ಬಿಲ್ಡಪ್ 100%.. ಪರ್ಫಾರ್ಮೆನ್ಸ್ 0% – ಪಾಕ್ ಆಟಗಾರ್ತಿಯರಿಂದಲೂ ಗಾಂಚಾಲಿ
ವಿಶ್ವಕಪ್ ನಲ್ಲೂ ಸೊಕ್ಕಿಳಿಸಿದ ಸಿಂಹಿಣಿಯರು

ಅವ್ರ ಆಟಿಟ್ಯೂಡ್ಗೂ ಪರ್ಫಾಮೆನ್ಸ್ಗೂ ಒಂದಕೊಂದು ಮ್ಯಾಚೇ ಆಗಲ್ಲ. ಟೀಂ ಇಂಡಿಯಾ ಮುಂದೆ ಮಂಡಿಯೂರೋದು ತಪ್ಪಲ್ಲ. ಕಳೆದ ನಾಲ್ಕು ಸಂಡೇಗಳಲ್ಲೂ ಸೇಟ್ ಟು ಸೇಮ್ ಅದೇ ರಿಪೀಟ್.. ಏಷ್ಯಾಕಪ್ನಲ್ಲಿ ಬಾಯ್ಸ್ ಬಂದ್ರು ಮೂರು ಸಲ ಸಲ ಸೋತು ಸುಣ್ಣವಾದ್ರು. ವಿಶ್ವಕಪ್ನಲ್ಲಿ ಗರ್ಲ್ಸ್ ಬಂದ್ರು ಸತತ 12ನೇ ಸಲ ಸೋತು ಹೋದ್ರು. ಆದ್ರೆ ಗಾಂಚಾಲಿ ಇದ್ಯಲ್ಲ ಅದು ಮಾತ್ರ ಕಮ್ಮಿಯಾಗಿಲ್ಲ. ಭಾನುವಾರ ನಡೆದ ಐಸಿಸಿ ವುಮೆನ್ಸ್ ವರ್ಲ್ಡ್ಕಪ್ ಟೂರ್ನಿಯ ಭಾರತದ ವಿರುದ್ಧದ ಪಂದ್ಯದಲ್ಲೂ ಪಾಕ್ ಆಟಗಾರ್ತಿಯರು ಬೇಜಾನ್ ದೌಲತ್ತು ತೋರಿಸಿದ್ದಾರೆ. ಕೊನೆಗೆ ಟಾಸ್ನಲ್ಲಿ ಮೋಸ ಮಾಡಿದ್ರೂ ಮ್ಯಾಚ್ ಗೆಲ್ಲೋಕೆ ಆಗ್ಲಿಲ್ಲ.
ಇದನ್ನೂ ಓದಿ : ಭಾರತೀಯ ಸೇನೆಯ ಭರ್ಜರಿ ಭೇಟೆ – 16 ಉಗ್ರರು ಅರೆಸ್ಟ್, ಶಸ್ತ್ರಾಸ್ತ್ರ ವಶ
ಪಾಕಿಸ್ತಾನಿಯರು ಹೆಂಗೆ ಅಂದ್ರೆ ಇಂಡಿಯನ್ ಆರ್ಮಿ ರೇಂಜ್ಗೆ ಬಿಲ್ಡಪ್ ಕೊಡ್ತಾರೆ. ಬಟ್ ಪರ್ಫಾಮೆನ್ಸ್ ವೈಸ್ ಬಂದ್ರೆ ಪಾಕಿಸ್ತಾನಿ ಆರ್ಮಿಗಿಂತ ಕಡೆ. ಏಷ್ಯಾಕಪ್ನಲ್ಲೇ ಪಾಕ್ನ ಆಟಗಾರರು ಏನೇನೋ ಮಂಗಾಟ ಆಡೋಕೆ ಹೋಗಿ ರಿವರ್ಸ್ ಫೈರ್ ಆಗಿ ಶೇಪ್ ಔಟ್ ಆಗಿದ್ರು. ನಿನ್ನೆ ಮ್ಯಾಚಲ್ಲಿ ಪಾಕಿಸ್ತಾನದ ಗರ್ಲ್ಸ್ ಕೂಡ ಅದೇ ಥರ ಗಾಂಚಾಲಿ ತೋರ್ಸಿ ಕೊನೆಗೆ ಅವ್ರೂ ಕೂಡ ಇಂಗು ತಿಂದ ಮಂಗನಂತಾಗಿದ್ದಾರೆ.
ಟಾಸ್ ಗೆದ್ದ ಪಾಕ್.. ಮ್ಯಾಚ್ ಗೆದ್ದ ಭಾರತ!
ಭಾನುವಾರ ಕೊಲೊಂಬೋದಲ್ಲಿ ನಡೆದ ಭಾರತ ವರ್ಸಸ್ ಪಾಕ್ ಮ್ಯಾಚ್ನಲ್ಲಿ ಪಾಕಿಸ್ತಾನ ನಾಯಕಿ ಟಾಸ್ ವಿನ್ ಆದ್ರು. ಬೌಲಿಂಗ್ ಆಯ್ಕೆ ಮಾಡ್ಕೊಂಡ್ರು. ಫಸ್ಟ್ ಬ್ಯಾಟಿಂಗ್ಗೆ ಇಳಿದ ಭಾರತ 50 ಓವರ್ಗಳಲ್ಲಿ 247 ರನ್ ಕಲೆ ಹಾಕಿತ್ತು. ಭಾರತದ ಪರ ಯಾರೂ ಫಿಫ್ಟಿ ಬಾರಿಸಿಲ್ಲ ಅಂದ್ರೂ ನಂಬರ್ 8 ಬ್ಯಾಟಿಂಗ್ವರೆಗೂ ಯಾರೂ ಸಿಂಗಲ್ ಡಿಜಿಟ್ಗೆ ಔಟ್ ಆಗ್ಲಿಲ್ಲ. ಸೋ ಒಂದೊಳ್ಳೆ ಸ್ಕೋರ್ ಬಂತು. 248 ರನ್ಗಳ ಟಾರ್ಗೆಟ್ ಬೆನ್ನತ್ತಿದ ಪಾಕಿಸ್ತಾನ ಪರ ಸಿದ್ರಾ ಅಮೀನ್ 81 ರನ್ ಬಾರಿಸಿದ್ರು. ಉಳಿದಂತೆ ಆಲ್ಮೋಸ್ಟ್ ಎಲ್ರೂ ಸಿಂಗಲ್ ಡಿಜಿಟ್ಗೆ ಔಟಾದ್ರು. ಅಂತಿಮವಾಗಿ 43 ಓವರ್ ಗಳಲ್ಲಿ 159 ರನ್ ಗಳಿಸಿ ಆಲೌಟ್ ಆದ್ರು. ಅಲ್ಲಿಗೆ ಭಾರತ 88 ರನ್ಗಳಿಂದ ಪಂದ್ಯವನ್ನ ಗೆದ್ದುಕೊಳ್ತು. ಇನ್ನು ಪಂದ್ಯದ ಆರಂಭಕ್ಕೂ ಮುನ್ನ ಪಾಕ್ ನಾಯಕಿ ಫಾತಿಮಾ ಸನಾ ಟಾಸ್ನಲ್ಲೂ ಮೋಸ ಮಾಡಿದ್ದಾರೆ ಅಂತಾ ಒಂದಷ್ಟು ವಿಡಿಯೋಸ್ ವೈರಲ್ ಆಗ್ತಿದೆ. ಆದ್ರೆ ಮೋಸ ಆಗಿಲ್ಲ. ಎಐ ವಿಡಿಯೋ ವೈರಲ್ ಆಗ್ತಿದೆ ಅಷ್ಟೇ. ಇನ್ನು ಏಷ್ಯಾಕಪ್ನಂತೆಯೇ ಪಾಕ್ ವಿರುದ್ಧದ ಮ್ಯಾಚಲ್ಲೂ ನೋ ಶೇಕ್ ಹ್ಯಾಂಡ್ ಪಾಲಿಸಿ ಕಂಟಿನ್ಯೂ ಆಯ್ತು. ಟಾಸ್ ಟೈಮಲ್ಲಿ ಹಾಗೇ ಮ್ಯಾಚ್ ಮುಗಿದ್ಮೇಲೂ ಪಾಕಿಸ್ತಾನಿ ಆಟಗಾರ್ತಿಯರಿಗೆ ಭಾರತೀಯರು ಕೈಕುಲುಕಲಿಲ್ಲ.
ರನೌಟ್ ಬಗ್ಗೆ ಕ್ಯಾತೆ ತೆಗೆದು ಅಂಪೈರ್ ಜೊತೆ ವಾಗ್ವಾದ!
ಭಾರತದ ಟಾರ್ಗೆಟ್ ಬೆನ್ನತ್ತಿದ ಪಾಕಿಸ್ತಾನ 4 ಓವರ್ನಲ್ಲೇ ಮೊದಲ ವಿಕೆಟ್ ಕಳ್ಕೊಳ್ತು. ಅದೂ ಕೂಡ ರನೌಟ್ನಲ್ಲಿ. 4ನೇ ಓವರ್ನ ಕೊನೇ ಎಸೆತದಲ್ಲಿ ಪಾಕ್ ಆರಂಭಿಕ ಆಟಗಾರ್ತಿ ಮುನೀಬಾ ಅಲಿಯವ್ರ ಪ್ಯಾಡ್ ಸವರಿ ಬಾಲ್ ಪಾಸ್ ಆಗಿತ್ತು. ಈ ವೇಳೆ ಟೀಮ್ ಇಂಡಿಯಾ ಆಟಗಾರ್ತಿಯರು ಎಲ್ಬಿಡಬ್ಲ್ಯೂಗೆ ಮನವಿ ಮಾಡಿದ್ದರು. ಆದರೆ ಅಂಪೈರ್ ಔಟ್ ನೀಡಿರಲಿಲ್ಲ. ಈ ವೇಳೆ ದೀಪ್ತಿ ಶರ್ಮಾ ಚೆಂಡನ್ನು ಸ್ಟಂಪ್ಸ್ಗೆ ಎಸೆದಿದ್ರು. ಚೆಂಡು ವಿಕೆಟ್ಗೆ ತಗುಲಿದಾಗ ಮುನೀಬಾ ಕ್ರೀಸ್ ಹೊರಗಿದ್ದರು. ಅಲ್ಲದೆ ಕ್ರೀಸ್ನಲ್ಲಿಟ್ಟ ಬ್ಯಾಟ್ ಗಾಳಿಯಲ್ಲಿತ್ತು. ಕೊನೆಗೆ ಮೂರನೇ ಅಂಪೈರ್ ಔಟ್ ಎಂದರು. ಆದ್ರೆ ಇದು ನಾಟ್ ಫೇರ್ ಅಂತಾ ಪಾಕ್ ನಾಯಕಿ ಅಂಪೈರ್ ಜೊತೆ ವಾಗ್ವಾದ ನಡೆಸಿದ್ದಾರೆ.
ಬೌಲಿಂಗ್ ಟೈಮಲ್ಲಿ ಸ್ಪ್ರೇ ಹೊಡೆದ ಪಾಕ್ ಕ್ಯಾಪ್ಟನ್!
ಇನ್ನು ಭಾರತ ಪಾಕ್ ನಡುವಿನ ಮ್ಯಾಚಲ್ಲಿ ಕೆಲಕಾಲ ಪಂದ್ಯವನ್ನ ಸ್ಥಗಿತ ಮಾಡ್ಲಾಗಿತ್ತು. ಅದಕ್ಕೆ ಕಾರಣ ಕೀಟಗಳು. ಪಾಕಿಸ್ತಾನಿ ಆಟಗಾರ್ತಿಯರ ಬೌಲಿಂಗ್ ಟೈಮಲ್ಲಿ ಸಾಕಷ್ಟು ಕೀಟಗಳು ಹಾರಾಡ್ತಿದ್ರು. ಇದ್ರಿಂದ ರನ್ಅಪ್ ತಗೊಂಡು ಬೌಲಿಂಗ್ ಮಾಡೋಕೆ ಕಷ್ಟ ಆಗ್ತಿತ್ತು. ಸೋ ಮೊದ್ಲು ಟವೆಲ್ ತಗೊಂಡು ಓಡ್ಸೋಕೆ ಯತ್ನಿಸಿದ್ರು. ಕೊನೆಗೆ ಪಾಕ್ ನಾಯಕಿ ಫಾತಿಮಾ ಸನಾ ಬಗ್ ಸ್ಪ್ರೇ ತರಿಸಿಕೊಂಡು ಸ್ಪ್ರೇ ಮಾಡಿದ್ರು. ಈ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಇನ್ನು ಬ್ಯಾಟಿಂಗ್ನಲ್ಲಿ ಫೇಲ್ಯೂರ್ ಆಗ್ತಿದ್ದ ಪಾಕಿಸ್ತಾನ ಪರ ಸಿದ್ರಾ ಅಮೀನ್ ಕ್ರೀಸ್ ಕಚ್ಚಿ ನಿಂತು ಬ್ಯಾಟಿಂಗ್ ಪ್ರದರ್ಶನ ನೀಡಿದ್ರು. 106 ಎಸೆತಗಳಲ್ಲಿ 81 ರನ್ಸ್ ಕಲೆ ಹಾಕಿದ್ರು. ಬಟ್ 39.5ನೇ ಓವರ್ನಲ್ಲಿ ಸ್ನೇಹ್ ರಾಣಾ ಬೌಲಿಂಗ್ನಲ್ಲಿ ಕ್ಯಾಚ್ ಔಟ್ ಆದ್ರು. ಈ ವೇಳೆ ಸಿಟ್ಟಿನಿಂದ ಅಮೀನ್ ಬ್ಯಾಟ್ ನೆಲಕ್ಕೆ ಬಡಿದಿರೋ ವಿಡಿಯೋ ವೈರಲ್ ಆಗ್ತಿದೆ. ಪಾಕಿಸ್ತಾನಿಯರು ತಿಪ್ಪರಲಾಗ ಹಾಕಿದ್ರೂ ಆನ್ ಫೀಲ್ಡ್ ಮತ್ತು ಆಫ್ ದಿ ಫೀಲ್ಡ್ನಲ್ಲಿ ಭಾರತವನ್ನ ಗೆಲ್ಲೋಕೆ ಆಗಲ್ಲ. ಹೀಗಿದ್ರೂ ತಮ್ಮ ಹುಚ್ಚಾಟ ಮಾತ್ರ ಬಿಡೋದಿಲ್ಲ. ಫೈನಲಿ ಕಳೆದ ನಾಲ್ಕು ಭಾನುವಾರಗಳೂ ಭಾರತೀಯರ ಪಾಲಿಗೆ ಫನ್ಡೇಗಳಾಗಿವೆ. ನಾಲ್ಕು ಸಲವೂ ಟೀಂ ಇಂಡಿಯಾನೇ ವಿನ್ ಆಗಿದೆ.

ನೋಡಿರಿ

