NZ ಬೇಟೆಯೇ ಭಾರತಕ್ಕೆ ಪ್ರತಿಷ್ಠೆ – RO-KOಗೆ 2027ರ ವಿಶ್ವಕಪ್ ಪ್ರೆಶರ್ 
ತವರಿನ ಅಗ್ನಿಪರೀಕ್ಷೆ ಗೆಲ್ತಾರಾ ಗಿಲ್?  

NZ ಬೇಟೆಯೇ ಭಾರತಕ್ಕೆ ಪ್ರತಿಷ್ಠೆ – RO-KOಗೆ 2027ರ ವಿಶ್ವಕಪ್ ಪ್ರೆಶರ್ ತವರಿನ ಅಗ್ನಿಪರೀಕ್ಷೆ ಗೆಲ್ತಾರಾ ಗಿಲ್?  

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಏಕದಿನ ಸರಣಿ ನಾಳೆಯಿಂದ ಶುರುವಾಗಲಿದೆ. ವಡೋದರಾದಲ್ಲಿ ಮೊದಲ ಪಂದ್ಯ ನಡೆಯಲಿದೆ. ಟೀಂ ಇಂಡಿಯಾಗೆ ಇದು ಈ ವರ್ಷದ ಮೊದಲ ಅಂತಾರಾಷ್ಟ್ರೀಯ ಸರಣಿ ಅನ್ನೋದ್ರ ಜೊತೆಗೆ ಹಲವು ಕಾರಣಗಳಿಂದ ತುಂಬಾನೇ ಮುಖ್ಯವಾಗಿದೆ. ಶುಭ್​ಮನ್ ಗಿಲ್ ನಾಯಕತ್ವದಲ್ಲಿ ಭಾರತ ತಂಡ ಹಾಗೇ ಮೈಕೆಲ್ ಬ್ರೇಸ್​ವೆಲ್ ಕ್ಯಾಪ್ಟನ್ಸಿಯಲ್ಲಿ ನ್ಯೂಜಿಲೆಂಡ್ ಟೀಂ ಮುಖಾಮುಖಿಯಾಗಲಿವೆ. ಮೊದಲ ಏಕದಿನ ಪಂದ್ಯ ಜನವರಿ 11 ರಂದು ವಡೋದರಾದ ಬಿಸಿಎ ಕ್ರೀಡಾಂಗಣದಲ್ಲಿ ನಡೆಯಲಿದೆ, ನಂತರ ಜನವರಿ 14 ರಂದು ರಾಜ್‌ಕೋಟ್ ಮತ್ತು ಜನವರಿ 18 ರಂದು ಇಂದೋರ್‌ನಲ್ಲಿ ಪಂದ್ಯಗಳು ನಡೆಯಲಿವೆ. ಟಿ20ಐ ಸರಣಿ ಮತ್ತು ಟಿ-20 ವಿಶ್ವಕಪ್​ಗೂ ಮುನ್ನ ನಡೆಯುತ್ತಿರೋ ಈ ಸರಣಿಯ ಗೆಲುವು ಉಭಯ ತಂಡಗಳ ಪಾಲಿಗೂ ಪ್ರತಿಷ್ಠೆಯಾಗಲಿದೆ. ಯಾರೇ ಗೆದ್ರೂ ಇತಿಹಾಸ ಸೃಷ್ಟಿಸ್ತಾರೆ.

ಇದನ್ನೂ ಓದಿ : RCB & DC ಗೆ ಬಿಗ್ ಶಾಕ್ – ಸ್ಟಾರ್ ಆಟಗಾರರೇ ಟೀಂನಿಂದ ಔಟ್

ಭಾರತದಲ್ಲಿ ಒಂದೇ ಒಂದು ಏಕದಿನ ಸರಣಿ ಗೆಲ್ಲದ ನ್ಯೂಜಿಲೆಂಡ್!

ಭಾರತ ಮತ್ತು ನ್ಯೂಜಿಲೆಂಡ್ ಟೀಮ್​ಗಳು 1988 ರಿಂದ 50 ಓವರ್‌ಗಳ ದ್ವಿಪಕ್ಷೀಯ ಸರಣಿಗಳನ್ನು ಆಡಿಕೊಂಡು ಬರುತ್ತಿವೆ. ರಿಯಾಲಿಟಿ ಏನಂದ್ರೆ 37 ವರ್ಷಗಳ ಈ ಇತಿಹಾಸದಲ್ಲಿ ಇದುವರೆಗೂ ಭಾರತದ ನೆಲದಲ್ಲಿ ಕಿವೀಸ್‌ ಪಡೆ ಒಂದೇ ಒಂದು ಒಡಿಐ ಸರಣಿಯನ್ನು ಗೆದ್ದು ವಾಪಸ್‌ ಆಗಿಲ್ಲ. ಕೊನೆಯದಾಗಿ 2023ರಲ್ಲಿ ಆಡಿದ ಸರಣಿಯಲ್ಲೂ ಭಾರತ ತಂಡ 3-0 ದಿಂದ ಗೆದ್ದುಕೊಂಡಿತ್ತು. ಭಾರತದ ಮೈದಾನಗಳಲ್ಲಿ ನ್ಯೂಜಿಲೆಂಡ್‌ ಟೀಮ್‌ ಇದುವರೆಗೆ ಒಟ್ಟು 40 ಏಕದಿನ ಪಂದ್ಯಗಳನ್ನು ಆಡಿದೆ. ಇವುಗಳಲ್ಲಿ ಟೀಮ್‌ ಇಂಡಿಯಾ 31 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಒಂದು ಮ್ಯಾಚ್‌ ಡ್ರಾ ಆದ್ರೆ ಉಳಿದ 8 ಪಂದ್ಯಗಳನ್ನು ಕಿವೀಸ್‌ ಪಡೆ ಗೆದ್ದಿದೆ. ಹೀಗಾಗಿ ಈ ಸರಣಿಯಲ್ಲೂ ಭಾರತ ಮಸ್ಟ್ ಌಂಡ್ ಶುಡ್ ಗೆದ್ದು ಈ ದಾಖಲೆಯನ್ನ ಹಾಗೇ ಉಳಿಸಿಕೊಳ್ಬೇಕು. ನ್ಯೂಜಿಲೆಂಡ್ ವಿರುದ್ಧ ಭಾರತ ಕಂಪ್ಲೀಟ್ ಡಾಮಿನೇಟ್ ಮಾಡಿದ್ರೂ ಕೂಡ 2024ರ ಟೆಸ್ಟ್ ಸರಣಿಯಲ್ಲಿ ಕಿವೀಸ್ ಪಡೆ ಕೊಟ್ಟ ಶಾಕ್ ಮರೆಯೋಕೆ ಆಗಲ್ಲ. ಹೀಗಾಗಿ ಅಷ್ಟು ಈಸಿಯಾಗೂ ತಗೊಳ್ಳೋಕೆ ಆಗಲ್ಲ. ಹಾಗಾದ್ರೆ ಭಾರತ ಈ ಸರಣಿ ಗೆಲ್ಲೋದು ಎಷ್ಟು ಮುಖ್ಯ.. ಯಾಕೆ ಅನ್ನೋದನ್ನ ಒಂದೊಂದಾಗೇ ನೋಡ್ತಾ ಹೋಗೋಣ.

ಸರಣಿ ಗೆಲುವು ಎಷ್ಟು ಮುಖ್ಯ?

2026ರ ಮೊದಲ ಸರಣಿ ಗೆದ್ದು ಶುಭಾರಂಭ ಮಾಡಬೇಕಾದ ಒತ್ತಡ

ಏಕದಿನ ಮಾದರಿಯಲ್ಲಿ ಭಾರತ ಪ್ರಸ್ತುತ ನಂಬರ್ 1 ಟೀಂ

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮೇಲೆ ನಿರೀಕ್ಷೆ

ಐಸಿಸಿ ಶ್ರೇಯಾಂಕದಲ್ಲಿ ಅಗ್ರಸ್ಥಾನ, 2027ರ ವಿಶ್ವಕಪ್ ಟಾರ್ಗೆಟ್

ಕ್ಯಾಪ್ಟನ್ ಆಗಿ ಮೊದಲ ಸರಣಿ ಗೆಲ್ಲಬೇಕಿರೋ ಶುಭ್ ಮನ್ ಗಿಲ್

ಸರಣಿ ಗೆದ್ರೆ ಟಿ-20ಐ ತಂಡದಲ್ಲಿರೋ ಪ್ಲೇಯರ್ಸ್ ಗೆ ಬೂಸ್ಟ್

4 ದಶಕಗಳಿಂದ ಭಾರತದಲ್ಲಿ ಕಿವೀಸ್ ಪಡೆಗೆ ಗೆಲುವು ದಕ್ಕಿಲ್ಲ

2024ರ ಕೊನೆಯಲ್ಲಿ ಟೆಸ್ಟ್ ಕ್ರಿಕೆಟ್ ಕ್ಲೀನ್ ಸ್ವೀಪ್ ಸೇಡು

Shantha Kumari