PAK ಕೈಗಳಿಂದ ಕಪ್ ಬೇಡ – ಫೈನಲ್ ಗೆದ್ದು ಟ್ರೋಫಿ ಬಿಟ್ಟ ಭಾರತ
ತಿಲಕ್ ಫೈರ್.. ಪಾಕಿಸ್ತಾನ ಊಸ್ಟ್!

ವಾಟ್ ಎ ಥ್ರಿಲ್ಲಿಂಗ್ ಮ್ಯಾಚ್. ಲಾಸ್ಟ್ ಮೂಮೆಂಟ್ವರೆಗೂ ಕ್ಲೈಮ್ಯಾಕ್ಸ್ ಏನಾಗುತ್ತೆ ಏನಾಗುತ್ತೆ ಅನ್ನೋ ಟೆನ್ಷನ್ ಇದ್ದೇ ಇತ್ತು. ಬಟ್ ಫೈನಲಿ ಆನ್ ದಿ ಫೀಲ್ಡ್ ಆಫ್ ದಿ ಫೀಲ್ಡ್ ಭಾರತವೇ ಬಾಸ್ ಅನ್ನೋದನ್ನ ನಮ್ಮ ಟೀಂ ಇಂಡಿಯಾ ಬಾಯ್ಸ್ ಮತ್ತೊಮ್ಮೆ ಪ್ರೂವ್ ಮಾಡಿದ್ರು. ಬಲಿಷ್ಠ ಭಾರತದೆರುದು ಪಾಪಿ ಪಾಕಿಸ್ತಾನ ಧೂಳೀಪಟವಾಯ್ತು. ಆದ್ರೆ ಈ ಪ್ರತಿಷ್ಠೆ ಫೈಟ್ ಪಂದ್ಯಕ್ಕಷ್ಟೇ ಸೀಮಿತವಾಯ್ತಾ ಅಂದ್ರೆ, ನೋ ವೇ ಚಾನ್ಸೇ ಇಲ್ಲ. ಆಫ್ಟರ್ ದಿ ಮ್ಯಾಚ್ ಕಂಪ್ಲೀಟ್ ಌಕ್ಷನ್ ಥ್ರಿಲ್ಲರ್ ಮೂವಿ ಥರ ಕಂಟಿನ್ಯೂ ಆಗಿದೆ. ಕಪ್ ಗೆದ್ರೂ ಕಪ್ ಬೇಡ್ವೇಬೇಡ ಅಂತಾ ಭಾರತ ಗಟ್ಟಿತನ ಮೆರೆದಿದೆ. ವೇದಿಕೆಯಿಂದ 20 ಅಡಿ ದೂರವೇ ಕುಳಿತು ಪಾಕಿಸ್ತಾನದ ನಖಶಿಕಾಂತವೇ ಉರಿಯುವಂತೆ ಮಾಡಿದ್ದಾರೆ.
ಇದನ್ನೂ ಓದಿ : ಭಾರತಕ್ಕೆ ಏಷ್ಯಾಕಪ್ ‘ಸಿಂದೂರ’ – ಶತ್ರುದೇಶ ಪಾಕ್‌ನ ಬಗ್ಗು ಬಡಿದ ಟೀಂ ಇಂಡಿಯಾ
ಏಷ್ಯಾಕಪ್ ಟೂರ್ನಿಯ ಫೈನಲ್ ಮ್ಯಾಚ್ ಭಾನುವಾರ ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೀತು. ಭಾರತ ಮತ್ತು ಪಾಕಿಸ್ತಾನ ನಡುವೆ ಫೈನಲ್ ಫೈಟ್ ಆಗಿದ್ರಿಂದ ಒಂಥರಾ ವಾರ್ ಸಿಚುಯೇಷನ್ನೇ ಇತ್ತು. ಯಾಕಂದ್ರೆ ಇದಕ್ಕೂ ಹಿಂದಿನ ಎರಡು ಪಂದ್ಯಗಳಲ್ಲಿ ಸಾಕಷ್ಟು ಕಾಂಟ್ರವರ್ಸಿಗಳು ಆಗಿದ್ವು. ಸೋ ಫೈನಲ್ ಪಂದ್ಯವನ್ನ ಯಾರೇ ಗೆದ್ರೂ ಅವ್ರೇ ಬಾಸ್ ಅನ್ನೋದು ಇಡೀ ಜಗತ್ತಿಗೇ ಗೊತ್ತಿತ್ತು. ಭಾರತ ಟೀಂ ಅಂತೂ ಫುಲ್ ಕಾನ್ಫಿಡೆನ್ಸ್ನಲ್ಲೇ ಕಣಕ್ಕಿಳಿದಿತ್ತು. ಬಟ್ ಬೌಲಿಂಗ್ನಲ್ಲಿ ಸಿಕ್ಕಷ್ಟು ಸಕ್ಸಸ್ ಬ್ಯಾಟಿಂಗ್ನಲ್ಲಿ ಸಿಗ್ಲಿಲ್ಲ. ಒಂದೊಂದು ಓವರ್ ಮುಗಿದಂತೆಯೂ ಫ್ಯಾನ್ಸ್ ಹಾರ್ಟ್ ಬೀಟ್ ರೈಸ್ ಆಗ್ತಿತ್ತು.
ಬೌಲಿಂಗ್ ನಲ್ಲಿ ಬೆಂಡೆತ್ತಿ ಬ್ಯಾಟಿಂಗ್ ನಲ್ಲಿ ಪರದಾಡಿದ ಭಾರತ!
ಮ್ಯಾಚಲ್ಲಿ ಟಾಸ್ ಗೆದ್ದ ಸೂರ್ಯಕುಮಾರ್ ಯಾದವ್ ಬೌಲಿಂಗ್ ಆಯ್ಕೆ ಮಾಡಿಕೊಂಡ್ರು. ಅದ್ರಂತೆ ಫಸ್ಟ್ ಬ್ಯಾಟಿಂಗ್ಗೆ ಇಳಿದ ಪಾಕಿಸ್ತಾನದ ಪರ ಸಾಹಿಬ್ ಜಾದಾ ಫರ್ಹಾನ್ ಮತ್ತು ಫಖರ್ ಜಮಾನ್ ಸ್ಲೋವಾಗೇ ಇನ್ನಿಂಗ್ಸ್ ಕಟ್ಟಿದ್ರು. ಫಸ್ಟ್ ವಿಕೆಟ್ ಬೀಳೋ ಹೊತ್ತಿಗೆ 84 ರನ್ ಗಳ ಪಾರ್ಟ್ನರ್ ಶಿಪ್ ನೀಡಿದ್ರು. ಆನಂತ್ರ ಬಂದವ್ರೆಲ್ಲಾ ಬಂದಷ್ಟೇ ಸ್ಪೀಡಾಗಿ ಪೆವಿಲಿಯನ್ ಸೇರ್ಕೊಂಡ್ರು. ಇನ್ನೂ 5 ಎಸೆತಗಳು ಇರುವಾಗ್ಲೇ 146 ರನ್ಗಳಿಗೆ ಆಲೌಟ್. ಭಾರತದ ಪರ ಕುಲ್ದೀಪ್ 4 ವಿಕೆಟ್ ಬೇಟೆಯಾಡಿದ್ರೆ ಬುಮ್ರಾ, ವರುಣ್, ಅಕ್ಷರ್ ತಲಾ ಎರಡು ವಿಕೆಟ್ ಕಿತ್ರು. ಹೀಗೆ 147 ರನ್ಗಳ ಟಾರ್ಗೆಟ್ ಬೆನ್ನತ್ತಿದ ಭಾರತರ ಪರ ಟಾಪ್ ಆರ್ಡರ್ ಕಂಪ್ಲೀಟ್ ಕೊಲ್ಯಾಪ್ಸ್. ಕಳೆದ ಆರೂ ಮ್ಯಾಚ್ಗಳಲ್ಲಿ ಸ್ಫೋಟಕ ಓಪನಿಂಗ್ ನೀಡಿದ್ದ ಅಭಿಷೇಕ್ ಶರ್ಮಾ 5 ರನ್ಗಳಿಗೆ ವಿಕೆಟ್ ಒಪ್ಪಿಸಿದ್ರು. ಇನ್ನೂ ಪಾಕ್ ವಿರುದ್ಧ ಪ್ರತೀ ಸಲವೂ ಸ್ಟ್ರಗಲ್ ಮಾಡೋ ಸೂರ್ಯ 1 ರನ್ಗೆ ಸುಸ್ತು. ಗಿಲ್ ಕೂಡ ಡಲ್. 20 ರನ್ ಆಗುವಷ್ಟ್ರಲ್ಲೇ ಮೂವರು ಬ್ಯಾಟರ್ಸ್ ಢಮಾರ್. ಆ ನಂತ್ರ ಭಾರತಕ್ಕೆ ಭರವಸೆಯಾಗಿ ಬಂದಿದ್ದೇ ತಿಲಕ್ ವರ್ಮಾ. ಸಂಜು ಸ್ಯಾಮ್ಸನ್ ಮತ್ತು ಶಿವಂ ದುವೆ ತಿಲಕ್ಗೆ ಸಾಥ್ ನೀಡಿದ್ರು. ಅಂತಿಮವಾಗು ತಿಲಕ್ 69 ರನ್ ಗಳಿಸಿ ಅಜೇಯರಾಗಿ ಉಳಿದ್ರು. ರಿಂಕು ಸಿಂಗ್ ಮ್ಯಾಚ್ ವಿನ್ನಿಂಗ್ ಫೋರ್ ಬಾರಿಸಿದ್ರು. ಸೋ 2 ಎಸೆತ ಬಾಕಿ ಇರುವಂತೆ ಭಾರತ ವಿನ್ ಆಯ್ತು. ಬಟ್ ಲಾಸ್ಟ್ ಓವರ್ವರೆಗೂ ಮ್ಯಾಚ್ ವಿನ್ನಿಂಗ್ ಪಾಸಿಬಿಲಿಟೀಸ್ ಫಿಫ್ಟಿ ಫಿಫ್ಟಿ ಅನ್ನೋ ಥರನೇ ಕಾಣ್ತಿತ್ತು. ಹೀಗೆ ಅಭಿಮಾನಿಗಳ ಹಾರ್ಟ್ ಬೀಟ್ ಹೆಚ್ಚಿಸಿ ಮ್ಯಾಚ್ ಗೆದ್ದವ್ರು ಕೊನೆಗೆ ಟ್ರೋಫಿಯನ್ನ ಪಡೆಯದೇ ಹೃದಯವನ್ನೇ ಗೆದ್ದಿದ್ದಾರೆ.
ಮೊಹ್ಸಿನ್ ನಖ್ವಿಯಿಂದ ಟ್ರೋಫಿ ಪಡೆಯಲು ಒಪ್ಪದ ಭಾರತ!
ಏಷ್ಯಾಕಪ್ನಲ್ಲಿ ಪಾಕಿಸ್ತಾನಕ್ಕೆ ಟೀಂ ಇಂಡಿಯಾ ಹ್ಯಾಟ್ರಿಕ್ ಸೋಲಿನ ಬಿಸಿ ಮುಟ್ಟಿಸಿದೆ. ಅದ್ರಲ್ಲೂ ಫೈನಲ್ ಮ್ಯಾಚ್ ಗೆಲ್ಲೋದ್ರ ಜೊತೆಗೆ ಕಪ್ ಪಡೆಯದೇ ಶೇಪ್ ಔಟ್ ಆಗುವಂತೆ ಮಾಡಿದೆ. ಅಷ್ಟಕ್ಕೂ ಇಲ್ಲಿ ಟ್ರೋಫಿ ವಿತರಣೆ ಮಾಡ್ತಿದ್ದದ್ದು ಪಾಕಿಸ್ತಾನದ ಗೃಹ ಸಚಿವನೂ ಆಗಿರುವ ಪಿಸಿಬಿ & ಎಸಿಸಿ ಅಧ್ಯಕ್ಷ ಮೊಹ್ಸಿನ್ ನಖ್ವಿ. ಆದ್ರೆ ನಖ್ವಿಯಿಂದ ಟ್ರೋಫಿಯನ್ನ ಸ್ವೀಕಾರ ಮಾಡೋಕೆ ಭಾರತ ಒಪ್ಪಲಿಲ್ಲ. ಭಾರತೀಯ ಆಟಗಾರರ ಮನವೊಲಿಸೋಕೆ ಏನೇನೋ ಸರ್ಕಸ್ ಮಾಡಿದ್ರು. ಬಟ್ ಅದು ಸಾಧ್ಯನೇ ಆಗ್ಲಿಲ್ಲ. ಪ್ರಶಸ್ತಿ ಪ್ರದಾನ ಮಾಡ್ತಿದ್ದ ಪೋಡಿಯಂನಿಂದ 20 ಅಡಿ ದೂರವೇ ಕುಳಿತಿದ್ರು. ಮೊದ್ಲೇ ಮ್ಯಾಚ್ ಸೋತು ಅವಮಾನಕ್ಕೊಳಗಾಗಿದ್ದ ನಖ್ವಿ ಭಾರತೀಯ ಆಟಗಾರರು ಕೊಟ್ಟ ಡೋಸ್ಗೆ ಶೇಕ್ ಆಗಿದ್ರು. ನೋಡೋವರೆಗೂ ನೋಡಿ ಇವ್ರು ಒಪ್ಪಲ್ಲ ಅನ್ನೋದು ಗೊತ್ತಾಗ್ತಿದ್ದಂತೆ ಏಷ್ಯಾಕಪ್ ಟ್ರೋಫಿ ಎತ್ಕೊಂಡು ಸೀದಾ ಹೋಟೆಲ್ಗೆ ತಗೊಂಡು ಹೋದ್ರು. ಆದ್ರೆ ಇದ್ಯಾವುದಕ್ಕೂ ಕೇರ್ ಮಾಡದ ಭಾರತೀಯರು ಮ್ಯಾಚೇ ವಿನ್ ಆಗಿದ್ದೀವಿ ಇನ್ನು ಟ್ರೋಫಿ ಗೀಫಿ ಯಾಕೆ ಗುರು ಅಂತಾ ವಿತೌಟ್ ಕಪ್ ಸೆಲೆಬ್ರೇಷನ್ ಶುರು ಮಾಡಿದ್ರು. ಮೈದಾನದ ತುಂಬೆಲ್ಲಾ ಓಡಾಡುತ್ತಾ ಫ್ಯಾನ್ಸ್ ಕಡೆ ಕೈಬೀಸುತ್ತಾ ಕೈಯಲ್ಲಿ ಟ್ರೋಫಿ ಇದೆ ಅನ್ನೋ ಥರನೇ ಸಂಭ್ರಮಿಸಿದ್ರು. ಟ್ರೋಫಿ ಇಲ್ಲದಿದ್ದರೂ ಫೋಟೋ ಎಡಿಟ್ ಮೂಲಕ ಕಪ್ ಚಿತ್ರ ಹಾಕಿ ಪೋಸ್ ನೀಡಿದ್ದಾರೆ. ಅಲ್ಲದೆ ಈ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಇಂಜುರಿಯಿಂದ ಫೈನಲ್ ಮ್ಯಾಚ್ ಆಡದ ಹಾರ್ದಿಕ್ ಪಾಂಡ್ಯ ವಿಶೇಷ ತಮ್ಮ ಟ್ರೇಡ್ ಮಾರ್ಕ್ ಸೆಲೆಬ್ರೇಷನ್ ನ ಇಲ್ಲೂ ಕಂಟಿನ್ಯೂ ಮಾಡಿದ್ರು. ಆದರೆ ಈ ಬಾರಿ ಟ್ರೋಫಿ ಇಲ್ಲದ ಕಾರಣ, ಅಲ್ಲಿ ಕಪ್ ಚಿತ್ರವನ್ನು ಎಡಿಟ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಭಿಷೇಕ್ ಶರ್ಮಾ ಹಾಗೂ ಶುಭ್ಮನ್ ಗಿಲ್ ಕೂಡ ನೋ ಟ್ರೋಫಿ, ನೋ ಟೆನ್ಶನ್ ಎನ್ನುವಂತೆ ಎಡಿಟ್ ಫೋಟೋಗಳನ್ನ ಪೋಸ್ಟ್ ಮಾಡಿದ್ದಾರೆ.
ಭಾರತ ಟ್ರೋಫಿಯನ್ನ ಮಾತ್ರ ಸ್ವೀಕಾರ ಮಾಡಿಲ್ಲ. ಬಟ್ ಟೂರ್ನಿಯ ಉಳಿದೆಲ್ಲಾ ಪ್ರಶಸ್ತಿಗಳೂ ಭಾರತೀಯ ಆಟಗಾರರಿಗೇ ಸಿಕ್ಕಿವೆ. ಹಾಗೇ ಪಡೆದುಕೊಂಡಿದ್ದಾರೆ. ಸದ್ಯ ಫೈನಲ್ ಮ್ಯಾಚ್ ಗೆದ್ದಿರೋ ಭಾರತಕ್ಕೆ 2.63 ಕೋಟಿ ರೂಪಾಯಿ ಬಹುಮಾನವಾಗಿ ಸಿಕ್ಕಿದೆ. ಹಾಗೇ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನ ತಿಲಕ್ ವರ್ಮಾ ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕಾಗಿ 5000 ಅಮೆರಿಕನ್ ಡಾಲರ್ ಇಂಡಿಯನ್ ಕರೆನ್ಸಿ ಪ್ರಕಾರ ಅಂದಾಜು ರೂ. 4.43 ಲಕ್ಷ ರೂಪಾಯಿ ಪಡೆದಿದ್ದಾರೆ. ಇನ್ನು ಟೂರ್ನಿಯ ಮೋಸ್ಟ್ ವ್ಯಾಲ್ಯುಯೇಬಲ್ ಪ್ಲೇಯಲ್ ಕುಲ್ದೀಪ್ ಯಾದವ್ ಆಗಿದ್ದಾರೆ. 17 ವಿಕೆಟ್ ತೆಗೆದಿದ್ದಾರೆ. 13.30 ಲಕ್ಷ ರೂಪಾಯಿ ಸಿಕ್ಕಿದೆ. ಇನ್ನು ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿ ಅಭಿಷೇಕ್ ಶರ್ಮಾ ಪಾಲಾಗಿದೆ. 314 ರನ್ ಗಳಿಸಿದ್ದಾರೆ. ಇವ್ರೂ ಕೂಡ13.30 ಲಕ್ಷ ರೂಪಾಯಿಯನ್ನ ಪಡೆದಿದ್ದಾರೆ. ಜೊತೆಗೆ ಒಂದು SUV ಕಾರು ಕೂಡ ಗಿಫ್ಟ್ ಆಗಿ ಸಿಕ್ಕಿದೆ. ಇಲ್ಲಿ ಅಭಿಷೇಕ್, ತಿಲಕ್ ಮತ್ತು ಕುಲ್ದೀಪ್ ಇಂಡಿವಿಶ್ಯೂಯಲ್ ಟ್ರೋಫಿಗಳನ್ನ ಪಡೆದಿದ್ದಾರೆ. ಯಾಕಂದ್ರೆ ಇದನ್ನ ವಿತರಣೆ ಮಾಡಿದ್ದು ಬೇರೆ ಅಧಿಕಾರಿಗಳು. ಬಟ್ ಟ್ರೋಫಿಯನ್ನ ಮಾತ್ರ ಮೊಹ್ಸಿನ್ ನಖ್ವಿ ಕೊಡ್ಬೇಕಿತ್ತು. ಅವ್ರೇ ಎಸಿಸಿ ಅಧ್ಯಕ್ಷ ಆಗಿರೋದ್ರಿಂದ ಅವ್ರೇ ಕೊಡೋಕೆ ಬಂದಿದ್ರು. ಬಟ್ ನಖ್ವಿ ಪಿಸಿಬಿ ಅಧ್ಯಕ್ಷ ಆಗಿರೋದ್ರ ಜೊತೆಗೆ ಅಲ್ಲಿನ ಗೃಹಸಚಿವ ಕೂಡ ಆಗಿದ್ದಾರೆ. ಹೀಗಾಗಿ ಭಾರತೀಯರು ಪ್ರಶಸ್ತಿಯನ್ನ ಸ್ವೀಕಾರ ಮಾಡ್ಲಿಲ್ಲ. ಏಷ್ಯಾ ಕಪ್ ಗೆದ್ದ ನಂತರ ಬಿಸಿಸಿಐ ಟೀಮ್ ಇಂಡಿಯಾಗೆ ₹21 ಕೋಟಿ ಬಹುಮಾನದ ಹಣವನ್ನು ಘೋಷಣೆ ಮಾಡಿದೆ.
ಪಾಕಿಸ್ತಾನ ವಿರುದ್ಧ ಫೈನಲ್ ಗೆದ್ದ ಭಾರತೀಯರಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಕೂಡ ವಿಶ್ ಮಾಡಿದ್ದಾರೆ. ಕ್ರೀಡಾ ಮೈದಾನದಲ್ಲೂ ಆಪರೇಷನ್ ಸಿಂಧೂರ. ಫಲಿತಾಂಶ ಒಂದೇ – ಭಾರತ ಗೆದ್ದಿದೆ. ನಮ್ಮ ಕ್ರಿಕೆಟಿಗರಿಗೆ ಅಭಿನಂದನೆಗಳು ಎಂದು ಟ್ವೀಟ್ ಮಾಡಿದ್ದಾರೆ.

ನೋಡಿರಿ

