ಪಾಕ್‌ ಅಭಿಮಾನಿಗಳೇ.. 10 ನಿಮಿಷದಲ್ಲಿ ಟಿವಿ ಡೆಲಿವರಿ ಮಾಡೋಕಾಗೋದಿಲ್ಲ! – ವೈರಲ್‌ ಆಯ್ತು ಬ್ಲಿಂಕಿಟ್‌ ಮೀಮ್‌!

ಪಾಕ್‌ ಅಭಿಮಾನಿಗಳೇ.. 10 ನಿಮಿಷದಲ್ಲಿ ಟಿವಿ ಡೆಲಿವರಿ ಮಾಡೋಕಾಗೋದಿಲ್ಲ! – ವೈರಲ್‌ ಆಯ್ತು ಬ್ಲಿಂಕಿಟ್‌ ಮೀಮ್‌!

ಪಾಕ್‌ VS ಭಾರತ ಹೈವೋಲ್ಟೇಜ್‌ ಮ್ಯಾಚ್‌ ಭಾನುವಾರ ದುಬೈನಲ್ಲಿ ನಡೆದಿತ್ತು. ಭಾರತದ ವಿರುದ್ಧ ಪಾಕಿಸ್ತಾನ ಹೀನಾಯ ಸೋಲು ಅನುಭವಿಸಿದೆ. ಸಾಮಾನ್ಯವಾಗಿ  ಮ್ಯಾಚ್‌ ವೇಳೆ ಪಾಕ್‌ ಸೋತ್ರೆ ಅಲ್ಲಿನ ಅಭಿಮಾನಿಗಳು ಟಿವಿ ಒಡೆದು ಹಾಕಿ ಆಕ್ರೋಶ ಹೊರ ಹಾಕೋದು ಸಾಮಾನ್ಯ. ಇದೀಗ ಇದನ್ನೇ ಇಟ್ಕೊಂಡು ಬ್ಲಿಂಕಿಟ್‌ ಫನ್ನಿ ಜಾಹೀರಾತು ನೀಡಿದೆ. ಇದ್ರ ಫೋಟೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಇದನ್ನೂ ಓದಿ: ಕೀರ್ತಿ ಡ್ರಾಮಾ ಕಡೆಗೂ ಬಯಲು! – ಲಕ್ಷ್ಮೀ ವೈಷ್ ಮಧ್ಯೆ ಕಾವೇರಿಗಿಲ್ಲ ಜಾಗ

ಟೀಮ್‌ ಇಂಡಿಯಾ ಮತ್ತು ಪಾಕ್‌ ನಡುವೆ ಮ್ಯಾಚ್‌ ಇದ್ರೆ ಎರಡು ರಾಷ್ಟ್ರಗಳ ಅಭಿಮಾನಿಗಳು ಟಿವಿ ಮುಂದೆ ಕೂರುತ್ತಾರೆ. ಟೀಮ್‌ ಇಂಡಿಯಾ ಗೆದ್ದಾಗ, ಪಾಕ್‌ ಅಭಿಮಾನಿಗಳು ಟಿವಿ ಒಡೆದು ಹಾಕಿ ಕೋಪ ತೀರಿಸಿಕೊಳ್ಳುವ ಸುದ್ದಿಗಳು ಆಗಾಗ್ಗೆ ಕೇಳಿ ಬರುತ್ತಲೇ ಇರುತ್ತವೆ. ಈ ಬಾರಿ ನಡೆದ ಚಾಂಪಿಯನ್ಸ್‌ ಟ್ರೋಫಿ 2025 ರ ಪಂದ್ಯದಲ್ಲಿ ಟೀಮ್‌ ಇಂಡಿಯಾ ಪಾಕ್‌ ವಿರುದ್ಧ ಭರ್ಜರಿ ಜಯ ಗಳಿಸಿದ್ದು, ವಿಶೇಷವಾಗಿ ದೆಹಲಿ ಪೊಲೀಸ್‌ ಮತ್ತು ಬ್ಲಿಂಕಿಟ್‌ ಸೋಷಿಯಲ್‌ ಮೀಡಿಯಾದಲ್ಲಿ ಟಿವಿ ಮೀಮ್ಸ್‌ ಹರಿಬಿಡುವ ಮೂಲಕ ಪಾಕ್‌ ಅಭಿಮಾನಿಗಳ ಕಾಲೆಳೆದಿದ್ದಾರೆ. ಹೌದು 10 ನಿಮಿಷದಲ್ಲಿ ಟಿವಿ ಡೆಲಿವರಿ ಮಾಡೋಕೆ ನಮ್ಮಿಂದ ಸಾಧ್ಯವಿಲ್ಲ ಎಂದು ಬ್ಲಿಂಕಿಟ್‌ ತಮಾಷೆ ಮಾಡಿದ್ದು, ಈ ಮೀಮ್ಸ್‌ ಇದೀಗ ಸಖತ್‌ ವೈರಲ್‌ ಆಗುತ್ತಿದೆ.

ಆನ್‌ಲೈನ್‌ ಡೆಲಿವರಿ ಅಪ್ಲಿಕೇಷನ್‌ಗಳಲ್ಲಿ ಒಂದಾದ ಬ್ಲಿಂಕಿಟ್‌ “ಪಾಕ್‌ ಅಭಿಮಾನಿಗಳೇ ಕ್ಷಮಿಸಿ; ನಾವು ನಿಮಗೆ 10 ನಿಮಿಷಗಳಲ್ಲಿ ಟಿವಿಯನ್ನು ಡೆಲಿವರಿ ಮಾಡಲು ಸಾಧ್ಯವಿಲ್ಲ” ಎಂಬ ವೀಮ್ಸ್‌ ಒಂದನ್ನು ಎಕ್ಸ್‌ ಖಾತೆಯಲ್ಲಿ ಶೇರ್‌ ಮಾಡುವ ಮೂಲಕ ಪಾಕ್‌ ಅಭಿಮಾನಿಗಳ ಕಾಲೆಳೆದು, ಭಾರತದ ಗೆಲುವನ್ನು ಸಂಭ್ರಮಿಸಿದೆ. ಬ್ಲಿಂಕಿಟ್‌ನ ಈ ಫನ್ನಿ ಮೀಮ್ಸ್‌ ಕಂಡು ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.

ಇನ್ನೂ ದೆಹಲಿ ಪೊಲೀಸ್‌ ಕೂಡಾ ನಮ್ದು ಒಂದು ಇರ್ಲಿ ಎನ್ನುತ್ತಾ ಪಾಕ್‌ ಅಭಿಮಾನಿಗಳ ಕಾಲೆಳೆದಿದ್ದಾರೆ. ಹೌದು ಪಕ್ಕದ ದೇಶದಿಂದ ಕೆಲವು ವಿಚಿತ್ರವಾದ ಶಬ್ದಗಳು ಕೇಳಿ ಬರುತ್ತಿವೆ. ಅದು ಕೇವಲ ಟಿವಿಗಳು ಮಾತ್ರ ಒಡೆದು ಹೋಗಿದ್ದು ಎಂದು ನಾವು ಭಾವಿಸುತ್ತೇವೆ ಎಂದು ಹೇಳುವ ಮೂಲಕ ಪಾಕ್‌ ಅಭಿಮಾನಿಗಳ ಕಾಲೆಳೆದಿದ್ದಾರೆ.

Shwetha M