ಭಾರತ Vs ಪಾಕ್.. ಕೊಹ್ಲಿಗೆ ಸಂಕಷ್ಟ – ಓಪನರ್ ಚಾನ್ಸ್ ಪ್ಲಸ್ Or ಮೈನಸ್?
ವಿರಾಟ್ ಗೆ ಗವಾಸ್ಕರ್ ಸವಾಲೇನು?

ಭಾರತ Vs ಪಾಕ್.. ಕೊಹ್ಲಿಗೆ ಸಂಕಷ್ಟ – ಓಪನರ್ ಚಾನ್ಸ್ ಪ್ಲಸ್ Or ಮೈನಸ್?ವಿರಾಟ್ ಗೆ ಗವಾಸ್ಕರ್ ಸವಾಲೇನು?

ಟಿ-20 ವಿಶ್ವಕಪ್ನಲ್ಲಿ ಟೀಂ ಇಂಡಿಯಾ ಪ್ಲೇಯಿಂಗ್ ಇಲೆವೆನ್ನಲ್ಲಿ ಸಾಕಷ್ಟು ಚೇಂಜಸ್ ಮಾಡ್ಲಾಗಿದೆ. ವಿರಾಟ್ ಕೊಹ್ಲಿ ಕ್ಯಾಪ್ಟನ್ ರೋಹಿತ್ ಶರ್ಮಾ ಜೊತೆ ಓಪನರ್ ಆಗಿ ಕಣಕ್ಕಿಳಿಯುತ್ತಿದ್ದಾರೆ. ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಈ ಫಾರ್ಮುಲಾವನ್ನ ಪ್ರಯೋಗ ಮಾಡಿ ಸಕ್ಸಸ್ ಕೂಡ ಆಗಿದ್ದಾರೆ. ಫಸ್ಟ್ ಮ್ಯಾಚ್ನಲ್ಲಿ ಟೀಂ ಇಂಡಿಯಾ ಗೆಲ್ತು ಅನ್ನೋದೇನೋ ನಿಜ. ಬಟ್ ವಿರಾಟ್ ಕೊಹ್ಲಿ ತುಂಬಾ ನಿರಾಸೆ ಮೂಡಿಸಿದ್ರು. ಓಪನರ್ ಆಗಿ ಬಂದ ವಿರಾಟ್ 5 ಬಾಲ್ಗಳಲ್ಲಿ ಜಸ್ಟ್ 1 ರನ್ ಗಳಿಸಿ ಔಟಾದ್ರು. ಬಟ್ ಈಗ ಇದೇ ಪ್ರದರ್ಶನ ಕ್ರಿಕೆಟ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ವಿರಾಟ್ ಫಾರ್ಮ್ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಪಾಕ್ ವಿರುದ್ಧದ ಪಂದ್ಯಕ್ಕೆ ಸವಾಲು ಕೂಡ ಹಾಕಿದ್ದಾರೆ. ಅಷ್ಟಕ್ಕೂ ವಿರಾಟ್ ಗೆ ಎದುರಾಗಿರೋ ಚಾಲೆಂಜಸ್ ಏನು ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:  ಬಿಗ್ ಬಾಸ್ ಜೋಡಿ ಡಿವೋರ್ಸ್ – ನಿವೇದಿತಾ-ಚಂದನ್ ಬದುಕಲ್ಲಿ ಆಗಿದ್ದೇನು?

ವಿರಾಟ್ ಕೊಹ್ಲಿ ಈಗ ಕ್ರಿಕೆಟ್ ಜಗತ್ತಿನ ಅನಭಿಷಕ್ತ ದೊರೆ. ಕ್ರಿಕೆಟ್ ಬಗ್ಗೆ ಗಂಧ ಗಾಳಿ ಗೊತ್ತಿಲ್ಲದ ದೇಶಗಳಲ್ಲೂ ಕಿಂಗ್ ಕೊಹ್ಲಿಗೆ ಫ್ಯಾನ್ಸ್ ಇದ್ದಾರೆ. ಫೀಲ್ಡ್ನಲ್ಲಿ ಅವ್ರ ಅಗ್ರೆಶನ್, ಬಿಹೇವಿಯರ್, ಸೆಲೆಬ್ರೇಷನ್, ಟಾಂಟ್, ರಿವೇಂಜ್ ನೋಡೋಕಂತ್ಲೇ ಕೋಟಿ ಕೋಟಿ ಫ್ಯಾನ್ಸ್ ಕಾಯ್ತಿದ್ದಾರೆ. ಮೈದಾನದಲ್ಲಿ ಯಾರಾದ್ರೂ ತಮ್ಮನ್ನೇ ಆಗ್ಲಿ ಅಥವಾ ತಂಡಕ್ಕೇ ಆಗ್ಲಿ ಚೇಡಿಸಿದ್ರು ಅಂದ್ರೆ ವಿರಾಟ್ ಬಿಡೋ ಮಾತೇ ಇಲ್ಲ. ಅಲ್ಲೇ ಡ್ರಾ ಅಲ್ಲೇ ಬಹುಮಾನ ಅಂತಾರಲ್ಲ ಹಾಗೆ ವಾಪಸ್ ಕೊಟ್ಟೇ ಬರೋದು. ಇದೀಗ ಇಂಥದ್ದೇ ಸಿಶುಯೇಷನ್ ವಿರಾಟ್ಗೆ ಮತ್ತೆ ಸೃಷ್ಟಿಯಾಗಿದೆ. ಟೀಂ ಇಂಡಿಯಾದ ಲೆಜೆಂಡ್ ಸುನಿಲ್ ಗವಾಸ್ಕರ್ ವಿರಾಟ್ಗೆ ಹೊಸ ಸವಾಲು ಹಾಕಿದ್ದಾರೆ. ತಮ್ಮನ್ನ ತಾವು ಪ್ರೂವ್ ಮಾಡಿಕೊಳ್ಬೇಕು ಅಂತಾ ಚಾಲೆಂಜ್ ಮಾಡಿದ್ದಾರೆ. ಗವಾಸ್ಕರ್ ಇಂಥಾದ್ದೊಂದು ಸವಾಲು ಹಾಕೋಕೆ ಕಾರಣ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಪ್ರದರ್ಶನ.

ವಿರಾಟ್ ಗೆ ಅಗ್ನಿ ಪರೀಕ್ಷೆ!    

ಐಪಿಎಲ್ ನಲ್ಲೇ ಕಿಂಗ್ ವಿರಾಟ್ ಕೊಹ್ಲಿ ರನ್ ಮಷಿನ್ನಂತೆ ಅಬ್ಬರಿಸಿದ್ದರು. ಸೋ ವಿಶ್ವಕಪ್ ಟೂರ್ನಿಯಂತಹ ಬಿಗ್ ಟೂರ್ನಮೆಂಟ್ನಲ್ಲೂ ವಿರಾಟ್ ರನ್ ಮಳೆ ಹರಿಸ್ತಾರೆ ಅಂತಾ ಕ್ರಿಕೆಟ್ ಜಗತ್ತೇ ಎದುರು ನೋಡ್ತಿತ್ತು. ಅದ್ರಲ್ಲೂ ರೋಹಿತ್ ಜೊತೆ ಇನ್ನಿಂಗ್ಸ್ ಆರಂಭಿಸೋದು ಕನ್ಫರ್ಮ್ ಆದ ಮೇಲಂತೂ ಅಭಿಮಾನಿಗಳಲ್ಲಿ ಸಿಕ್ಕಾಪಟ್ಟೆ ನಿರೀಕ್ಷೆಯಿತ್ತು. ಆದ್ರೆ, ಮೊದಲ ಪಂದ್ಯದಲ್ಲಿ ವಿರಾಟ್ ವೀರಾವೇಶ ಕಾಣಲೆ ಇಲ್ಲ. ದುರ್ಬಲ ಐರ್ಲೆಂಡ್ ಬೌಲಿಂಗ್ ದಾಳಿ ಎದುರು ತಿಣುಕಾಡಿದ್ರು. 5 ಎಸೆತಗಳನ್ನ ಎದುರಿಸಿ ಜಸ್ಟ್ 1 ರನ್ಗಳಿಸಿ ಔಟಾದ್ರು. ಅಭ್ಯಾಸ ಪಂದ್ಯವನ್ನಾಡದೇ ನೇರವಾಗಿ ಅಸಲಿ ಅಖಾಡಕ್ಕಿಳಿದ ವಿರಾಟ್ ಕೊಹ್ಲಿ ಫೇಲ್ ಆಗಿದ್ರು. ಈ ಮೂಲಕ ವಿಶ್ವಕಪ್ನಲ್ಲಿ ಮೊದಲ ಬಾರಿ ಚೇಸಿಂಗ್ ವೇಳೆ ಅತಿ ಕಡಿಮೆ ಮೊತ್ತಕ್ಕೆ ಔಟಾದ ಕಳಪೆ ದಾಖಲೆ ಬರೆದ್ರು.  ಎದುರಿಸಿದ ಐದೂ ಬಾಲ್ಗಳನ್ನ ಸರಿಯಾಗಿ ಜಡ್ಜ್ ಮಾಡದ ಕೊಹ್ಲಿ, ಇದೇ ಮೈದಾನದಲ್ಲಿ ಭಾನುವಾರ ಬಲಿಷ್ಠ ಪಾಕಿಸ್ತಾನ ಪಡೆಯನ್ನ ಎದುರಿಸಲಿದ್ದಾರೆ. ಇದೇ ಕಾರಣಕ್ಕೆ ಕ್ರಿಕೆಟ್ ಲೆಜೆಂಡ್ ಸುನಿಲ್ ಗವಾಸ್ಕರ್ ವಿರಾಟ್ಗೆ ಸವಾಲ್ ಹಾಕಿದ್ದಾರೆ. ಲೆಜೆಂಡ್ ಆಟಗಾರರು ಒಂದು ಪಂದ್ಯದಲ್ಲಿ ಫೇಲ್ ಆದ್ರೆ, ಮುಂದಿನ ಪಂದ್ಯದಲ್ಲಿ ಕಮ್ಬ್ಯಾಕ್ ಮಾಡ್ತಾರೆ. ಪಾಕ್ ವಿರುದ್ಧದ ಪಂದ್ಯದಲ್ಲಿ ಆಡಿ ತೋರಿಸಲಿ ಎಂದು ವಿರಾಟ್ ತಾಕತ್ತಿಗೆ ಚಾಲೆಂಜ್ ಮಾಡಿದ್ದಾರೆ.

T20 ವಿಶ್ವಕಪ್ ಟೂರ್ನಿಯಲ್ಲಿ ಐರ್ಲೆಂಡ್ ವಿರುದ್ಧ ಸುಲಭದ ಗೆಲುವು ದಾಖಲಿಸಿರೋ ರೋಹಿತ್ ಶರ್ಮಾ ಪಡೆ ಕಣ್ಣು ಇದೀಗ ಮುಂದಿನ ಕದನದ ಮೇಲೆ ನೆಟ್ಟಿದೆ. ನ್ಯೂಯಾರ್ಕ್ನ ನಸ್ಸೌ ರಣಾಂಗಣದಲ್ಲಿ ಸೂಪರ್ ಸಂಡೇ ಮೆಗಾಫೈಟ್ ನಡೆಯಲಿದೆ. ಇಡೀ ಕ್ರಿಕೆಟ್ ಲೋಕವೇ ನೋಡಲು ಕಾದು ಕುಳಿತಿರೋ ಈ ಕದನದಲ್ಲಿ ಬದ್ಧವೈರಿ ಪಾಕಿಸ್ತಾನ ಪಡೆಯನ್ನ ಟೀಮ್ ಇಂಡಿಯಾ ಎದುರಿಸಲಿದೆ. ಭಾನುವಾರ ನಡೆಯಲಿರೋ ಪಾಕ್ ವಿರುದ್ಧದ ಪಂದ್ಯ ವಿರಾಟ್ ಕೊಹ್ಲಿಗೆ ಮಾತ್ರವಲ್ಲ. ಇಡೀ ದೇಶಕ್ಕೆ ಪ್ರತಿಷ್ಟೆಯ ಪಂದ್ಯ. ವಿಶ್ವಕಪ್ ಗೆಲುವಿಗಿಂತ ಈ ಪಂದ್ಯದ ಗೆಲುವು ಮುಖ್ಯ ಅನ್ನೋದು ಉಭಯ ತಂಡಗಳ ನಿಲುವು. ಎರಡೂ ತಂಡಗಳ ಆಟಗಾರರಿಗೂ ಒತ್ತಡ ಇದ್ದೇ ಇದೆ. ಈ ಹಿಂದೆ ಪಾಕ್ ವಿರುದ್ಧದ ವಿಶ್ವಕಪ್ ಪಂದ್ಯಗಳಲ್ಲಿ ವಿರಾಟ್ ವಿರಾಟರೂಪ ತೋರಿಸಿದ್ದಾರೆ. ಆದ್ರೆ ಈ ಬಾರಿ ಪರಿಸ್ಥಿತಿ ಭಿನ್ನವಾಗಿದೆ. ನ್ಯೂಯಾರ್ಕ್ನ ನಸ್ಸೌ ಪಿಚ್ ವರ್ತನೆ ಬ್ಯಾಟ್ಸ್ಮನ್ಗಳಿಗೆ ಅರ್ಥವಾಗ್ತಿಲ್ಲ. ಮತ್ತೊಂದೆಡೆ ಪಾಕಿಸ್ತಾನ ಪಡೆಯನ್ನ ಸುಲಭವಾಗಿ ತೆಗೆದುಕೊಳ್ಳೋಕೆ ಆಗಲ್ಲ. ಯಾಕಂದ್ರೆ ಪಾಕ್ ಬಲಿಷ್ಠವಾದ ವೇಗದ ಬೌಲಿಂಗ್ ದಾಳಿಯನ್ನ ಹೊಂದಿದೆ. ಎಡಗೈ ವೇಗಿಗಳ ವೀಕ್ನೆಸ್ ಹೊಂದಿರುವ ಕೊಹ್ಲಿಯನ್ನ ಹಣಿಯಲು ಶಾಹೀನ್ ಶಾ ಅಫ್ರಿದಿ, ಮೊಹಮ್ಮದ್ ಅಮೀರ್ರಂತಾ ವೇಗಿಗಳಿದ್ದಾರೆ. ಇದ್ರ ಮಧ್ಯೆ ವೈಫಲ್ಯದ ಸುಳಿಗೆ ಸಿಲುಕಿರುವ ಕೊಹ್ಲಿಗೆ, ತಾಕತ್ತಿನ ಸವಾಲು ಬೇರೆ ಎದುರಾಗಿದೆ. ಈ ಎಲ್ಲಾ ಕಾರಣಗಳಿಂದ ವಿರಾಟ್, ಸದ್ಯ ಅಗ್ನಿ ಪರೀಕ್ಷೆಯ ಕಣದಲ್ಲಿದ್ದಾರೆ. ಕೊಹ್ಲಿಗೆ ಸವಾಲುಗಳೇನು ಹೊಸದಲ್ಲ.. ಅವುಗಳನ್ನ ಗೆಲ್ಲೋದು ಹೊಸದಲ್ಲ.

Shwetha M