ರೋಹಿತ್ ZERO.. ಕೊಹ್ಲಿ HERO – ಮಳೆಯಲ್ಲೂ ಬೆವರಿಳಿಸಿ ಗೆದ್ದ ಕಿಂಗ್
ಪಂದ್ಯ ಗೆದ್ರೂ ತಪ್ಪಿಲ್ಲ ಟೆನ್ಷನ್

ರೋಹಿತ್ ZERO.. ಕೊಹ್ಲಿ HERO – ಮಳೆಯಲ್ಲೂ ಬೆವರಿಳಿಸಿ ಗೆದ್ದ ಕಿಂಗ್ಪಂದ್ಯ ಗೆದ್ರೂ ತಪ್ಪಿಲ್ಲ ಟೆನ್ಷನ್

ಒಂದ್ಕಡೆ ಮಳೆ ಕಣ್ಣಾಮುಚ್ಚಾಲೆ.. ಇನ್ನೊಂದ್ಕಡೆ ರಾಜ ಮತ್ತು ಯುವರಾಜನ ಆರ್ಭಟ.. ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಭರ್ಜರಿಯಾಗಿ ಗೆದ್ದು ಬೀಗಿದೆ. 5 ಪಂದ್ಯಗಳ ಸರಣಿಯನ್ನ 1-0 ಅಂತರದಲ್ಲಿ ಲೀಡ್ ಪಡೆದಿದೆ. ಬೌಲಿಂಗ್​ನಲ್ಲೇ ಕಿವೀಸ್ ಪಡೆಯನ್ನ ಕಟ್ಟಿ ಹಾಕಿದ್ದ ಭಾರತ ಬ್ಯಾಟಿಂಗ್​ನಲ್ಲೂ ಧೂಳೆಬ್ಬಿಸಿ ವಿಕ್ಟರಿ ಪಡೆದಿದೆ. ಹೀಗಿದ್ರೂ ರೋಹಿತ್ ಶರ್ಮಾ ಪಾಲಿಗೆ ಈ ಮ್ಯಾಚ್ ಕರಾಳವಾಗಿದೆ.

ಇದನ್ನೂ ಓದಿ : ಭಾರತದ ಬೌಲಿಂಗ್ ಗೆ ಬೆಚ್ಚಿದ NZ – ಕೊಹ್ಲಿ SUPER MAN ಕ್ಯಾಚ್

ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಬೌಲಿಂಗ್ ಎಕ್ಸ್​ಟ್ರಾರ್ಡಿನರಿ. 186ಕ್ಕೆ ಕಿವೀಸ್ ಪಡೆಯನ್ನ ಆಲೌಟ್ ಮಾಡಿ ಈಸಿಯಾಗಿ ಮ್ಯಾಚ್ ಗೆಲ್ಬೋದು ಅಂತಾ ಚೇಸಿಂಗ್​ಗೆ ಇಳಿದ ಭಾರತಕ್ಕೆ ಮಳೆ ಕಾಟ. ವಿರಾಟ್ ಕೊಹ್ಲಿ ಮತ್ತು ಶುಭ್​ಮನ್ ಗಿಲ್ ಪಾರ್ಟ್ನರ್​ಶಿಪ್ ನೋಡಿ ಎಂಜಾಯ್ ಮಾಡ್ತಿದ್ದ ಅಭಿಮಾನಿಗಳಿಗೆ ಆಗಿದ್ದಾಂಗ್ಗೆ ಪಂದ್ಯ ನಿಲ್ಲಿಸ್ತಾ ಇದ್ದದ್ದು ಕಿರಿಕಿರಿ ಅನ್ನಿಸ್ತಿತ್ತು. ಪಂದ್ಯ ನಡೆಯುತ್ತೋ ಇಲ್ವೋ ರದ್ದಾಗುತ್ತೋ ಅನ್ನೋ ಟೆನ್ಷನ್ ಬೇರೆ. ಬಟ್ ಮ್ಯಾಚ್ ಅಂತೂ ಫಿನಿಶ್ ಆಯ್ತು. ಭಾರತನೂ ವಿನ್ ಆಯ್ತು. ಬಟ್ ಟ್ವಿಸ್ಟ್ ಕೂಡ ಇತ್ತು.

ಪದೇಪದೆ ಮಳೆ ಕಾಟಕ್ಕೆ 143 ರನ್ ಗಳ ಟಾರ್ಗೆಟ್!

ಟಾಸ್ ಸೋತು ಫಸ್ಟ್ ಬ್ಯಾಟಿಂಗ್ ಮಾಡಿದ ಕಿವೀಸ್ ಪರ ಯಾವ ಬ್ಯಾಟರ್ ಕೂಡ ಅರ್ಧಶತಕ ಗಳಿಸೋಕೂ ಆಗ್ಲಿಲ್ಲ. ಆ ಮಟ್ಟಿಗೆ ಭಾರತದ ಬೌಲರ್ಸ್ ಪೆವಿಲಿಯನ್ ಪರೇಡ್ ನಡೆಸುವಂತೆ ಮಾಡಿದ್ರು. ಟಿಮ್ ಸೈಫರ್ಟ್ 38 ರನ್ಸ್ ಕಲೆ ಹಾಕಿದ್ರೆ ಗ್ಲೆನ್ ಫಿಲಿಪ್ಸ್ 30 ರನ್ಸ್ ಕಲೆ ಹಾಕಿದ್ರು,. ಅದ್ರಲ್ಲೂ 10ನೇ ವಿಕೆಟ್​ಗೆ ಜೊತೆಯಾದ ಬ್ಲೇರ್ ಟಿಕ್ನರ್ 4 ಸಿಕ್ಸರ್​ಗಳ ಸಮೇತ 34 ರನ್ಸ್ ಚಚ್ಚಿದ್ರು. ಉಳಿದಂತೆ ಯಾರಿಂದಲೂ ಬಿಗ್ ಇನ್ನಿಂಗ್ಸ್ ಬರ್ಲಿಲ್ಲ. ಹೀಗಾಗಿ 41.1 ಓವರ್​ಗಳಲ್ಲಿ 185 ರನ್ ಗಳಿಸಿ ಆಲೌಟ್ ಆದ್ರು. ಅರ್ಶದೀಪ್ ಸಿಂಗ್ 4 ವಿಕೆಟ್, ಅನ್ಶುಲ್ ಕಾಂಬೋಜ್ 2 ಹಾಗೇ ಗುರ್ನೂರ್ ಬ್ರಾರ್ 3 ವಿಕೆಟ್ಸ್ ಬೇಟೆಯಾಡಿದ್ರು. ಸೋ 186 ರನ್​ಗಳಲ್ವಾ 30 ಓವರ್​ಗಳ ಒಳಗೇ ಮ್ಯಾಚ್ ಫಿನಿಶ್ ಆಗುತ್ತೆ ಅನ್ಕೊಂಡ್ರೆ ಮಳೆ ಬಂದು ಟಾರ್ಗೆಟ್ ಇನ್ನೂ ಕಡಿಮೆ ಮಾಡಲಾಯ್ತು. ಪದೇ ಪದೇ ಮಳೆ ಪಂದ್ಯ ಸ್ಥಗಿತ ಆಗಿ ಸ್ಟಾರ್ಟ್ ಆಗ್ತಾ ಇದ್ದ ಪರಿಣಾಮ ಡಕ್‌ವರ್ತ್-ಲೂಯಿಸ್-ಸ್ಟರ್ನ್ (DLS) ನಿಯಮದ ಪ್ರಕಾರ ಭಾರತಕ್ಕೆ 50 ಓವರ್​ಗಳ ಬದಲು 32 ಓವರ್‌ಗಳಿಗೆ ಪಂದ್ಯವನ್ನ ಸೀಮಿತಗೊಳಿಸಲಾಯ್ತು. ಹಾಗೇ 186 ರನ್​ಗಳ ಬದಲು 143 ರನ್‌ಗಳ ಪರಿಷ್ಕೃತ ಟಾರ್ಗೆಟ್ ನೀಡಲಾಯ್ತು. ಹೀಗೆ ಮಳೆ ನಡುವೆ  ಕಿಂಗ್ ಕೊಹ್ಲಿ ಮತ್ತು ನಾಯಕ ಗಿಲ್ ಕೂಡ ರನ್ ಮಳೆ ಸುರಿಸುತ್ತಾ ಕಿವೀಸ್​​ಗೆ ಮಳೆಯಲ್ಲೂ ಬೆವರಿಳಿಸಿದ್ರು.

ರೋಹಿತ್ ಸೊನ್ನೆ.. ಕೊಹ್ಲಿ-ಗಿಲ್ ಅದ್ಭುತ ಜೊತೆಯಾಟ!

ಇನ್ನಿಂಗ್ಸ್ ಆರಂಭಿಸಿದ ಭಾರತದ ಪರ ಗಿಲ್ ಮತ್ತು ರೋಹಿತ್ ಓಪನರ್ಸ್ ಆಗಿ ಕಣಕ್ಕಿಳಿಸಿದ್ರು. ಆದ್ರೆ ರೋಹಿತ್ ಖಾತೆಯನ್ನೇ ತೆರೆಯದೇ ಔಟ್ ಆದ್ರು. ಈ ವೇಳೆ ಜೊತೆಯಾದ ಕಿಂಗ್ ವಿರಾಟ್ ಕೊಹ್ಲಿ ಮತ್ತು ಪ್ರಿನ್ಸ್ ಶುಭ್​ಮನ್ ಗಿಲ್ ಕಿವೀಸ್ ಬೌಲರ್​ಗಳನ್ನ ಅಟ್ಟಾಡಿಸಿದ್ರು. 2ನೇ ವಿಕೆಟ್​ಗೆ 114 ರನ್​ಗಳ ಜೊತೆಯಾಟವಾಡಿದ್ರು. 37 ರನ್​ಗಳಿಗೆ ಗಿಲ್ ಔಟ್ ಆದ್ರೆ ಕೊಹ್ಲಿ 51 ಎಸೆತಗಳಲ್ಲಿ 13 ಬೌಂಡರಿ, 1 ಸಿಕ್ಸರ್ ಸಮೇತ 74 ರನ್ ಸಿಡಿಸಿ ವಿಕೆಟ್ ಒಪ್ಪಿಸಿದ್ರು. ಸೋ ಕೊಹ್ಲಿ ಔಟ್ ಆಗುವ ವೇಳೆಗೆಲ್ಲಾ ಭಾರತ 124 ರನ್ಸ್ ಕಲೆ ಹಾಕಿತ್ತು. ಸೋ ಅಲ್ಲಿಗೆ ಕೊಹ್ಲಿ ಔಟ್ ಆದ್ಮೇಲೆ ಭಾರತದ ಗೆಲುವಿಗೆ ಬೇಕಾಗಿದ್ದು ಕೇವಲ 19 ರನ್ಸ್ ಮಾತ್ರ. ಆದ್ರೆ ಈ 19 ರನ್ಸ್ ಗಳಿಸೋಕೆ ಭಾರತ ಒದ್ದಾಡಿತು. 5ನೇ ಕ್ರಮಾಂಕದಲ್ಲಿ ಬಂದ ಅಕ್ಷರ್ ಪಟೇಲ್ ಡಕ್ ಔಟ್, ಶ್ರೇಯಸ್ ಅಯ್ಯರ್ 15 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ರು. ಕೊನೆಗೆ ಕೆಎಲ್ ರಾಹುಲ್ ಮತ್ತು ನಮದ್ ಧೀರ್ ಜೊತೆಗೂಡಿ ಮ್ಯಾಚ್ ಫಿನಿಶನ್ ಮಾಡಿದ್ರು. ಭಾರತ 5 ವಿಕೆಟ್​ಗಳಿಂದ ಪಂದ್ಯವನ್ನ ಗೆದ್ದುಕೊಳ್ತು. 22.4 ಓವರ್​ಗಳಲ್ಲಿ ಅಂದ್ರೆ ಇನ್ನೂ 56 ಎಸೆತಗಳು ಬಾಕಿ ಇದ್ದಾಗ್ಲೇ 143 ರನ್ ಗಳಿಸಿ ಭಾರತ ಸುಲಭವಾಗಿ ಈ ಪಂದ್ಯವನ್ನ ಗೆದ್ದುಕೊಳ್ತು. ಈ ಮ್ಯಾಚಲ್ಲಿ ಅದ್ಭುತ ಬ್ಯಾಟಿಂಗ್ ಮೂಲಕ ಕಿಂಗ್ ಕೊಹ್ಲಿ ಮತ್ತೊಮ್ಮೆ ದಾಖಲೆಗಳ ಸರದಾರನಾಗಿದ್ದಾರೆ.

ಕಿಂಗ್ ಕೊಹ್ಲಿ ರೆಕಾರ್ಡ್ಸ್!

ನಂಬರ್ 3ನಲ್ಲಿ 13,000(251 ಇನ್ನಿಂಗ್ಸ್) ರನ್ ಪೂರೈಸಿದ ಮೊದಲ ಬ್ಯಾಟರ್

ಏಕದಿನ ಕ್ರಿಕೆಟ್ ರನ್ ಚೇಸಿಂಗ್‌ ನಲ್ಲಿ ಸಚಿನ್ ತೆಂಡೂಲ್ಕರ್ ದಾಖಲೆ ಬ್ರೇಕ್

ಕೊಹ್ಲಿ ತಮ್ಮ ವೃತ್ತಿಜೀವನದ 80ನೇ ಏಕದಿನ ಅರ್ಧಶತಕ ಕೂಡ ಕಂಪ್ಲೀಟ್

35 ಎಸೆತಗಳಲ್ಲಿ ಅರ್ಧಶತಕ.. ವಿದೇಶಿ ನೆಲದಲ್ಲಿ 2ನೇ ವೇಗದ ಅರ್ಧಶತಕ

ಹೀಗೆ ಕೊಹ್ಲಿ ಮೈದಾನಕ್ಕಿಳಿದ್ರೆ ಈಗ್ಲೂ ನಾನು ರನ್ ಮಷಿನ್ ಅನ್ನೋದನ್ನ ಪ್ರೂವ್ ಮಾಡಿದ್ರು. ಅದ್ರಲ್ಲೂ ಚೇಸಿಂಗ್ ಅಂತಾ ಬಂದಾಗ ನಾನೇ ಕಿಂಗ್ ಅನ್ನೋದನ್ನ ತೋರಿಸಿ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನೂ ಪಡೆದ್ರು. ಆದ್ರೆ ಹಿಟ್​ಮ್ಯಾನ್ ರೋಹಿತ್ ಶರ್ಮಾ ಮಾತ್ರ ಈ ಪಂದ್ಯದಲ್ಲಿ ಬೇಡದೇ ಇರೋ ದಾಖಲೆ ಬರೆದ್ರು. 186 ರನ್​ಗಳ ಟಾರ್ಗೆಟ್ ಬೆನ್ನಟ್ಟಿದ ಭಾರತದ ಪರ ಌಸ್ ಯೂಶ್ಯೂಯಲ್ ರೋಹಿತ್ ಶರ್ಮಾ ಮತ್ತು ಶುಭ್​ಮನ್ ಗಿಲ್ ಇನ್ನಿಂಗ್ಸ್ ಶುರು ಮಾಡಿದ್ರು. ಬಟ್ ಬ್ಯಾಡ್​ಲಕ್ ಏನಂದ್ರೆ ಫಸ್ಟ್ ಓವರ್​ನಲ್ಲೇ ರೋಹಿತ್ ವಿಕೆಟ್ ಕಳ್ಕೊಳ್ತಾರೆ. ಇಂಟ್ರೆಸ್ಟಿಂಗ್ ಅಂದ್ರೆ ಖಾತೆ ತೆರೆಯದೇ ಔಟ್ ಆಗಿದ್ದು. ಕಿವೀಸ್ ವೇಗಿ ಕೈಲ್ ಜೇಮಿಸನ್ ಎಸೆತದಲ್ಲಿ ರೋಹಿತ್ ಶರ್ಮಾ ಮೊದಲ ಐದು ಬಾಲ್​ಗಳನ್ನ ಫೇಸ್ ಮಾಡಿ ಯಾವುದೇ ರನ್ ಗಳಿಸಿರಲಿಲ್ಲ. 6ನೇ ಎಸೆತ ವೈಡ್ ಆಗಿತ್ತು.  ಅದೇ ಓವರ್​ನ ಕೊನೇ ಬಾಲ್​ನಲ್ಲಿ ಮಿಚೆಲ್ ಸ್ಯಾಂಟ್ನರ್‌ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದ್ರು. ಇದೇ ಔಟ್ ಹಿಟ್​ಮ್ಯಾನ್ ಜರ್ನಿಗೆ ದೊಡ್ಡ ಕರಿನೆರಳಾಗಿ ಕಾಡಿದೆ. ಯಾಕಂದ್ರೆ  ಏಕದಿನ ಕ್ರಿಕೆಟ್‌ನಲ್ಲಿ ಬರೋಬ್ಬರಿ 1,123 ದಿನಗಳ ನಂತರ ರೋಹಿತ್ ಶರ್ಮಾ ಖಾತೆ ತೆರೆಯದೇ ಔಟ್ ಆದ್ರು. ರೋಹಿತ್ ಶರ್ಮಾ ಕೊನೆಯ ಬಾರಿಗೆ ಒಡಿಐ ಮಾದರಿಯಲ್ಲಿ ಸೊನ್ನೆಗೆ ಔಟ್ ಆಗಿದ್ದು ಅಕ್ಟೋಬರ್ 7, 2023 ರಂದು ಆಸ್ಟ್ರೇಲಿಯಾ ವಿರುದ್ಧದ ಒಡಿಐ ವಿಶ್ವಕಪ್ ಪಂದ್ಯದಲ್ಲಿ. ಅದಾದ ನಂತರ ಸತತ 39 ಏಕದಿನ ಇನ್ನಿಂಗ್ಸ್‌ಗಳಲ್ಲಿ ಅವರು ಒಂದೂ ಬಾರಿಯೂ ಶೂನ್ಯಕ್ಕೆ ಔಟ್ ಆಗಿರಲಿಲ್ಲ.  ಇದೀಗ ಮೂರು ವರ್ಷಗಳ ನಂತರ ಕೈಲ್ ಜೇಮಿಸನ್ ಬೌಲಿಂಗ್​ನಲ್ಲಿ ಶೂನ್ಯ ಸುತ್ತಿದ್ದಾರೆ. ಈ  ಡಕ್​ಔಟ್ ನಿಂದಾಗಿ ಭಾರತದ ಪರ ಏಕದಿನ ಕ್ರಿಕೆಟ್​ನಲ್ಲಿ ಅತ್ಯಧಿಕ ಸೊನ್ನೆ ಸುತ್ತಿದ ಆಟಗಾರರ ಪಟ್ಟಿಯಲ್ಲಿ 7ನೇ ಸ್ಥಾನಕ್ಕೇರಿದ್ದಾರೆ. ಒಟ್ಟು 17 ಸಲ ಔಟ್ ಆಗಿದ್ದಾರೆ. ಈ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ 20 ಸಲ ಔಟ್ ಆಗಿ ಮೊದಲ ಸ್ಥಾನದಲ್ಲಿದ್ದಾರೆ. ಒಟ್ನಲ್ಲಿ ಭಾರತ ಪಂದ್ಯ ಗೆದ್ದಾಯ್ತು. ಎರಡನೇ ಪಂದ್ಯ ಶನಿವಾರ ನಡೆಯಲಿದ್ದು ಈ ಮ್ಯಾಚ್ ಕೂಡ ಇಂಟ್ರೆಸ್ಟಿಂಗ್ ಆಗಿರಲಿದೆ.

Shantha Kumari

Leave a Reply

Your email address will not be published. Required fields are marked *