ಸತತ 3ನೇ ಬಾರಿ IND Vs ENG – ಸೆಮೀಸ್ ಗೆದ್ದವ್ರೇ ಚಾಂಪಿಯನ್ಸ್?
ಆಂಗ್ಲರ ಬೇಟೆಗೆ ಸವಾಲುಗಳೇನು?

ಟಿ-20 ವಿಶ್ವಕಪ್ನ ಅಸಲಿ ಖದರ್ ಈಗ ಸ್ಟಾರ್ಟ್ ಆಯ್ತು. ಸೆಮೀಸ್ ಕಾಳಗಕ್ಕೆ ನಾಲ್ಕು ಟೀಮ್ಗಳು ಫೈನಲ್ ಆಗಿದ್ದು ಟೂರ್ನಿ ಮುಕ್ತಾಯಕ್ಕೆ ಮೂರೇ ಮೂರು ಮ್ಯಾಚ್ಗಳಷ್ಟೇ ಬಾಕಿ. ಒಂದೊಂದು ಪಂದ್ಯದಲ್ಲಿ ಒಬ್ಬೊಬ್ಬರು ಔಟ್ ಆಗಿ ಹತ್ತನೇ ಆವೃತ್ತಿನ ಚಾಂಪಿಯನ್ಸ್ ಯಾರು ಅನ್ನೋ ಪಶ್ನೆಗೆ ನೆಕ್ಸ್ಟ್ ಸಂಡೇ ಉತ್ತರ ಸಿಗುತ್ತೆ. ಅದ್ರಲ್ಲೂ ಈಗ ಭಾರತಕ್ಕೆ ಮುಂದಿನ ಟಾರ್ಗೆಟ್ ಇಂಗ್ಲೆಂಡ್. ಸೂಪರ್ 8 ಸುತ್ತಲ್ಲಿ ಸೋಲಿಲ್ಲದೇ ನುಗ್ಗಿರೋ ಆಂಗ್ಲರ ಪಡೆ ಈ ಸಲ ಅಕ್ಷರಶಃ ಡೇಂಜರಸ್ ಆಗಿದೆ. ಇಂಟ್ರೆಸ್ಟಿಂಗ್ ಅಂದ್ರೆ ಟಿ-20 ವರ್ಲ್ಡ್ ಕಪ್ ಅಂತಾ ಬಂದಾಗ ಸೆಮೀಸ್ನಲ್ಲಿ ಭಾರತ ಹಾಗೇ ಇಂಗ್ಲೆಂಡ್ ಸತತ ಮೂರನೇ ಸಲ ಮುಖಾಮುಖಿ ಆಗ್ತಿದ್ದಾರೆ.
ಇದನ್ನೂ ಓದಿ : ವಿಂಡೀಸ್ ಚೆಂಡಾಡಿದ ಚೇಟಾ – ಸಂಜು ಸಕ್ಸಸ್ ಸೀಕ್ರೆಟ್ RO-KO
ಗ್ರೂಪ್ ಸ್ಟೇಜ್ ಗುದ್ದಾಟ ಮುಗಿಸಿ ಸೂಪರ್ 8 ಸಮರದಲ್ಲಿ ಗೆದ್ದು ಈಗ ಸೆಮೀಸ್ ಕ್ಲ್ಯಾಶ್ಗೆ ಸಿದ್ಧವಾಗಿರೋ 4 ತಂಡಗಳಿಗೆ ಟ್ರೋಫಿ ಗೆಲ್ಲೋಕೆ ಉಳಿದಿರೋದೇ ಎರಡೆರಡು ಪಂದ್ಯ. 20 ತಂಡಗಳಿಂದ ಆರಂಭವಾಗಿದ್ದ ಈ ಬಾರಿಯ ಹೈವೋಲ್ಟೇಜ್ ಟೂರ್ನಿಯಲ್ಲಿ ಈಗ ನಾಲ್ಕು ತಂಡಗಳಷ್ಟೇ ಉಳಿದಿವೆ. ಸೌತ್ ಆಫ್ರಿಕಾ, ಇಂಗ್ಲೆಂಡ್, ಭಾರತ ಹಾಗೇ ನ್ಯೂಜಿಲೆಂಡ್ ಸೆಮಿಫೈನಲ್ ಸಮರಕ್ಕೆ ಸಿದ್ಧವಾಗಿದೆ. ಟೂರ್ನಿಯಲ್ಲಿ ಸೋಲನ್ನೇ ಕಾಣದೆ ಟೇಬಲ್ ಟಾಪರ್ ಆಗಿ ಸೆಮೀಸ್ಗೆ ಕಾಲಿಟ್ಟಿರೋ ಸೌತ್ ಆಫ್ರಿಕಾ ಹಾಗೇ ಸೂಪರ್ 8 ಸುತ್ತಲ್ಲಿ ಸ್ಟ್ರಗಲ್ಗಳೊಂದಿಗೇ ಬಂದಿರೋ ನ್ಯೂಜಿಲೆಂಡ್ ತಂಡಗಳು ಮಾರ್ಚ್ 4 ಅಂದ್ರೆ ಇದೇ ಬುಧವಾರ ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಮುಖಾಮುಖಿ ಆಗ್ತಾರೆ. ಹಾಗೇ ಸೂಪರ್ 8 ಸುತ್ತಲ್ಲೇ ಎಲ್ಲಾ ಪಂದ್ಯಗಳನ್ನ ಗೆದ್ದಿರೋ ಇಂಗ್ಲೆಂಡ್ ಮತ್ತು ಹಾಲಿ ಚಾಂಪಿಯನ್ ಭಾರತ ತಂಡ ಮಾರ್ಚ್ 5ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಪೈಪೋಟಿ ನಡೆಸ್ತಿದ್ದಾರೆ. ಮೊದಲ ಸೆಮೀಸ್ನಲ್ಲಿ ಸೌತ್ ಆಫ್ರಿಕಾ ಪಂದ್ಯ ಗೆಲ್ಲೋ ಫೇವರೆಟ್ ಟೀಂ ಆಗಿದ್ರೆ ಎರಡನೇ ಸೆಮೀಸ್ನಲ್ಲಿ ಎದುರು ಬದುರಾಗ್ತಿರೋ ಭಾರತ ಮತ್ತು ಇಂಗ್ಲೆಂಡ್ ಇಬ್ಬರ ನಡುವೆ ನೆಕ್ ಟು ನೆಕ್ ಫೈಟ್ ಅಂತೂ ಪಕ್ಕಾ ಇರುತ್ತೆ. ಯಾಕಂದ್ರೆ ಇವ್ರಿಬ್ರು ಸತತ ಮೂರನೇ ಬಾರಿಗೆ ಸೆಮೀಸ್ನಲ್ಲಿ ಫೈಟ್ ನಡೆಸಲಿದ್ದಾರೆ.
ಟಿ-20 ವಿಶ್ವಕಪ್ ನಲ್ಲಿ ಸತತ ಮೂರನೇ ಬಾರಿ ಭಾರತ-ಇಂಗ್ಲೆಂಡ್ ಕದನ!
ಸತತ ಮೂರನೇ ಬಾರಿಗೆ ಟಿ-20 ವಿಶ್ವಕಪ್ ಸೆಮಿಫೈನಲ್ ಪ್ರವೇಶಿಸಿರೋ ಭಾರತದ ಸ್ಪೆಷಾಲಿಟಿ ಏನಂದ್ರೆ ಸತತ ಮೂರನೇ ಬಾರಿಯೂ ಸೆಮೀಸ್ನಲ್ಲಿ ಎದುರಾಳಿ ಇಂಗ್ಲೆಂಡ್ ತಂಡ. ಌಂಡ್ ಇಂಟ್ರೆಸ್ಟಿಂಗ್ ಅಂದ್ರೆ ಕಳೆದ ಎರಡೂ ಸಲವೂ ಎರಡನೇ ಸೆಮಿಫೈನಲ್ನಲ್ಲೇ ಮುಖಾಮುಖಿ ಆಗಿದ್ರು. ಈ ಸಲವೂ ಎರಡನೇ ಸೆಮಿಫೈನಲ್ನಲ್ಲೇ ಮುಖಾಮುಖಿ ಆಗ್ತಿದ್ದಾರೆ. 2022 ರಲ್ಲಿ ಭಾರತ ಮತ್ತು ಇಂಗ್ಲೆಂಡ್ ಅಡಿಲೇಡ್ನಲ್ಲಿ ನಡೆದ ಸೆಮಿಫೈನಲ್ನಲ್ಲಿ ಎದುರು ಬದುರಾಗಿದ್ರು. ಈ ಮ್ಯಾಚಲ್ಲಿ ಇಂಗ್ಲೆಂಡ್ 10 ವಿಕೆಟ್ಗಳಿಂದ ಗೆದ್ದಿತ್ತು. ಕಳೆದ ಬಾರಿ ಅಂದ್ರೆ 2024 ರಲ್ಲಿ ಜಾರ್ಜ್ಟೌನ್ನಲ್ಲಿ ನಡೆದಿದ್ದ ಸೆಮಿಫೈನಲ್ನಲ್ಲಿ ಎರಡೂ ತಂಡಗಳು ಮತ್ತೆ ಫೈಟ್ ನಡೆಸಿದ್ರು. ಈ ಸಲ ಭಾರತ ತಂಡ 68 ರನ್ಗಳಿಂದ ಜಯಗಳಿಸಿ ಫೈನಲ್ಗೇರಿತ್ತು. ಇದಕ್ಕಿಂತ ಅಚ್ಚರಿಯ ವಿಚಾರ ಅಂದ್ರೆ ಈ ಸೆಮಿಫೈನಲ್ನಲ್ಲಿ ಯಾವ ತಂಡ ಗೆದ್ದಿರೋ ಅದೇ ಟೀಂ ಚಾಂಪಿಯನ್ ಕೂಡ ಆಗಿದೆ. ಅಂದ್ರೆ 2022 ರ ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ತಂಡ ಭಾರತವನ್ನು ಸೋಲಿಸಿ ಆಮೇಲೆ ಫೈನಲ್ನಲ್ಲಿ ಪಾಕಿಸ್ತಾನಕ್ಕೆ ಮಣ್ಣು ಮುಕ್ಕಿಸಿ ಚಾಂಪಿಯನ್ ಪಟ್ಟಕ್ಕೇರಿದ್ರು. ಹಾಗೆಯೇ 2024 ರಲ್ಲಿ, ಇಂಗ್ಲೆಂಡ್ ವಿರುದ್ಧ ಸೆಮಿಫೈನಲ್ ಗೆದ್ದ ಟೀಂ ಇಂಡಿಯಾ ಫೈನಲ್ನಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ವಿಶ್ವ ಚಾಂಪಿಯನ್ ಆಗಿತ್ತು. ಸೋ ಈ ಸಲವೂ ಇಬ್ರಿಬ್ಬರಲ್ಲಿ ಗೆದ್ರಷ್ಟೇ ಟ್ರೋಫಿಯನ್ನೂ ಗೆಲ್ತಾರಾ ಎನ್ನುವಂತ ಕುತೂಹಲ ಶುರುವಾಗಿದೆ. ಈ ಟೂರ್ನಿಯಲ್ಲಿ ಭಾರತ ಕೂಡ ಒಂದು ಸೋಲಿನೊಂದಿಗೆ ಬಂದ್ರೆ ಇಂಗ್ಲೆಂಡ್ ಕೂಡ ಗ್ರೂಪ್ ಸ್ಟೇಜಲ್ಲಿ ಒಂದು ಪಂದ್ಯದಲ್ಲಿ ಸೋಲನ್ನ ಕಂಡಿದೆ.
ಹಾಲಿ ಚಾಂಪಿಯನ್ ಭಾರತ ಟ್ರೋಫಿ ಉಳಿಸಿಕೊಳ್ಳುತ್ತಾ?
ಚುಟುಕು ಮಾದರಿಯಲ್ಲಿ ಭಾರತ ಜಗತ್ತಿನ ನಂಬರ್ 1 ಟೀಂ. ಹಾಗೇ ವಿಶ್ವಕಪ್ನಲ್ಲೂ ಹಾಲಿ ಚಾಂಪಿಯನ್ಸ್.. ಈಗೇನಿದ್ರೂ ಟ್ರೋಫಿಯನ್ನ ಡಿಫೆನ್ಸ್ ಮಾಡಿಕೊಳ್ಬೇಕಷ್ಟೇ. ಗ್ರೂಪ್ ಸ್ಟೇಜಲ್ಲಿ ನಾಲ್ಕೂ ಪಂದ್ಯಗಳನ್ನ ಗೆದ್ಕೊಂಡು ಸೂಪರ್ 8 ಸುತ್ತಲ್ಲಿ ಮೊದಲ ಮ್ಯಾಚ್ ಮಿಸ್ ಮಾಡಿದ್ರೂ ಉಳಿದ ಎರಡು ಪಂದ್ಯಗಳಲ್ಲಿ ದಾಖಲೆಯ ಬ್ಯಾಟಿಂಗ್ ಜೊತೆ ದಾಖಲೆಯ ಚೇಸಿಂಗ್ ಮಾಡ್ಕೊಂಡು ಬಂದಿರೋ ಭಾರತ ಈ ಬಾರಿ ಟ್ರೋಫಿ ಗೆಲುವಿನ ಫೇವರೆಟ್ ಟೀಂ ಆಗೇ ಕಾಣ್ತಿದೆ. ಸೋ ಈಗ ಸೆಮಿಫೈನಲ್ ನಲ್ಲಿ ಇಂಗ್ಲೆಂಡ್ ತಂಡವನ್ನ ಸೋಲಿಸಿ ಫೈನಲ್ಗೆ ಲಗ್ಗೆ ಇಡೋಕೆ ತಂತ್ರಗಾರಿಕೆಯೂ ಶುರುವಾಗಿದೆ. ಆದ್ರೆ ಬ್ರಿಟಿಷರ ಪಡೆಯನ್ನ ಸೋಲಿಸೋದು ಅಷ್ಟು ಈಸಿ ಇಲ್ಲ. ಅದ್ರಲ್ಲೂ ಹ್ಯಾರಿ ಬ್ರೂಕ್ ವೈಟ್-ಬಾಲ್ ಕ್ಯಾಪ್ಟನ್ ಆದ್ಮೇಲೆ ಇಂಗ್ಲೆಂಡ್ ಟೀಂ ಟಿ-20ಐನಲ್ಲಿ ಬೇರೆ ರೀತಿಯೇ ಪರ್ಫಾಮ್ ಮಾಡ್ತಿದ್ದಾರೆ. ಕೋಚ್ ಬ್ರೆಂಡನ್ ಮೆಕಲಮ್ ಅವ್ರ ಗೈಡೆನ್ಸ್ನಲ್ಲಿ ಡೇಂಜರಸ್ ರೂಪ ತಾಳಿದ್ದಾರೆ.
ಸುಲಭಕ್ಕೆ ಸೋಲಲ್ಲ ಆಂಗ್ಲರು!
2024ರ ಟಿ-20 ವಿಶ್ವಕಪ್ ಬಳಿಕ ಟಿ-20ಐನಲ್ಲಿ ಡೇಂಜರಸ್
ವಿಶ್ವಕಪ್ ಬಳಿಕ 25 ಟಿ20 ಪಂದ್ಯ, 15 ಪಂದ್ಯ ಗೆಲುವು, 7 ಸೋಲು
ವಿಶ್ವಕಪ್ ನಂತರ 8 ದ್ವಿಪಕ್ಷೀಯ ಸರಣಿಗಳಲ್ಲಿ ಐದರಲ್ಲಿ ಗೆಲುವು
ಬ್ಯಾಟಿಂಗ್ ನಲ್ಲಿ ಫಿಲ್ ಸಾಲ್ಟ್ ಮತ್ತು ಜೋಸ್ ಬಟ್ಲರ್ ಪವರ್
ಫಿಲ್ ಸಾಲ್ಟ್ 21 ಪಂದ್ಯಗಳಲ್ಲಿ 702 ರನ್ಸ್, ಬಟ್ಲರ್ 23 ಪಂದ್ಯ 686 ರನ್
ಹ್ಯಾರಿ ಬ್ರೂಕ್ 2025ರ ಚಾಂಪಿಯನ್ಸ್ ಟ್ರೋಫಿ ಬಳಿಕ ಕ್ಯಾಪ್ಟನ್ಸಿ
ಹ್ಯಾರಿ ಬ್ರೂಕ್ ನಾಯಕತ್ವದಲ್ಲಿ 11 ಪಂದ್ಯಗಳಲ್ಲಿ 10 ಪಂದ್ಯಗಳನ್ನು ಗೆದ್ದಿದ್ದಾರೆ
ವಿಸ್ವಕಪ್ನಲ್ಲಿ 7 ಪಂದ್ಯಗಳಲ್ಲಿ 6ರಲ್ಲಿ ಗೆಲುವು, ಸೂಪರ್ 8ನಲ್ಲಿ ಹ್ಯಾಟ್ರಿಕ್ ವಿನ್
ಇಂಗ್ಲೆಂಡ್ ತಂಡದ ಪ್ಲಸ್ ಪಾಯಿಂಟ್ ಅಂದ್ರೆ ಸ್ಪಿನ್, ಭಾರತದ ವೀಕ್ ನೆಸ್
ಆದಿಲ್ ರಶೀದ್ ಜೊತೆ ಬೆಥೆಲ್, ಡಾಸನ್, ವಿಲ್ ಜ್ಯಾಕ್ಸ್ ಮತ್ತು ರೆಹಾನ್
T20 WC ಯಿಂದ ಅವರ ಸ್ಪಿನ್ ಬೌಲಿಂಗ್ ಸರಾಸರಿ 19.82 ರಷ್ಟಿದೆ
ಬ್ಯಾಟಿಂಗ್ ಸ್ಟ್ರೈಕ್ರೇಟ್ 151.53, ಭಾರತೀಯ ಬ್ಯಾಟಿಂಗ್ ಸ್ಟ್ರೈಕ್ರೇಟ್ 156.03
ಹ್ಯಾರಿ ಬ್ರೂಕ್ ಇಂಗ್ಲೆಂಡ್ ಪರ ಸ್ಪಿನ್ ವಿರುದ್ಧ ಒಳ್ಳೆ ಬ್ಯಾಟಿಂಗ್ ಪ್ರದರ್ಶನ
ಹ್ಯಾರಿ ಬ್ರೂಕ್ 7 ಇನ್ನಿಂಗ್ಸ್ ಗಳಿಂದ 228 ರನ್, ಕಿಶನ್ 224 ರನ್ಸ್
ವರುಣ್ ಚಕ್ರವರ್ತಿ 12 ವಿಕೆಟ್, ಆದಿಲ್ ರಶೀದ್ 7 ಇನ್ನಿಂಗ್ಸ್ಗಳಲ್ಲಿ 11 ವಿಕೆಟ್
ಇದನ್ನೆಲ್ಲಾ ನೋಡಿದಾಗ ಭಾರತ ಆಂಗ್ಲರನ್ನ ಸದೆ ಬಡಿಯೋಕೆ ಗ್ರೌಂಡ್ವರ್ಕ್ ಮಾಡಲೇಬೇಕಿದೆ. ಸದ್ಯ ಟಿ20 ವಿಶ್ವಕಪ್ನಲ್ಲಿ ಭಾರತ ತಂಡ 6ನೇ ಬಾರಿ ಸೆಮಿಫೈನಲ್ ತಲುಪಿದೆ. 2007ರಲ್ಲಿ ಚಾಂಪಿಯನ್ ಆಗಿದ್ದ ತಂಡ 2014ರಲ್ಲಿ ರನ್ನರ್-ಅಪ್ ಆಗಿತ್ತು. 2016, 2022ರಲ್ಲಿ ಸೆಮಿಫೈನಲ್ನಲ್ಲಿ ಸೋತಿತ್ತು ಮತ್ತು 2024ರಲ್ಲಿ ಟ್ರೋಫಿ ಗೆದ್ದುಇತಿಹಾಸ ಮೆರೆದಿತ್ತು. ಈಗ ಮತ್ತೆ 6ನೇ ಬಾರಿ ಸೆಮಿಫೈನಲ್ಗೇರಿದ್ದು ಇಂಗ್ಲೆಂಡ್ ತಂಡವನ್ನ ಸೋಲಿಸಿದ್ರೆ ಟ್ರೋಫಿ ಉಳಿಸಿಕೊಳ್ಳೋಕೆ ಇನ್ನೊಂದೇ ಹೆಜ್ಜೆ ಬಾಕಿ ಇರಲಿದೆ.

ನೋಡಿರಿ

