹಂತಕ್ಕೆ ತಲುಪಿದ್ದವು. ಇದೀಗ ಫೈನಲ್ ಪಂದ್ಯ ಮಳೆಗೆ ಆಹುತಿಯಾದರೆ ನಿಯಮದಂತೆ ಫೈನಲ್ ತಲುಪಿದ ಎರಡೂ ತಂಡಗಳಿಗೆ ಚಿನ್ನದ ಪದಕಗಳನ್ನು ನೀಡಲಾಗುತ್ತದೆ. ಯಾಕಂದ್ರೆ ಈ ಬಾರಿಯ ಟೂರ್ನಿಗೆ ಬದಲಾವಣೆ ತರಲಾಗಿದೆ. ಹಿಂದೆಲ್ಲಾ ಐಸಿಸಿ ರ್ಯಾಂಕಿಂಗ್ ಆಧಾರದ ಮೇಲೆ ಟಾಪ್ ತಂಡವನ್ನ ವಿಜಯೀ ಎಂದು ಘೋಷಿಸಿ ಗೋಲ್ಡ್ ಮೆಡಲ್ ನೀಡ್ತಿದ್ರು. ಆದ್ರೆ ಈ ಸಲ ಜಂಟಿ ವಿಜೇತರು ಅಂತಾ ಘೋಷಣೆ ಮಾಡಲಾಗುತ್ತೆ.

ನೋಡಿರಿ

