ಸೆಮೀಸ್ ನಲ್ಲಿ ಮತ್ತೆ IND Vs PAK? – ಬದ್ಧವೈರಿಗಳ ಮುಖಾಮುಖಿಗೆ 2 ಚಾನ್ಸ್
8 ಟೀಂ.. 2 ಗ್ರೂಪ್.. ಲೆಕ್ಕಾಚಾರ ಹೇಗೆ?

ಸೆಮೀಸ್ ನಲ್ಲಿ ಮತ್ತೆ IND Vs PAK? – ಬದ್ಧವೈರಿಗಳ ಮುಖಾಮುಖಿಗೆ 2 ಚಾನ್ಸ್8 ಟೀಂ.. 2 ಗ್ರೂಪ್.. ಲೆಕ್ಕಾಚಾರ ಹೇಗೆ?

ಫಾರ್ ದಿ ಫಸ್ಟ್ ಟೈಂ 20 ತಂಡಗಳು ಅಖಾಡಕ್ಕಿಳಿದಿದ್ದ 10ನೇ ಆವೃತ್ತಿಯ ಟಿ-20 ವಿಶ್ವಕಪ್​ ರೋಚಕ ಘಟ್ಟದಲ್ಲಿದೆ. ಈಗಾಗ್ಲೇ ಟೂರ್ನಿಯಿಂದ 12 ಟೀಮ್​ಗಳು ಹೊರಬಿದ್ದಿದೆ. 8 ತಂಡಗಳು ಸೂಪರ್ 8ಗೆ ಕಾಲಿಟ್ಟಿವೆ. ಬುಧವಾರ ನಮೀಬಿಯಾ ವಿರುದ್ಧ ಗೆದ್ದಿರೋ ಪಾಕಿಸ್ತಾನ ಲಾಸ್ಟ್ ಟೀಂ ಆಗಿ ಮುಂದಿನ ಸುತ್ತಿಗೆ ಎಂಟರ್ ಆಗಿದೆ. ಅಲ್ಲಿಗೆ 2 ಗುಂಪುಗಳ 8 ಟೀಮ್ಸ್​ ಫೈನಲ್ ಆಗಿದ್ದು ಇನ್ನೇನಿದ್ರೂ ಸೂಪರ್ 8 ಕ್ಲ್ಯಾಶ್ ಸ್ಟಾರ್ಟ್ ಆಗುತ್ತೆ.

ಇದನ್ನೂ ಓದಿ : ಮೆಜೆಸ್ಟಿಕ್‌ KSRTC ಬಸ್‌ ನಿಲ್ದಾಣದಲ್ಲಿ ಕಳ್ಳರ ಕೈಚಳಕ! – ಟಿಕೆಟ್ ಮಷಿನ್ ಕದ್ದೊಯ್ದ ಖದೀಮರು!

ಕ್ರಿಕೆಟ್ ಜಗತ್ತಿನ ಗ್ರೇಟೆಸ್ಟ್ ರೈವಲ್ರಿ ಅಂತಾನೇ ಕರೆಸಿಕೊಳ್ಳೋ ಇಂಡಿಯಾ ವರ್ಸಸ್ ಪಾಕ್ ಮ್ಯಾಚ್​ಗೆ ಇರೋವಷ್ಟು ಕ್ರೇಜ್ ಯಾವುದೇ ಐಸಿಸಿ ಟೂರ್ನಿಯ ಫೈನಲ್ ಪಂದ್ಯಗಳಿಗೂ ಇರಲ್ಲ. ಈಗಾಗ್ಲೇ ಗ್ರೂಪ್​ ಸ್ಟೇಜ್​ನಲ್ಲೇ ಹೈವೋಲ್ಟೇಜ್ ಮ್ಯಾಚ್ ಆಗಿದೆ. ಪಾಕಿಸ್ತಾನದ ವಿರುದ್ಧ ಭಾರತ ಭರ್ಜರಿಯಾಗಿ ಗೆದ್ದು ಬೀಗಿದೆ. ಭಾರತದ ವಿರುದ್ಧದ ಸೋಲಿನ ಬಳಿಕ ಪಾಕಿಸ್ತಾನ ಗ್ರೂಪ್​ ಸ್ಟೇಜ್​ನ ಕೊನೇ ಮ್ಯಾಚಲ್ಲಿ ನಮೀಬಿಯಾ ವಿರುದ್ಧ ಭರ್ಜರಿಯಾಗಿ ಗೆದ್ದು ಸೂಪರ್ 8ಗೆ ಬಂದಿದೆ. ಅದ್ರಲ್ಲೂ ನಮೀಬಿಯಾ ವಿರುದ್ಧ ಪಾಕ್ ಓಪನರ್ ಸಾಹಿಬ್ದಾದಾ ಫರ್ಹಾನ್ ಸೆಂಚುರಿ ಸಿಡಿಸಿ ಮಿಂಚಿದ್ದಾನೆ. ಸ್ಟ್ರಾಂಗ್ ಆಗಿ ಕಂ ಬ್ಯಾಕ್ ಮಾಡಿರೋ ಪಾಕ್ ಸೂಪರ್ 8ನಲ್ಲೂ ಸದ್ದು ಮಾಡೋಕೆ ಕಾಯ್ತಿದೆ. ಌಂಡ್ ಇದೇ ಟೂರ್ನಿಯಲ್ಲೇ ಭಾರತ ಮತ್ತು ಪಾಕ್ ತಂಡಗಳು ಮತ್ತೆ ಮುಖಾಮುಖಿ ಆಗೋ ಚಾನ್ಸಸ್ ಇದೆ. ಅದು ಸೆಮಿಫೈನಲ್ ಆದ್ರೂ ಆಗ್ಬೋದು ಅಥವಾ ಫೈನಲ್ ಮ್ಯಾಚ್ ಆದ್ರೂ ಆಗ್ಬೋದು. ಆದ್ರೆ ಸೂಪರ್ 8ನಲ್ಲಿ ಅದು ಸಾಧ್ಯ ಇಲ್ಲ.

ಸೀಡಿಂಗ್ ಸಿಸ್ಟಂನಿಂದ ಸೂಪರ್-8ನಲ್ಲಿದ್ದ ಭಾರತ-ಪಾಕ್ ಫೈಟ್!

ಈಗಾಗ್ಲೇ ಸೂಪರ್ -8 ಸುತ್ತಿನಲ್ಲಿ ಭಾರತ, ಜಿಂಬಾಬ್ವೆ, ಪಾಕಿಸ್ತಾನ, ವೆಸ್ಟ್ ಇಂಡೀಸ್, ಇಂಗ್ಲೆಂಡ್, ಸೌತ್ ಆಫ್ರಿಕಾ, ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ತಂಡಗಳು ಅರ್ಹತೆ ಪಡೆದಿವೆ. ಭಾರತ ಮತ್ತು ಪಾಕ್ ಸೂಪರ್ 8ಗೆ ಸೆಲೆಕ್ಟ್ ಆಗಿದ್ರೂ ಈ ರೌಂಡ್​ನಲ್ಲಿ ಮತ್ತೆ ಮುಖಾಮುಖಿ ಆಗಲ್ಲ. ಅದಕ್ಕೆ ಕಾರಣ ಟಿ20 ವಿಶ್ವಕಪ್​ನ ಆರಂಭದಲ್ಲೇ ತಂದಿರೋ ಸೀಡಿಂಗ್ ಸಿಸ್ಟಂ. ಕಮರ್ಷಿಯಲ್ ಮತ್ತು ಟ್ರಾನ್ಸ್​ಪೋರ್ಟ್ ಅನುಕೂಲತೆಗಳಿಗಾಗಿ ಈ ಸೀಡಿಂಗ್ ಸಿಸ್ಟಂ ಅನುಸರಿಸಲಾಗ್ತಿದೆ. ಗ್ರೂಪ್- 1 ರಲ್ಲಿ ಕಣಕ್ಕಿಳಿಯುವ ತಂಡಗಳು ತನ್ನೆಲ್ಲಾ ಪಂದ್ಯಗಳನ್ನು ಭಾರತದಲ್ಲೇ ಆಡಲಿದೆ. ಹಾಗೆಯೇ ಗ್ರೂಪ್-2 ನಲ್ಲಿರುವ ತಂಡಗಳ ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿವೆ. ಸದ್ಯ ಗ್ರೂಪ್ 1ನಲ್ಲಿ ಭಾರತ, ಜಿಂಬಾಬ್ವೆ, ವೆಸ್ಟ್ ಇಂಡೀಸ್ ಮತ್ತು ಸೌತ್ ಆಫ್ರಿಕಾ ತಂಡಗಳಿವೆ. ಗ್ರೂಪ್ ಬಿನಲ್ಲಿ ಇಂಗ್ಲೆಂಡ್, ನ್ಯೂಜಿಲೆಂಡ್, ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳಿವೆ. ಹೀಗಾಗಿ ಸೂಪರ್ 8 ರೌಂಡಲ್ಲಿ ಭಾರತ-ಪಾಕ್ ಮುಖಾಮುಖಿ ಆಗೋಕೆ ಚಾನ್ಸ್ ಇಲ್ಲ. ಬಟ್ ಸೆಮೀಸ್ ಅಥವಾ ಫೈನಲ್​ನಲ್ಲಿ ಮುಖಾಮುಖಿ ಆಗಬಹುದು.

ಹೀಗಾದ್ರೆ ಮತ್ತೆ ಭಾರತ ಮತ್ತು ಪಾಕಿಸ್ತಾನ ನಡುವೆ ಫೈಟ್!

ಪ್ರಸ್ತುತ ನಡೀತಾ ಇರುವಂಥ ಟಿ-20 ವಿಶ್ವಕಪ್​ನಲ್ಲಿ ಭಾರತ ಮತ್ತು ಪಾಕಿಸ್ತಾನಕ್ಕೆ ಮತ್ತೆ ಎದುರಾಳಿಗಳಾಗೋಕೆ 2 ಚಾನ್ಸ್ ಗಳಿವೆ. ಹೇಗೆ ಅನ್ನೋದನ್ನ ನೋಡ್ತಾ ಹೋಗೋಣ. ಮೊದಲನೇದಾಗಿ ಸೆಮೀಸ್​ ಲಾಜಿಕ್ ಹೇಳಿಬಿಡ್ತೇನೆ. ಗ್ರೂಪ್​ 1ನ ಟೇಬಲ್ ಟಾಪರ್ ಗ್ರೂಪ್ 2ನ ಸೆಕೆಂಡ್ ಪ್ಲೇಸ್​ನಲ್ಲಿರೋ ಟೀಂ ಮುಖಾಮುಖಿಯಾಗುತ್ತೆ. ಹಾಗೇ ಗ್ರೂಪ್ 1ನ 2ನೇ ಪ್ಲೇಸ್​ನಲ್ಲಿರೋ ತಂಡ ಹಾಗೇ ಗ್ರೂಪ್ 2ನ ಟಾಪರ್ ಎದುರು ಬದುರಾಗ್ತಾವೆ.

ಭಾರತ-ಪಾಕ್ ಮುಖಾಮುಖಿ ಲೆಕ್ಕಾಚಾರ!

ಗ್ರೂಪ್ 1ನ ಟೇಬಲ್ ಟಾಪರ್ Vs ಗ್ರೂಪ್ 2ನ 2ನೇ ಸ್ಥಾನದ ತಂಡ

ಭಾರತ ಗ್ರೂಪ್ 1ನ ಟಾಪರ್ ಆಗಿ ಪಾಕಿಸ್ತಾನ ಗ್ರೂಪ್ 2ರಲ್ಲಿ 2ನೇ ಸ್ಥಾನ

ಗ್ರೂಪ್ 1ನಲ್ಲಿ ಭಾರತ 2ನೇ ಸ್ಥಾನದಲ್ಲಿದ್ದು ಪಾಕಿಸ್ತಾನ ಗ್ರೂಪ್ 2ನಲ್ಲಿ ಫಸ್ಟ್ ಪ್ಲೇಸ್

​ ಇಬ್ಬರೂ ಟಾಪರ್ ​ಗಳೇ ಆದ್ರೆ ಅಥವಾ ಎರಡನೇ ಸ್ಥಾನದಲ್ಲಿದ್ರೆ ಸೆಮೀಸ್ ಇಲ್ಲ

ಬೇರೆ ಬೇರೆ ತಂಡಗಳ ವಿರುದ್ಧ ಸೆಮಿಫೈನಲ್ ಗೆದ್ದು ಫೈನಲ್ ನಲ್ಲಿ ಮುಖಾಮುಖಿ

Shantha Kumari

Leave a Reply

Your email address will not be published. Required fields are marked *