ಸಂಜು-ಅಭಿ ಜೊತೆಯಾಟವೇ ಪ್ಲಸ್ – ವರುಣ್ ಬದಲು ಕುಲ್ದೀಪ್ ಗೆ ಚಾನ್ಸ್?
ಬ್ರಿಟಿಷರ ಬೇಟೆಗೆ ಪ್ಲೇಯಿಂಗ್ 11 ರೆಡಿ!

ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಫೈಟ್ಗೆ ಸಿದ್ಧವಾಗ್ತಿರೋ ಟೀಂ ಇಂಡಿಯಾ ಬಾಯ್ಸ್ ಭರ್ಜರಿಯಾಗೇ ಪ್ರಾಕ್ಟೀಸ್ ಮಾಡ್ತಿದ್ದಾರೆ. ಆಂಗ್ಲರನ್ನ ಸೋಲಿಸಿ ಫೈನಲ್ ಟಿಕೆಟ್ ಗಿಟ್ಟಿಸಿಕೊಳ್ಳೋಕೆ ಮ್ಯಾನೇಜ್ಮೆಂಟ್ ಕೂಡ ಒಂದಷ್ಟು ಗ್ರೌಂಡ್ವರ್ಕ್ ಮಾಡ್ತಿದೆ. ಬ್ಯಾಟರ್ಗಳ ಪಾಲಿನ ಸ್ವರ್ಗವಾಗಿರೋ ವಾಂಖೆಡೆಯಲ್ಲಿ ಭಾರತದ ಪರ ಪ್ಲೇಯಿಂಗ್ 11 ತುಂಬಾನೇ ಮುಖ್ಯ.
ಇದನ್ನೂ ಓದಿ : SA Vs NZ ಸೆಮೀಸ್ ಸಮರ – ಸೋಲಿಲ್ಲದೆ ಫೈನಲ್ ಗೆ ಹರಿಣಪಡೆ?
ಇಂಡಿಯಾ ವರ್ಸಸ್ ಇಂಗ್ಲೆಂಡ್.. ಟಿ-20 ವಿಶ್ವಕಪ್ನ ಒನ್ ಆಫ್ ದಿ ಹೈವೋಲ್ಟೇಜ್ ರೈವಲ್ರಿಯಾಗೋ ಮ್ಯಾಚ್. ಕಳೆದ 2 ಆವೃತ್ತಿಗಳಲ್ಲಿ ಬ್ಯಾಕ್ ಟು ಬ್ಯಾಕ್ ಸೆಮೀಸ್ನಲ್ಲಿ ಕಾದಾಡಿದ್ದ ಈ ಜೋಡಿ ಈಗ ಹ್ಯಾಟ್ರಿಕ್ ಎಂಬಂತೆ ಮೂರನೇ ಸಲ ಅದೂ ಕೂಡ ಸೆಮೀಸ್ನಲ್ಲೇ ಮೀಟ್ ಮಾಡ್ತಿದ್ದಾರೆ. ವಾಂಖೆಡೆಯಲ್ಲಿ ಇಬ್ಬರೂ ಕೂಡ ದಿ ಬೆಸ್ಟ್ ಅನ್ನೋ ರೆಕಾರ್ಡ್ಸ್ ಹೊಂದಿದ್ದಾರೆ. ಮಸ್ಟ್ ವಿನ್ ಮೈಂಡ್ ಸೆಟ್ನಲ್ಲೇ ಕಣಕ್ಕಿಳಿಯೋ ಎರಡೂ ತಂಡಗಳಿಗೆ ಪ್ಲೇಯಿಂಗ್ 11 ಕ್ಲಾರಿಟಿ ತುಂಬಾ ಮುಖ್ಯ. ಌಂಡ್ ಭಾರತದ ಬಗ್ಗೆ ಹೇಳೋದಾದ್ರೆ ಈ ಪಂದ್ಯಕ್ಕೂ ವಿನ್ನಿಂಗ್ ಕಾಂಬಿನೇಷನ್ನೇ ತರ್ತಾರೆ. ಅದ್ರಲ್ಲೂ ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಇನ್ನಿಂಗ್ಸ್ ಓಪನ್ ಮಾಡ್ತಿರೋದು ಪ್ಲಸ್ ಆಗ್ತಿದೆ.
ಭಾರತದ ಟಿ-20ಐ ಪರ್ಫಾಮೆನ್ಸ್ ಅಂತಾ ನೋಡಿದಾಗ ಓಪನರ್ಗಳಲ್ಲಿ ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಜೊತೆಯಾಟ ತುಂಬಾನೇ ಚೆನ್ನಾಗಿದೆ. ಆದ್ರೆ ಶುಭ್ಮನ್ ಗಿಲ್ ಟಿ-20ಐಗೆ ಬಂದಾಗ ಸಂಜು ಮಿಡಲ್ ಆರ್ಡರ್ಗೆ ಹೋಗಿದ್ರು. ಹಾಗೇ ಈ ಸಲ ವಿಶ್ವಕಪ್ನಲ್ಲಿ ಮತ್ತೆ ಕಾಂಬಿನೇಷನ್ ಮಿಸ್ ಮಾಡಿದ್ರು. ಅದ್ರ ಎಫೆಕ್ಟ್ ತಂಡಕ್ಕೂ ತಟ್ಟಿತ್ತು. ಭಾರತ ಗ್ರೂಪ್ ಸ್ಟೇಜಲ್ಲಿ ಪಂದ್ಯಗಳಲ್ಲಿ ಅರೌಂಡ್ 7 ರನ್ಗಳ ಒಳಗೆ ತನ್ನ ಮೊದಲ ವಿಕೆಟ್ ಕಳ್ಕೊಳ್ತಿತ್ತು. ಬಟ್ ಸಂಜು ಜಾಯ್ನ್ ಆದ್ಮೇಲೆ ಓಪನಿಂಗ್ ಜೋಡಿ ಬೇರೆ ಥರನೇ ಪರ್ಫಾಮ್ ಮಾಡಿದೆ. ಈ ಬಗ್ಗೆ ಇರ್ಫಾನ್ ಪಠಾಣ್ ಕೂಡ ತಮ್ಮ ಎಕ್ಸ್ ಖಾತೆಯಲ್ಲಿ ಬರ್ಕೊಂಡಿದ್ರು. ನಮೀಬಿಯಾ ವಿರುದ್ಧ ಆಡಿ ನಂತ್ರ ಮತ್ತೆ ಬೆಂಚ್ ಕಾದಿದ್ದ ಸಂಜು ಜಿಂಬಾಬ್ವೆ ವಿರುದ್ಧದ ಪಂದ್ಯದ ಮೂಲಕ ಮತ್ತೆ ಓಪನರ್ ಆಗಿ ಇನ್ನಿಂಗ್ಸ್ ಆರಂಭಿಸಿದ್ರು. ಇದು ತಂಡಕ್ಕೆ ಬೂಸ್ಟ್ ನೀಡಿದೆ. ಈ ಮ್ಯಾಚಲ್ಲಿ 48 ರನ್ಗಳ ಜೊತೆಯಾಟ ಬಂದಿತ್ತು. ಸ್ಯಾಮ್ಸನ್ 15 ಎಸೆತಗಳಲ್ಲಿ 24 ರನ್ ಗಳಿಸಿ ಔಟಾದರು. ಌಂಡ್ ಅಭಿಷೇಕ್ 55 ರನ್ ಬಾರಿಸಿದ್ರು. ಆ ಪಂದ್ಯದಲ್ಲಿ ಟಾಪ್ 6 ಬ್ಯಾಟರ್ಸ್ 150 ಪ್ಲಸ್ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ್ರು. ಌಂಡ್ ಟಿ-20 ವಿಶ್ವಕಪ್ನಲ್ಲೇ ಭಾರತದ ಪರ ಹೈಯೆಸ್ಟ್ ಸ್ಕೋರ್ ದಾಖಲಾಗಿತ್ತು. ಬಳಿಕ ವಿಂಡೀಸ್ ವಿರುದ್ಧದ ಮ್ಯಾಚಲ್ಲೂ ಅಭಿ ಮತ್ತು ಸಂಜು ಒನ್ಸ್ ಅಗೇನ್ ಇನ್ನಿಂಗ್ಸ್ ಆರಂಭ ಮಾಡಿದ್ರು. ಮೊದಲ ವಿಕೆಟ್ಗೆ 29 ರನ್ಸ್ ಬಂತು. ಅಭಿಷೇಕ್ ಔಟ್ ಆದ್ರೂ ಸಂಜು ಲಾಸ್ಟ್ ಓವರ್ವರೆಗೂ ನಿಂತು ಅಜೇಯ 97 ರನ್ ಗಳಿಸಿ ಭಾರತವನ್ನ ಸೆಮಿಫೈನಲ್ಗೆ ಸೆಲೆಕ್ಟ್ ಆಗುವಂತೆ ಮಾಡಿದ್ರು. ಇನ್ನು ಸಂಜು ಮತ್ತು ಅಭಿಷೇಕ್ ಭಾರತದ ಪರ 21 ಇನ್ನಿಂಗ್ಸ್ಗಳಲ್ಲಿ ಜೊತೆಯಾಟ ಬಂದಿದೆ. 35ರ ಆವರೇಜ್ನಲ್ಲಿ 731ರನ್ಸ್ ಕಲೆ ಹಾಕಿದ್ದಾರೆ. ಹೀಗಾಗಿ ಸಂಜು ಮತ್ತು ಅಭಿಷೇಕ್ ಇನ್ನಿಂಗ್ ಓಪನ್ ಮಾಡೋದು ಮುಖ್ಯ ಆಗುತ್ತೆ. ಲೆಫ್ಟ್-ರೈಟ್ ಹ್ಯಾಂಡ್ ಕಾಂಬಿನೇಷನ್ ಇರೋದ್ರಿಂದ ಎದುರಾಳಿ ಬೌಲರ್ಗಳನ್ನ ಸಮರ್ಥವಾಗಿ ನಿಭಾಯಿಸಬಹುದು.
ಭಾರತದ ಪ್ಲೇಯಿಂಗ್ 11
ಸಂಜು ಸ್ಯಾಮ್ಸನ್
ಅಭಿಷೇಕ್ ಶರ್ಮಾ
ಇಶಾನ್ ಕಿಶನ್
ಸೂರ್ಯಕುಮಾರ್ ಯಾದವ್
ಹಾರ್ದಿಕ್ ಪಾಂಡ್ಯ
ತಿಲಕ್ ವರ್ಮಾ
ಶಿವಂ ದುಬೆ
ಅಕ್ಷರ್ ಪಟೇಲ್
ವರುಣ್ ಚಕ್ರವರ್ತಿ
ಅರ್ಶದೀಪ್ ಸಿಂಗ್
ಜಸ್ಪ್ರೀತ್ ಬುಮ್ರಾ

ನೋಡಿರಿ

