INS Vs PAK.. ದುಬೈ ಪಿಚ್ ಸವಾಲ್ – ರಿಜ್ವಾನ್ ತಂಡದಲ್ಲಿ ಐವರು ಡೇಂಜರಸ್
ರೋಹಿತ್ ಟೀಂ ಪ್ಲಸ್ & ಮೈನಸ್ ಏನು?

ಫೆಬ್ರವರಿ 19ರಂದು ಉದ್ಘಾಟನಾ ಪಂದ್ಯದಲ್ಲೇ ಎಡವಿರೋ ಪಾಕಿಸ್ತಾನ ಡು ಆರ್ ಡೈ ಪರಿಸ್ಥಿತಿಯಲ್ಲಿದೆ. ಪಾಕಿಸ್ತಾನದ ವಿರುದ್ಧ ಗೆದ್ದರೆ ಭಾರತ ಸೀದಾ ಸೆಮಿಫೈನಲ್‌ಗೆ ತಲುಪಲಿದೆ. 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಪಾಕಿಸ್ತಾನ ಭಾರತವನ್ನು ಸೋಲಿಸಿತ್ತು. ಆ ಸೋಲಿನ ನಂತರ, ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವು ಪಾಕಿಸ್ತಾನವನ್ನು ಸತತ ಐದು ಬಾರಿ ಸೋಲಿಸಿದೆ. ಒಂದು ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. 2023ರ ವಿಶ್ವಕಪ್‌ನಲ್ಲಿ ಅಹಮದಾಬಾದ್‌ನಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಭಾರತ ಏಳು ವಿಕೆಟ್‌ಗಳಿಂದ ಗೆದ್ದಿತ್ತು. ಇದೀಗ ಮತ್ತೊಂದು ಐಸಿಸಿ ಇವೆಂಟ್ನಲ್ಲಿ ಉಭಯ ತಂಡಗಳು ಮುಖಾಮುಖಿಯಾಗ್ತಿವೆ. ಈ ಬಾರಿ ಪಾಕಿಸ್ತಾನ ನಾಕೌಟ್ಗೆ ಸೆಲೆಕ್ಟ್ ಆಗ್ಬೇಕು ಅಂದ್ರೆ ಭಾರತದ ವಿರುದ್ಧ ಗೆಲ್ಲಲೇಬೇಕಾದ ಅಂಡರ್ ಪ್ರೆಶರ್ನಲ್ಲಿದೆ. ಹಾಗಂತ ಈ ಗೆಲುವು ಅಷ್ಟು ಸುಲಭವೂ ಇಲ್ಲ. ಮತ್ತೊಂದೆಡೆ ಬಾಂಗ್ಲಾ ದೇಶದ ವಿರುದ್ಧ ತನ್ನ ಮೊದಲ ಪಂದ್ಯವನ್ನ ಆಡಿದ್ದ ಭಾರತಕ್ಕೂ ಚಾಲೆಂಜಸ್ ಗಳಿವೆ. ಭಾರತ ಗೆದ್ರೂ ಕೂಡ ಭಾನುವಾರದ ಪಂದ್ಯಕ್ಕೆ ದುಬೈ ಪಿಚ್ ಸವಾಲಾಗೋ ಎಲ್ಲಾ ಸಾಧ್ಯತೆ ಇದೆ.
ಇದನ್ನೂ ಓದಿ : ಆರ್‌ಸಿಬಿ ಹ್ಯಾಟ್ರಿಕ್ ಗೆಲುವಿನ ಕನಸು ಭಗ್ನ – ತವರಲ್ಲೇ ಮಂಧನಾ ಪಡೆಗೆ ವೀರೋಚಿತ ಸೋಲು
ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಸೋತಿರೋ ಪಾಕಿಸ್ತಾನಕ್ಕೆ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ ಹಾದಿ ಕಠಿಣವಾಗಿದೆ. ಯಾಕಂದ್ರೆ ಸೆಮಿಫೈನಲ್ಗೇರಲು ಕನಿಷ್ಠ 2 ಪಂದ್ಯಗಳನ್ನ ಗೆಲ್ಲಲೇಬೇಕು. ಇದೀಗ ಮೊದಲ ಪಂದ್ಯದಲ್ಲಿ ಸೋತಿರುವ ಪಾಕ್ ತಂಡದ ಮುಂದಿನ ಪಂದ್ಯವೇ ಟೀಮ್ ಇಂಡಿಯಾ ವಿರುದ್ಧ. ಫೆಬ್ರವರಿ 23 ರಂದು ನಡೆಯಲಿರುವ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯದಲ್ಲಿ ಪಾಕಿಸ್ತಾನ್ ಪಡೆ ಮುಗ್ಗರಿಸಿದರೆ, ಚಾಂಪಿಯನ್ಸ್ ಟ್ರೋಫಿಯಿಂದ ಹೊರಬೀಳಲಿದೆ. ಯಾಕಂದ್ರೆ ಮೊದಲ ಪಂದ್ಯದಲ್ಲಿ ಗೆದ್ದಿರುವ ನ್ಯೂಝಿಲೆಂಡ್ ತಂಡವು ಮುಂದಿನ ಎರಡು ಮ್ಯಾಚ್ಗಳಲ್ಲಿ ಒಂದರಲ್ಲಿ ಗೆಲುವು ಸಾಧಿಸಿದ್ರೂ ಸೆಮೀಸ್ಗೇರಲಿದೆ. ಇಲ್ಲಿ ಕಿವೀಸ್ ಪಡೆಯ ಎದುರಾಳಿಗಳು ಬಾಂಗ್ಲಾದೇಶ ಮತ್ತು ಭಾರತ. ಅಂದರೆ ಭಾರತದ ವಿರುದ್ಧ ಸೋತರೂ, ನ್ಯೂಝಿಲೆಂಡ್ ಬಾಂಗ್ಲಾದೇಶ್ ವಿರುದ್ಧ ಗೆಲ್ಲುವ ಸಾಧ್ಯತೆ ಹೆಚ್ಚಿದೆ. ಅದರಂತೆ ನ್ಯೂಝಿಲೆಂಡ್ ತಂಡವನ್ನು ಸೆಮಿಫೈನಲ್ನಲ್ಲಿ ಎದುರು ನೋಡಬಹುದು. ಇತ್ತ ಬಲಿಷ್ಠ ಟೀಮ್ ಇಂಡಿಯಾ ಈಗಾಗ್ಲೇ ಬಾಂಗ್ಲಾವನ್ನ ಸೋಲಿಸಿದ್ದು ಪಾಕಿಸ್ತಾನದ ವಿರುದ್ಧವೂ ಗೆಲ್ಲೋ ಫೇವರೆಟ್ ಟೀಂ ಆಗಿದೆ. ಸೋ ಪಾಕ್ ವಿರುದ್ಧ ಗೆಲ್ಲಲೇಬೇಕಿರೊ ಭಾರತ ಪ್ಲೇಇಂಗ್ 11ನಲ್ಲಿ ಒಂದು ಬದಲಾವಣೆ ಮಾಡಲಿದೆ.
ಪಾಕ್ ವಿರುದ್ಧದ ಪಂದ್ಯಕ್ಕೆ ಭಾರತದ ಪ್ಲೇಯಿಂಗ್ 11 ಹೇಗಿರಬಹುದು ಅನ್ನೋದನ್ನ ನೋಡೋದಾದ್ರೆ ಬ್ಯಾಟಿಂಗ್ ಕ್ರಮಾಂಕದಲ್ಲಿ ಯಾವುದೇ ಚೇಂಜಸ್ ಇರಲ್ಲ. ಅಂದ್ರೆ ಬಾಂಗ್ಲಾ ವಿರುದ್ಧ ಕಣಕ್ಕಿಳಿದವ್ರೇ ಇಲ್ಲೂ ಕಂಟಿನ್ಯೂ ಆಗ್ತಾರೆ. ಕಳೆದ ಪಂದ್ಯದಲ್ಲಿ ಶತಕ ಸಿಡಿಸಿದ ಶುಭನ್ ಗಿಲ್ ಮತ್ತು ರೋಹಿತ್ ಶರ್ಮಾ ಇನ್ನಿಂಗ್ಸ್ ಆರಂಭಿಸ್ತಾರೆ. ಗಿಲ್ ಉತ್ತಮ ಫಾರ್ಮ್ನಲ್ಲಿದ್ದು ಸತತ 2 ಏಕದಿನ ಶತಕ ಸಿಡಿಸಿದ್ದಾರೆ. ವಿರಾಟ್ ಕೊಹ್ಲಿ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಯಲಿದ್ದು, ಫಾರ್ಮ್ಗೆ ಬರ್ಬೇಕಿದೆ. ಕೊಹ್ಲಿಗೆ ಈ ಪಂದ್ಯದ ಮೂಲಕ ವಿಶ್ವದಾಖಲೆ ಬರೆಯೋ ಅವಕಾಶವೂ ಇದೆ. ಅಂದ್ರೆ 15 ರನ್ ಗಳಿಸಿದ್ರೆ ಏಕದಿನ ಇತಿಹಾಸದಲ್ಲಿ 14,000 ರನ್ ಗಳಿಸಿದ ಅತಿ ವೇಗದ ಬ್ಯಾಟ್ಸ್‌ಮನ್ ಆಗಲಿದ್ದಾರೆ. ಇನ್ನು ನಾಲ್ಕನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ನಡೆಸಲಿದ್ದಾರೆ. 5ನೇ ಕ್ರಮಾಂಕಕ್ಕೆ ಮತ್ತೆ ಅಕ್ಷರ್ ಪಟೇಲ್‌ರನ್ನ ಆಡಿಸಬಹುದು. ಕೆಎಲ್ ರಾಹುಲ್ 6ನೇ ಕ್ರಮಾಂಕದಲ್ಲಿ ಆಡ್ತಾರೆ. ಇನ್ನು ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾ ಕ್ರಮವಾಗಿ 7 ಮತ್ತು 8ನೇ ಸ್ಲಾಟ್ಗೆ ಬರ್ತಾರೆ. ಸೋ ಇಲ್ಲೀವರೆಗೂ ಯಾವುದೇ ಚೇಂಜಸ್ ಇಲ್ಲ. ಬಟ್ ಬೌಲರ್ಸ್ಗಳ ಪೈಕಿ ಒಬ್ಬರ ಬದಲಾವಣೆಯಾಗಬಹುದು.
ಪಾಕ್ ವಿರುದ್ಧದ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಕೆಲ ಬದಲಾವಣೆಗಳಾಗೋ ಸಾಧ್ಯತೆ ಇದೆ. ಸ್ಟಾರ್ ಸ್ಪಿನ್ ಬೌಲರ್ ಕುಲ್ದೀಪ್ ಯಾದವ್ ಕಳಪೆ ಫಾರ್ಮ್ನಿಂದ ಬಳಲುತ್ತಿದ್ದಾರೆ. ಇತ್ತೀಚೆಗೆ ತವರಿನಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ 2 ಪಂದ್ಯಗಳನ್ನು ಆಡಿದ್ದ ಕುಲ್ದೀಪ್ ಕೇವಲ 2 ವಿಕೆಟ್ ಮಾತ್ರ ಪಡೆದಿದ್ರು. ಅಲ್ದೇ ಬಾಂಗ್ಲಾ ವಿರುದ್ಧದ ಮೊದಲ ಪಂದ್ಯದಲ್ಲಿ ಯಾವುದೇ ವಿಕೆಟ್ ಪಡೆದಿರಲಿಲ್ಲ. ಅಲ್ದೇ ಪಾಕ್ ವಿರುದ್ಧ ಭಾರತ ಪಂದ್ಯವನ್ನ ಗೆಲ್ಲಲೇಬೇಕಿದೆ. ಹೀಗಾಗಿ ಪ್ಲೇಯಿಂಗ್ 11ನಲ್ಲಿ ಕುಲ್ದೀಪ್ ಬದಲಿಗೆ ಅವರ ಸ್ಥಾನಕ್ಕೆ ವರುಣ್ ಚಕ್ರವರ್ತಿ ಅವರನ್ನು ಕಣಕ್ಕಿಳಿಸೋ ಪ್ಲ್ಯಾನ್ ನಲ್ಲಿದೆ. ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ವರುಣ್ 5 ಪಂದ್ಯಗಳಿಂದ 14 ವಿಕೆಟ್ ಪಡೆದಿದ್ದರು. ನಂತರ ಏರಡನೇ ಏಕದಿನ ಪಂದ್ಯದಲ್ಲೂ ಬೌಲಿಂಗ್ ಮಾಡಿ ವಿಕೆಟ್ ಉರುಳಿಸಿದ್ದರು. ಈ ಹಿನ್ನೆಲೆ ಪಾಕ್ ವಿರುದ್ಧದ ಪಂದ್ಯಕ್ಕೆ ಕಣಕ್ಕಿಳಿಸುವ ಸಾಧ್ಯತೆ ದಟ್ಟವಾಗಿದೆ. ವೇಗದ ಬೌಲಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಹರ್ಷಿತ್ ರಾಣಾ, ಮೊಹಮ್ಮದ್ ಶಮಿ ಮುಂದುವರೆಯಲಿದ್ದಾರೆ. ಅರ್ಷದೀಪ್ ಸಿಂಗ್ ಬೆಂಚ್ ಕಾಯುವುದು ಖಚಿತ. ಸೋ ಫೈನಲ್ಲಾಗಿ ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಭಾರತದ ಸಂಭಾವ್ಯ ತಂಡ ಹೇಗಿರುತ್ತೆ ಅಂದ್ರೆ ರೋಹಿತ್ ಶರ್ಮಾ, ಶುಭ್ ಮನ್ ಗಿಲ್, ವಿರಾಟ್ ಕೊಹ್ಲಿ. ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಅಕ್ಷರ್ ಪಟೇಲ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ ಸ್ಥಾನ ಪಡೆಯಬಹುದು. ಸೋ ಇದಿಷ್ಟು ಟೀಂ ಇಂಡಿಯಾ ಕಥೆಯಾದ್ರೆ ಪಾಕ್ ತಂಡದಲ್ಲೂ ಕ್ವಾಲಿಟಿ ಪ್ಲೇಯರ್ಸ್ ಇದ್ದಾರೆ.
ಫಸ್ಟ್ ಮ್ಯಾಚ್ನಲ್ಲಿ ಪಾಕಿಸ್ತಾನ ಸೋತಿದೆ ನಿಜ. ಹಾಗಂತ ಭಾರತ ಇದನ್ನ ಈಸಿಯಾಗಿ ತೆಗೆದುಕೊಳ್ಳೋಕೆ ಆಗಲ್ಲ. ಪಾಕ್ ಕೂಡ ಬಲಿಷ್ಠ ತಂಡವೇ. ಅಲ್ಲಿನ ಆಟಗಾರರೂ ಕೂಡ ಡೇಂಜರಸ್ ಆಗಿದ್ದಾರೆ. ಅದ್ರಲ್ಲಿ ನಂಬರ್ 1 ಕ್ಯಾಪ್ಟನ್ ಮೊಹಮ್ಮದ್ ರಿಜ್ವಾನ್. ಮಿಡಲ್ ಆರ್ಡರ್ ಬ್ಯಾಟ್ಸ್‌ಮನ್ ಆಗಿರೋ ರಿಜ್ವಾನ್ ನ್ಯೂಜಿಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಫೇಲ್ಯೂರ್ ಆಗಿದ್ರು. ಬಟ್ ಒಂದು ಸಲ ಸೆಟಲ್ ಆದ್ರೆ ತಮ್ಮ ಬ್ಯಾಟಿಂಗ್ ಮೂಲಕ ಪಂದ್ಯದ ಗತಿಯನ್ನೇ ಬದಲಾಯಿಸಬಲ್ಲರು. ನಂಬರ್ 2 ಪಾಕಿಸ್ತಾನದ ಸ್ಟಾರ್ ಬ್ಯಾಟ್ಸ್‌ಮನ್ ಬಾಬರ್ ಆಜಮ್ ಐಸಿಸಿ ಟಾಪ್-10 ಆಟಗಾರರಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಇವ್ರು ಚೆನ್ನಾಗಿ ಆಡಿದ್ರೂ ಕೂಡ ನಿಧಾನಗತಿ ಬ್ಯಾಟಿಂಗ್ ಟೀಕೆಯಾಗ್ತಿದೆ. ಬಟ್ ದುಬೈ ಪಿಚ್ ಅಂತಾ ನೋಡಿದ್ರೆ ಅಲ್ಲಿ ನಿಧಾನಗತಿಯ ಬ್ಯಾಟಿಂಗ್ ಅಡ್ವಾಂಟೇಜಸ್ ಆಗುತ್ತೆ. ಸೋ ಹೆಚ್ಚು ಹೊತ್ತು ಬಾಬರ್ ಕ್ರೀಸ್ನಲ್ಲಿದ್ರೆ ಅದು ಭಾರತಕ್ಕೇ ಕಷ್ಟ. ಹಾಗೇ ಪಾಕಿಸ್ತಾನದ ಯುವ ಬ್ಯಾಟ್ಸ್‌ಮನ್ ಸಲ್ಮಾನ್ ಅಲಿ ಅಘಾ ಉತ್ತಮ ಸ್ಪಿನ್ ಬೌಲಿಂಗ್ ಸ್ಕಿಲ್ ಇದಎ. ಇನ್ನು ಟೀಂ ಇಂಡಿಯಾದ ಟಾಪ್ ಆರ್ಡರ್‌ಗೆ ಮತ್ತೊಂದು ಟೆನ್ಷನ್ ಶಾಹೀನ್ ಶಾ ಅಫ್ರಿದಿ ಬೌಲಿಂಗ್. ಪಾಕಿಸ್ತಾನದ ಕೆಳ ಕ್ರಮಾಂಕದ ಅತ್ಯಂತ ಸ್ಫೋಟಕ ಬ್ಯಾಟ್ಸ್‌ಮನ್ ಖುಷ್ದಿಲ್ ಷಾ ಕೂಡ ಚಾಲೆಂಜ್ ಆಗಬಲ್ಲರು. ನ್ಯೂಜಿಲೆಂಡ್ ವಿರುದ್ಧ 49 ಎಸೆತಗಳಲ್ಲಿ 69 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದ್ದರು.