ವೈಜಾಗ್ ನಲ್ಲಿ ಸೇಡಿನ ಸಮರ – ವೈಟ್ ವಾಶ್ ಮಾಡಿದ್ರಷ್ಟೇ ಸಮಾಧಾನ!
ಪ್ಲೇಯಿಂಗ್ 11ನಲ್ಲಿ ಯಾರೆಲ್ಲಾ ಡ್ರಾಪ್?

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟಿ-20ಐ ಸರಣಿಯನ್ನ ಭಾರತ ಆಲ್ರೆಡಿ ಗೆದ್ದಿದೆ. ಸರಣಿಯ ನಾಲ್ಕನೇ ಪಂದ್ಯ ಇವತ್ತು ವಿಶಾಖಪಟ್ಟಣದಲ್ಲಿ ನಡೆಯಲಿದೆ. ಹೇಳಿ ಕೇಳಿ ವೈಜಾಗ್ ಪಿಚ್ ಬ್ಯಾಟಿಂಗ್ ಫ್ರೆಂಡ್ಲಿ. ಐಪಿಎಲ್ನಲ್ಲೇ ಇಲ್ಲಿ ದಾಖಲೆ ಮಟ್ಟದ ರನ್ಸ್ ಬಂದಿದೆ. ಈಗ ಟೀಂ ಇಂಡಿಯಾ ಇರೋ ಫಾರ್ಮ್ ನೋಡಿದ್ರೆ ಮತ್ತೊಂದು ಬಿಗ್ ಸ್ಕೋರ್ ಪಕ್ಕಾ ಎನ್ನುವಂತಿದೆ. ಈ ಪಂದ್ಯಕ್ಕೆ ಪ್ಲೇಯಿಂಗ್ 11ನಲ್ಲಿ ಕೆಲ ಬದಲಾವಣೆಗಳಾಗೋ ಚಾನ್ಸಸ್ ಕೂಡ ಇದೆ.
ಇದನ್ನೂ ಓದಿ : ಅಂಡರ್-19 ವಿಶ್ವಕಪ್ನಲ್ಲಿ ವೈಭವ್ ಆರ್ಭಟ – 308 ಸ್ಟ್ರೈಕ್ ರೇಟ್.. 24 ಎಸೆತಗಳಲ್ಲಿ ಅರ್ಧಶತಕ
ನ್ಯೂಜಿಲೆಂಡ್ ವಿರುದ್ಧದ ಟಿ-20 ಸರಣಿಯನ್ನ 3-0 ಅಂತರದಲ್ಲಿ ವಶಪಡಿಸಿಕೊಂಡಿರೋ ಭಾರತ ಇವತ್ತು ನಾಲ್ಕನೇ ಪಂದ್ಯವನ್ನೂ ಗೆದ್ದು ಡಾಮಿನೇಷನ್ ಮಾಡೋಕೆ ಎದುರು ನೋಡ್ತಿದೆ. ಌಂಡ್ ಕೊನೆಯ ಎರಡು ಪಂದ್ಯಗಳಲ್ಲಿ ಪ್ಲೇಯಿಂಗ್ 11ನಲ್ಲಿ ಒಂದಷ್ಟು ಚೇಂಜಸ್ ಮಾಡಲಿದೆ. ಟಿ-20 ವಿಶ್ವಕಪ್ನಲ್ಲಿ ಟೀಂ ಇಂಡಿಯಾ ಕೀ ಪ್ಲೇಯರ್ಗಳ ಫಿಟ್ನೆಸ್ ಹಾಗೇ ಬೆಂಚ್ ಕಾಯಿಸ್ತಿರೋ ಆಟಗಾರರಿಗೂ ಚಾನ್ಸ್ ಕೊಡೋ ನಿಟ್ಟಿನಲ್ಲಿ ಬದಲಾವಣೆಗೆ ಮುಂದಾಗಿದೆ.
ಭಾರತದ ಪ್ಲೇಯಿಂಗ್ 11 ನಲ್ಲಿ ಮೂರು ಬದಲಾವಣೆ!
ಮೂರು ಪಂದ್ಯಗಳಲ್ಲಿ ಸತತವಾಗಿ ಗೆದ್ದಿರುವ ಭಾರತ ನಾಲ್ಕನೇ ಪಂದ್ಯಕ್ಕೂ ಮುನ್ನ ತಂಡದಲ್ಲಿ ಕೆಲ ಚೇಂಜಸ್ ಮಾಡಲಿದೆ. ಆಲ್-ರೌಂಡರ್ ಹಾರ್ದಿಕ್ ಪಾಂಡ್ಯ ಅವರಿಗೆ ಇಂದಿನ ಪಂದ್ಯದಿಂದ ವಿಶ್ರಾಂತಿ ನೀಡಬಹುದು. ಹಾರ್ದಿಕ್ ಸ್ಥಾನಕ್ಕೆ ಅಕ್ಷರ್ ಪಟೇಲ್ ಕಂ ಬ್ಯಾಕ್ ಮಾಡಬಹುದು. ಇನ್ನು ಬೆಂಚ್ ಕಾಯಿಸ್ತಿರೋ ಶ್ರೇಯಸ್ ಅಯ್ಯರ್ಗೂ ಅವಕಾಶ ನಿಡೋ ಚಿಂತನೆ ಇದೆ. ಮತ್ತೊಂದೆಡೆ ಕಳೆದ ಮೂರು ಪಂದ್ಯಗಳಲ್ಲಿ ಸಂಜು ಸ್ಯಾಮ್ಸನ್ ಕಡೆಯಿಂದ ಬಿಗ್ ಇನ್ನಿಂಗ್ಸ್ ಬಂದಿಲ್ಲ. ಹೀಗಿದ್ರೂ ಉಳಿದಿರೋ 2 ಪಂದ್ಯಗಳಲ್ಲೂ ಸಂಜುರನ್ನ ಆಡಿಸಲೇಬೇಕಿದೆ. ಟು ಮೋರ್ ಚಾನ್ಸಸ್ ಕೊಡ್ಲೆಬೇಕಾಗುತ್ತೆ. ಯಾಕಂದ್ರೆ ಸಂಜು ಕೂಡ ಫಾರ್ಮ್ಗೆ ಬರಬೇಕು. ಇನ್ನು ಬೌಲಿಂಗ್ ಬ್ರಹ್ಮಾಸ್ತ್ರವಾಗಿರೋ ಜಸ್ಪ್ರೀತ್ ಬುಮ್ರಾಗೂ ಈ ಪಂದ್ಯದಲ್ಲಿ ರೆಸ್ಟ್ ಸಿಗಬಹುದು. ಬದಲಿಗೆ ಅರ್ಷದೀಪ್ ಆಡುವ ಅವಕಾಶ ಪಡೆಯಲಿದ್ದಾರೆ. ಹೀಗೆ ಟೀಂ ಇಂಡಿಯಾದ ರಿದಮ್ನ ಹಾಗೇ ಕಾಪಾಡಿಕೊಳ್ಳೋದ್ರ ಜೊತೆಗೆ ಫೇಲ್ಯೂರ್ ಆದವ್ರು ಬೆಂಚ್ ಕಾದವ್ರನ್ನೂ ಆಡಿಸಬೇಕಾಗಿದೆ.
ಭಾರತದ ಸಂಭಾವ್ಯ ಪ್ಲೇಯಿಂಗ್ 11
ಸಂಜು ಸ್ಯಾಮ್ಸನ್
ಅಭಿಷೇಕ್ ಶರ್ಮಾ
ಇಶಾನ್ ಕಿಶನ್
ಸೂರ್ಯಕುಮಾರ್ ಯಾದವ್
ಶ್ರೇಯಸ್ ಅಯ್ಯರ್
ಶಿವಂ ದುಬೆ
ಅಕ್ಷರ್ ಪಟೇಲ್
ರವಿ ಬಿಷ್ಣೋಯ್
ಕುಲ್ದೀಪ್ ಯಾದವ್
ಹರ್ಷಿತ್ ರಾಣಾ
ಅರ್ಷದೀಪ್ ಸಿಂಗ್
ಪ್ಲೇಯಿಂಗ್ 11ನಲ್ಲಿ ಬದಲಾವಣೆ ಮಾಡಿದ್ರೂ ಭಾರತವೇ ಗೆಲ್ಲುವಂಥ ಫೇವರೆಟ್ ಟೀಂ ಆಗಿದೆ. ಅದ್ರಲ್ಲೂ ವೈಜಾಗ್ ಪಿಚ್ನಲ್ಲಂತೂ ಫಸ್ಟ್ ಬ್ಯಾಟಿಂಗ್ ಮಾಡವ್ರು ಬಿಗ್ ಟಾರ್ಗೆಟ್ ಸೆಟ್ ಮಾಡ್ಲೇಬೇಕು. ಯಾಕಂದ್ರೆ ಈ ಪಿಚ್ ಬ್ಯಾಟಿಂಗ್ ಫ್ರೆಂಡ್ಲಿ ಆಗಿರೋದ್ರಿಂದ ಬಿಗ್ ಸ್ಕೋರ್ ಬರುತ್ತೆ. ಐಪಿಎಲ್ ನಲ್ಲೇ ಸಾಕಷ್ಟು ಬಾರಿ ದಾಖಲೆಯ ನಂಬರ್ಸ್ ಬಂದಿದೆ.
ಐಪಿಎಲ್ ನಲ್ಲಿ ದಾಖಲೆಯ ರನ್ಸ್.. ಟಿ-20ಐನಲ್ಲೂ ಅದ್ಭುತ ಸ್ಕೋರ್!
ವೈಜಾಗ್ ಪಿಚ್ ಬ್ಯಾಟರ್ಗಳ ಪಾಲಿನ ಸ್ವರ್ಗದಂತಿದ್ದು ಈ ಮೈದಾನದಲ್ಲಿ ಬಿಗ್ ಸ್ಕೋರ್ ಬರುತ್ತೆ. ಐಪಿಎಲ್ನಲ್ಲೂ ಸಾಕಷ್ಟು ಸಲ ಇದು ಪ್ರೂವ್ ಆಗಿದೆ. 2024ರಲ್ಲಿ ಕೆಕೆಆರ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 7 ವಿಕೆಟ್ ನಷ್ಟಕ್ಕೆ 272 ರನ್ಗಳನ್ನ ಕಲೆ ಹಾಕಿತ್ತು. ಐಪಿಎಲ್ ಇತಿಹಾಸದಲ್ಲಿ ಇದು ಐದನೇ ಅತಿಹೆಚ್ಚು ರನ್ಸ್ ಸ್ಕೋರ್ ದಾಖಲೆಯಾಗಿದೆ. ಇನ್ನು ಈ ಪಂದ್ಯದಲ್ಲಿ ಡೆಲ್ಲಿ 166 ರನ್ಗಳಿಗೆ ಆಲೌಟ್ ಆಗಿ ಸೋತಿದೆ. ಅದ್ರಲ್ಲೂ 2025ರ ಐಪಿಎಲ್ನಲ್ಲಿ ಮೂರು ಬಾರಿ ಈ ಪಿಚ್ನಲ್ಲಿ ಫಸ್ಟ್ ಇನ್ನಿಂಗ್ಸ್ನಲ್ಲಿ 200ಪ್ಲಸ್ ಸ್ಕೋರ್ ಬಂದಿದೆ.ಇನ್ನು ಈ ಪಿಚ್ನಲ್ಲಿ ಟಿ-20ಐ ಮಾದರಿಯಲ್ಲಿ ಹೈಯೆಸ್ಟ್ ಸ್ಕೋರ್ ಅಂದ್ರೆ ಅದು ಆಸ್ಟ್ರೇಲಿಯಾ ತಂಡ 2023ರಲ್ಲಿ ಭಾರತದ ವಿರುದ್ಧ ಫಸ್ಟ್ ಬ್ಯಾಟಿಂಗ್ ಮಾಡಿ 3 ವಿಕೆಟ್ ನಷ್ಟಕ್ಕೆ 208 ರನ್ಸ್ ಕಲೆ ಹಾಕಿತ್ತು. ಬಟ್ ಆ ಪಂದ್ಯದಲ್ಲಿ ಭಾರತ ಟಾರ್ಗೆಟ್ ಚೇಸ್ ಮಾಡಿ ಗೆದ್ದಿದೆ. ಌಂಡ್ ಈ ಮ್ಯಾಚಲ್ಲಿ ಇಶಾನ್ ಕಿಶನ್ ಮತ್ತು ಸೂರ್ಯಕುಮಾರ್ ಯಾದವ್ ಮ್ಯಾಚ್ ವಿನ್ನರ್ಸ್ ಆಗಿದ್ರು. ಕಿಶನ್ 39 ಬಾಲಲ್ಲಿ 58 ರನ್ಸ್ ಹೊಡೆದ್ರೆ ಸೂರ್ಯ 42 ಬಾಲಲ್ಲಿ 80 ರನ್ಸ್ ಹೊಡೆದು ಪಂದ್ಯ ಗೆಲ್ಲಿಸಿದ್ರು. ಇನ್ನು ಈ ಗ್ರೌಂಡಲ್ಲಿ ಭಾರತ 4 ಟಿ-20ಐ ಪಂದ್ಯಗಳನ್ನ ಆಡಿದೆ. ಌಂಡ್ ಮೂರರಲ್ಲಿ ಗೆಲುವು ಕಂಡಿದೆ. ಸೋ ಅಲ್ಲಿಗೆ ಈ ಮೈದಾನದಲ್ಲಿ ಭಾರತದ ರೆಕಾರ್ಡ್ಸ್ ಚೆನ್ನಾಗೇ ಇದೆ. ಹೀಗಾಗಿ ನಾಲ್ಕನೇ ಪಂದ್ಯದಲ್ಲೂ ಗೆದ್ದು ಭಾರತ ಸೇಡು ತೀರಿಸಿಕೊಳ್ಬೇಕಿದೆ.
ಕ್ಲೀನ್ ಸ್ವೀಪ್ ಟಾರ್ಗೆಟ್!
- ಟೆಸ್ಟ್ ಮತ್ತು ಏಕದಿನ ಸರಣಿ ಸೋಲಿಗೆ ಕ್ಲೀನ್ ಸ್ವೀಪ್ ಸೇಡು
- ಭಾರತದ ವಿನ್ನಿಂಗ್ ಟ್ರ್ಯಾಕ್ ಹಾಗೇ ಕಂಟಿನ್ಯೂ ಆಗಬೇಕು
- ಅಜೇಯವಾಗಿ ಸರಣಿ ಗೆದ್ದು ಟಿ-20 ವಿಶ್ವಕಪ್ ಗೆ ಎಂಟ್ರಿ

ನೋಡಿರಿ

