ENG ಪಿಚ್ INDಗೆ ಕಬ್ಬಿಣದ ಕಡಲೆ – KL, ಜೈಸ್ವಾಲ್, ಕರುಣ್ ಕಾಪಾಡ್ತಾರಾ?
ವಿದೇಶಗಳಲ್ಲಿ PRINCE ಪರದಾಡೋದ್ಯಾಕೆ?

ENG ಪಿಚ್ INDಗೆ ಕಬ್ಬಿಣದ ಕಡಲೆ – KL, ಜೈಸ್ವಾಲ್, ಕರುಣ್ ಕಾಪಾಡ್ತಾರಾ?ವಿದೇಶಗಳಲ್ಲಿ PRINCE ಪರದಾಡೋದ್ಯಾಕೆ?

ಶುಭ್​ಮನ್ ಗಿಲ್ ನಾಯಕತ್ವದಲ್ಲಿ ಇಂಗ್ಲೆಂಡ್ ಸರಣಿಗೆ ರೆಡಿಯಾಗಿರೋ ಟೀಂ ಇಂಡಿಯಾದಲ್ಲಿ ಯಂಗ್​ಸ್ಟರ್ಸೇ ಜಾಸ್ತಿ ಇದ್ದಾರೆ. ಅದೂ ಅಲ್ದೇ ಆಲ್ಮೋಸ್ಟ್ ಟಿ-20ಐನಲ್ಲಿ ಧಮಾಕೇದಾರ್ ಪರ್ಫಾಮೆನ್ಸ್ ಕೊಟ್ಟವ್ರೇ ರೆಡ್ ಬಾಲ್ ಚಾಲೆಂಜ್​ಗೆ ರೆಡಿ ಇದ್ದಾರೆ. ಇಂಗ್ಲೆಂಡ್ ನ ಪಿಚ್, ಅಲ್ಲಿನ ವಾತಾವರಣ, ಸಿಚುಯೇಷನ್​ಗೆ ಅಡ್ಜಸ್ಟ್ ಆಗಿ ಆತಿಥೇಯರನ್ನ ಸೋಲಿಸೋ ಟಾರ್ಗೆಟ್ ಭಾರತ ತಂಡದ ಮೇಲಿದೆ. ಅದೂ ಅಲ್ದೇ ಗೌತಮ್ ಗಂಭೀರ್ ಪಾಲಿಗೂ ಇದೊಂಥರಾ ಮಸ್ಟ್ ವಿನ್ ಸರಣಿ ಇದ್ದಂಗೆ. ಗಂಭೀರ್ ಕೋಚ್ ಆದ್ಮೇಲೆ ಭಾರತ ಬ್ಯಾಕ್ ಟು ಬ್ಯಾಕ್ ಎರಡು ಟೆಸ್ಟ್ ಸರಣಿ ಕಳ್ಕೊಂಡಿದೆ. ಸೋ ಈ ಸರಣಿ ಗೆಲ್ಲಲೇಬೇಕಾದ ಒತ್ತಡವೂ ಇದೆ. ಈ ಸಿರೀಸ್​ನಲ್ಲಿ ಒಂದಷ್ಟು ಆಟಗಾರರ ಮೇಲೆ ನಿರೀಕ್ಷೆಗಳೂ ಜಾಸ್ತಿ ಇದ್ದು ಅದ್ರಲ್ಲಿ ನಂಬರ್ 1 ಕೆಎಲ್ ರಾಹುಲ್.

ಇದನ್ನೂ ಓದಿ : ಚೋಕರ್ಸ್ ಹಣೆಪಟ್ಟಿ ಕಳಚಿದ 2025 – RCB, HH, SA.. ಮತ್ತೆಷ್ಟು ತಂಡಗಳು?

ಸ್ಟಾರ್ ಬ್ಯಾಟರ್ಸ್ ಆಗಿದ್ದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಒಟ್ಟೊಟ್ಟಿಗೆ ನಿವೃತ್ತಿ ಹೇಳಿದ್ದರಿಂದ ಭಾರತ ಟೆಸ್ಟ್ ಕ್ರಿಕೆಟ್‌ನಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸುತ್ತಿದೆ. ಇದೀಗ ಬ್ಯಾಟಿಂಗ್ ಘಟಕವನ್ನು ಮುನ್ನಡೆಸುವ ಜವಾಬ್ದಾರಿ ಕೆಎಲ್ ರಾಹುಲ್ ಹೆಗಲ ಮೇಲೆ ಬಿದ್ದಿದೆ. 33 ವರ್ಷದ ರಾಹುಲ್ ಇಂಗ್ಲೆಂಡ್ ಸರಣಿಯಲ್ಲಿ ಕೇವಲ ಹಿರಿಯ ಬ್ಯಾಟ್ಸ್‌ಮನ್ ಆಗಿ ಮಾತ್ರವಲ್ಲದೆ ತಮ್ಮ ಟ್ಯಾಲೆಂಟ್, ಎಲಿಗೆನ್ಸ್​ನೂ ಪ್ರೂವ್ ಮಾಡ್ಬೇಕಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಸೈಕಲ್ ಶುರುವಾಗೋದ್ರ ಜೊತೆಗೆ ರಾಹುಲ್​ಗೆ ಅತಿದೊಡ್ಡ ಅವಕಾಶವೂ ಇದಾಗಿದೆ. 33 ವರ್ಷ ವಯಸ್ಸಿನ ಕೆಎಲ್ ರಾಹುಲ್ ತಂಡದಲ್ಲಿ ಅತ್ಯಂತ ಅನುಭವಿ ಬ್ಯಾಟ್ಸ್‌ಮನ್. ಇಂಗ್ಲೆಂಡ್ ವಿರುದ್ಧ 13 ಟೆಸ್ಟ್‌ಗಳಲ್ಲಿ ಮೂರು ಶತಕಗಳು ಸೇರಿದಂತೆ 955 ರನ್ ಗಳಿಸಿದ್ದಾರೆ. ಲಾರ್ಡ್ಸ್ ಮೈದಾನದಲ್ಲಿ 2018 ರಲ್ಲಿ ದಿ ಓವಲ್‌ನಲ್ಲಿ 149 ಮತ್ತು 2021 ರಲ್ಲಿ ಲಾರ್ಡ್ಸ್‌ನಲ್ಲಿ 129 ರನ್ ಗಳಿಸಿದ್ರು. 2018 ಹಾಗೇ 2019ರಲ್ಲಿ ರಾಹುಲ್ ಪ್ರದರ್ಶನ ಅಷ್ಟಕ್ಕಷ್ಟೇ ಇತ್ತು. ಆ ಟೈಮಲ್ಲಿ ಕೆಲ ಪಂದ್ಯಗಳಿಂದ ಡ್ರಾಪ್ ಕೂಡ ಮಾಡಲಾಗಿತ್ತು. ಆ ನಂತ್ರ 2021ರಲ್ಲಿ ತಂಡಕ್ಕೆ ಕಮ್ ಬ್ಯಾಕ್ ಮಾಡಿದ್ರು. ಇದೀಗ ರೋಹಿತ್ ಮತ್ತು ಕೊಹ್ಲಿ ಇಲ್ಲದಿರೋದ್ರಿಂದ ಹಿರಿಯ ಆಟಗಾರನಾಗಿ ತಮ್ಮ ಸ್ಥಾನವನ್ನ ಭದ್ರಪಡಿಸಿಕೊಳ್ಳೋಕೆ ಇದೊಂದು ಸುವರ್ಣಾವಕಾಶವಾಗುತ್ತೆ.

ಕನ್ನಡಿಗ ಕರುಣ್ ನಾಯರ್ ಪಾಲಿಗೂ ಕೂಡ ಈ ಸಿರೀಸ್ ತುಂಬಾನೇ ಮುಖ್ಯವಾಗಿದೆ. ರಣಜಿ ಟ್ರೋಫಿಯಲ್ಲಿ 9 ಪಂದ್ಯಗಳಲ್ಲಿ 863 ರನ್‌ಗಳು ಮತ್ತು ವಿಜಯ್ ಹಜಾರೆ ಟ್ರೋಫಿಯಲ್ಲಿ 779 ರನ್‌ಗಳನ್ನು ಗಳಿಸುವ ಮೂಲಕ, ಆಯ್ಕೆದಾರರ ಗಮನ ಸೆಳೆದಿದ್ದಲ್ಲದೇ 8 ವರ್ಷಗಳ ಬಳಿಕ ಟೀಂ ಇಂಡಿಯಾಗೆ ಕಮ್ ಬ್ಯಾಕ್ ಮಾಡಿದ್ರು. 33 ವರ್ಷದ ನಾಯರ್ ಇಂಗ್ಲೆಂಡ್ ಲಯನ್ಸ್ ವಿರುದ್ಧದ ಮೊದಲ ಅನಧಿಕೃತ ಟೆಸ್ಟ್‌ನಲ್ಲಿ ಅದ್ಭುತ ದ್ವಿಶತಕ ಗಳಿಸುವ ಮೂಲಕ ತಾನು ಕೂಡ ಅವಕಾಶಕ್ಕೆ ಅರ್ಹನೆಂದು ಮತ್ತೊಮ್ಮೆ ಸಾಬೀತುಪಡಿಸಿದ್ದರು. 284 ಎಸೆತಗಳಲ್ಲಿ 203 ರನ್ ಗಳಿಸಿದ ನಾಯರ್,​ ಇನ್ನಿಂಗ್ಸ್‌ನಲ್ಲಿ 26 ಬೌಂಡರಿ ಮತ್ತು 1 ಸಿಕ್ಸರ್ ಬಾರಿಸಿದ್ದರು. ಅಲ್ದೇ ಕರುಣ್ ಇಂಗ್ಲೆಂಡ್ ಸರಣಿಗೆ ಆಯ್ಕೆಯಾಗೋಕೆ ಕಾರಣವೂ ಇದೆ. 2022 ರ ದೇಶೀಯ ಋತುವಿನ ನಂತರ ಕರುಣ್ ನಾಯರ್ ಇಂಗ್ಲೆಂಡ್​ ಕೌಂಟಿ ಕ್ರಿಕೆಟ್​ನತ್ತ ಮುಖ ಮಾಡಿದರು. ನಾರ್ಥಾಂಪ್ಟನ್‌ಶೈರ್‌ ಪರ ಕೌಂಟಿ ಚಾಂಪಿಯನ್‌ಶಿಪ್ ಒಪ್ಪಂದವನ್ನು ಪಡೆದ ಅವರು ಇಂಗ್ಲೆಂಡ್ ಪಿಚ್​​ಗಳಲ್ಲಿ ಭರ್ಜರಿ ಪ್ರದರ್ಶನ ನೀಡಿದರು. ಈ ಅದ್ಭುತ ಪ್ರದರ್ಶನದ ಫಲವಾಗಿ ಇದೀಗ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಸರಣಿಗೆ ಆಯ್ಕೆಯಾಗಿದ್ದಾರೆ. ಈ ಅವಕಾಶವನ್ನು ಕರುಣ್ ನಾಯರ್ ಬಳಸಿಕೊಂಡರೆ ಮತ್ತೊಂದಷ್ಟು ವರ್ಷ ಟೀಮ್ ಇಂಡಿಯಾ ಪರ ಆಡಬಹುದು.

ಇನ್ನು 23 ವರ್ಷದ ಯಂಗ್ ಬ್ಯಾಟರ್ ಯಶಸ್ವಿ ಜೈಸ್ವಾಲ್ ಮೇಲೆಯೂ ಸಾಕಷ್ಟು ನಿರೀಕ್ಷೆಗಳಿವೆ. ಜೈಸ್ವಾಲ್ ಅವರ 10 ಪಂದ್ಯಗಳಲ್ಲಿ ತವರಿನಲ್ಲಿ 60.61 ರ ಟೆಸ್ಟ್ ಸರಾಸರಿ ಹೊಂದಿದ್ರೆ ವಿದೇಶದಲ್ಲಿ 44.18ರ ಸರಾಸರಿ ಹೊಂದಿದ್ದಾರೆ. ಈ ಬಾರಿ ವಿರಾಟ್ ಅಥವಾ ರೋಹಿತ್ ಇಲ್ಲದ ಕಾರಣ, ಜೈಸ್ವಾಲ್ ಭಾರತದ ಪರ ಓಪನರ್ ಆಗಿ ತಾಳ್ಮೆಯಿಂದ ಇನ್ನಿಂಗ್ಸ್ ಆಡ್ಬೇಕಾಗುತ್ತೆ. ಇನ್ನು ನಾಯಕ ಶುಭ್​ಮನ್ ಗಿಲ್​ಗಂತೂ ಈ ಸರಣಿ ಚಾಲೆಂಜಿಂಗ್. ಕ್ಯಾಪ್ಟನ್ ಆಗಿ ಅಲ್ಲದೆ ಆಟಗಾರನಾಗಿಯೂ ಗೆಲ್ಲಬೇಕಿದೆ. ತವರಿನಲ್ಲಿ ಗಿಲ್ ಟೆಸ್ಟ್ ಸರಾಸರಿ 42.03 ರಷ್ಟಿದೆ. ಆದರೆ ವಿದೇಶಗಳಲ್ಲಿ 29.50ಗೆ ಕುಸಿದಿದೆ. ಅದೆಲ್ಲಕ್ಕಿಂತ ಶಾಕಿಂಗ್ ಅಂದ್ರೆ ಇಂಗ್ಲೆಂಡ್‌ನಲ್ಲಿ ಗಿಲ್ ಅವರ ದಾಖಲೆ ತೀರಾ ಕಳಪೆಯಾಗಿದೆ. ಮೂರು ಪಂದ್ಯಗಳಲ್ಲಿ 14.66 ರ ಸರಾಸರಿಯಲ್ಲಿ ಕೇವಲ 88 ರನ್‌ಗಳು ಮಾತ್ರ ಬಂದಿವೆ. ಈಗ ನಾಯಕತ್ವವೂ ಸೇರಿದ್ದು ಕೇವಲ ರನ್‌ಗಳ ಬಗ್ಗೆ ಅಲ್ಲ, ಹೇಗೆ ಬ್ಯಾಟಿಂಗ್ ಮಾಡುತ್ತಾರೆ ಎಂಬುದರ ಮೇಲೆ ಮಾತ್ರವಲ್ಲ. ಆಧುನಿಕ ಕಾಲದ ಅತ್ಯಂತ ಪ್ರತಿಷ್ಠಿತ ಬ್ಯಾಟ್ಸ್‌ಮನ್‌ಗಳನ್ನು ಕಳೆದುಕೊಂಡಿರುವ ಭಾರತ ತಂಡವನ್ನು ಅವರು ಹೇಗೆ ಮುನ್ನಡೆಸುತ್ತಾರೆ ಎಂಬುದರ ಮೇಲೂ ಪ್ರಶ್ನೆಗಳು ಮೂಡಿವೆ. ಅದೆಲ್ಲಕ್ಕಿಂತ ಹೆಚ್ಚಾಗಿ ಕಳೆದ ಎರಡು ದಶಕಗಳಿಂದ ಇಂಗ್ಲೆಂಡ್ ಪಿಚ್ ಭಾರತೀಯರ ಪಾಲಿಗೆ ಕಬ್ಬಿಣದ ಕಡಲೆಯಾಗಿದೆ.

Shantha Kumari

Leave a Reply

Your email address will not be published. Required fields are marked *