DO OR DIEಗೆ ಭಾರತ ರೆಡಿ! – KL ಔಟ್.. ಗಿಲ್, ಸುಂದರ್ ಎಂಟ್ರಿ?
2ನೇ ಪಂದ್ಯಕ್ಕೆ ರೋಹಿತ್ ಪ್ಲ್ಯಾನ್ ಏನು?
ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಮ್ಯಾಚ್ನಲ್ಲಿ ಮೊದಲ ಪಂದ್ಯ ಕೈಚೆಲ್ಲಿಕೊಂಡಿರುವಂಥ ಭಾರತಕ್ಕೆ ಎರಡನೇ ಪಂದ್ಯ ಗೆಲ್ಲೋದು ತುಂಬಾನೇ ಇಂಪಾರ್ಟೆಂಟ್. ಇದೊಂಥರ ಭಾರತದ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯ ಅಂದ್ರೂ ತಪ್ಪಾಗಲ್ಲ. ಬೆಂಗಳೂರಿನಲ್ಲಿ ಆಗಿರೋ ಎಡವಟ್ಟನ್ನ ಪುಣೆಯಲ್ಲಿ ರಿಪೀಟ್ ಆಗದಂತೆ ನೋಡಿಕೊಳ್ಬೇಕು. ಸರಣಿಯನ್ನ ಕೈವಶ ಮಾಡಿಕೊಳ್ಬೇಕು ಅಂದ್ರೆ ಮುಂದಿನ ಪಂದ್ಯ ಗೆಲ್ಲಲೇಬೇಕು. ಇದೇ ಕಾರಣಕ್ಕೆ ಟೀಂ ಇಂಡಿಯಾ ಪ್ಲೇಯಿಂಗ್ 11ಗೆ ಸರ್ಜರಿ ಆಗೋದು ಫಿಕ್ಸ್ ಆಗಿದೆ. ಅದ್ರಲ್ಲೂ ಕನ್ನಡಿಗ ಕೆಎಲ್ ರಾಹುಲ್ ಸ್ಥಾನವನ್ನ ಕಳ್ಕೊಳ್ಳೋ ಭೀತಿಯಲ್ಲಿದ್ದಾರೆ. ಹಾಗಾದ್ರೆ ಗುರುವಾರದ ಪಂದ್ಯಕ್ಕೆ ಯಾರೆಲ್ಲಾ ಚಾನ್ಸ್ ಪಡೀತಾರೆ? ಗಿಲ್ ಕಮ್ ಬ್ಯಾಕ್ ರಾಹುಲ್ ಹೊರಬೀಳ್ತಾರಾ? ವಾಷಿಂಗ್ಟನ್ ಸುಂದರ್ ಗೆ ಬಿಸಿಸಿಐ ಬುಲಾವ್ ನೀಡಿದ್ದೇಕೆ? ಟೀಂ ಇಂಡಿಯಾ ಸ್ಟ್ರಾಟಜಿ ಏನು? ಈ ಕುರಿತ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಕುಸುಮಾ ಹಠ ಭಾಗ್ಯಗೆ ಸಂಕಟ – ಹೆಂಡ್ತಿ ಮೇಲೆ ತಾಂಡವ್ ಗೆ LOVE
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ 3 ಟೆಸ್ಟ್ ಪಂದ್ಯಗಳ ಸರಣಿಯ ಎರಡನೇ ಪಂದ್ಯ ಗುರುವಾರದಿಂದ ಪುಣೆಯಲ್ಲಿ ಆರಂಭವಾಗಲಿದೆ. ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಕಿವೀಸ್ ತಂಡ 8 ವಿಕೆಟ್‌ಗಳಿಂದ ಗೆದ್ದು ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಇದೀಗ ಎರಡನೇ ಪಂದ್ಯವನ್ನೂ ಗೆದ್ದು ಸರಣಿ ವಶಪಡಿಸಿಕೊಳ್ಳೋ ಪ್ಲ್ಯಾನ್ನಲ್ಲಿದೆ. ಮತ್ತೊಂದೆಡೆ ಬಲಿಷ್ಠ ಭಾರತ ಮೊದಲ ಪಂದ್ಯದಲ್ಲಿ ಆಗಿರೋ ಮಿಸ್ಟೇಕ್ಸ್ನ ಸರಿಪಡಿಸಿಕೊಂಡು ಎರಡನೇ ಪಂದ್ಯದಲ್ಲಿ ಕಮ್ಬ್ಯಾಕ್ ಮಾಡೋ ಯೋಜನೆಯಲ್ಲಿದೆ. ಇದೇ ಕಾರಣಕ್ಕೆ ಫ್ಲೇಯಿಂಗ್ 11ನಲ್ಲಿ ಒಂದಷ್ಟು ಬದಲಾವಣೆಗೂ ಮುಂದಾಗಿದೆ.
ಗಿಲ್ ರೀ ಎಂಟ್ರಿ.. ಹೊರಬೀಳ್ತಾರಾ ಕೆಎಲ್ ರಾಹುಲ್?
ಬೆಂಗಳೂರಿನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಕನ್ನಡಿಗ ಕೆಎಲ್ ರಾಹುಲ್ ನೀರಸ ಪ್ರದರ್ಶನ ನೀಡಿದ್ರು. ಮೊದಲ ಇನ್ನಿಂಗ್ಸ್‌ನಲ್ಲಿ ಡಕ್ ಔಟ್ ಆದ ರಾಹುಲ್, ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 12 ರನ್ಗಳಿಗೆ ವಿಕೆಟ್ ಒಪ್ಪಿಸಿದರು. ಟೀಂ ಇಂಡಿಯಾ ಸೋಲಿಗೆ ರಾಹುಲ್ ವೈಫಲ್ಯವೂ ಒಂದು ಕಾರಣ ಎಂದೇ ಟೀಕಿಸಲಾಗುತ್ತಿದೆ. ಕಳಪೆ ಫಾರ್ಮ್‌ಗೆ ಒಳಗಾಗುತ್ತಿರುವ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ರನ್ನ ಡ್ರಾಪ್ ಮಾಡಬೇಕೆಂಬ ಚರ್ಚೆ ನಡೆಯಲಾಗುತ್ತಿದೆ. ಸರ್ಫರಾಜ್ ಖಾನ್ 150 ರನ್ ಸಿಡಿಸುವ ಮೂಲಕ ಬೆಂಗಳೂರು ಟೆಸ್ಟ್ನಲ್ಲಿ ಭಾರತ ತಂಡಕ್ಕೆ ಆಸರೆಯಾಗಿದ್ದರು. ಅದರೊಂದಿಗೆ ಪುಣೆಯಲ್ಲಿ ಗುರುವಾರದಿಂದ ಆರಂಭವಾಗಲಿರುವ ಎರಡನೇ ಟೆಸ್ಟ್‌ಗೆ ಶುಭಮನ್ ಗಿಲ್ ಮರುಪ್ರವೇಶ ಮಾಡಿದರೆ ರಾಹುಲ್ ಜಾಗ ಬಿಟ್ಟುಕೊಡಬೇಕಾಗಬಹುದು.
ವಾಷಿಂಗ್ಟನ್ ಸುಂದರ್ ಗೆ ಬುಲಾವ್ ನೀಡಿರೋ ಬಿಸಿಸಿಐ!
ಮೊದಲ ಪಂದ್ಯದ ಸೋಲಿನ ಬೆನ್ನಲ್ಲೇ ಎಚ್ಚೆತ್ತುಕೊಂಡ ಟೀಮ್ ಇಂಡಿಯಾ ಸೆಲೆಕ್ಟರ್ಸ್ ಯುವ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್‌ಗೆ ಬುಲಾವ್ ನೀಡಿದ್ದಾರೆ. ಸರಣಿಯ ಎರಡನೇ ಟೆಸ್ಟ್ ಪಂದ್ಯ ಪುಣೆಯಲ್ಲಿ ನಡೆಯಲಿದ್ದು, ತಮಿಳುನಾಡು ಮೂಲದ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಿಂದ ಬಿಡುಗಡೆಯಾಗಿ ಭಾರತ ತಂಡವನ್ನು ಸೇರಿಕೊಂಡಿದ್ದಾರೆ. ಆದ್ರೆ ತಂಡದಲ್ಲಿ ಈಗಾಗಲೇ ಬ್ಯಾಕಪ್ ಆಲ್‌ರೌಂಡರ್ ಆಗಿ ಅಕ್ಷರ್ ಪಟೇಲ್ ಇದ್ದಾರೆ. ಹೀಗಿರುವಾಗಲ ಆಫ್ ಸ್ಪಿನ್ ಬೌಲಿಂಗ್ ಮಾಡುವ ವಾಷಿಂಗ್ಟನ್ ಸುಂದರ್ ಅವರನ್ನು ತಂಡಕ್ಕೆ ಆಯ್ಕೆ ಮಾಡಿರುವುದಾದರೂ ಏಕೆ?ಅನ್ನೋ ಬಗ್ಗೆ ಆಯ್ಕೆದಾರರು ಮಾಹಿತಿಯನ್ನ ಬಿಟ್ಟು ಕೊಟ್ಟಿಲ್ಲ.
ಮೊಹಮ್ಮದ್ ಸಿರಾಜ್ ಪ್ರದರ್ಶನದಿಂದಲೂ ಭಾರತಕ್ಕೆ ಟೆನ್ಷನ್!
ಭಾರತ ತಂಡದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಕೂಡ ಟೆನ್ಷನ್ ಹೆಚ್ಚಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ‘ಡಿಎಸ್‌ಪಿ ಸಾಹೇಬ್’ ಎಂದೇ ಕರೆಸಿಕೊಳ್ತಿರೊ ಸಿರಾಜ್ ಈ ವರ್ಷ ತವರು ನೆಲದಲ್ಲಿ ಹೇಳಿಕೊಳ್ಳುವಂತ ಪ್ರದರ್ಶನ ನೀಡಿಲ್ಲ. ಸಿರಾಜ್ ತವರಿನಲ್ಲಿ ನಡೆದ ಕಳೆದ 7 ಟೆಸ್ಟ್ ಪಂದ್ಯಗಳ 14 ಇನ್ನಿಂಗ್ಸ್‌ಗಳಲ್ಲಿ ಕೇವಲ 12 ವಿಕೆಟ್‌ಗಳನ್ನು ಗಳಿಸಲು ಶಕ್ತರಾಗಿದ್ದಾರೆ. ಹೀಗಾಗಿ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಅವರನ್ನು ಕೈಬಿಟ್ಟರೆ, ಅವರ ಬದಲಿಗೆ ವೇಗದ ಬೌಲರ್ ಯಾರು ಎಂಬ ಪ್ರಶ್ನೆಯೂ ಇದೆ. ಪುಣೆ ಪಿಚ್ ಸ್ಪಿನ್ ಬೌಲಿಂಗ್‌ಗೆ ಹೆಚ್ಚು ಅನುಕೂಲಕರವಾಗಿದೆ. ಹೀಗಾಗಿ ನಾಯಕ ರೋಹಿತ್ ಹೆಚ್ಚುವರಿ ಸ್ಪಿನ್ ದಾಳಿಯೊಂದಿಗೆ ಕಣಕ್ಕಿಳಿಯಬಹುದು. ಸಿರಾಜ್ ಬದಲಿಗೆ ವಾಷಿಂಗ್ಟನ್ ಸುಂದರ್ ಅವರಿಗೆ ತಂಡದ ಆಡುವ ಅವಕಾಶ ಸಿಗಬಹುದು. ಇತ್ತೀಚೆಗೆ ವಾಷಿಂಗ್ಟನ್ ಸುಂದರ್ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಬೌಲಿಂಗ್ ಮಾತ್ರವಲ್ಲದೆ, ಬ್ಯಾಟಿಂಗ್‌ನಲ್ಲಿಯೂ ಅವರು ಮಿಂಚು ಹರಿಸಿದ್ದಾರೆ. ಭಾರತದ ಪರ ಟೆಸ್ಟ್ ಕ್ರಿಕೆಟ್ ಸಿರಾಜ್ 2020ರಲ್ಲಿ ಪದಾರ್ಪಣೆ ಮಾಡಿದ್ದರು. ಅಂದಿನಿಂದ ಅವರು 30 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 80 ವಿಕೆಟ್ ಪಡೆದಿದ್ದಾರೆ. ಸಿರಾಜ್ ತಮ್ಮ ವೃತ್ತಿಜೀವನದಲ್ಲಿ ನ್ಯೂಜಿಲೆಂಡ್ ವಿರುದ್ಧ ಆಡಿರುವ 2 ಟೆಸ್ಟ್ ಪಂದ್ಯಗಳಲ್ಲಿ 5 ವಿಕೆಟ್‌ಗಳನ್ನು ಉರುಳಿಸಿದ್ದಾರೆ. ತವರು ನೆಲದಲ್ಲಿ ಸಿರಾಜ್ 13 ಪಂದ್ಯಗಳಲ್ಲಿ 19 ವಿಕೆಟ್ ಪಡೆದು ಹೆಚ್ಚು ಪ್ರಭಾವ ಬೀರಿಲ್ಲ. ಆದರೆ ವಿದೇಶದಲ್ಲಿ ಸಿರಾಜ್ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ. ವಿದೇಶಿ ನೆಲದಲ್ಲಿ ಸಿರಾಜ್ ಒಟ್ಟು 17 ಪಂದ್ಯಗಳಲ್ಲಿ 61 ವಿಕೆಟ್ ಕಬಳಿಸಿದ್ದಾರೆ.
ಎರಡನೇ ಟೆಸ್ಟ್ ಮ್ಯಾಚ್ ನಿಂದ ಹೊರಗುಳಿಯುತ್ತಾರಾ ಪಂತ್?
ಬೆಂಗಳೂರಿನಲ್ಲಿ ನಡೆದ ಪಂದ್ಯದ ಸೆಕೆಂಡ್ ಇನ್ನಿಂಗ್ಸ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ರಿಷಭ್ ಪಂತ್ ಎರಡನೇ ಪಂದ್ಯದಿಂದ ಹೊರಗುಳಿಯೋ ಸಾಧ್ಯತೆ ಇದೆ. ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಮೊಣಕಾಲಿನ ಗಾಯಕ್ಕೆ ತುತ್ತಾದ ಪಂತ್ ನಾಲ್ಕನೇ ದಿನದಾಟದಿಂದ ಸಂಪೂರ್ಣವಾಗಿ ಹೊರಗುಳಿದಿದ್ದರು. ಆ ಬಳಿಕ ಭಾರತದ ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಬಂದ ಪಂತ್ 99 ರನ್ ಸಿಡಿಸಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಆದರೆ ಸಂಪೂರ್ಣ ಫಿಟ್ ಆಗಿರುವಂತೆ ಕಂಡುಬಂದಿರಲಿಲ್ಲ. 2ನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾತ್ರ ಮಾಡಿದ್ದ ಅವರು ಪಂದ್ಯದುದ್ದಕ್ಕೂ ವಿಕೆಟ್ ಕೀಪಿಂಗ್ ಮಾಡಲಿಲ್ಲ. ಹೀಗಾಗಿ ಪುಣೆ ಪಂದ್ಯದಿಂದ ಹೊರಗೆ ಉಳಿಯೋ ಸಾಧ್ಯತೆ ಇದೆ.
ಒಟ್ನಲ್ಲಿ ಮೊದಲ ಸೋಲಿನ ಆಘಾತದಲ್ಲಿರೋ ಭಾರತ ಎರಡನೇ ಪಂದ್ಯವನ್ನ ಗೆದ್ದು ಕಮ್ಬ್ಯಾಕ್ ಮಾಡೋ ಯೋಜನೆಯಲ್ಲಿದೆ. ಅದಕ್ಕಾಗಿ ತಂಡವನ್ನ ಮತ್ತಷ್ಟು ಸ್ಟ್ರಾಂಗ್ ಮಾಡ್ತಿದೆ. ಮತ್ತೊಂದೆಡೆ ಕಿವೀಸ್ ಪಡೆ ಕೂಡ ಮೊದಲ ಪಂದ್ಯ ಗೆದ್ದಿರೋ ಜೋಶ್ನಲ್ಲಿದ್ದು, ಅದೇ ಸ್ಟ್ರಾಟಜಿಯೊಂದಿಗೆ ಕಣಕ್ಕಿಳಿಯಲಿದೆ. ಅಂತಿಮವಾಗಿ ಯಾರು ಮೇಲು ಗೈ ಸಾಧಿಸ್ತಾರೆ ಅನ್ನೋದನ್ನ ಕಾದು ನೊಡ್ಬೇಕು.