NZ ಪಾಲಿಗೆ ವಿಲನ್ KL – ಭಾರತದ REAL ಗೇಮ್ ಚೇಂಜರ್
9 ಪಂದ್ಯಗಳಲ್ಲೇ ಎಂಥಾ ದಾಖಲೆ?

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಏಕದಿನ ಪಂದ್ಯಕ್ಕೆ ಕೌಂಟ್ಡೌನ್ ಶುರುವಾಗಿದೆ. ಜನವರಿ 11ರಂದು ವಡೋದರಾದಲ್ಲಿ ಮೊದಲ ಪಂದ್ಯ ಗೆದ್ದಿರೋ ಭಾರತ ಇವತ್ತಿನ ಪಂದ್ಯವನ್ನೂ ಗೆದ್ರೆ ಸರಣಿ ಕೈವಶವಾಗುತ್ತೆ. ಌಂಡ್ ಜನವರಿ 18 ರಂದು ಸರಣಿಯ ಕೊನೇ ಪಂದ್ಯ ಇಂದೋರ್ನಲ್ಲಿ ನಡೆಯಲಿದೆ. ಇಂಟ್ರೆಸ್ಟಿಂಗ್ ಅಂದ್ರೆ ಈ ಸರಣಿಯಲ್ಲಿ ಕಿಂಗ್ ವಿರಾಟ್ ಕೊಹ್ಲಿ ಮೇಲೆಯೇ ಎಲ್ಲರ ಫೋಕಸ್ ಇದೆ. ಅಟ್ ದಿ ಸೇಮ್ ಟೈಂ ಕಿವೀಸ್ ಪಡೆ ವಿರುದ್ಧ ಕನ್ನಡಿಗ ಕೆಎಲ್ ರಾಹುಲ್ ಅವ್ರ ಸ್ಟಾಟ್ಸ್ ಕೂಡ ಅತ್ಯದ್ಭುತವಾಗಿದೆ.
ಇದನ್ನೂ ಓದಿ : ಹರ್ಮನ್ಪ್ರೀತ್ ಕೌರ್ ಅರ್ಧಶತಕ ಬಲ – ಗುಜರಾತ್ ವಿರುದ್ಧ ಗೆದ್ದ ಮುಂಬೈ
ಪ್ರಸ್ತುತ ಟೀಂ ಇಂಡಿಯಾದಲ್ಲಿ ದಿ ಬೆಸ್ಟ್ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಆಗಿರೋ ಕೆಎಲ್ ರಾಹುಲ್ ಟೆಸ್ಟ್ ಮತ್ತು ಏಕದಿನ ಮಾದರಿಯಲ್ಲಿ ಕ್ವಾಲಿಟಿ ಬ್ಯಾಟರ್ ಆಗಿದ್ದಾರೆ. ಅದ್ರಲ್ಲೂ ನಂಬರ್ 1 ಟು 7ವರೆಗೂ ಬ್ಯಾಟಿಂಗ್ ಮಾಡೋ ಏಕೈಕ ಬ್ಯಾಟರ್ ಕೂಡ ರಾಹುಲ್ ಮಾತ್ರವೇ. ಏಕದಿನ ಮಾದರಿಯಲ್ಲೂ ಮಿಡಲ್ ಆರ್ಡರ್ನಲ್ಲಿ ಮಿಸ್ಟರ್ ಡಿಫೆಂಡೇಬಲ್ ಅಂತಾನೇ ಕರೆಸಿಕೊಳ್ತಿರೋ ರಾಹುಲ್ ನ್ಯೂಜಿಲೆಂಡ್ ವಿರುದ್ಧವೂ ಅದ್ಭುತವಾದಂತ ಗ್ರಾಫ್ ಹೊಂದಿದ್ದಾರೆ.
ಏಕದಿನ ಮಾದರಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಅದ್ಭುತ ದಾಖಲೆ!
ಏಕದಿನ ಮಾದರಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಕೆಎಲ್ ರಾಹುಲ್ ಒಳ್ಳೆ ದಾಖಲೆ ಹೊಂದಿದ್ದಾರೆ. ಕಿವೀಸ್ ವಿರುದ್ಧ ಈವರೆಗೆ 9 ಪಂದ್ಯಗಳಲ್ಲಿ 63.6 ರ ಸರಾಸರಿಯಲ್ಲಿ 357 ರನ್ ಗಳಿಸಿದ್ದಾರೆ. ಇದು ODIಗಳಲ್ಲಿ ತಂಡದ ವಿರುದ್ಧ ರಾಹುಲ್ ಅವ್ರ ಅತ್ಯುತ್ತಮ ಸರಾಸರಿಯಾಗಿದೆ. ಇಟ್ ಮೀನ್ಸ್ ಕನಿಷ್ಠ 300 ರನ್ಗಳಿಗೆ ಕಂಪೇರ್ ಮಾಡಿದಾಗ. ಌಂಡ್ ರಾಹುಲ್ ಎರಡು ಸಲ ಅರ್ಧಶತಕ ಬಾರಿಸಿದ್ರೆ 2020 ರಲ್ಲಿ ಮೌಂಟ್ ಮೌಂಗನುಯಿನಲ್ಲಿ ನಡೆದ ಪಂದ್ಯದಲ್ಲಿ 112 ರನ್ ಗಳಿಸಿ ಶತಕ ಬಾರಿಸಿದ್ರು. ಇನ್ನು ತವರಿನಲ್ಲಿ ಅಂದ್ರೆ ಭಾರತದಲ್ಲಿ ರಾಹುಲ್ 50 ಓವರ್ಗಳ ಸ್ವರೂಪದಲ್ಲಿ ನ್ಯೂಜಿಲೆಂಡ್ ವಿರುದ್ಧ 3 ಪಂದ್ಯಗಳನ್ನು ಆಡಿದ್ದಾರೆ. 2023 ರ ವಿಶ್ವಕಪ್ನಲ್ಲಿ ಎರಡು ಪಂದ್ಯ. ಧರ್ಮಶಾಲಾದಲ್ಲಿ ನಡೆದ ಲೀಗ್ ಹಂತದ ಪಂದ್ಯದಲ್ಲಿ ಅವರು 35 ಎಸೆತಗಳಲ್ಲಿ 27 ರನ್ ಗಳಿಸಿದರೆ, ಸೆಮಿಫೈನಲ್ ಪಂದ್ಯದಲ್ಲಿ ಅವರು 20 ಎಸೆತಗಳಲ್ಲಿ 39* ರನ್ ಗಳಿಸಿದರು. ಇನ್ನು ಇತ್ತೀಚೆಗೆ ಸರಣಿಯ ಮೊದಲ ಪಂದ್ಯದಲ್ಲಿ ವಡೋದರಾದಲ್ಲಿ ಅಜೇಯ 29 ರನ್ಸ್ ಕಲೆ ಹಾಕಿದ್ರು.
ಇನ್ನು ಏಕದಿನ ಮಾದರಿಯಲ್ಲಿ ಸದ್ಯ ರಾಹುಲ್ ಒಳ್ಳೆ ಫಾರ್ಮ್ನಲ್ಲಿ ಇದ್ದಾರೆ. ಇತ್ತೀಚೆಗೆ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಏಕದಿನ ಸರಣಿಯಲ್ಲಿ ಮೂರು ಪಂದ್ಯಗಳ ಪೈಕಿ ಎರಡು ಪಂದ್ಯಗಳಲ್ಲಿ ಬ್ಯಾಟ್ ಬೀಸಿದ್ರು.ಮೊದಲ ಪಂದ್ಯದಲ್ಲಿ 60 ಮತ್ತು ಎರಡನೇ ಪಂದ್ಯದಲ್ಲಿ 66 ರನ್ ಗಳಿಸಿ ಅಜೇಯರಾಗಿ ಉಳಿದಿದ್ರು. ಇನ್ನು ಭಾರತದ ಪರ ಒಟ್ಟಾರೆಯಾಗಿ 92 ಏಕದಿನ ಪಂದ್ಯಗಳಲ್ಲಿ, ರಾಹುಲ್ 84 ಇನ್ನಿಂಗ್ಸ್ಗಳಿಂದ 49.95 ಸರಾಸರಿಯಲ್ಲಿ 3247 ರನ್ ಗಳಿಸಿದ್ದಾರೆ. ಇದರಲ್ಲಿ ಏಳು ಶತಕಗಳು ಮತ್ತು 20 ಅರ್ಧಶತಕಗಳಿವೆ. ತವರು ಏಕದಿನ ಪಂದ್ಯಗಳಲ್ಲಿ ಅವರ ಸರಾಸರಿ 55.13 ಕ್ಕೆ ಏರಿದ್ದು, ಅಲ್ಲಿ ಅವರು 1,628 ರನ್ ಗಳಿಸಿದ್ದಾರೆ. ಪ್ರಸ್ತುತ ತಂಡದಲ್ಲಿ ಮಿಡಲ್ ಆರ್ಡರ್ನಲ್ಲಿ ಮ್ಯಾಚ್ ಫಿನಿಶರ್ ರೋಲ್ ಪ್ಲೇ ಮಾಡ್ತಿದ್ದಾರೆ. ಕ್ರೂಶಿಯಲ್ ಟೈಮ್ನಲ್ಲೂ ಗೇಮ್ ಚೇಂಜಿಂಗ್ ಪರ್ಫಾಮೆನ್ಸ್ ನೀಡ್ತಿದ್ದಾರೆ. ಕೂಲ್ ಌಂಡ್ ಕಾಮ್ ಆಗಿಯೇ ಪ್ರೆಶರ್ ಹ್ಯಾಂಡಲ್ ಮಾಡ್ತಿದ್ದು ಪಂದ್ಯಗಳನ್ನ ಗೆಲ್ಲಿಸಿಕೊಡ್ತಿದ್ದಾರೆ.

ನೋಡಿರಿ

