ಜಸ್ಟ್ 16 ರನ್.. ಶ್ರೇಯಸ್‌ಗೆ ಪಂದ್ಯಶ್ರೇಷ್ಠ! 11,000 ರನ್‌.. ಸ್ಮೃತಿ ರೆಕಾರ್ಡ್

ಜಸ್ಟ್ 16 ರನ್.. ಶ್ರೇಯಸ್‌ಗೆ ಪಂದ್ಯಶ್ರೇಷ್ಠ! 11,000 ರನ್‌.. ಸ್ಮೃತಿ ರೆಕಾರ್ಡ್

ಕ್ರಿಕೆಟ್ ಲೋಕದ ಇಂಟ್ರೆಸ್ಟಿಂಗ್ ಸುದ್ದಿಗಳು

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯಲ್ಲಿ ಕಳೆದ ಕೆಲವು ದಿನಗಳಿಂದ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಅವರ ಅಧಿಕಾರಾವಧಿಯ ಅಂತ್ಯದ ಕುರಿತಾದ ಅಸಲಿ ಕಾರಣಗಳು ಈಗ ಹೊರಬಿದ್ದಿವೆ. ಬೆಂಗಳೂರಿನಲ್ಲಿರುವ ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್ ಮುಖ್ಯಸ್ಥರಾದ ವಿವಿಎಸ್ ಲಕ್ಷ್ಮಣ್ ಮತ್ತು ಅಗರ್ಕರ್ ನಡುವಿನ ತೀವ್ರ ಭಿನ್ನಾಭಿಪ್ರಾಯ ಹಾಗೂ ನಾಯಕ ರೋಹಿತ್ ಶರ್ಮಾ ಅವರ ಭವಿಷ್ಯದ ಕುರಿತಾದ ಗೊಂದಲಗಳೇ ಅಗರ್ಕರ್ ತಮ್ಮ ಒಪ್ಪಂದದ ವಿಸ್ತರಣೆಯನ್ನು ನಿರಾಕರಿಸಲು ಮುಖ್ಯ ಕಾರಣ ಎಂದು ವರದಿಗಳು ತಿಳಿದು ಬಂದಿದೆ.

2027ರ ಏಕದಿನ ವಿಶ್ವಕಪ್‌ನಲ್ಲಿ  ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಆಡಲಿ ಅಥವಾ ಆಡದಿರಲಿ, ಭಾರತೀಯ ತಂಡಕ್ಕೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ ಎಂದು ಟೀಮ್ ಇಂಡಿಯಾದ ಮಾಜಿ ಆಯ್ಕೆಗಾರ ಸಂದೀಪ್ ಪಾಟೀಲ್  ಅಚ್ಚರಿ ಹೇಳಿಕೆ ನೀಡಿದ್ದಾರೆ. ಈ ಜೋಡಿ ಬಿಟ್ಟುಹೋಗುವ ಸ್ಥಾನವನ್ನು ತುಂಬಬಲ್ಲ ಸಮರ್ಥ ಆಟಗಾರರು ಭಾರತ ತಂಡಕ್ಕೆ ಲಭ್ಯವಿದ್ದಾರೆ ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡ IPL 2027ಕ್ಕೆ ಜಹೀರ್ ಖಾನ್ ಅವರನ್ನು ಹೊಸ ಹೆಡ್ ಕೋಚ್ ಆಗಿ ನೇಮಕ ಮಾಡಿದೆ. ಸ್ಟೀಫನ್ ಫ್ಲೆಮಿಂಗ್ ಅವರ 18 ವರ್ಷಗಳ ಕೋಚಿಂಗ್ ಅಧ್ಯಾಯ ಅಂತ್ಯಗೊಂಡ ಬಳಿಕ ಈ ಬದಲಾವಣೆ ನಡೆದಿದೆ. CSK ಇತಿಹಾಸದಲ್ಲಿ ಜಹೀರ್ ಮೊದಲ ಭಾರತೀಯ ಹೆಡ್ ಕೋಚ್ ಆಗಿದ್ದಾರೆ. ಮುಂಬೈ ಇಂಡಿಯನ್ಸ್ ಮತ್ತು ಲಖನೌ ತಂಡಗಳಲ್ಲೂ ಅವರು ಕೋಚಿಂಗ್ ಜವಾಬ್ದಾರಿ ನಿರ್ವಹಿಸಿದ್ದರು.

ಶ್ರೀಲಂಕಾದ ಮಾಜಿ ನಾಯಕ ಸನತ್ ಜಯಸೂರ್ಯ ಅವರು ಭಾರತದ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ‘ವೈಭವ್ ವಿಭಿನ್ನ ರೀತಿಯ ಪ್ರತಿಭೆ. ಅವರು ಭಾರತದ ಭವಿಷ್ಯ ಎಂದು ನಾನು ಭಾವಿಸುತ್ತೇನೆ. ಅವರ ಬಳಿ ಸಾಕಷ್ಟು ಸಮಯವಿದೆ. ಆದ್ದರಿಂದ ಅವರಿಗೆ ಉತ್ತಮ ಪ್ರದರ್ಶನ ನೀಡಲು ಅವಕಾಶ ಕೊಡಿ ಮತ್ತು ಅವರು ಖಂಡಿತವಾಗಿಯೂ ಉತ್ತಮವಾಗಿ ಆಡುತ್ತಾರೆ’ ಎಂದಿದ್ದಾರೆ.

ಇದನ್ನೂ ಓದಿ: 217 ಟಾರ್ಗೆಟ್.. 69ಕ್ಕೆ ಆಲೌಟ್ – ಏಷ್ಯನ್ ಗೇಮ್ಸ್ ನೂ ಗೆದ್ದ ಭಾರತ

2026ರ ಏಷ್ಯನ್ ಗೇಮ್ಸ್ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಅಬ್ಬರಿಸಿದ ಸ್ಮೃತಿ ಮಂಧನಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 11,000 ರನ್ ಪೂರೈಸಿದ್ದಾರೆ. ಈ ಮೂಲಕ ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿ ಈ ಮೈಲಿಗಲ್ಲು ತಲುಪಿದ ವಿಶ್ವದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.  ಲಂಕಾ ವಿರುದ್ದದ ಪಂದ್ಯದಲ್ಲಿ  ಕೇವಲ 10 ಎಸೆತಗಳಲ್ಲೇ  ಬಾಕಿ ಇದ್ದ 13 ರನ್‌ಗಳ ಗುರಿ ದಾಟಿ ವಿಶ್ವ ದಾಖಲೆ ಬರೆದರು.

ಭಾರತೀಯ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರ ಗೌತಮ್ ಗಂಭೀರ್ ಅವರು ಭಾರತೀಯ ಜನತಾ ಪಕ್ಷದ  ಹಿರಿಯ ನಾಯಕ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದಾರೆ. ಗಂಭೀರ್ ತಮ್ಮ ಎಕ್ಸ್ ಖಾತೆಯಲ್ಲಿ ಅಮಿತ್ ಶಾ ಅವರೊಂದಿಗಿನ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಈ ಭೇಟಿಯ ಮಾಹಿತಿಯನ್ನು ನೀಡಿದ್ದಾರೆ.

ಜಪಾನ್ ವಿರುದ್ಧದ ರೋಚಕ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 2 ರನ್‌ಗಳ ರೋಚಕ ಗೆಲುವು ಸಾಧಿಸಿದೆ. ಕಡಿಮೆ ಮೊತ್ತದ ಪಂದ್ಯದಲ್ಲಿ ಭಾರತ ಸಂಕಷ್ಟಕ್ಕೆ ಸಿಲುಕಿದ್ದರೂ, ಶ್ರೇಯಸ್ ಅಯ್ಯರ್ ತಮ್ಮ ಅನುಭವದ ಆಟದ ಮೂಲಕ ತಂಡಕ್ಕೆ ನೆರವಾದರು. ಅಯ್ಯರ್ 12 ಎಸೆತಗಳಲ್ಲಿ 16 ರನ್‌ಗಳ ಮಹತ್ವದ ಕೊಡುಗೆ ನೀಡಿದರು. ಈ ಪಂದ್ಯದಲ್ಲಿ ಅವರ ಪ್ರದರ್ಶನವನ್ನು ಪರಿಗಣಿಸಿ ಶ್ರೇಯಸ್ ಅಯ್ಯರ್‌ಗೆ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಲಾಯಿತು. ಭಾರತ 32 ರನ್‌ಗಳ ಸವಾಲಿನ ಮೊತ್ತ ಕಲೆಹಾಕಿದರೆ, ಜಪಾನ್ ತಂಡ 30 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿತು.

ಆಸ್ಟ್ರೇಲಿಯಾ ಅಂಡರ್-19 ವಿರುದ್ಧದ ಎರಡನೇ ಏಕದಿನ ಪಂದ್ಯವನ್ನು ಆತಿಥೇಯ ಭಾರತ ಯುವ ತಂಡ 103 ರನ್​​ಗಳಿಂದ ಗೆದ್ದುಕೊಂಡಿದೆ. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಟೀಂ ಇಂಡಿಯಾ 2-0 ಅಂತರದಿಂದ ತನ್ನದಾಗಿಸಿಕೊಂಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ ಲಕ್ಷಯ್ ರಾಯ್‌ಚಂದಾನಿ ನಾಯಕತ್ವದ ಭಾರತೀಯ ಅಂಡರ್ -19 ತಂಡವು 341 ರನ್‌ಗಳ ಬೃಹತ್ ಮೊತ್ತ ದಾಖಲಿಸಿತು.

ಇಂಗ್ಲೆಂಡ್ ತಂಡದ ಬ್ಯಾಟರ್‌ಗಳಿಗೆ ಸ್ಪಿನ್ ಎದುರಿಸುವ ಕುರಿತು ಕೆವಿನ್ ಪೀಟರ್ಸನ್ ವಿಶೇಷ ಮಾರ್ಗದರ್ಶನ ನೀಡಿದ್ದಾರೆ ಎಂದು ನಾಯಕ ಹ್ಯಾರಿ ಬ್ರೂಕ್ ಹೇಳಿದ್ದಾರೆ. ಶ್ರೀಲಂಕಾ ವಿರುದ್ಧದ T20 ಸರಣಿಯನ್ನು ಇಂಗ್ಲೆಂಡ್ 3-0 ಅಂತರದಲ್ಲಿ ಗೆದ್ದಿದೆ. ಮುಂದಿನ ODI ಸರಣಿಗೂ ಮುನ್ನ ಪೀಟರ್ಸನ್ ಅವರ ಅನುಭವ ತಂಡಕ್ಕೆ ಬಳಕೆಯಾಗುತ್ತಿದೆ.

ಕ್ರಿಕೆಟ್ ಜಗತ್ತಿನಲ್ಲಿ ಸೋಲಿನ ನಡುವೆಯೂ ವೈಯಕ್ತಿಕ ಸಾಧನೆಯನ್ನು ಅತಿಯಾಗಿ ಸಂಭ್ರಮಿಸುವ ಪ್ರವೃತ್ತಿಗೆ ಪಾಕಿಸ್ತಾನದ ಮಾಜಿ ದಿಗ್ಗಜ ವೇಗಿ ವಾಸಿಂ ಅಕ್ರಮ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಪಾಕಿಸ್ತಾನ್ ತಂಡ ಹೀನಾಯ ಮುಖಭಂಗ ಅನುಭವಿಸಿದರೂ, ಪಾದಾರ್ಪಣೆ ಪಂದ್ಯದಲ್ಲೇ ಮಿಂಚಿದ ಯುವ ವೇಗಿ ರಝಾವುಲ್ಲಾಗೆ ಸಿಗುತ್ತಿರುವ ಭವ್ಯ ಸ್ವಾಗತದ ಬಗ್ಗೆ ಅಕ್ರಮ್ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಮುಖಮುಚ್ಚಿಕೊಂಡು ಹೋಗಿ ಎಂದಿದ್ದಾರೆ.

Kishor KV

Leave a Reply

Your email address will not be published. Required fields are marked *