ಭಾರತದ ಸೋಲಿಗೆ ಗಂಭೀರ್ ಪಣ! – ಸಿರಾಜ್ ಜೊತೆ ಪ್ರಸಿದ್ಧ್ ಕೂಡ ಔಟ್
ಫಾರ್ಮ್ ನೆಪನಾ.. ಫೇವರಿಸಂ ಆಟನಾ?

ಭಾರತದ ಸೋಲಿಗೆ ಗಂಭೀರ್ ಪಣ! – ಸಿರಾಜ್ ಜೊತೆ ಪ್ರಸಿದ್ಧ್ ಕೂಡ ಔಟ್ಫಾರ್ಮ್ ನೆಪನಾ.. ಫೇವರಿಸಂ ಆಟನಾ?

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಟೆಸ್ಟ್ ಮ್ಯಾಚ್ ಆರಂಭವಾಗಿದ್ದು ಮೊದಲ ದಿನದಾಟ ಕೂಡ ಕಂಪ್ಲೀಟ್ ಆಗಿದೆ. ಡಬ್ಲ್ಯೂಟಿಸಿ ರೇಸ್​ನಲ್ಲಿ ಉಳೀಬೇಕು ಅಂದ್ರೆ ಶತಾಯ ಗತಾಯ ಈ ಮ್ಯಾಚ್​ ವಿನ್ ಆಗ್ಬೇಕು. ಆದ್ರೆ ಇವ್ರ ಪ್ಲೇಯಿಂಗ್ 11 ನೋಡಿದ್ರೇನೇ ತಲೆ ಕೆಟ್ಟೋಗೋ ಥರ ಇದೆ. ಸೋಲಲೇಬೇಕು ಅಂಥಾ ಪಣ ತೊಟ್ಟು ಟೀಂ ಫೈನಲ್ ಮಾಡ್ದಂಗಿದೆ.

ಇದನ್ನೂ ಓದಿ : ಬ್ಯಾಟಿಂಗ್ ಲೈನಪ್ ಗಿಲ್ಲ ಸರ್ಜರಿ! – ಬುಮ್ರಾಗೆ ಮತ್ತೆ ರೆಸ್ಟ್ ಕೊಡ್ಬೇಕಾ?

ಕ್ರೈಸ್ಟ್​​ಚರ್ಚ್​ನಲ್ಲಿ ಆರಂಭವಾಗಿರೋ ಈ ಮ್ಯಾಚಲ್ಲಿ ಟಾಸ್ ಗೆದ್ದ ಭಾರತದ ನಾಯಕ ಶುಭ್​ಮನ್ ಗಿಲ್ ಫಸ್ಟ್ ಬೌಲಿಂಗ್ ಚೂಸ್ ಮಾಡಿಕೊಂಡ್ರು. ಹೀಗಾಗಿ ಕಿವೀಸ್ ಪಡೆ ಪಸ್ಟ್ ಬ್ಯಾಟಿಂಗ್ ಆರಂಭಿಸಿದೆ. ಆದ್ರೆ ಫಸ್ಟ್ ವಿಕೆಟ್​​ಗೆ ಭಾರತ ಹೆಣಗಾಡಬೇಕಾಯ್ತು. ಫಸ್ಟ್ ಸೆಷನ್ ಮುಗಿಯೋ ಹೊತ್ತಿಗೆ ಒಂದು ವಿಕೆಟ್ ಸಿಕ್ಕಿದ್ದು ಎರಡನೇ ಸೆಷನ್​ನಲ್ಲಿ ಆಕಾಶ್ ದೀಪ್ ಮತ್ತು ಅಂಶುಲ್ ಕಾಂಬೋಜ್ ಸತತ ಮೂರು ಓವರ್‌ಗಳಲ್ಲಿ ಮೂರು ವಿಕೆಟ್ ತಗೊಂಡ್ರು. ಹೀಗೆ ದಿನದಾಟದ ಅಂತ್ಯಕ್ಕೆ ನ್ಯೂಜಿಲೆಂಡ್ 246 ರನ್ ಗಳಿಸಿ 5 ವಿಕೆಟ್ಸ್ ಕಳ್ಕೊಂಡಿದೆ. ಟಾಮ್ ಬ್ಲಂಡೆಲ್ 53 ಹಾಗೇ ಗ್ಲೆನ್ ಫಿಲಿಪ್ಸ್ 36 ರನ್ಸ್ ಕೆಲ ಹಾಕಿ 2ನೇ ದಿನದಾಟಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಇನ್ನು ಭಾರತದ ಪರ ಬುಮ್ರಾಗೆ ಮೊದಲ ದಿನದಾಟದಲ್ಲಿ ಯಾವುದೇ ವಿಕೆಟ್ ಸಿಕ್ಕಿಲ್ಲ. ಆಕಾಶ್ ದೀಪ್ 2 ವಿಕೆಟ್ ತಗೊಂಡ್ರೆ ಅನ್ಶುಲ್ ಕಾಂಬೋಜ್ , ಗುರ್ನೂರ್ ಬ್ರಾರ್, ವಾಷಿಂಗ್ಟನ್ ಸುಂದರ್ ತಲಾ ಒಂದೊಂದು ವಿಕೆಟ್​ಗಳನ್ನ ಬೇಟೆಯಾಡಿದ್ರು. ಸೋ ಮೊದಲ ದಿನದಾಟವನ್ನ ಗಮನಿಸಿದ್ರೆ ಎರಡೂ ತಂಡಗಳೂ ಹಿಡಿತ ಸಾಧಿಸಿವೆ. ಆರಂಭದಲ್ಲಿ ಕಿವೀಸ್ ಬ್ಯಾಟಿಂಗ್ ಚೆನ್ನಾಗಿದ್ರೆ ಡೇ ಎಂಡಲ್ಲಿ ಭಾರತದ ಬೌಲಿಂಗ್ ಚೆನ್ನಾಗಿತ್ತು. ಸೋ ಸೇಮ್ ಪರ್ಫಾಮೆನ್ಸ್ ಇದೆ. ಆದ್ರೆ ಇಲ್ಲಿರುವಂಥ ಪ್ರಶ್ನೆ ಏನಂದ್ರೆ ಟೀಂ ಇಂಡಿಯಾದ ಪ್ಳೇಯಿಂಗ್ 11..

2ನೇ ಪಂದ್ಯದಲ್ಲೂ ಮೊಹಮ್ಮದ್ ಸಿರಾಜ್ ಗೆ ಬೆಂಚ್!

ಕ್ರೈಸ್ಟ್​​ಚರ್ಚ್​​ನಲ್ಲಿ ನಡೆಯುತ್ತಿರೋ ಪಂದ್ಯಕ್ಕೆ ಭಾರತ ಬ್ಯಾಟಿಂಗ್​ನಲ್ಲಿ ಏನೂ ಚೇಂಜಸ್ ಮಾಡದೇ ಇದ್ರೂ ಬೌಲಿಂಗ್​ನಲ್ಲಿ 1 ಬದಲಾವಣೆಗಳನ್ನ ಮಾಡಿದೆ. ಪ್ರಸಿದ್ಧ್ ಕೃಷ್ಣ ಬದಲಿಗೆ ಗುರ್ನೂರ್ ಬ್ರಾರ್ಗೆ ಅವಕಾಶ ನೀಡಲಾಗಿದ್ದು, ಅವರು ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದಾರೆ. ಉಳಿದಂತೆ ಯಾವುದೇ ಚೇಂಜಸ್ ಆಗಿಲ್ಲ. ರವೀಂದ್ರ ಜಡೇಜಾ ಹಾಗೇ ಪ್ರಸಿದ್ಧ್ ಕೃಷ್ಣ ಮತ್ತೆ ಬೆಂಚ್ ಕಾಯಬೇಕಾಗಿದೆ. ಅದ್ರಲ್ಲೂ ಮೊದಲ ಟೆಸ್ಟ್ ಪಂದ್ಯದಲ್ಲೇ ಮೊಹಮ್ಮದ್ ಸಿರಾಜ್​ರನ್ನ ಹೊರಗಿಟ್ಟಾಗ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಪಂದ್ಯ ಡ್ರಾ ಆದಾಗ್ಲೂ ಕೂಡ ಬೌಲರ್ಸ್ ವೀಕ್​ನೆಸ್ ಅನ್ನೋದೇ ಕಾರಣವಾಗಿತ್ತು. ಅಟ್​ಲೀಸ್ಟ್ ಎರಡನೇ ಪಂದ್ಯಕ್ಕಾದ್ರೂ ಎಚ್ಚೆತ್ತುಕೊಳ್ತಾರೆ ಅಂದ್ರೆ ಗೌತಮ್ ಗಂಭೀರ್ ಮತ್ತು ಶುಭ್​ಮನ್ ಗಿಲ್ ಅಂಥದ್ದೇ ನಿರ್ಧಾರಗಳನ್ನ ತಗೊಂಡಿದ್ದಾರೆ. ಮೊಹಮ್ಮದ್ ಸಿರಾಜ್ ಅವರನ್ನು ಕೈಬಿಟ್ಟಿರುವುದು ಬಾರೀ ಚರ್ಚೆಗೆ ಕಾರಣವಾಗಿದೆ. ಸುನಿಲ್ ಗವಾಸ್ಕರ್, ಮೊಹಮ್ಮದ್ ಕೈಫ್ ಮತ್ತು ಮುರಳಿ ಕಾರ್ತಿಕ್ ಸೇರಿದಂತೆ ಮಾಜಿ ಕ್ರಿಕೆಟರ್ಸ್ ಕೂಡ ಶಾಕ್ ಆಗಿದ್ದಾರೆ. ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಅಂತೂ ಫುಲ್ ರೈಸ್ ಆಗಿದ್ದಾರೆ.. ಸಿರಾಜ್‌ಗೆ ಪದೇ ಪದೇ ಅವಕಾಶ ಕೊಡದೇ ಇರೋದು ಸರಿಯಲ್ಲ  ಆಯ್ಕೆ ಸಮಿತಿ ಹಾಗೂ ತಂಡದ ನಿರ್ವಹಣಾ ಮಂಡಳಿಯನ್ನು ಪ್ರಶ್ನಿಸಿದ್ದಾರೆ. ತಂಡದ ಬೌಲಿಂಗ್ ಕೋಚ್ ಮೊರ್ನೆ ಮೊರ್ಕೆಲ್ ಅವರೇ ಇತ್ತೀಚೆಗೆ ಸಿರಾಜ್ ಅವರನ್ನು ವಿಶ್ವದರ್ಜೆಯ ಬೌಲರ್.. ಅದ್ಭುತವಾಗಿ ಬೌಲಿಂಗ್ ಮಾಡುತ್ತಿದ್ದಾರೆ ಎಂದೂ ಹೇಳಿದ್ದರು. ಹೀಗಿದ್ರೂ ಪ್ಲೇಯಿಂಗ್ 11ನಿಂದ ಯಾಕೆ ಕೈಬಿಟ್ರಿ ಎಂದು ಕಿಡಿ ಕಾರಿದ್ದಾರೆ. ಹರ್ಷ್ ಭೋಗ್ಲೆ ಕೂಡ ಸಿರಾಜ್ ರನ್ನ ಕೈಬಿಟ್ಟಿರೋ ಬಗ್ಗೆ  ಎಕ್ಸ್‌ ಖಾತೆಯಲ್ಲಿ ಬೇಸರ ಹೊರಹಾಕಿದ್ದಾರೆ. ಸಿರಾಜ್ ಈಗ ಭಾರತದ ಆರನೇ ಆಯ್ಕೆಯ ವೇಗದ ಬೌಲರ್ ಆಗಿದ್ದಾರೆ. ಇದು ನನಗೆ ತುಂಬಾ ಅನ್ಯಾಯವೆನಿಸುತ್ತದೆ ಎಂದು ಬರೆದುಕೊಂಡಿದ್ದಾರೆ. ಅಷ್ಟಕ್ಕೂ ಸಿರಾಜ್ ಬಗ್ಗೆ ದಿಗ್ಗಜರೆಲ್ಲಾ ಬ್ಯಾಟ್ ಬೀಸೋಕೆ ಕಾರಣವೂ ಇದೆ.

ಮ್ಯಾಚ್ ವಿನ್ನರ್ ಸಿರಾಜ್!

ಇಂಗ್ಲೆಂಡ್ ಪ್ರವಾಸದ ಐದು ಟೆಸ್ಟ್‌ ಪಂದ್ಯಗಳಲ್ಲೂ ಬೌಲಿಂಗ್.. 23 ವಿಕೆಟ್

ನ್ಯೂಜಿಲೆಂಡ್ ಎ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ನಾಲ್ಕು ವಿಕೆಟ್

ನ್ಯೂಜಿಲೆಂಡ್ ವಿರುದ್ಧದ ಕೊನೆಯ ಏಕದಿನ ಪಂದ್ಯದಲ್ಲಿ ಎರಡು ವಿಕೆಟ್

ಸೋ ಈ ರೀತಿಯಾದಂತ ಪ್ರದರ್ಶನಗಳಿದ್ರೂ ಸಿರಾಜ್​ರನ್ನ ಕೈಬಿಟ್ಟಿರೋದೇ ಇಲ್ಲಿ ಹಲವು ಪ್ರಶ್ನೆಗಳನ್ನ ಮೂಡಿಸಿದೆ. ಇದೆಲ್ಲಕ್ಕಿಂತ ಮೇನ್ ರೀಸನ್ ಏನಂದ್ರೆ ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ದೇಶಗಳಲ್ಲಿ ಈ ದಶಕದಲ್ಲಿ ಭಾರತ ಗೆದ್ದ ಒಂಬತ್ತು ಟೆಸ್ಟ್‌  ಪಂದ್ಯಗಳಲ್ಲೂ ಸಿರಾಜ್ ಪ್ಲೇಯಿಂಗ್ XIನಲ್ಲಿದ್ದರು. ಇದು ಅವರ ವಿದೇಶಿ ಟೆಸ್ಟ್ ಇಂಪಾರ್ಟೆನ್ಸ್ ಏನು ಅನ್ನೋದನ್ನ ತೋರಿಸುತ್ತೆ. ಆದ್ರೆ ಈಗ ಸಿರಾಜ್ ಇಲ್ಲದೆ ಭಾರತಕ್ಕೆ ಗೆಲುವು ಸಿಗುತ್ತಾ? ಫಾರ್ಮ್ ಇಲ್ಲ ಎಂದು ಗಿಲ್ ಹೇಳಿದ್ರೆ, ಮಾಜಿ ಆಟಗಾರರೆಲ್ಲಾ ಸಿರಾಜ್ ಬೆನ್ನಿಗೆ ನಿಲ್ಲುತ್ತಿದ್ದಾರೆ. ವಿದೇಶಿ ನೆಲದಲ್ಲಿ ಭಾರತದ ಗೆಲುವಿನ ಹೀರೋ ಆಗಿದ್ದ ವೇಗದ ಬೌಲರ್‌ಗೆ ಈಗ ತಂಡದಲ್ಲಿ ಸ್ಥಾನವೇ ಇಲ್ಲ. ಇದು ಕೇವಲ ಫಾರ್ಮ್ ವಿಚಾರನಾ ಅಥವಾ ಟೀಮ್ ಇಂಡಿಯಾದ ಬೌಲಿಂಗ್ ಕಾಂಬಿನೇಷನ್‌ನಲ್ಲಿ ಸಿರಾಜ್‌ಗೆ ಜಾಗವೇ ಇಲ್ಲವಾ ಅನ್ನೋ ಪ್ರಶ್ನೆಗಳನ್ನ ಮೂಡಿಸಿದೆ. ಮೋಸ್ಟ್ ಇಂಪಾರ್ಟೆಂಟ್ಲಿ ಕೋಚ್ ಗೌತಮ್ ಗಂಭೀರ್ ಬಹುಶಃ ಈ ಪಂದ್ಯವನ್ನೂ ಸೋಲಲೇಬೇಕು ಅಂತಾ ಪಣ ತೊಟ್ಟಂಗಿದೆ. ಈ ಮ್ಯಾಚ್ ಸೋತ್ರು ಅಂದ್ರೆ ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಕನಸನ್ನೂ ಬಿಡ್ಬೇಕು ಅಷ್ಟೇ.

Shantha Kumari

Leave a Reply

Your email address will not be published. Required fields are marked *