5ನೇ ಪಂದ್ಯ ಗೆಲ್ಲೋಕಾ.. ಪ್ರಯೋಗಕ್ಕಾ? – ಮ್ಯೂಸಿಕಲ್ ಚೇರ್ ಆಡಿದ್ರೆ ಪಲ್ಟಿ
ವಿಶ್ವಕಪ್ ಗೆಲುವಿನ ಟ್ರ್ಯಾಕ್ ಯಾರಿಗೆ?

ಟಿ-20 ವಿಶ್ವಕಪ್ ಮಹಾಯುದ್ಧಕ್ಕೆ ಇನ್ನೊಂದೇ ವಾರ ಬಾಕಿ. ಫೆಬ್ರವರಿ 7ರಿಂದ 20 ತಂಡಗಳ ನಡುವೆ ಹೈವೋಲ್ಟೇಜ್ ಫೈಟ್ ನಡೆಯಲಿದ್ದು ಮಾರ್ಚ್ 8ಕ್ಕೆ ಹೊಸ ಚಾಂಪಿಯನ್ನ ಉದಯ ಆಗುತ್ತೆ. ಹಾಲಿ ಚಾಂಪಿಯನ್ ಆಗಿರೋ ಭಾರತ ಈ ಸಲ ತವರಿನಲ್ಲೇ ಟ್ರೋಫಿಗೆ ಮುತ್ತಿಡೋಕೆ ತುದಿಗಾಲಲ್ಲಿ ನಿಂತಿದೆ. ವರ್ಲ್ಡ್ಕಪ್ ಅಖಾಡಕ್ಕಿಳಿಯೋ ಮುನ್ನ ಇವತ್ತು ತಿರುವನಂತಪುರಂನಲ್ಲಿ ನ್ಯೂಜಿಲೆಂಡ್ ವಿರುದ್ಧ ಸರಣಿಯ ಕೊನೇ ಪಂದ್ಯ ಆಡಲಿದೆ. ಕಳೆದ ಪಂದ್ಯದಲ್ಲಿ ಸೋತಿರೋ ಭಾರತಕ್ಕೆ ಇದು ಅಲರ್ಟ್ ಮ್ಯಾಚ್ ಆಗಲಿದೆ.
ಇದನ್ನೂ ಓದಿ : WPLನಲ್ಲಿ ಮುಂಬೈಗೆ ಮಣ್ಣು ಮುಕ್ಕಿಸಿ ಪ್ಲೇಆಫ್ಗೇರಿದ ಗುಜರಾತ್ ಜೈಂಟ್ಸ್
ಐದು ಪಂದ್ಯಗಳ ಸರಣಿಯಲ್ಲಿ ಭಾರತ ಮೊದಲ 3 ಪಂದ್ಯ ಗೆದ್ರೂ ನ್ಯೂಜಿಲೆಂಡ್ 4ನೇ ಪಂದ್ಯದಲ್ಲಿ ಗೆದ್ದು ಭರ್ಜರಿ ಕಂ ಬ್ಯಾಕ್ ಮಾಡಿದೆ. ಇದೀಗ ಐದನೇ ಪಂದ್ಯ ಇಬ್ಬರ ಪಾಲಿಗೂ ಮಸ್ಟ್ ವಿನ್ ಮ್ಯಾಚ್ ಆಗಲಿದೆ. ಯಾಕಂದ್ರೆ ಈ ಪಂದ್ಯದಲ್ಲಿ ವಿನ್ ಆಗಿ ಅದೇ ಟ್ರ್ಯಾಕ್ನಲ್ಲೇ ವಿಶ್ವಕಪ್ಗೂ ಕಾಲಿಡಬಹುದು. ಹೀಗಾಗಿ ಶತಾಯ ಗತಾಯ ಗೆಲ್ಲಲೇಬೇಕು ಅನ್ನೋ ಮೈಂಡ್ಸೆಟ್ನಲ್ಲೇ ಉಭಯ ತಂಡಗಳು ಕಣಕ್ಕಿಳಿಯುತ್ತವೆ. ಈ ಪಂದ್ಯಕ್ಕಾಗಿ ಭಾರತದ ಪ್ಲೇಯಿಂಗ್ 11ನಲ್ಲಿ ಒಂದಷ್ಟು ಬದಲಾವಣೆಗಳಾಗೋ ಚಾನ್ಸಸ್ ಇದೆ.
ಭಾರತದ ಸಂಭಾವ್ಯ ಪ್ಲೇಯಿಂಗ್ 11
ಅಭಿಷೇಕ್ ಶರ್ಮಾ
ಸಂಜು ಸ್ಯಾಮ್ಸನ್
ಇಶಾನ್ ಕಿಶನ್
ಸೂರ್ಯಕುಮಾರ್ ಯಾದವ್
ರಿಂಕು ಸಿಂಗ್
ಅಕ್ಷರ್ ಪಟೇಲ್
ಶಿವಂ ದುಬೆ
ಕುಲದೀಪ್ ಯಾದವ್
ವರುಣ್ ಚಕ್ರವರ್ತಿ
ಜಸ್ಪ್ರೀತ್ ಬುಮ್ರಾ
ಅರ್ಷದೀಪ್ ಸಿಂಗ್
ಅಷ್ಟಕ್ಕೂ ವೈಜಾಗ್ನಲ್ಲಿ ನಡೆದ ಪಂದ್ಯದಲ್ಲಿ ಪ್ರಯೋಗಿಸಿದ ಆರು ಬ್ಯಾಟ್ಸ್ಮನ್ ಮತ್ತು ಐದು ಬೌಲರ್ಗಳ ಪ್ರಯೋಗ ಉಲ್ಟಾ ಹೊಡೆದಿತ್ತು. ಅಭಿಷೇಕ್ ಶರ್ಮಾ ಗೋಲ್ಡನ್ ಡಕ್ ಆಗ್ತಿದ್ದಂತೆ ಟಾಪ್ ಆರ್ಡರ್ ಬ್ಯಾಟರ್ಸ್ ಪೆವಿಲಿಯನ್ ಪರೇಡ್ ನಡೆಸಿದ್ರು. ಶಿವಂ ದುಬೆ ಏಕಾಂಗಿ ಹೋರಾಟ ನಡೆಸಿದ್ರೂ ಗೆಲುವು ಸಿಗಲಿಲ್ಲ. ಹೀಗಾಗಿ ಐದನೇ ಪಂದ್ಯಕ್ಕೆ ಯಾವುದೇ ಪ್ರಯೋಗ ಇಲ್ಲದೇ ಕಣಕ್ಕಿಳಿಯಬೇಕಿದೆ. ಇನ್ನು ಈ ಸರಣಿಯಲ್ಲಿ ಭಾರತದ ಪರ 2 ವೇಗದ ಅರ್ಧಶತಕಗಳೂ ದಾಖಲಾಗಿವೆ. ಗುವಾಹಟಿಯಲ್ಲಿ ನಡೆದ ಮೂರನೇ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಎರಡನೇ ಅತ್ಯಂತ ವೇಗದ ಶತಕ ಗಳಿಸಿದರು – 14 ಎಸೆತಗಳಲ್ಲಿ, 2007 ರಲ್ಲಿ ನಡೆದ ಉದ್ಘಾಟನಾ ಟಿ20 ವಿಶ್ವಕಪ್ನಿಂದ ಯುವರಾಜ್ ಸಿಂಗ್ ಅವರ ದಾಖಲೆ ಇನ್ನೂ ಹಾಗೆಯೇ ಇದೆ. ಇನ್ನು ವೈಜಾಗ್ನಲ್ಲಿ ಶಿವಂ ದುಬೆ 15 ಬಾಲ್ಗಳಲ್ಲೇ ಅರ್ಧಶತಕ ಬಾರಿಸಿದ್ರು. ಇದು 3ನೇ ವೇಗದ ಅರ್ಧಶತಕವಾಗಿದೆ.
ಇನ್ನು ಮಿಚೆಲ್ ಸ್ಯಾಂಟ್ನರ್ ನಾಯಕತ್ವದ ನ್ಯೂಜಿಲೆಂಡ್ ತಂಡ ನಾಲ್ಕನೇ ಪಂದ್ಯದಲ್ಲಿ ಗೆದ್ದಿರೋದ್ರಿಂದ ಐದನೇ ಪಂದ್ಯದಲ್ಲೂ ಅದೇ ರೀತಿಯ ಕಾನ್ಫಿಡೆನ್ಸ್ನಲ್ಲಿ ಕಣಕ್ಕಿಳಿಯಲಿದೆ. ಬಟ್ ಭಾರತಕ್ಕಿರೋ ಚಾಲೆಂಜ್ ಅಂದ್ರೆ ಪ್ಲೇಯಿಂಗ್ 11ನಲ್ಲಿ ಮತ್ತೆ ಪ್ರಯೋಗ ಮಾಡೋದು ಬೇಡ. ಎಲ್ರಿಗೂ ಚಾನ್ಸ್ ಕೊಟ್ಟು ನೋಡೋಣ ಅಥವಾ ಸರಣಿ ಗೆದ್ದಿದ್ದೇವೆ ಜಾಸ್ತಿ ಬೌಲರ್ಗಳನ್ನೇ ಆಡ್ಸೋಣ ಅಂತಾ ಎಕ್ಸ್ಪೆರಿಮೆಂಟ್ ಮಾಡೋದು ಬಿಟ್ಟು ವಿನ್ನಿಂಗ್ ಟೀಮ್ನೇ ಕಣಕ್ಕಿಳಿಸಬೇಕು. 2024ರ ವಿಶ್ವಕಪ್ ಬಳಿಕ ಭಾರತದ ವಿನ್ನಿಂಗ್ ಪರ್ಸೆಂಟೇಜ್ ಶೇಕಡಾ 80ರಷ್ಟಿದ್ದು ಆಸ್ಟ್ರೇಲಿಯಾಕ್ಕಿಂತ 10 ಅಂಕ ಜಾಸ್ತಿ ಇದೆ. ಇನ್ನು ಸರಣಿಯ ಕೊನೇ ಪಂದ್ಯ ನಡೆಯಲಿರುವ ತಿರುವನಂತಪುರಂ ಮೈದಾನದಲ್ಲಿ ಈಗಾಗಲೇ 2 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಲಾಗಿದೆ. ಎರಡೂ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಜಯ ಸಾಧಿಸಿದೆ. ಈಗ ಇಂದಿನ ಪಂದ್ಯದಲ್ಲಿ ಗೆದ್ದು ವಿಶ್ವಕಪ್ಗೂ ಅದೇ ಜೋಶ್ನಲ್ಲೇ ಕಾಲಿಡಬೇಕಿದೆ.

ನೋಡಿರಿ

