NZ ಬಗ್ಗು ಬಡಿದ್ರೆ ಕಪ್ ನಮ್ದೇ – ಫೈನಲ್ ನಲ್ಲೂ ಕಾಡ್ತಾರಾ ಕಿವೀಸ್?
ಚಾಂಪಿಯನ್ ಪಟ್ಟಕ್ಕೆ ಚಾಲೆಂಜ್ ಏನು?

ಟೀಂ ಇಂಡಿಯಾ ಫ್ಯಾನ್ಸ್ ಈಗ ಫುಲ್ ರಿಲ್ಯಾಕ್ಸ್ ಮೂಡ್ನಲ್ಲಿದ್ದಾರೆ. ಎಲ್ಲರ ಕಣ್ಣು ಈಗ ಫೈನಲ್ ಪಂದ್ಯದ ಕಡೆ ನೆಟ್ಟಿದೆ. ಸತತ ಎರಡನೇ ಬಾರಿ ಫೈನಲ್ಗೆ ಬಂದಿರೋ ಟೀಂ ಇಂಡಿಯಾ ಬಾಯ್ಸ್ ಚಾಂಪಿಯನ್ ಪಟ್ಟದ ಮೇಲೆ ಕಣ್ಣಿಟ್ಟಿದ್ದಾರೆ. ಭಾರತಕ್ಕೆ ಫೈಟ್ ಕೊಡೋಕೆ ನ್ಯೂಜಿಲೆಂಟ್ ಟೀಂ ರೆಡಿಯಾಗಿದೆ. ಇದುವರೆಗೂ ಮೆನ್ ಇನ್ ಬ್ಲ್ಯೂ ಬಾಯ್ಸ್ ಮತ್ತು ಬ್ಲ್ಯಾಕ್ ಕ್ಯಾಪ್ಸ್ ಈ ಫಾರ್ಮೆಟ್ನಲ್ಲಿ ಫೈನಲ್ನಲ್ಲಿ ಒಮ್ಮೆಯೂ ಮುಖಾಮುಖಿ ಆಗಿಯೇ ಇಲ್ಲ.
ಇದನ್ನೂ ಓದಿ : ಬುಮ್ರಾ ಬೌಲ್.. ಅಕ್ಷರ್ ಕ್ಯಾಚ್ – ಆಂಗ್ಲರಿಗೆ ಮುಳುವಾಗಿದ್ದೇ ಸಂಜು ರನ್ಸ್
2026ರ ಟಿ-20 ವಿಶ್ವಕಪ್ ಟೂರ್ನಿ ಸಿಕ್ಕಾಪಟ್ಟೆ ಮಜಾ ಇದೆ. ಒಂದೊಂದು ಪಂದ್ಯಗಳೂ ರೆಕಾರ್ಡ್ ಬ್ರೇಕಿಂಗ್ ಮ್ಯಾಚ್ಗಳೇ ಆಗಿವೆ. ಸೆಮಿಫೈನಲ್ನ ಎರಡೂ ಪಂದ್ಯಗಳೂ ಇದಕ್ಕೆ ಹೊರತಾಗಿರಲಿಲ್ಲ. ಸೌತ್ ಆಫ್ರಿಕಾ ವಿರುದ್ಧ ಒನ್ ಸೈಡೆಡ್ ಆಗಿ ಗೆದ್ದು ಬಂದಿರೋ ನ್ಯೂಜಿಲೆಂಡ್ ಹಾಗೇ ಇಂಗ್ಲೆಂಡ್ ವಿರುದ್ಧ ಗೆದ್ದು ಬೀಗಿರೋ ಭಾರತ ಇಬ್ರೂ ಕೂಡ ಮೋಸ್ಟ್ ಡೇಂಜರಸ್ ಆಗೇ ಕಾಣ್ತಿದ್ದಾರೆ. ಌಂಡ್ ಟ್ರೋಫಿ ಎತ್ತಿ ಹಿಡಿಯೋಕೆ ಚಾಲೆಂಜ್ಗಳೂ ಇವೆ.
ಭಾರತಕ್ಕಿದೆ ಚಾಂಪಿಯನ್ ಪಟ್ಟ ಉಳಿಸಿಕೊಳ್ಳೋ ಚಾಲೆಂಜ್!
ಈ ಬಾರಿಯ ಟೂರ್ನಿ ಆರಂಭಕ್ಕೂ ಮುನ್ನ ಟ್ರೋಫಿ ಗೆಲ್ಲೋ ಮೋಸ್ಟ್ ಫೇವರೆಟ್ ಟೀಂ ಆಗಿ ಕಂಡಿದ್ದೇ ಟೀಂ ಇಂಡಿಯಾ. ಯಾಕಂದ್ರೆ 2024ರ ಟಿ-20 ವಿಶ್ವಕಪ್ ಬಳಿಕ ಟಿ-20ಐ ಫಾರ್ಮೆಟ್ನಲ್ಲಿ ಭಾರತದ ಜರ್ನಿಯೇ ಹಾಗಿತ್ತು. ಒಂದೇ ಒಂದು ಸರಣಿಯನ್ನೂ ಸೋಲದೆ ಪ್ರತಿಷ್ಠಿತ ಟೂರ್ನಿಗೆ ಕಾಲಿಟ್ಟಿದ್ರು. ಗ್ರೂಪ್ ಸ್ಟೇಜಲ್ಲೂ ಸೋಲನ್ನೇ ಕಾಣದೆ ಸೂಪರ್ 8ಗೆ ಬಂದಿದ್ರು. ಆದ್ರೆ ಸೂಪರ್ 8ನಲ್ಲಿ ಫಸ್ಟ್ ಮ್ಯಾಚಲ್ಲೇ ಸೌತ್ ಆಫ್ರಿಕಾ ಸೋಲಿನ ಶಾಕ್ ಕೊಟ್ಟಿತ್ತು. ಅದೂ ಕೂಡ ಹೀನಾಯ ಸೋಲಿನ ಶಾಕ್. ಬಟ್ ನೆಕ್ಸ್ಟ್ ಪಂದ್ಯದಿಂದಲೇ ಕಮ್ ಬ್ಯಾಕ್ ಮಾಡಿದ ಭಾರತ ಜಿಂಬಾಬ್ವೆ ವಿರುದ್ಧ ದಾಖಲೆಯ ರನ್ ಗಳಿಸಿ ಗೆಲ್ತಾರೆ. ವೆಸ್ಟ್ ಇಂಡೀಸ್ ವಿರುದ್ಧ ಡು ಆರ್ ಡೈ ಗೇಮಲ್ಲಿ ಗೆದ್ದು ಸೆಮೀಸ್ಗೆ ಬರ್ತಾರೆ. ಬಟ್ ಸೆಮೀಸ್ ಮ್ಯಾಚ್ ಭಾರತಕ್ಕೆ ಪಾಸಿಟಿವ್ ಜೊತೆ ಟೆನ್ಷನ್ ಕೂಡ ಕೊಟ್ಟಿದೆ. ಯಾಕಂದ್ರೆ ಬ್ಯಾಟಿಂಗ್ನಲ್ಲಿ 250+ ರನ್ಸ್ ಹೊಡೆದ್ರೂ ಅದನ್ನ ಡಿಫೆನ್ಸ್ ಮಾಡಿಕೊಳ್ಳೋದು ಅಷ್ಟು ಈಸಿ ಇರ್ಲಿಲ್ಲ. ಬೌಲಿಂಗ್ನಲ್ಲಿ ಸಿಕ್ಕಾಪಟ್ಟೆ ಎಕ್ಸ್ಪೆನ್ಸಿವ್ ಆದ್ದು. ಲಾಸ್ಟ್ ಮೂಮೆಂಟ್ನಲ್ಲಿ ಕೆಲ ಟರ್ನಿಂಗ್ ಪಾಯಿಂಟ್ಗಳು ಭಾರತದ ಪರ ಮ್ಯಾಚ್ ಶಿಫ್ಟ್ ಮಾಡ್ತು. ಸೋ ಭಾರತ ಈ ಪಂದ್ಯದ ಬಳಿಕ ರಿಲ್ಯಾಕ್ಸ್ ಆಗಿದ್ರೂ ಮುಂದಿನ ಪಂದ್ಯಕ್ಕೂ ಮುನ್ನ ಸ್ವಲ್ಪ ಟೆನ್ಷನ್ ಅಂತೂ ಇದ್ದೇ ಇರುತ್ತೆ. ಇದಕ್ಕಾಗಿ ಒಂದಷ್ಟು ಗ್ರೌಂಡ್ ವರ್ಕ್ ಮಾಡಿಕೊಂಡೇ ಮುಂದಿನ ಪಂದ್ಯಕ್ಕೆ ಕಣಕ್ಕಿಳಿಬೇಕು. 2024ರ ವಿಶ್ವಕಪ್ ಗೆದ್ದು ಹಾಲಿ ಚಾಂಪಿಯನ್ ಆಗಿರೋ ಭಾರತಕ್ಕೆ ಈಗ ಅದನ್ನ ಉಳಿಸಿಕೊಳ್ಳೋದೇ ದೊಡ್ಡ ಟಾಸ್ಕ್ ಆಗುತ್ತೆ.
ಚಾಂಪಿಯನ್ಸ್ ಟ್ರೋಫಿಯಂತೆಯೂ ಇಲ್ಲೂ ಕಿವೀಸ್ ಗೆ ಕಾದಿದ್ಯಾ ಶಾಕ್?
ಭಾರತ ಹಾಗೇ ನ್ಯೂಜಿಲೆಂಡ್ ತಂಡಗಳ 2025ರ ಮಾರ್ಚ್ 9ರಂದು ಚಾಂಪಿಯನ್ಸ್ ಟ್ರೋಫಿ ಫೈನಲ್ನಲ್ಲಿ ಮುಖಾಮುಖಿ ಆಗಿದ್ವು. ಈಗ 2026ರ ಮಾರ್ಚ್ 8ಕ್ಕೆ ಟಿ-20 ವಿಶ್ವಕಪ್ ಫೈನಲ್ನಲ್ಲಿ ಮುಖಾಮುಖಿ ಆಗ್ತಿದ್ದಾರೆ. ಸೋ 1 ವರ್ಷದ ಒಳಗೇ 2 ಐಸಿಸಿ ಟೂರ್ನಮೆಂಟ್ಗಳಲ್ಲಿ ಫೈನಲ್ನಲ್ಲಿ ಮೀಟ್ ಮಾಡ್ತಿದ್ದಾರೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತವೇ ಗೆದ್ದು ಚಾಂಪಿಯನ್ ಪಟ್ಟಕ್ಕೇರಿತ್ತು. ಆ ಮ್ಯಾಚಲ್ಲಿ ಟಾಸ್ ಗೆದ್ದಿದ್ದ ಕಿವೀಸ್ ಪಡೆ ಫಸ್ಟ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ರು. 50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 251 ರನ್ಸ್ ಕಲೆ ಹಾಕಿದ್ರು. ಈ ಸ್ಕೋರ್ ಬೆನ್ನಟ್ಟಿದ ಭಾರತ 49 ಓವರ್ಗಳಲ್ಲಿ 6ವಿಕೆಟ್ ನಷ್ಟಕ್ಕೆ ಚೇಸ್ ಮಾಡಿ ಟ್ರೋಫಿ ಗೆದ್ದಿತ್ತು. ಸೋ ಅದೇ ರಿಸಲ್ಟ್ ಇಲ್ಲೂ ರಿಪೀಟ್ ಆಗುತ್ತಾ ಅನ್ನೋ ಕುತೂಹಲ ಭಾರತೀಯರಲ್ಲಿದೆ. ಹಾಗೇ ಇದೇ ವರ್ಷ ಜನವರಿಯಲ್ಲಿ ನಡೆದಿದ್ದ 5 ಪಂದ್ಯಗಳ ಟಿ-20ಐ ಸರಣಿಯಲ್ಲೂ ಭಾರತವೇ ಗೆದ್ದು ಬೀಗಿತ್ತು. ಸೋ ಇತ್ತೀಚಿನ ಸ್ಟಾಟ್ಸ್ ನೋಡಿದಾಗ ಭಾರತವೇ ಡಾಮಿನೇಟ್ ಮಾಡುತ್ತಾ ಅನ್ನೋ ಕ್ಯೂರಿಯಾಸಿಟಿ ಇದೆ. ಇದು ಭಾರತದ ಕಥೆಯಾದ್ರೆ ಅತ್ತ ನ್ಯೂಜಿಲೆಂಡ್ ಟೀಂ ತುಂಬಾ ಡಿಫ್ರೆಂಟಾಗೇ ಕಾಣ್ತಿದೆ.
ಸೆಮೀಸ್ ಸ್ಟ್ರೆಂಥ್ ಫೈನಲ್ ಗೂ ತರುತ್ತಾ ನ್ಯೂಜಿಲೆಂಡ್?
ಈ ಬಾರಿಯ ಟೂರ್ನಿಯಲ್ಲಿ ನ್ಯೂಜಿಲೆಂಡ್ ಆರಂಭದಲ್ಲಿ ಅಷ್ಟೇನು ಎಫೆಕ್ಟೀವ್ ಆಗಿರಲಿಲ್ಲ. ಸೂಪರ್ 8ನಲ್ಲೂ ನೆಟ್ ರನ್ ರೇಟ್ ಆಧಾರದಲ್ಲೇ ಸೆಮೀಸ್ಗೆ ಸೆಲೆಕ್ಟ್ ಆಗಿತ್ತು. ಬಟ್ ಸೆಮೀಸ್ನಲ್ಲಿ ಕಂಪ್ಲೀಟ್ ಡಿಫ್ರೆಂಟ್ ಪರ್ಫಾಮೆನ್ಸ್ ಬಂದಿತ್ತು. ಸೌತ್ ಆಫ್ರಿಕಾ ವಿರುದ್ಧ ಒನ್ ಸೈಡೆಡ್ ಆಗಿ ಗೆದ್ದು ಫೈನಲ್ಗೆ ಲಗ್ಗೆ ಇಟ್ಟಿದ್ದಾರೆ. ಫಿನ್ ಅಲೆನ್ ಅಂತೂ ಜಸ್ಟ್ 33 ಬಾಲಲ್ಲೇ ಸೆಂಚುರಿ ಹೊಡೆದು ಇತಿಹಾಸ ನಿರ್ಮಿಸಿದ್ರು. ಹೀಗಾಗಿ ಬ್ಯಾಟಿಂಗ್ ಮತ್ತು ಬೌಲಿಂಗ್ ಲೈನಪ್ ಚೆನ್ನಾಗಿದ್ದು ಇಲ್ಲೂ ಅದನ್ನೇ ತರೋಕೆ ನೋಡ್ತಾರೆ. ಚಾಂಪಿಯನ್ಸ್ ಟ್ರೋಫಿ ಫೈನಲ್ ಸೋಲು ಹಾಗೇ ಕಳೆದ ಸರಣಿಯ ಸೋಲಿನ ಸೇಡು ತೀರಿಸಿಕೊಂಡು ಚೊಚ್ಚಲ ಟ್ರೋಫಿ ಎತ್ತಿ ಹಿಡಿಯೋ ಟಾರ್ಗೆಟ್ನಲ್ಲಿ ಬರ್ತಿದ್ದಾರೆ. ಒಟ್ನಲ್ಲಿ ಈ ಬಾರಿಯ ಫೈನಲ್ ಮ್ಯಾಚ್ ಒನ್ ಆಫ್ ದಿ ಬೆಸ್ಟ್ ರೈವಲ್ರಿ ಆಗೋ ಎಲ್ಲಾ ಲಕ್ಷಣಗಳೂ ಇವೆ. ಯಾವ ಟೈಮಲ್ಲಿ ಯಾರ ಪರ ಬೇಕಿದ್ರೂ ಮ್ಯಾಚ್ ವಾಲಬಹುದು.

ನೋಡಿರಿ

