KING ಬ್ಯಾಟ್ ಕಂಪ್ಲೀಟ್ ಸೈಲೆಂಟ್ – ಬೆಂಗಳೂರಲ್ಲೂ ಖಾತೆ ತೆರೆಯದೇ OUT
2024ನೇ ವರ್ಷ.. ವಿರಾಟ್ ಗಿಲ್ಲ ಅದೃಷ್ಟ
ಕ್ಲೀನ್ ಸ್ವೀಪ್ ಸ್ಟ್ರಾಟಜಿಯೊಂದಿಗೆ ನ್ಯೂಜಿಲೆಂಡ್ ವಿರುದ್ಧದ ಕದನಕ್ಕೆ ರೆಡಿಯಾಗಿದ್ದ ಟೀಂ ಇಂಡಿಯಾಗೆ ಮಳೆರಾಯ ಬಿಗ್ ಶಾಕ್ ನೀಡಿದ್ದಾನೆ. ಬೆಂಗಳೂರಿನಲ್ಲೇ ಮೊದಲ ಟೆಸ್ಟ್ ಮ್ಯಾಚ್ ಇದ್ದಿದ್ರಿಂದ ಕನ್ನಡಿಗರು ಪಂದ್ಯವನ್ನ ಕಣ್ತುಂಬಿಕೊಳ್ಳೋ ಜೋಶ್ನಲ್ಲಿದ್ರು. ಆದ್ರೆ ಜಡಿ ಹಿಡಿದ ಮಳೆಗೆ ಭಾರತ ಮತ್ತು ನ್ಯೂಝಿಲೆಂಡ್ ನಡುವಣ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಾಟ ರದ್ದಾಗಿತ್ತು. ಇದೀಗ ಎರಡನೇ ದಿನದಾಟದಲ್ಲಿ ಇನಿಂಗ್ಸ್ ಆರಂಭಿಸಿರುವ ಟೀಮ್ ಇಂಡಿಯಾಗೆ ದೊಡ್ಡ ಆಘಾತವೇ ಆಗಿದೆ. ಎರಡಂಕಿ ಮೊತ್ತ ಕಲೆಹಾಕುವಷ್ಟರಲ್ಲಿ ಅಗ್ರ ಕ್ರಮಾಂಕದ ಮೂರು ವಿಕೆಟ್ಗಳು ಉರುಳಿ ಹೋಗಿವೆ. ಇದೆಲ್ಲಕ್ಕಿಂತಲೂ ಹೆಚ್ಚಾಗಿ ಒನ್ಸ್ ಅಗೇನ್ ವಿರಾಟ್ ಕೊಹ್ಲಿ ಫೇಲ್ಯೂರ್ ಆಗಿದ್ದಾರೆ. ಅದೂ ಕೂಡ ತಮ್ಮ ನೆಚ್ಚಿನ ಸ್ಟೇಡಿಯಂ ಚಿನ್ನಸ್ವಾಮಿಯಲ್ಲಿ. ಟಿ-20 ವಿಶ್ವಕಪ್ ಫೈನಲ್ ಪಂದ್ಯದ ಬಳಿಕ ವಿರಾಟ್ ಕೊಹ್ಲಿ ಒಂದೇ ಒಂದು ಆಫ್ ಸೆಂಚುರಿಯನ್ನೂ ಹೊಡೆದಿಲ್ಲ. ಅಷ್ಟಕ್ಕೂ ಕಿವೀಸ್ ವಿರುದ್ಧದ ಪಂದ್ಯದ 2ನೇ ದಿನದಾಟದಲ್ಲಿ ಬ್ಯಾಕ್ ಟು ಬ್ಯಾಟ್ ಡಕ್ ವಿಕೆಟ್ ಉರುಳಿದ್ದೇಗೆ? ನ್ಯೂಜಿಲೆಂಡ್ ಗೇಮ್ಪ್ಲ್ಯಾನ್ ವರ್ಕೌಟ್ ಆಯ್ತಾ? ಕೊಹ್ಲಿ ಬ್ಯಾಟ್ ಸದ್ದು ಮಾಡೋಕೆ ಇನ್ನೆಷ್ಟು ದಿನ ಬೇಕು? ಈ ಬಗೆಗಿನ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಕಣ್ತೆರೆದ ನ್ಯಾಯದೇವತೆ – ಲೇಡಿ ಆಫ್ ಜಸ್ಟಿಸ್ ಗೆ ಹೊಸ ರೂಪ ಕೊಟ್ಟ ಸುಪ್ರೀಂ ಕೋರ್ಟ್
ಮಳೆ ಕಣ್ಣಾಮುಚ್ಚಾಲೆ ನಡುವೆಯೇ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ನ್ಯೂಝಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾಗೆ ಆರಂಭದಲ್ಲೇ ಬಿಗ್ ಶಾಕ್ ತಟ್ಟಿದೆ. ಟಾಸ್ ಗೆದ್ದ ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಭಾರತದ ಆಟಗಾರರು ಪೆವಿಲಿಯನ್ ಪರೇಡ್ ನಡೆಸಿದ್ದಾರೆ. ರೋಹಿತ್ ಶರ್ಮಾ ಕೇವಲ 2 ರನ್ಗಳಿಸಿ ಟಿಮ್ ಸೌಥಿ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಬಳಿಕ ಕ್ರೀಸ್ಗೆ ಬಂದ ವಿರಾಟ್ ಕೊಹ್ಲಿ ಮೇಲೆ ತುಂಬಾನೇ ನಿರೀಕ್ಷೆ ಇಡಲಾಗಿತ್ತು. ಚಿನ್ನಸ್ವಾಮಿ ಕ್ರೀಡಾಂಗಣ ಅವ್ರ ಫೇವರೆಟ್ ಮೈದಾನ. ಇಲ್ಲಿ ಕೊಹ್ಲಿ ಬ್ಯಾಟ್ ಸದ್ದು ಮಾಡುತ್ತೆ ಅಂತಾನೇ ಎಲ್ರೂ ಅನ್ಕೊಂಡಿದ್ರು. ಬಟ್ ವಿರಾಟ್ ಖಾತೆ ತೆರೆಯದೇ ನಿರಾಸೆ ಮೂಡಿಸಿದ್ರು. 9 ಬಾಲ್ ಫೇಸ್ ಮಾಡಿದ ವಿರಾಟ್ ಒಂದೂ ರನ್ ಹೊಡೆಯದೆ ಕ್ಯಾಚ್ ಕೊಟ್ಟು ಪೆವಿಲಿಯನ್ ಸೇರಿದ್ರು. ಇನ್ನು ಶುಭ್ಮನ್ ಗಿಲ್ ಬದಲಿಯಾಗಿ ತಂಡದಲ್ಲಿ ಅವಕಾಶ ಪಡೆದ ಸರ್ಫರಾಝ್ ಖಾನ್ ಕೂಡ ಸೊನ್ನೆ ಸುತ್ತಿದ್ರು. ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸ್ಗೆ ಬಂದ ಸರ್ಫರಾಜ್, 3 ಎಸೆತಗಳಲ್ಲಿ ಖಾತೆ ತೆರೆಯದೇ ಡಕ್ ಔಟ್ ಆದ್ರು. ಅಂದರೆ ಭಾರತ ತಂಡವು ಕೇವಲ 13 ರನ್ಗಳಿಸುವಷ್ಟರಲ್ಲಿ 3 ಪ್ರಮುಖ ವಿಕೆಟ್ ಕಳೆದುಕೊಂಡಿದೆ. ಈ ಮೂವರಲ್ಲಿ ಇಬ್ಬರು ಡಕ್ ಔಟ್ ಆಗಿರುವುದು ವಿಶೇಷ. ಇನ್ನು 12 ಓವರ್ಗಳ ಮುಕ್ತಾಯದ ವೇಳೆಗೆ ಟೀಮ್ ಇಂಡಿಯಾ 13 ರನ್ ಕಲೆಹಾಕಿದ್ದು, ಕ್ರೀಸ್ನಲ್ಲಿ ಯಶಸ್ವಿ ಜೈಸ್ವಾಲ್ 8 ರನ್ ಹಾಗೂ ರಿಷಭ್ ಪಂತ್ ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಸದ್ಯ ಮಳೆ ಕಾರಣದಿಂದ ಪಂದ್ಯ ಸ್ಥಗಿತಗೊಂಡಿದೆ. 13 ರನ್ಗೆ ಭಾರತ 3 ವಿಕೆಟ್ ಕಳೆದುಕೊಂಡಿದೆ ಅನ್ನೋದಕ್ಕಿಂತ ಜಾಸ್ತಿ ಶಾಕಿಂಗ್ ಆಗಿರೋದು ವಿರಾಟ್ ಕೊಹ್ಲಿಯವ್ರ ಪ್ರದರ್ಶನ.
ಫೇವರೆಟ್ ಗ್ರೌಂಡ್ ನಲ್ಲೂ ಕೊಹ್ಲಿ ಬ್ಯಾಟ್ ಸೈಲೆಂಟ್!
ರನ್ ಮೆಷಿನ್ ಅಂತಾನೇ ಕರೆಸಿಕೊಳ್ಳೋ ವಿರಾಟ್ ಕೊಹ್ಲಿ ಕ್ರಿಕೆಟ್ ಜಗತ್ತಿನಲ್ಲಿ ಒಂದೊಂದೇ ಮೈಲಿಗಲ್ಲು ಸಾಧಿಸುತ್ತಿದ್ದಾರೆ. ವಿರಾಟ್ ಕೊಹ್ಲಿಯ ಎರಡನೇ ತವರುಮನೆಯೆಂದೇ ಫೇಮಸ್ ಆಗಿರೋ ಬೆಂಗಳೂರಲ್ಲಿ ಅವ್ರ ಪರ್ಫಾಮೆನ್ಸ್ ಇನ್ನೂ ಕೈ ಜಾಸ್ತಿ ಎನ್ನುವಂತೆಯೇ ಇರ್ತಿತ್ತು. ಆದ್ರೆ ವಿರಾಟ್ ಕೊಹ್ಲಿ ನ್ಯೂಜಿಲೆಂಡ್ ವಿರುದ್ಧ ಸಿಡಿದೇಳ್ತಾರೆ, ತಮ್ಮ ಮೇಲಿನ ಕಳಂಕವನ್ನ ತನ್ನ ಫೆವರೇಟ್ ಗ್ರೌಂಡನಲ್ಲಿಯೇ ಅಳಿಸಿಹಾಕ್ತಾರೆ ಅನ್ಕೊಂಡಿದ್ದ ಅಬಿಮಾನಿಗಳಿಗೆ ಮತ್ತದೇ ನಿರಾಸೆಯಾಗಿದೆ.
2024ರಲ್ಲಿ ನಡೆದ ಟೆಸ್ಟ್ ನಲ್ಲಿ ಒಂದೂ ಹಾಫ್ ಸೆಂಚುರಿ ಸಿಡಿಸಿಲ್ಲ!
ಇತ್ತೀಚಿಗಿನ ದಿನಗಳಲ್ಲಿ ವಿರಾಟ್ ಕೊಹ್ಲಿ, ಟೆಸ್ಟ್ ಕ್ರಿಕೆಟ್‌ನಲ್ಲಿ ನಿರೀಕ್ಷಿತ ರನ್ ಬಾರಿಸುತ್ತಿಲ್ಲ. ಮುಂಬರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗೂ ಮುನ್ನ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಫಾರ್ಮ್‌ಗೆ ಮರಳುವುದು ಭಾರತದ ಪಾಲಿಗೆ ಮಹತ್ವದ್ದೆನಿಸಿದೆ. ವಿರಾಟ್ ಕೊಹ್ಲಿ ಈ ವರ್ಷ ಟೆಸ್ಟ್‌ನಲ್ಲಿ ಒಂದೇ ಒಂದು ಅರ್ಧಶತಕ ಗಳಿಸಿಲ್ಲ. 2024ರಲ್ಲಿ ಆರು ಇನ್ನಿಂಗ್ಸ್ ಆಡಿದ್ದ ವಿರಾಟ್ ದಕ್ಷಿಣ ಆಫ್ರಿಕಾ ವಿರುದ್ಧ 46 ರನ್ ಗಳಿಸಿದ್ದರು. ಹಾಗೂ ಬಾಂಗ್ಲಾದೇಶ ವಿರುದ್ಧ 47 ರನ್ ಗಳಿಸಿರುವುದೇ ಕೊಹ್ಲಿ ಅವರ ಗರಿಷ್ಠ ರನ್ ಗಳಾಗಿದೆ. ಒಂದೇ ಒಂದು ಶತಕ ಬಿಡಿ, ಅರ್ಧಶತಕ ಕೂಡಾ ರನ್ ಮೆಷಿನ್ ಬ್ಯಾಟ್ ನಿಂದ ಬಂದಿಲ್ಲ. ಇದೀಗ ತನ್ನ ಎರಡನೇ ತವರು ಎನಿಸಿಕೊಂಡಿರುವ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ವಿರಾಟ್ ಕೊಹ್ಲಿ ಈ ವರ್ಷದ ಮೊದಲ ಅರ್ಧಶತಕ ಪೂರೈಸೋದನ್ನೇ ಎದುರು ನೋಡ್ತಿದ್ರು. ವಿರಾಟ್ ಕೊಹ್ಲಿ ವಿರಾಟ್ ರೂಪ ನೋಡಲು ದೇಶದ ಕೋಟ್ಯಂತರ ಫ್ಯಾನ್ಸ್ ಕಾಯ್ತಿದ್ರು. ಜೊತೆಗೆ ಸ್ವತಃ ಕೊಹ್ಲಿ ಕೂಡಾ ಬ್ಯಾಟ್ ನಿಂದ ಸದ್ದು ಮಾಡಲು ಕಾಯ್ತಿದ್ದಾರೆ. ಆದ್ರೆ ಈ ನಿರೀಕ್ಷೆ ಮತ್ತೊಮ್ಮೆ ಹುಸಿಯಾಗಿದೆ. ಅರ್ಧಸೆಂಚುರಿ ಇರ್ಲಿ ಖಾತೆ ತೆರೆಯೋಕೂ ಕೂಡ ಸಾಧ್ಯವಾಗಿಲ್ಲ.
ಮಹೇಂದ್ರ ಸಿಂಗ್ ಧೋನಿಯನ್ನು ಹಿಂದಿಕ್ಕಿದ ವಿರಾಟ್!
ಕಿವೀಸ್ ವಿರುದ್ಧದ ಪಂದ್ಯದಲ್ಲಿ ರನ್ ಗಳಿಸೋಕೆ ಆಗದೇ ಇದ್ರೂ ವಿರಾಟ್ ಕೊಹ್ಲಿ ಮಹೇಂದ್ರ ಸಿಂಗ್ ಧೋನಿಯವ್ರ ದಾಖಲೆಯನ್ನ ಸರಿಗಟ್ಟಿದ್ದಾರೆ. ಅಂದರೆ ಟೀಮ್ ಇಂಡಿಯಾ ಪರ ಅತೀ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ ಆಟಗಾರರ ಪಟ್ಟಿಯಲ್ಲಿ ಇದೀಗ ವಿರಾಟ್ ಕೊಹ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಮಹೇಂದ್ರ ಸಿಂಗ್ ಧೋನಿಯ ಹೆಸರಿನಲ್ಲಿತ್ತು. 2004 ರಿಂದ 2019 ರವರೆಗೆ ಟೀಮ್ ಇಂಡಿಯಾ ಪರ ಕಣಕ್ಕಿಳಿದಿದ್ದ ಧೋನಿ ಒಟ್ಟು 535 ಪಂದ್ಯಗಳನ್ನಾಡಿದ್ದಾರೆ. ಈ ಮೂಲಕ ಟೀಮ್ ಇಂಡಿಯಾ ಪರ ಅತೀ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ 2ನೇ ಆಟಗಾರ ಎನಿಸಿಕೊಂಡಿದ್ದರು. ಇದೀಗ ಈ ದಾಖಲೆಯನ್ನು ಮುರಿಯುವಲ್ಲಿ ವಿರಾಟ್ ಕೊಹ್ಲಿ ಯಶಸ್ವಿಯಾಗಿದ್ದಾರೆ. ನ್ಯೂಝಿಲೆಂಡ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಕಿಂಗ್ ಕೊಹ್ಲಿ ಒಟ್ಟು 536 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ ಸಾಧನೆ ಮಾಡಿದ್ದಾರೆ. ಈ ಮೂಲಕ ಭಾರತದ ಪರ ಅತ್ಯಧಿಕ ಇಂಟರ್ನ್ಯಾಷನಲ್ ಮ್ಯಾಚ್ಗಳನ್ನು ಆಡಿದ 2ನೇ ಆಟಗಾರ ಎಂಬ ದಾಖಲೆ ಬರೆದಿದ್ದಾರೆ. ಇನ್ನು ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್. 1989 ರಿಂದ 2013 ರವರೆಗೆ ಭಾರತ ತಂಡವನ್ನು ಪ್ರತಿನಿಧಿಸಿದ್ದ ಸಚಿನ್ ಒಟ್ಟು 664 ಪಂದ್ಯಗಳನ್ನಾಡಿದ್ದಾರೆ. ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ಪಂದ್ಯಗಳನ್ನಾಡಿದ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
9 ಸಾವಿರ ರನ್ ಪೂರೈಸ್ತಾರಾ ವಿರಾಟ್ ಕೊಹ್ಲಿ?
ವಿರಾಟ್ ಕೊಹ್ಲಿ ಇದುವರೆಗೆ 115 ಟೆಸ್ಟ್‌ಗಳನ್ನ ಆಡಿದ್ದಾರೆ. ಇದುವರೆಗೆ 8947 ರನ್ ಗಳಿಸಿದ್ದಾರೆ. ಇದರಲ್ಲಿ 29 ಶತಕಗಳು ಮತ್ತು 30 ಅರ್ಧ ಶತಕಗಳು ಸೇರಿವೆ. ಕಿವೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ಕೇವಲ 53 ರನ್ ಬಾರಿಸಿದರೆ ಸಾಕು, ಟೆಸ್ಟ್ ಕ್ರಿಕೆಟ್‌ನಲ್ಲಿ 9,000 ರನ್ ಕ್ಲಬ್‌ಗೆ ಸೇರ್ಪಡೆಗೊಳ್ಳಲಿದ್ದಾರೆ. ಭಾರತದ ಪರವಾಗಿ ಈ ಅಪರೂಪದ ಸಾಧನೆ ಮಾಡಿದ ನಾಲ್ಕನೇ ಆಟಗಾರ ಎಂಬ ದಾಖಲೆಗೆ ಕೊಹ್ಲಿ ಪಾತ್ರರಾಗಲಿದ್ದಾರೆ. ಈಗಾಗಲೇ ಟೆಸ್ಟ್ ಮಾದರಿಯಲ್ಲಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ 15,921 ರನ್ಗಳಿಸಿ, ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ದಿ ವಾಲ್ ರಾಹುಲ್ ದ್ರಾವಿಡ್ 13,265 ರನ್ ಗಳಿಸಿ ಸೆಕೆಂಡ್ ಪ್ಲೇಸ್ ನಲ್ಲಿದ್ದಾರೆ. ಮತ್ತು ಲಿಟಲ್ ಮಾಸ್ಟರ್ ಸುನಿಲ್ ಗವಾಸ್ಕರ್ 10,122 ರನ್ ಗಳಿಸಿ ವಿರಾಟ್‌ಗಿಂತ ಮುಂದಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ವಿರಾಟ್ 9000 ರನ್ ಗಡಿ ಮುಟ್ಟಿದರೆ ಈ ಸಾಧನೆಗೈದ ದಿಗ್ಗಜರ ಪಟ್ಟಿಗೆ ಸೇರಲಿದ್ದಾರೆ.
ಒಟ್ನಲ್ಲಿ ಕಿವೀಸ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ಆಟಗಾರರಿಗೆ ದೊಡ್ಡ ಆಘಾತವೇ ಎದುರಾಗಿದೆ. ವಿರಾಟ್ ಕೂಡ ಡಕ್ಔಟ್ ಆಗಿರೋದು ಅಭಿಮಾನಿಗಳಿಗೂ ಬೇಸರ ಮೂಡಿಸಿದೆ.