ನ್ಯೂಜಿಲೆಂಡ್ ವಿರುದ್ಧ ದಾಖಲೆಗಳ ಸರಮಾಲೆ – ಅಜೇಯವಾಗಿ ವಿಶ್ವಕಪ್ ಗೆ ಕಾಲಿಟ್ಟ ಭಾರತ!

ಟೀಂ ಇಂಡಿಯಾದ ಟಿ-20ಐ ಟೀಂ ಫೀಲ್ಡಿಗಿಳಿದ್ರೆ ಸಾಕು. ಅಲ್ಲೇನಾದ್ರೂ ವರ್ಲ್ಡ್ ರೆಕಾರ್ಡ್ ಕ್ರಿಯೇಟ್ ಆಗ್ಲೇಬೇಕು. ಅದ್ರಲ್ಲೂ ಈಗ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಂತೂ ಸುಂಟರಗಾಳಿ ಎಬ್ಬಿಸಿದ್ದಾರೆ. ಐದು ಪಂದ್ಯಗಳ ಸರಣಿಯನ್ನ ಮೂರೇ ಮ್ಯಾಚಲ್ಲಿ ಗೆದ್ಕೊಂಡಿದ್ದಾರೆ. ಟೆಸ್ಟ್ ನಲ್ಲಿ ಕ್ಲೀನ್ ಸ್ವೀಪ್ ಮಾಡಿ ಏಕದಿನದಲ್ಲಿ ಭಾರತವನ್ನ ಸೋಲಿಸಿ ಮೆರೀತಿದ್ದ ನ್ಯೂಜಿಲೆಂಡ್ಗೆ ಟಿ-20ಐ ಟೀಂ ಕೊಟ್ಟಿರೋ ಹೊಡೆತಕ್ಕೆ ಚೇತರಿಸಿಕೊಳ್ಳೋಕೂ ಆಗ್ತಿಲ್ಲ.
ಇದನ್ನೂ ಓದಿ : ಆರ್ಸಿಬಿಗೆ ಇಂದು ಬಿಗ್ ಚಾಲೆಂಜ್ – ಫೈನಲ್ಗೆ ಲಗ್ಗೆ ಇಡುತ್ತಾ ಸ್ಮೃತಿ ಪಡೆ?
ನಾಗ್ಪುರದಲ್ಲಿ 48 ರನ್ಗಳಿಂದ ಗೆದ್ದು ರಾಯ್ಪುರದಲ್ಲಿ 15.2 ಓವರ್ಗಳಲ್ಲೇ ಮ್ಯಾಚ್ ಮುಗಿಸಿ ಈಗ ಗುವಾಹಟಿಯಲ್ಲಿ ಹತ್ತೇ ಓವರ್ಗಳಲ್ಲಿ ವಿಶ್ವದಾಖಲೆಯ ಚೇಸಿಂಗ್ ಮಾಡಿದ್ದಾರೆ. ಬೌಲರ್ಗಳು ಕಿವೀಸ್ ಪಡೆಯ ಕಾಲು ಮುರಿದ್ರೆ ಸ್ಫೋಟಕ ಬ್ಯಾಟಿಂಗ್ ಮೂಲಕ ಬ್ಯಾಟರ್ಗಳು ಅವ್ರ ಮೇಲೆ ಸವಾರಿ ಮಾಡಿದ್ದಾರೆ. ಟೀಂ ಇಂಡಿಯಾದ ಅಗ್ರೆಸ್ಸಿವ್ ಆಟಕ್ಕೆ ನ್ಯೂಜಿಲೆಂಡ್ ಧೂಳೀಪಟವಾಗಿದೆ. ಮೂರೇ ಪಂದ್ಯಗಳಲ್ಲೇ ಸರಣಿ ಸೋತು ಈಗ ಕ್ಲೀನ್ ಸ್ವೀಪ್ ಟೆನ್ಷನ್ ನಲ್ಲಿದ್ದಾರೆ.
ಭಾರತದ ಬೌಲಿಂಗ್ ಮತ್ತು ಬ್ಯಾಟಿಂಗ್ ಅಬ್ಬರಕ್ಕೆ ಕಿವೀಸ್ ಥಂಡಾ!
ಪಂದ್ಯದ ಆರಂಭಕ್ಕೂ ಮುನ್ನ ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ಕೆ ಮಾಡಿಕೊಳ್ತು. ಸೋ ಬ್ಯಾಟಿಂಗ್ ಆರಂಭಿಸಿದ ನ್ಯೂಜಿಲೆಂಡ್ ತಂಡ ಡೆವೊನ್ ಕಾನ್ವೆ ಮತ್ತು ಟಿಮ್ ಸೈಫರ್ಟ್ ಇನ್ನಿಂಗ್ಸ್ ಆರಂಭಿಸಿದ್ರು. ಆದ್ರೆ ಫಸ್ಟ್ ಓವರ್ನಲ್ಲೇ ಕಾನ್ವೆ ಮತ್ತೆ ಹರ್ಷಿತ್ ರಾಣಾಗೆ ಸರೆಂಡರ್ ಆದ್ರು. ಇಂಟ್ರೆಸ್ಟಿಂಗ್ ಅಂದ್ರೆ ಭಾರತ ಪ್ರವಾಸದಲ್ಲಿ ಕಾನ್ವೆ ರಾಣಾಗೆ ಐದನೇ ಸಲ ವಿಕೆಟ್ ಒಪ್ಪಿಸಿದ್ದಾರೆ. ಏಕದಿನ ಸರಣಿಯ ಮೂರು ಪಂದ್ಯಗಳು ಹಾಗೇ ಟಿ-20ಐ ಸರಣಿಯ ಎರಡು, ಮೂರನೇ ಪಂದ್ಯದಲ್ಲೂ ಕಾನ್ವೆ ರಾಣಾಗೆ ವಿಕೆಟ್ ಒಪ್ಪಿಸಿದ್ದಾರೆ. ರಾಣಾ ವಿರುದ್ಧ ಅವರ ಬ್ಯಾಟಿಂಗ್ ಸರಾಸರಿ ಕೇವಲ 3.80 ಇದೆ. ಇನ್ನು ಕಾನ್ವೆ ಔಟಾದ ಬೆನ್ನಲ್ಲೇ 2ನೇ ಓವರ್ನಲ್ಲೇ ರಚಿನ್ ರವೀಂದ್ರಗೆ ಪಾಂಡ್ಯ ಪೆವಿಲಿಯನ್ ದಾರಿ ತೋರಿಸಿದ್ರು. ಆ ನಂತ್ರ 4ನೇ ಕ್ರಮಾಂಕದಲ್ಲಿ ಫಿಲಿಪ್ಸ್ 48 ರನ್, ಮಾರ್ಕ್ 32 ರನ್ ಗಳಿಸಿದ್ದು ಬಿಟ್ರೆ ಉಳಿದೆಲ್ಲಾ ಬ್ಯಾಟರ್ಗಳು ಪೆವಿಲಿಯನ್ ಪರೇಡ್ ನಡ್ಸಿದ್ರು. ಹೀಗಾಗಿ 20ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 153 ರನ್ಗಳಷ್ಟೇ ಗಳಿಸೋಕೆ ಸಾಧ್ಯ ಆಯ್ತು. ಅಲ್ಲಿಗೆ 154 ರನ್ಗಳ ಟಾರ್ಗೆಟ್ ಬೆನ್ನತ್ತಿದ ಭಾರತದ ಪರ ಇದೆಲ್ಲಾ ಒಂದು ಟಾರ್ಗೆಟ್ಟಾ ಅನ್ನೋ ರೇಂಜ್ಗೆ ಬ್ಯಾಟ್ ಬೀಸಿದ್ರು.
60 ಎಸೆತಗಳಲ್ಲೇ ಗುರಿ ತಲುಪಿ ದಾಖಲೆ ಬರೆದ ಭಾರತ!
ನ್ಯೂಜಿಲೆಂಡ್ ನೀಡಿದ್ದ ಟಾರ್ಗೆಟ್ ನೋಡಿದಾಗ್ಲೇ ಭಾರತ ವಿನ್ ಅನ್ನೋದು ಎಲ್ರಿಗೂ ಗೊತ್ತಿತ್ತು. ಆದ್ರೆ ಬ್ಯಾಟಿಂಗ್ ಆರಂಭಿಸಿದ ಭಾರತ ಮೊದಲ ಬಾಲ್ನಲ್ಲೇ ವಿಕೆಟ್ ಕಳ್ಕೊಂಡಿತ್ತು. ಮ್ಯಾಟ್ ಹೆನ್ರಿ ಎಸೆತಕ್ಕೆ ಸಂಜು ಸ್ಯಾಮ್ಸನ್ ಗೋಲ್ಡನ್ ಡಕ್.. ಆ ನಂತ್ರ ಅಭಿಷೇಕ್ ಮತ್ತು ಇಶಾನ್ ಕಿಶನ್ ಜೊತೆಯಾಗಿ ಅಗ್ರೆಸ್ಸಿವ್ ಬ್ಯಾಟಿಂಗ್ ಶುರು ಮಾಡಿದ್ರು. 3.2 ಓವರ್ಗಳಲ್ಲೇ 50ಪ್ಲಸ್ ಪಾಟ್ನರ್ಶಿಪ್ ಬಂತು. ಬಟ್ 13 ಬಾಲಲ್ಲಿ 28 ರನ್ ಗಳಿಸಿದ್ದ ಕಿಶನ್ ಇಶ್ ಸೋದಿ ಬೌಲಿಂಗ್ನಲ್ಲಿ ಕ್ಯಾಚ್ ಕೊಟ್ರು. ಈ ವೇಳೆ ಕ್ರೀಸ್ಗೆ ಬಂದ ಸೂರ್ಯ ಬ್ಯಾಟಿಂಗ್ ಖದರ್ ತೋರಿಸಿದ್ರು. ಒಂದ್ಕಡೆ ಅಭಿಷೇಕ್ 300ಪ್ಲಸ್ ಸ್ಟ್ರೈಕ್ನಲ್ಲಿ ಬ್ಯಾಸ್ ಬೀಸ್ತಿದ್ರೆ ಸೂರ್ಯ 200ಪ್ಲಸ್ನಲ್ಲಿ ಬೌಲರ್ಗಳನ್ನ ಬೆಂಡೆತ್ತುತ್ತಿದ್ರು. ಹೀಗಾಗಿ ಜಸ್ಟ್ 10 ಓವರ್ಗಳಲ್ಲೇ ಭಾರತ ಟಾರ್ಗೆಟ್ ಚೇಸ್ ಮಾಡಿತು. 20 ಎಸೆತಗಳಲ್ಲೇ ಅಭಿಷೇಕ್ ಶರ್ಮಾ 7 ಫೋರ್, 5 ಸಿಕ್ಸ್ ಮೂಲಕ 68 ರನ್ ಗಳಿಸಿ ಅಜೇಯರಾಗಿ ಉಳಿದ್ರು. 26 ಬಾಲಲ್ಲಿ ಸೂರ್ಯ 57 ರನ್ ಗಳಿಸಿದ್ರು. ನ್ಯೂಜಿಲೆಂಡ್ ಪರ ಬೌಲರ್ಗಳೆಲ್ಲಾ 14+ ಎಕಾನಮಿಯಲ್ಲಿ ರನ್ಸ್ ಕೊಟ್ಟು ಭಾರತದ ಬ್ಯಾಟಿಂಗ್ಗೆ ಶರಣಾಗಿದ್ರು. ಹಾಗೇ ಈ ಹೈವೋಲ್ಟೇಜ್ ಮ್ಯಾಚಲ್ಲಿ ಭಾರತ ಹಲವು ದಾಖಲೆಗಳನ್ನೂ ಬರೆದಿದೆ.
ಭಾರತ ಬರೆದ ದಾಖಲೆಗಳು!
- ಭಾರತದ ಪರ ಅಭಿಷೇಕ್ 2ನೇ ಅತೀವೇಗದ ಅರ್ಧಶತಕ
- ಟಿ20ಯಲ್ಲಿ ಭಾರತದ ಅತಿ ವೇಗದ ಅರ್ಧಶತಕ
- ಭಾರತದ ಎರಡನೇ ಅತ್ಯಧಿಕ ಪವರ್ ಪ್ಲೇ ಸ್ಕೋರ್
- ನ್ಯೂಜಿಲೆಂಡ್ ವಿರುದ್ಧ ಅತ್ಯಧಿಕ ಪವರ್ ಪ್ಲೇ ಸ್ಕೋರ್
- ಅಭಿಷೇಕ್ ಮತ್ತು ಸೂರ್ಯ ವೇಗದ ಅರ್ಧಶತಕಗಳ ದಾಖಲೆ!
- ಐಸಿಸಿ ಪೂರ್ಣ ಸದಸ್ಯ ರಾಷ್ಟ್ರದ ವಿರುದ್ಧ ದಾಖಲೆಯ ಚೇಸೀಂಗ್!
- ಸತತ 13ನೇ ದ್ವಿಪಕ್ಷೀಯ ಸರಣಿ ಗೆದ್ದ ಭಾರತ!
ಕಳೆದ ಮೂರೂ ಪಂದ್ಯಗಳಲ್ಲೂ ಭಾರತ ಒನ್ ಸೈಡೆಡ್ ಆಗಿಯೇ ಮ್ಯಾಚ್ ಗೆದ್ಕೊಂಡಿದೆ. ಎಲ್ಲೂ ಕೂಡ ನ್ಯೂಜಿಲೆಂಡ್ ತಂಡವನ್ನ ಫೈಟ್ ಕೊಡೋಕೂ ಬಿಟ್ಟಿಲ್ಲ. ಐದು ಪಂದ್ಯಗಳ ಸರಣಿ ಮೂರೇ ಪಂದ್ಯಗಳಲ್ಲಿ ಭಾರತದ ವಶವಾಗಿದೆ. ಇನ್ನು ಎರಡು ಪಂದ್ಯಗಳಿದ್ದು 28 ಮತ್ತು 31ರಂದು ನಾಲ್ಕು ಮತ್ತು ಐದನೇ ಪಂದ್ಯಗಳು ನಡೆಯಲಿವೆ. ಭಾರತದ ಪ್ರದರ್ಶನ ನೋಡ್ತಿದ್ರೆ ಈ ಎರಡೂ ಪಂದ್ಯಗಳನ್ನೂ ಗೆದ್ದು ಕ್ಲೀನ್ ಸ್ವೀಪ್ ಮಾಡೋ ಎಲ್ಲಾ ಲಕ್ಷಣಗಳೂ ಕಾಣ್ತಿದೆ. ನೆಕ್ಸ್ಟ್ ಫೆಬ್ರವರಿ 7ರಿಂದ ಟಿ-20 ವಿಶ್ವಕಪ್ ಆರಂಭವಾಗಲಿದ್ದು ಟ್ರೋಫಿ ಗೆಲ್ಲುವಂಥ ಮೋಸ್ಟ್ ಫೇವರೆಟ್ ಟೀಂ ಆಗಿದೆ.

ನೋಡಿರಿ

