ಅಭಿ Vs ಫರ್ಹಾನ್.. ಬುಮ್ರಾ Vs ಅಫ್ರಿದಿ – ಪಾಕ್ ವಿರುದ್ಧ ಪ್ಲೇಯಿಂಗ್ 11 ಹೇಗಿದೆ?

ಅಭಿ Vs ಫರ್ಹಾನ್.. ಬುಮ್ರಾ Vs ಅಫ್ರಿದಿ – ಪಾಕ್ ವಿರುದ್ಧ ಪ್ಲೇಯಿಂಗ್ 11 ಹೇಗಿದೆ?

ಏಷ್ಯಾಕಪ್​ನ ಹೈವೋಲ್ಟೇಜ್ ಪಂದ್ಯಕ್ಕೆ ಇನ್ನೊಂದೇ ದಿನ ಬಾಕಿ. ಭಾರತ ಮತ್ತು ಪಾಕಿಸ್ತಾನ ತಂಡಗಳು ಸೆಪ್ಟೆಂಬರ್ 14 ರ ಭಾನುವಾರ ರಾತ್ರಿ 8 ಗಂಟೆಗೆ ಅಖಾಡಕ್ಕಿಳಿಯಲಿವೆ. ಎರಡೂ ರಾಷ್ಟ್ರಗಳಿಗೆ ಈ ಪಂದ್ಯ ಪ್ರತಿಷ್ಠೆ ಆಗಿರೋದ್ರಿಂದ ಗೆಲ್ಲಲೇಬೇಕಾದ ಪ್ರೆಶರ್​ನಲ್ಲಿರ್ತಾರೆ. ಆದ್ರೆ ಸೋಲು ಗೆಲುವು ನಿರ್ಧಾರ ಮಾಡೋದು ಆಟಗಾರರ ಪ್ರದರ್ಶನ. ಬೆಸ್ಟ್ ಪರ್ಫಾಮೆನ್ಸ್ ಕೊಟ್ಟಾಗಷ್ಟೇ ಗೆಲ್ಲೋಕೆ ಸಾಧ್ಯ.

ಇದನ್ನೂ ಓದಿ : ಕರ್ಫ್ಯೂ, ನಿಷೇಧಾಜ್ಞೆ ವಾಪಸ್ – ಸಹಜ ಸ್ಥಿತಿಯತ್ತ ಮರುಳುತ್ತಿರೋ ನೇಪಾಳ

ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಅಂದ್ರೆ ಅದು ಬರೀ ಸೋಲು ಗೆಲುವಿನ ಲೆಕ್ಕಾಚಾರ ಅಲ್ಲ. ಅಲ್ಲಿ ಆಟಗಾರರ ಪ್ರತಿಷ್ಠೆ ಇರುತ್ತೆ. ಅಭಿಮಾನಿಗಳ ಎಮೋಷನ್ ಅಡಗಿರುತ್ತೆ. ಪ್ರಸ್ತುತ ಏಷ್ಯಾಕಪ್ ತಂಡದಲ್ಲಿರೋ ಐದು ಆಟಗಾರರಿಗೆ ಪಾಕ್ ವಿರುದ್ಧ ಒಂದೇ ಒಂದು ಪಂದ್ಯವನ್ನೂ ಆಡೋಕೆ ಅವಕಾಶ ಸಿಕ್ಕಿಲ್ಲ. ಗಿಲ್ ಮತ್ತು ಕುಲ್ದೀಪ್ ಪಾಕಿಸ್ತಾನ ವಿರುದ್ಧ ODI ಪಂದ್ಯಗಳಲ್ಲಿ ಆಡಿದ್ದರೂ, T20I ಗಳಲ್ಲಿ ಕಣಕ್ಕಿಳಿದಿಲ್ಲ. ಹೀಗಿರುವಾಗ ಉಭಯ ತಂಡಗಳ ಈ 7 ಆಟಗಾರರೇ ಗೇಮ್ ಚೇಂಜರ್ಸ್ ಅನ್ನೋ ಲೆಕ್ಕಾಚಾರ ನಡೀತಿದೆ. ಯಾರು ಆ 7 ಆಟಗಾರರು ಅನ್ನೋದನ್ನ ಹೇಳೋ ಮೊದ್ಲು ಭಾರತ ತಂಡದ ಆಟಗಾರರ ಪಾಕಿಸ್ತಾನ ವಿರುದ್ಧದ ಅಂಕಿಅಂಶಗಳು ಹೇಗಿದೆ ಅನ್ನೋದನ್ನ ನೋಡೋಣ. ಯುಎಇ ವಿರುದ್ಧದ ತಂಡಕ್ಕೂ ಈ ತಂಡಕ್ಕೂ ಒಂದು ವ್ಯತ್ಯಾಸ ಕಾಣಬಹುದು.

ಭಾರತ ಸಂಭಾವ್ಯ ಪ್ಲೇಯಿಂಗ್ 11

ಅಭಿಷೇಕ್ ಶರ್ಮಾ

ಶುಭ್ ಮನ್ ಗಿಲ್

ಸೂರ್ಯಕುಮಾರ್ ಯಾದವ್

ತಿಲಕ್ ವರ್ಮಾ

ಸಂಜು ಸ್ಯಾಮ್ಸನ್

ಹಾರ್ದಿಕ್ ಪಾಂಡ್ಯ

ಅಕ್ಷರ್ ಪಟೇಲ್

ಕುಲ್ದೀಪ್ ಯಾದವ್

ವರುಣ್ ಚಕ್ರವರ್ತಿ

ಜಸ್ಪ್ರೀತ್ ಬುಮ್ರಾ

ಅರ್ಷದೀಪ್ ಸಿಂಗ್

ಈ ಟೀಮ್​ನಲ್ಲಿ ಭಾರತದ ಪರ ಅಭಿಷೇಕ್ ಶರ್ಮಾ, ಶುಭ್​ಮನ್ ಗಿಲ್, ಜಸ್ಪ್ರೀತ್ ಬುಮ್ರಾ, ಕುಲ್ದೀಪ್ ಯಾದವ್, ಹಾರ್ದಿಕ್ ಪಾಂಡ್ಯ ಗೇಮ್ ಚೇಂಜಿಂಗ್ ಪರ್ಫಾಮೆನ್ಸ್ ನೀಡಬಹುದು. ಇತ್ತ ಪಾಕ್ ತಂಡದಲ್ಲಿ ಬ್ಯಾಟಿಂಗ್​ನಲ್ಲಿ ಅಗ್ರೆಸ್ಸಿವ್ ಬ್ಯಾಟಿಂಗ್ ಸ್ಟೈಲ್ ಮತ್ತು ಸ್ಟ್ರೈಕ್ ರೇಟ್​ನಿಂದ ಸಾಹಿಬ್‌ಜಾದಾ ಫರ್ಹಾನ್ ಮತ್ತು ಹಸನ್ ನವಾಜ್‌ರಂತಹ ಹೊಸ ಮುಖಗಳು ಇದ್ದಾರೆ. ಸೈಮ್ ನಯೂಬ್ ಜೊತೆ ಅನುಭವಿ ಆರಂಭಿಕ ಬ್ಯಾಟ್ಸ್‌ಮನ್ ಫಖರ್ ಜಮಾನ್ ಅಗ್ರಸ್ಥಾನದಲ್ಲಿ ವೇಗವಾಗಿ ರನ್ಸ್ ಕಲೆ ಹಾಕಬಹುದು. ಇತ್ತ ಪಾಕ್ ತಂಡದಲ್ಲಿ ಶಾಹೀನ್ ಶಾ ಅಫ್ರಿದಿ, ಹ್ಯಾರಿಸ್ ರೌಫ್ ಮತ್ತು ಹಸನ್ ಅಲಿ ಅವರಂತಹ ಬಲಿಷ್ಠ ವೇಗಿಗಳಿದ್ದು ಗೇಮ್ ಟರ್ನಿಂಗ್ ಪರ್ಫಾಮೆನ್ಸ್ ನೀಡಬಹುದು.

Shantha Kumari