ವಾಂಖೆಡೆಯಲ್ಲಿ ಟಾಸ್ ಗೆದ್ದವ್ರೇ ವಿನ್ – ಚೇಸಿಂಗ್ ತಂಡಕ್ಕೆ FINAL ಟಿಕೆಟ್?
IND Vs END.. ಯಾರಿಗೆ ಲಕ್?

ಟಿ-20 ವಿಶ್ವಕಪ್ನಲ್ಲಿ ಸೆಮೀಸ್ ಸಮರಕ್ಕೆ ಕೌಂಟ್ಡೌನ್ ಶುರುವಾಗಿದ್ದು ಸೋಲು ಗೆಲುವಿನ ಲೆಕ್ಕಾಚಾರ ನಡೀತಿದೆ. ಮೊದಲ ಮ್ಯಾಚಲ್ಲಿ ಸೌತ್ ಆಫ್ರಿಕಾ ಗೆಲ್ಲುವಂಥ ಫೇವರೆಟ್ ಟೀಂ ಆಗಿದೆ. ಸೆಕೆಂಡ್ ಮ್ಯಾಚಲ್ಲಿ ಭಾರತಕ್ಕೆ ಚಾನ್ಸಸ್ ಜಾಸ್ತಿ ಇದೆ. ಮೋಸ್ಟ್ ಇಂಪಾರ್ಟೆಂಟ್ಲಿ ಇಂಡಿಯಾ ವರ್ಸಸ್ ಇಂಗ್ಲೆಂಡ್ ಮ್ಯಾಚ್ ನಡೆಯಲಿರುವ ವಾಂಖೆಡೆಯಲ್ಲಿ ಟಾಸ್ ಗೆಲುವು ತುಂಬಾನೇ ಮುಖ್ಯ ಆಗುತ್ತೆ. ಯಾಕಂದ್ರೆ ಟಾಸ್ ಗೆದ್ದವ್ರಿಗೆ ಒಂದು ಅಡ್ವಾಂಟೇಜ್ ಸಿಗಲಿದೆ. ಹಿಂದಿನ ಸ್ಟಾಟ್ಸ್ ಕೂಡ ಇದನ್ನೇ ಹೇಳ್ತಿದೆ.
ಇದನ್ನೂ ಓದಿ : SA Vs NZ ಸೆಮೀಸ್ ಸಮರ – ಸೋಲಿಲ್ಲದೆ ಫೈನಲ್ ಗೆ ಹರಿಣಪಡೆ?
20 ಟೀಮ್ಗಳಿಂದ ಶುರುವಾಗಿದ್ದ ಟಿ-20 ವಿಶ್ವಕಪ್ ಜರ್ನಿಯಲ್ಲಿ ಈಗ 4 ಟೀಂಗಳಷ್ಟೇ ಉಳ್ಕೊಂಡಿವೆ. ಸದ್ಯ 4 ಇರೋ ನಂಬರ್ ಎರಡು ಆಗುವಂಥ ಟೈಂ. ಇವತ್ತು ಸೌತ್ ಆಫ್ರಿಕಾ ಮತ್ತು ನ್ಯೂಜಿಲೆಂಡ್ ತಂಡಗಳು ಮೊದಲ ಸೆಮೀಸ್ನಲ್ಲಿ ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ಫೈಟ್ ಮಾಡ್ತಾರೆ. ನಾಳೆ ಮುಂಬೈನ ವಾಂಖೆಡೆ ಸ್ಟೇಡಿಯಮ್ನಲ್ಲಿ ಭಾರತ ಹಾಗೇ ಇಂಗ್ಲೆಂಡ್ ತಂಡಗಳು ಮುಖಾಮುಖಿ ಆಗ್ತಾರೆ. ಟೀಂ ಇಂಡಿಯಾ ಫ್ಯಾನ್ಸ್ ಅಂತೂ ನಾಳಿನ ಪಂದ್ಯಕ್ಕಾಗಿ ಕ್ಯೂರಿಯಸ್ ಆಗಿ ಕಾಯ್ತಿದ್ದಾರೆ. ಌಂಡ್ ಟಿಕೆಟ್ಸ್ ಕಂಪ್ಲೀಟ್ ಆಗಿ ಸೋಲ್ಡ್ ಔಟ್ ಆಗಿವೆ. ವಾಂಖೆಡೆಯಲ್ಲಿ ನಡೆಯಲಿರೋ ಸೆಮೀಸ್ ಕದನದಲ್ಲಿ ಟಾಸ್ ಕೂಡ ಮುಖ್ಯ ಆಗುತ್ತೆ. ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲೇ ಇದು ಸಾಬೀತಾಗಿದೆ.
ಅಮೆರಿಕ ವಿರುದ್ಧ ವಾಂಖೆಡೆಯಲ್ಲೇ ಗೆಲುವು ಸಾಧಿಸಿದ್ದ ಭಾರತ!
ಈ ಬಾರಿಯ ವಿಶ್ವಕಪ್ನಲ್ಲಿ ಭಾರತ ವಾಂಖೆಡೆಯಲ್ಲೇ ತನ್ನ ಜರ್ನಿ ಸ್ಟಾರ್ಟ್ ಮಾಡಿತ್ತು. ಅಮೆರಿಕ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದಿದ್ದ ಸೂರ್ಯ ಫಸ್ಟ್ ಬ್ಯಾಟಿಂಗ್ ಚೂಸ್ ಮಾಡಿಕೊಂಡಿದ್ರು. ಆದ್ರೆಭಾರತದ ಬ್ಯಾಟಿಂಗ್ ಆರ್ಡರ್ ಕಂಪ್ಲೀಟ್ ಕೊಲ್ಯಾಪ್ಸ್ ಆಗಿತ್ತು. ಬಟ್ ಸೂರ್ಯನ ರೆಸ್ಪಾನ್ಸಿಬಿಲಿಟಿಯಿಂದ 161 ರನ್ಸ್ ಸ್ಕೋರ್ ಮಾಡಿದ್ರು. ಌಂಡ್ ಡಿಫೆನ್ಸ್ ಮಾಡಿಕೊಳ್ಳುವಲ್ಲಿಯೂ ಯಶಸ್ವಿಯಾಗಿದ್ರು. 29 ರನ್ಗಳಿಂದ ಪಂದ್ಯವನ್ನ ಗೆದ್ದಿದ್ರು. ಇನ್ನು ಈ ಬಾರಿಯ ಟೂರ್ನಿಯಲ್ಲಿ ವಾಂಖೆಡೆಯಲ್ಲಿ ನಡೆದಿರೋ ಪಂದ್ಯಗಳ ಪೈಕಿ ಟಾಸ್ ಗೆದ್ದಿರೋ ಆರು ತಂಡಗಳ ಪೈಕಿ ನಾಲ್ಕು ತಂಡಗಳು ಗೆದ್ದಿದ್ದಾರೆ. ಹೀಗಾಗಿ ಟಾಸ್ ಗೆಲುವು ಇಲ್ಲಿ ಮುಖ್ಯವಾಗುತ್ತೆ.
ಬ್ಯಾಟರ್ಸ್ ಫ್ರೆಂಡ್ಲಿ.. ಬೌಲರ್ಸ್ ಗೆ ಕಾಡುತ್ತೆ ವಾಂಖೆಡೆ ಪಿಚ್!
ಟೀಂ ಇಂಡಿಯಾ ಪಾಲಿನ ಐಕಾನಿಕ್ ಸ್ಟೇಡಿಯಂ ಆಗಿರೋ ವಾಂಖೆಡೆ ಕ್ರೀಡಾಂಗಣ ಬ್ಯಾಟಿಂಗ್ ಫ್ರೆಂಡ್ಲಿಯಾಗಿದೆ. ಸ್ಮಾಲ್ ಬೌಂಡರಿಗಳು ಇರೋದ್ರಿಂದ ಹೆಚ್ಚಿನ ಸ್ಕೋರ್ ನಿರೀಕ್ಷೆ ಮಾಡ್ಬೋದು. ಌಂಡ್ ಈ ಪಿಚ್ನ ವೈಶಿಷ್ಟ್ಯ ಅಂದ್ರೆ ಚೇಸಿಂಗ್ ಮಾಡುವ ತಂಡಗಳಿಗೆ ಜಾಸ್ತಿ ಗೆಲುವು ಸಿಕ್ಕಿದೆ. ಌಂಡ್ ಎಷ್ಟೋ ಪಂದ್ಯಗಳಲ್ಲಿ ಇನ್ನಿಂಗ್ಸ್ನ ಕೊನೇ ಬಾಲ್ ಗೇಮ್ ಡಿಸೈಡರ್ ಆಗಿವೆ. ಕೆಲವೊಮ್ಮೆ ಬಿಗ್ ಟಾರ್ಗೆಟ್ಗಳಲ್ಲೂ ಚೇಸಿಂಗ್ ತಂಡಗಳು ಯಶಸ್ವಿಯಾಗಿ ಬೆನ್ನಟ್ಟಿವೆ. ಬೌನ್ಸ್, ಪೇಸ್ ಔಟ್‌ಫೀಲ್ಡ್ ಮತ್ತು ಡ್ಯೂ ಇರೋದ್ರಿಂದ ಎರಡನೇ ಇನ್ನಿಂಗ್ಸ್ ಯಾವಾಗ್ಲೂ ಸಿಕ್ಕಾಪಟ್ಟೆ ಥ್ರಿಲ್ ಇರುತ್ತೆ. ಇನ್ನು ಟೀಂ ಇಂಡಿಯಾ ಪಾಲಿಗೂ ವಾಂಖೆಡೆ ಕ್ರೀಡಾಂಗಣ ಅದೆಷ್ಟೋ ಡ್ರೀಮ್ ಗೇಮ್ಗಳಿಗೆ ಸಾಕ್ಷಿಯಾಗಿದೆ. ಅದ್ರಲ್ಲೂ ಟಿ-20ಐ ಫಾರ್ಮೆಟ್ ಅಂತಾ ಬಂದಾಗ ಇದೇ ಇಂಗ್ಲೆಂಡ್ ವಿರುದ್ಧ ಕಳೆದ ವರ್ಷ ದಾಖಲೆಯ ರನ್ಸ್ ಬಂದಿತ್ತು.
ಟಾಸ್ ಗೆದ್ದವ್ರಿಗೆ ಅಡ್ವಾಂಟೇಜ್!
7 ಟಿ20 ಪಂದ್ಯ ಆಡಿದ್ದು 5 ಪಂದ್ಯಗಳಲ್ಲಿ ಗೆಲುವು, 2 ಸೋಲು
ಇಂಗ್ಲೆಂಡ್ ವಿರುದ್ಧ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 247 ರನ್ಸ್
ಕೇವಲ 97 ರನ್ಸ್ ಗೆ ಆಲೌಟ್, 150 ರನ್ ಗಳ ಅಂತರದಲ್ಲಿ ಗೆಲುವು
ಸ್ಟೇಡಿಯಮ್ ನಲ್ಲಿ ಟಿ-20ಐನಲ್ಲಿ ಬಂದಿರೋ ಹೈಯೆಸ್ಟ್ ಸ್ಕೋರ್ 254 ರನ್ಸ್
ಭಾರತದ ಲೋಯೆಸ್ಟ್ ಸ್ಕೋರ್ ಅಮೇರಿಕಾ ವಿರುದ್ಧ 20 ಓವರ್‌ಗಳಲ್ಲಿ 161/9
ದಕ್ಷಿಣ ಆಫ್ರಿಕಾ ವಿರುದ್ಧ ಇಂಗ್ಲೆಂಡ್ ನ ತಂಡ 230 ರನ್ ಗಳ ಚೇಸ್
ಮುಂಬೈ ಇಂಡಿಯನ್ಸ್ ಮೂರು ಬಾರಿ 200+ ಮೊತ್ತವನ್ನು ಬೆನ್ನಟ್ಟಿದ್ದಾರೆ
2023 ರಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ 213 ರನ್ ಗಳ ಚೇಸ್
ಟಾಸ್ ಗೆದ್ದಿರೋ ತಂಡಗಳ ವಿನ್ನಿಂಗ್ ಪರ್ಸೆಂಟೇಜ್ 61.54 ಇದೆ
200ಕ್ಕಿಂತ ಮೇಲಿದ್ರೆ ಡಿಫೆನ್ಸ್, 200ರ ಒಳಗೆ ರನ್ಸ್ ಇದ್ರೆ ಕಷ್ಟ
ಭಾರತ ಈ ಮೈದಾನದಲ್ಲಿ ಒಟ್ಟು ಏಳು ಟಿ20 ಪಂದ್ಯಗಳನ್ನು ಆಡಿದ್ದು, ಐದು ಪಂದ್ಯಗಳಲ್ಲಿ ಗೆದ್ದು ಎರಡರಲ್ಲಿ ಸೋತಿದೆ. ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತದ ಹೈಯೆಸ್ಟ್ ಸ್ಕೋರ್ ಅಂದ್ರೆ 2025ರಲ್ಲಿ ಇದೇ ಇಂಗ್ಲೆಂಡ್ ವಿರುದ್ಧ ಬಂದಿದೆ. ಫೆಬ್ರವರಿ 2 ರಂದು 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 247 ರನ್ಸ್ ಕಲೆ ಹಾಕಿತ್ತು. ಈ ಟಾರ್ಗೆಟ್ ಬೆನ್ನತ್ತಿದ ಇಂಗ್ಲೆಂಡ್ ಕೇವಲ 97 ರನ್ಸ್ ಗೆ ಆಲೌಟ್ ಆಗಿತ್ತು. ಭಾರತ 150 ರನ್‌ಗಳ ಅಂತರದಲ್ಲಿ ಗೆದ್ದಿತ್ತು. ಈ ಮ್ಯಾಚಲ್ಲಿ ಅಭಿಷೇಕ್ ಶರ್ಮಾ 135ರನ್ಸ್ ಹೊಡೆದಿದ್ರು. ಇನ್ನು ಈ ಸ್ಟೇಡಿಯಮ್ನಲ್ಲಿ ಟಿ-20ಐನಲ್ಲಿ ಬಂದಿರೋ ಹೈಯೆಸ್ಟ್ ಸ್ಕೋರ್ ಅಂದ್ರೆ 254 ರನ್ಸ್. ಈ ಬಾರಿಯ ಟಿ-20 ವಿಶ್ವಕಪ್ನಲ್ಲೇ ಬಂದಿದೆ. ವೆಸ್ಟ್ ಇಂಡೀಸ್ ತಂಡ ಜಿಂಬಾಬ್ವೆ ವಿರುದ್ಧ ಗಳಿಸಿದ ಅತಿ ಹೆಚ್ಚು T20I ಸ್ಕೋರ್ ಆಗಿದೆ. ಇನ್ನು ಈ ಸ್ಟೇಡಿಯಮ್ನಲ್ಲಿ ಭಾರತದ ಲೋಯೆಸ್ಟ್ ಸ್ಕೋರ್ ಅಂದ್ರೆ ಈ ಬಾರಿಯ ಟಿ-20 ವಿಶ್ವಕಪ್ನಲ್ಲಿ ಬಂದಿದೆ. ಅಮೇರಿಕಾ ವಿರುದ್ಧ 20 ಓವರ್‌ಗಳಲ್ಲಿ 161/9 ದಾಖಲಾಗಿರುವುದು ಅತ್ಯಂತ ಕಡಿಮೆ ಸ್ಕೋರ್ ಆಗಿದೆ. ಯಶಸ್ವಿ ರನ್ ಚೇಸ್ ಅಂತಾ ನೋಡೋದಾದ್ರೆ ಅದು 2016ರ ಟಿ-20 ವಿಶ್ವಕಪ್ನಲ್ಲಿ ಬಂದಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಇಂಗ್ಲೆಂಡ್‌ನ ತಂಡ 230 ರನ್‌ಗಳ ಚೇಸ್ ವಾಂಖೆಡೆ ಕ್ರೀಡಾಂಗಣದಲ್ಲಿ ಅತಿ ಹೆಚ್ಚು ಯಶಸ್ವಿ ರನ್ ಚೇಸ್ ಆಗಿದೆ. ಅಂದಿನಿಂದ, ಯಾವುದೇ ತಂಡವು ಆ ದಾಖಲೆಯನ್ನು ಮೀರಿಸಲು ಸಾಧ್ಯವಾಗಿಲ್ಲ. ಸೋ ಅಲ್ಲಿಗೆ ಭಾರತದ ಹೈಯೆಸ್ಟ್ ರನ್ಸ್ ಬಂದಿರೋದೂ ಇಲ್ಲೇ. ಇಂಗ್ಲೆಂಡ್‌ನ ಹೈಯೆಸ್ಟ್ ಚೇಸ್ ಇರೋದು ಕೂಡ ಇದೇ ಕ್ರೀಡಾಂಗಳನದಲ್ಲಿ. ಇನ್ನು ಐಪಿಎಲ್ ಸ್ಟಾಟ್ಸ್ ನೋಡೋದಾದ್ರೆ ಮುಂಬೈ ಇಂಡಿಯನ್ಸ್ ತನ್ನ ತವರು ಮೈದಾನವಾಗಿರುವುದರಿಂದ ಈ ತಂಡ ಪ್ರಾಬಲ್ಯ ಹೊಂದಿದೆ. ಅವರು ಮೂರು ಬಾರಿ 200+ ಮೊತ್ತವನ್ನು ಬೆನ್ನಟ್ಟಿದ್ದಾರೆ. ವಾಂಖೆಡೆಯಲ್ಲಿ ಐಪಿಎಲ್‌ನಲ್ಲಿ ಅತ್ಯಧಿಕ ಯಶಸ್ವಿ ರನ್-ಚೇಸ್ 2023 ರಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ 213 ಆಗಿತ್ತು. ಇನ್ನು ವಾಂಖೆಡೆಯ ಸ್ಪೆಷಾಲಿಟಿ ಅಂದ್ರೆ ಟಾಸ್ ಗೆದ್ದ ತಂಡ ಬ್ಯಾಟಿಂಗ್ ಅಥವಾ ಬೌಲಿಂಗ್ ಯಾವುದನ್ನೇ ಚೂಸ್ ಮಾಡಿಕೊಂಡ್ರೂ ಗೆದ್ದಿರೋ ಪೆರ್ಸೆಂಟೇಜ್ ಜಾಸ್ತಿ ಇದೆ. ಟಿ-20ಐ ಫಾರ್ಮೆಟ್ನಲ್ಲಿ ಈ ಮೈದಾನದಲ್ಲಿ ಟಾಸ್ ಗೆದ್ದಿರೋ ತಂಡಗಳ ವಿನ್ನಿಂಗ್ ಪರ್ಸೆಂಟೇಜ್ 61.54 ಇದೆ. ಹೀಗಾಗಿ ಇಲ್ಲಿ ಟಾಸ್ ಗೆಲ್ಲೋದು ಮುಖ್ಯ ಆಗುತ್ತೆ. ಌಂಡ್ 175 ಆವರೇಜ್ ಸ್ಕೋರ್ ಇದ್ದು ಮೊದಲು ಬ್ಯಾಟಿಂಗ್ ಮಾಡುವ ತಂಡ 200 ಎಬೌ ಹೊಡೆದ್ರೆ ಡಿಫೆನ್ಸ್ ಮಾಡಿಕೊಳ್ಬೋದು. ಬಿಲೋ 200 ಇದ್ರೆ ಡಿಫೆನ್ಸ್ ಮಾಡಿಕೊಳ್ಳೋದು ಕಷ್ಟ ಇದೆ. ಌಂಡ್ ಚೇಸಿಂಗ್ ತಂಡಕ್ಕೆ ಪ್ಲಸ್ ಆಗುತ್ತೆ. ಯಾಕಂದ್ರೆ ಈ ಮೈದಾನದಲ್ಲಿ ಹೈಯೆಸ್ಟ್ ರನ್ ಚೇಸ್ 230 ಇದೆ.
ಈ ನಂಬರ್ಗಳನ್ನ ನೋಡಿದಾಗ ಟಾಸ್ ಎಷ್ಟ ಮುಖ್ಯ ಆಗುತ್ತೆ ಅನ್ನೋದು ಗೊತ್ತಾಗ್ತಿದೆ. ಌಂಡ್ ಐಪಿಎಲ್ನಲ್ಲೂ ಕೂಡ ಇಲ್ಲಿ ಸೆಕೆಂಡ್ ಬ್ಯಾಟಿಂಗ್ ಮಾಡುವ ತಂಡಗಳೇ ಹೆಚ್ಚಿನ ಸಲ ವಿನ್ ಆಗಿದ್ದಾರೆ. ಅಂದ್ರೆ ವಾಂಖೆಡೆಯಲ್ಲಿ ಒಟ್ಟಾರೆಯಾಗಿ ಐಪಿಎಲ್‌ನಲ್ಲಿ 123 ಪಂದ್ಯಗಳನ್ನ ಆಡಿಸಲಾಗಿದೆ. ಇದ್ರಲ್ಲಿ ಫಸ್ಟ್ ಬ್ಯಾಟಿಂಗ್ ಮಾಡಿದ ತಂಡ 57 ಪಂದ್ಯಗಳನ್ನ ಗೆದ್ದಿದೆ. ಌಂಡ್ ಚೇಸಿಂಗ್ ಮಾಡಿದ ತಂಡಗಳು 66 ಬಾರಿ ಗೆದ್ದಿವೆ. ಟಾಸ್ ವಿನ್ ಆದ ತಂಡಗಳ ವಿನ್ನಿಂಗ್ ಪರ್ಸೆಂಟೇಜ್ 52.03 ಪರ್ಸೆಂಟ್ ಇದೆ. ಈ ಮೈದಾನದಲ್ಲಿ ಐಪಿಎಲ್‌ನಲ್ಲಿ ಹೈಯೆಸ್ಟ್ ಸ್ಕೋರ್ ದಾಖಲೆ ಎಬಿ ಡಿವಿಲಿಯರ್ಸ್ ಹೆಸ್ರಲ್ಲಿದೆ. ಡಿವಿಲಿಯರಸ್ 2015ರಲ್ಲಿ ಬೆಂಗಳೂರು ಪರ 133 ರನ್ಸ್ ಹೊಡೆದು ಅಜೇಯರಾಗಿ ಉಳಿದಿದ್ರು. 2010ರಲ್ಲಿ ಯೂಸುಫ್ ಫಠಾಣ್ 37 ಬಾಲಲ್ಲೇ ಸೆಂಚುರಿ ಸಿಡಿಸಿದ್ರು. ಹೈಯೆಸ್ಟ್ ಟೋಟಲ್ಸ್ ಅಂತಾ ಬಂದಾಗ 2015ರಲ್ಲಿ ಆರ್ಸಿಬಿ ಟೀಂ ಮುಂಬೈ ವಿರುದ್ಧ 1 ವಿಕೆಟ್ ನಷ್ಟಕ್ಕೆ 235 ರನ್ಸ್ ಹೊಡೆದಿತ್ತು. ಸೋ ಈ ನಂಬರ್ಗಳನ್ನ ನೋಡಿದಾಗ ಈ ಮೈದಾನ ಬ್ಯಾಟರ್ಸ್ ಪ್ಯಾರಡೈಸ್ ಅನ್ನೋದು ಇಲ್ಲೇ ಗೊತ್ತಾಗ್ತಿದೆ. ಒಟ್ನಲ್ಲಿ ಭಾರತದ ಪಾಲಿಗೂ ಹಲವು ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಿರೋ ವಾಂಖೆಡೆ ಸ್ಟೇಡಿಯಂ ಈಗ ಮತ್ತೊಂದು ಹೈವೋಲ್ಟೇಜ್ ಮ್ಯಾಚ್ಗೆ ಸಿದ್ಧವಾಗಿದೆ.

ನೋಡಿರಿ

