ಬುಮ್ರಾ ಬೌಲ್.. ಅಕ್ಷರ್ ಕ್ಯಾಚ್ – ಆಂಗ್ಲರಿಗೆ ಮುಳುವಾಗಿದ್ದೇ ಸಂಜು ರನ್ಸ್
ಜಾರುತ್ತಿದ್ದ ಮ್ಯಾಚ್ ಟರ್ನ್ ಆಗಿದ್ದೆಲ್ಲಿ?

ಬುಮ್ರಾ ಬೌಲ್.. ಅಕ್ಷರ್ ಕ್ಯಾಚ್ – ಆಂಗ್ಲರಿಗೆ ಮುಳುವಾಗಿದ್ದೇ ಸಂಜು ರನ್ಸ್ಜಾರುತ್ತಿದ್ದ ಮ್ಯಾಚ್ ಟರ್ನ್ ಆಗಿದ್ದೆಲ್ಲಿ?

ಕುಂತಲ್ಲಿ ಕೂರಂಗಿಲ್ಲ.. ನಿಂತಲ್ಲಿ ನಿಲ್ಲಂಗಿಲ್ಲ.. ಒಂದ್ಕಡೆ ಕಣ್ಣೀರು. ಇನ್ನೊಂದ್ಕಡೆ ಎದೆಬಡಿತ.. ಮತ್ತೊಂದ್ಕಡೆ ಖುಷಿ.. ಅಬ್ಬಬ್ಬಾ.. ಕೋಟ್ಯಂತರ ಭಾರತೀಯರ ಉಸಿರನ್ನ ಬಿಗಿ ಹಿಡಿಯುವಂತೆ ಮಾಡಿದ್ದ ಮ್ಯಾಚ್ ಅದು. ಕೊನೆಗೂ ಆಂಗ್ಲರಿಗೆ ಗೆಲುವಿನ ಆಸೆ ತೋರಿಸಿ ಟೀಂ ಇಂಡಿಯಾ ಬಾಯ್ಸ್ ಗೆದ್ದು ಬೀಗಿದ್ದಾರೆ. ಬ್ಯಾಕ್ ಟು ಬ್ಯಾಕ್ 2ನೇ ಬಾರಿ ಫೈನಲ್​ಗೆ ಲಗ್ಗೆ ಇಟ್ಟಿದ್ದಾರೆ. ಭಾರತ ಮತ್ತು ಇಂಗ್ಲೆಂಡ್ ನಡುವಿನ ರಣರೋಚಕ ಪಂದ್ಯದ ಬಗೆಗಿನ ಅಚ್ಚರಿಯ ವಿಚಾರಗಳು ಹಾಗೇ ಮ್ಯಾಚ್ ಟರ್ನಿಂಗ್ ಮೂಮೆಂಟ್ಸ್ .

ಇದನ್ನೂ ಓದಿ : 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ನಿಷೇಧ- ಸಾರಿಗೆ ನೌಕರರ ಪರ ನಿಂತ ಸರ್ಕಾರ

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಟಾಸ್ ಸೋತು ಫಸ್ಟ್ ಬ್ಯಾಟಿಂಗ್​ಗೆ ಬಂದ ಭಾರತಕ್ಕೆ ಒನ್ಸ್ ಅಗೇನ್ ಅಭಿಷೇಕ್ ಶರ್ಮಾ ಕಡೆಯಿಂದ ನಿರಾಸೆ. 2ನೇ ಓವರ್​ನಲ್ಲೇ 9 ರನ್ ಗಳಿಸಿ ಔಟ್ ಆಗ್ತಾರೆ. ಬಟ್ ಸಂಜು ಸ್ಯಾಮ್ಸನ್ ಒನ್ಸ್ ಅಗೇನ್ ಇಲ್ಲೂ ಕೂಡ ಆಪತ್ಬಾಂಧವನಾಗಿ ನಿಲ್ತಾರೆ. 42 ಬಾಲಲ್ಲಿ 89 ರನ್ ಚಚ್ಚಿದ್ರು. ಇಂಟ್ರೆಸ್ಟಿಂಗ್ ಅಂದ್ರೆ ಭಾರತದ ಪರ ಬ್ಯಾಟ್ ಬೀಸಿದ 6 ಬ್ಯಾಟರ್ಸ್ 180ಪ್ಲಸ್ ಸ್ಟ್ರೈಕ್​ನಲ್ಲಿ ಬ್ಯಾಟ್ ಬೀಸಿದ್ರು. ಹೀಗಾಗಿ ಭಾರತ 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 253 ರನ್​ಗಳನ್ನ ಸ್ಕೋರ್ ಮಾಡಿತ್ತು. 254 ಟಾರ್ಗೆಟ್ ಅಂದಾಗ ಭಾರತ ಒನ್ ಸೈಡೆಡ್ ಆಗಿ ಗೆಲ್ತಾರೆ ಅನ್ಕೊಂಡ್ರೆ ಬ್ರಿಟಿಷರು ಅಕ್ಷರಶಃ ಬೆವಳಿಸಿದ್ರು. ಇಷ್ಟು ದೊಡ್ಡ ರನ್​ಗಳ ರಾಶಿ ಇದ್ರೂ ಭಾರತಕ್ಕೆ ಸೋಲಿನ ನಡುಕ ಹುಟ್ಟಿಸಿದ್ರು. 19ನೇ ಓವರ್​ ಮುಗಿಯೋವರೆಗೂ ಯಾರ್ ಗೆಲ್ತಾರಪ್ಪ ಅಂತಾ ಭಾರತೀಯರೆಲ್ಲಾ ಟೆನ್ಷನ್​ನಲ್ಲಿ ಫಿಂಗರ್ ಕ್ರಾಸ್ ಮಾಡ್ಕೋಂಡು ಕುಳಿತಿದ್ರು. ಬಟ್ ಫೈನಲಿ ಭಾರತ 7 ರನ್​ಗಳಿಂದ ಪಂದ್ಯವನ್ನ ಗೆದ್ದು ಫೈನಲ್​ಗೆ ಲಗ್ಗೆ ಇಟ್ರು. ಌಕ್ಚುಲಿ ಇಲ್ಲಿ ಭಾರತ ಬ್ಯಾಟಿಂಗ್​ಗಿಂತ ಜಾಸ್ತಿ ಬೌಲಿಂಗ್​ನಲ್ಲಿ ಸಿಕ್ಕಾಪಟ್ಟೆ ಪ್ರೆಸೆನ್ಸ್ ಆಫ್ ಮೈಂಡ್​ನಲ್ಲಿದ್ರು. ಇದೇ ಭಾರತದ ಗೆಲುವಿಗೆ ಕಾರಣ ಆಯ್ತು.

ನಂಬರ್ 1

ಸಂಜು ಸ್ಯಾಮ್ಸನ್ 89 ರನ್ ಗಳಿಸಿ ಪ್ರೆಶರ್ ಫ್ರೀ ಮಾಡಿದ್ದು

ಸಂಜು ಸ್ಯಾಮ್ಸನ್ ಕ್ರೀಸ್ ಕಚ್ಚಿ ನಿಂತು 89 ರನ್ ಗಳಿಸದೇ ಇದ್ರೆ ನೆಕ್ಸ್​ಟ್ ಬರೋ ಬ್ಯಾಟರ್ಸ್ ಗೆ ಪ್ರೆಶರ್ ಆಗ್ತಿತ್ತು. ಬಟ್ ಚೇಟಾ ಅಬ್ಬರಿಸಿದ್ದಕ್ಕೇ ಉಳಿದೆಲ್ಲಾ ಬ್ಯಾಟರ್ಸ್ ಅಗ್ರೆಸ್ಸಿವ್ ಆಗಿ ಬ್ಯಾಟ್ ಬೀಸಿದ್ರು. 250ರ ಗಡಿ ದಾಟಿಸೋಕೆ ಸಾಧ್ಯ ಆಯ್ತು. ಹೀಗಾಗಿ ಇಡೀ ಸ್ಟೇಡಿಯಂ ಸಂಜು ಸ್ಯಾಮ್ಸನ್ ಅಂತಾ ಘೋಷಣೆ ಕೂಗ್ತಿದ್ರು.

ನಂಬರ್ 2

ಅಕ್ಷರ್ ಪಟೇಲ್ ಹಿಡಿದ 2 ಅದ್ಭುತ ಕ್ಯಾಚ್

ಭಾರತದ ಈ ಅಭೂತಪೂರ್ವ ಗೆಲುವಿನಲ್ಲಿ ಅಕ್ಷರ್ ಪಟೇಲ್ ಹಿಡಿದ 2 ಅದ್ಭುತ ಕ್ಯಾಚ್​ಗಳೇ ಗೇಮ್ ಟರ್ನ್ ಮಾಡ್ತು. ಐದನೇ ಓವರ್​ನಲ್ಲಿ ಜಸ್ಪ್ರೀತ್ ಬುಮ್ರಾ ಅವ್ರ ಫಸ್ಟ್ ಬಾಲ್​ನಲ್ಲೇ ಹ್ಯಾರಿ ಬ್ರೂಕ್ ಅವ್ರ ಒಂದು ಅದ್ಭುತ ಕ್ಯಾಚ್ ಹಿಡ್ಕೊಂಡ್ರು. ಅದೂ ಕೂಡ ಲಾಂಗ್ ಡಿಸ್ಟೇನ್ಸ್​ನಲ್ಲಿ ಬಾಲ್ ಚೇಸ್ ಮಾಡಿ ಕ್ಯಾಚ್ ಹಿಡಿದು ಡೈವ್ ಹೊಡ್ದು ಅದ್ಭುತವಾಗಿ ಫಿನಿಶ್ ಮಾಡಿದ್ದು. ಌಂಡ್ ನೆಕ್ಸ್​ಟ್ ಮತ್ತೊಂದು ಕ್ಯಾಚ್ ಅಂದ್ರೆ ಅದು ವಿಲ್ ಜಾಕ್ಸ್ ಕ್ಯಾಚ್. ಜೇಕಬ್ ಬೆಥೆಲ್ ಜೊತೆ ಸೇರ್ಕೊಂಡು ಭಾರತಕ್ಕೆ ನಡುಕ ಹುಟ್ಟಿಸಿದ್ದ ಜಾಕ್ಸ್​ಗೆ ಪೆವಿಲಿಯನ್ ದಾರಿ ತೋರಿಸಿದ್ದು ಕೂಡ ಅಕ್ಷರ್ ಪಟೇಲ್ ಹಿಡಿದ ಕ್ಯಾಚ್. ಹಿಡಿದಿದ್ದು ಅಕ್ಷರ್ ಆದ್ರೂ ಅದನ್ನ ಫಿನಿಶ್ ಮಾಡಿದ್ದು ದುಬೆ. ಬೌಂಡರಿ ಲೈನ್ ಬಳಿ ಓಡಿ ಕ್ಯಾಚ್ ಹಿಡಿದು ತಾನು ಬೌಂಡರಿ ಲೈನ್ ದಾಟ್ತೀನಿ ಅಂತಾ ಗೊತ್ತಾಗಿ ಅದನ್ನ ದುಬೆ ಕಡೆ ಎಸೀತಾರೆ. ಅಟ್ ದಿ ಸೇಂ ಮೂಮೆಂಟ್ ದುಬೆ ಕೂಡ ಅಲ್ಲಿಗೆ ಬಂದಿದ್ದು ವರ ಆಯ್ತು. ದುಬೆ ಆ ಕ್ಯಾಚ್​ನ ಫಿನಿಶ್ ಮಾಡ್ತಾರೆ. ಹಾಗೇನಾದ್ರೂ ಅಕ್ಷರ್ ಅದನ್ನ ತಡೆಯದೇ ಇದ್ರೆ ಒನ್ ಬೌನ್ಸ್ ಫೋರ್ ಆಗ್ತಿತ್ತು. ಆಗ ಮತ್ತೆ ಪ್ರೆಶರ್ ಜಾಸ್ತಿ ಆಗ್ತಿತ್ತು. ಸೋ ಇದೂ ಕೂಡ ಭಾರತಕ್ಕೆ ಗೆಲುವಿಗೆ ಒನ್ ಆಫ್ ದಿ ಮೇನ್ ರೀಸನ್.

ನಂಬರ್  3

16 ಮತ್ತು 18ನೇ ಓವರ್ ನಲ್ಲಿ ಬುಮ್ರಾ ಕೊಟ್ಟ ಬೂಸ್ಟ್

ಬುಮ್ರಾ ಭಾರತದ ಒನ್ ಜನರೇಷನ್ ಬೌಲರ್. ಆಫ್ಟರ್ ಮ್ಯಾಚ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಸಂಜು ಸ್ಯಾಮ್ಸನ್ ಹೇಳಿದ ಈ ಮಾತು ಅಕ್ಷರಶಃ ಸತ್ಯ. ಯಾಕಂದ್ರೆ ಈ ಮ್ಯಾಚಲ್ಲಿ ಅರ್ಧದಷ್ಟು ಗೆಲುವಿನ ಕ್ರೆಡಿಡ್ ಬುಮ್ರಾಗೇ ಕೊಡ್ಬೇಕು. ಇನ್ನೇನು ಮ್ಯಾಚ್ ಕೈತಪ್ಪುತ್ತೆ ಅನ್ನುವಾಗ 16 ಮತ್ತು 18ನೇ ಓವರ್​ನಲ್ಲಿ ಅವ್ರು ಮಾಡಿದ ಬೌಲಿಂಗ್ ಅನ್ ಬಿಲೀವಬಲ್. 16ನೇ ಓವರ್​ನಲ್ಲಿ 8 ರನ್ಸ್ ಅಷ್ಟೇ ಕೊಡ್ತಾರೆ. ಌಂಡ್ ನೆಕ್ಸ್​ಟ್ 18ನೇ ಓವರ್​ನಲ್ಲಿ 6 ರನ್ಸ್ ಅಷ್ಟೇ. ಈ ಎರಡೂ ಓವರ್​ಗಳಲ್ಲಿ ಕಂಟ್ರೋಲ್ ಮಾಡಿದ್ದೇ ಇಂಗ್ಲೆಂಡ್ ಪ್ರೆಶರ್ ಜಾಸ್ತಿ ಮಾಡ್ತು.

ನಂಬರ್ 4

19ನೇ ಓವರ್ ನಲ್ಲಿ ಪ್ರೆಶರ್ ತಪ್ಪಿಸಿದ ಹಾರ್ದಿಕ್ ಪಾಂಡ್ಯ

ಇನ್ನು ಈ ಗೆಲುವಿನ ಕ್ರೆಡಿಟ್​ನಲ್ಲಿ ಹಾರ್ದಿಕ್ ಪಾಂಡ್ ಪಾಲೂ ಇದೆ. 19ನೇ ಓವರ್​ನಲ್ಲೇ ಮ್ಯಾಚ್​ನ ಭಾರತದ ಕಡೆ ತಿರುಗಿಸಿದ್ರು. ಕೊನೇ 2 ಓವರ್​ಗಳಲ್ಲಿ ಇಂಗ್ಲೆಂಡ್ ಗೆಲ್ಲೋಕೆ 12 ಬಾಲಲ್ಲಿ 39 ರನ್ಸ್ ಬೇಕಿತ್ತು. ಬೆಥೆಲ್ ಆಡ್ತಿದ್ದನ್ನ ನೋಡಿದ್ರೆ ಹೊಡ್ದೇ ಬಿಡ್ತಾರೆ ಅನ್ನಿಸ್ತಿತ್ತು. 19ಓವರ್ ಫಸ್ಟ್ ಬಾಲಲ್ಲಿ ಸಿಕ್ಸ್ ಕೂಡ ಹೊಡೆಸ್ಕೊಳ್ತಾರೆ. ಬಟ್ ನೆಕ್ಸ್​ಟ್ ಕಂ ಬ್ಯಾಕ್ ಮಾಡಿದ ಪಾಂಡ್ಯ ಅದೇ ಓವರ್​ನ 3ನೇ ಬಾಲಲ್ಲಿ ಸ್ಯಾಮ್ ಕರನ್ ವಿಕೆಟ್ ತೆಗೀತಾರೆ. ತಿಲಕ್ ವರ್ಮಾ ಕ್ಯಾಚ್ ಹಿಡಿದಿದ್ದೂ ಭಾರತದ ದಿಕ್ಕನ್ನೇ ಬದಲಿಸಿತು. ಆ ಓವರ್​ನಲ್ಲಿ 9 ರನ್ ಅಷ್ಟೇ ನೀಡಿ 1 ವಿಕೆಟ್ ತೆಗೆದಿದ್ದೇ ಭಾರತದ ಗೆಲುವಿನ ದಾರಿ ತೋರಿಸಿತು. ಕೊನೇ ಓವರ್​ನಲ್ಲಿ 6 ಬಾಲ್​ಗೆ 30 ರನ್ಸ್ ಬೇಕಿತ್ತು. ಇಂಥಾ ಟೈಮಲ್ಲಿ ಶಿವಂ ದುಬೆಗೆ ಸೂರ್ಯಕುಮಾರ್ ಯಾದವ್ ಬಾಲ್ ಕೊಟ್ಟಿದ್ರು. ದುಬೆ ಬೌಲಿಂಗ್​ನಲ್ಲೂ ಪಾಂಡ್ಯ ತಮ್ಮ ಬುದ್ಧಿಯಿಂದ ಮತ್ತೊಂದು ವಿಕೆಟ್ ಎಗರಿಸಿದ್ರು.

ನಂಬರ್ 5

ಸ್ಟ್ರೈಕರ್ ಕಡೆ ಬಾಲ್ ಹಾಕಿ ಬೆಥೆಲ್ ಔಟ್ ಮಾಡಿದ ಪಾಂಡ್ಯ

ಇನ್ನು ಕ್ರಿಕೆಟ್​ನಲ್ಲಿ ಎಷ್ಟು ಪ್ರಸೆನ್ಸ್ ಆಫ್ ಮೈಂಡ್ ಇರ್ಬೇಕು ಅನ್ನೋದಕ್ಕೆ ಹಾರ್ದಿಕ್ ಪಾಂಡ್ಯಫೀಲ್ಡಿಂಗ್ ಕೂಡ ಅಷ್ಟೇ ಮುಖ್ಯವಾಗಿತ್ತು. 200ಪ್ಲಸ್ ಸ್ಟ್ರೈಕ್​ನಲ್ಲಿ ಸೆಂಚುರಿ ಸಿಡಿಸಿ ಸಿಂಗಲ್ಲಾಗಿ ನಿಂತು ಇಂಗ್ಲೆಂಡ್​ನ ಗೆಲುವಿನ ದಡದತ್ತ ಕರ್ಕೊಂಡು ಹೋಗ್ತಿದ್ದ ಸ್ಟಾರ್ ಬಾಯ್ ಜೇಕಬ್ ಬೆಥೆಲ್ರನ್ನ ರನ್ ಔಟ್ ಮಾಡಿದ್ದು ಗೇಮ್ ಟರ್ನಿಂಗ್ ಮೂಮೆಂಟ್. ಕೊನೇ ಓವರ್​ನಲ್ಲಿ ದುಬೆ ಬೌಲಿಂಗ್​ನಲ್ಲಿ ಮೊದಲ ಎಸೆತದಲ್ಲೇ ಬೆಥೆಲ್ ಲಾಂಗ್ ಆನ್​ನತ್ತ ಬಾಲ್ ಹೊಡೆದು 2ರನ್​ಗೆ ಕಾಲ್ ಕೊಡ್ತಾರೆ. ಈ ಟೈಮಲ್ಲಿ ಫೀಲ್ಡಿಂಗ್​ನಲ್ಲಿದ್ದ ಪಾಂಡ್ಯ ಬಾಲ್ ತೆಗೆದು ಸ್ಟ್ರೈಕರ್​ ಕಡೆ ಎಸೀತಾರೆ. ಅಷ್ಟ್ರಲ್ಲಿ ಸಂಜು ಬಾಲ್ ಹಿಡಿದು ಸ್ಟಂಪ್ಸ್ ಎಗರಿಸ್ತಾರೆ, ಅಷ್ಟ್ರಲ್ಲಿ ಇನ್ನೂ ರೀಚ್ ಆಗದ ಬೆಥೆಲ್ ರನ್ ಔಟ್ ಆಗ್ತಾರೆ. ಹಾಗೇನಾದ್ರೂ ಪಾಂಡ್ಯ ತಲೆ ಓಡಿಸದೆ ನಾನ್ ಸ್ಟ್ರೈಕರ್​ ಕಡೆ ಬಾಲ್ ಎಸೆದಿದ್ರೆ ಯಾವ ರನ್​ಔಟ್​ಗೂ ಅವಕಾಶ ಇರ್ಲಿಲ್ಲ. ಇದನ್ನೂ ಕೂಡ ಮೆಚ್ಚಲೇಬೇಕು. ಟೋಟಲಿ ಭಾರತದ ಬ್ಯಾಟಿಂಗ್​ ಜೊತೆ ಬೌಲಿಂಗ್​ನಲ್ಲಿ ಅಗ್ರೆಶನ್ ಮತ್ತು ಟೀಂ ಸ್ಪಿರಿಟ್ ತೋರಿಸಿದ್ದರಿಂದಲೇ ಭಾರತ ಗೆದ್ದು ಫೈನಲ್​ಗೆ ಲಗ್ಗೆ ಇಟ್ಟಿದೆ. ಌಂಡ್ ಪಂದ್ಯಕ್ಕೂ ಮುನ್ನ ಇಂಗ್ಲೆಂಡ್ ಆಟಗಾರ ಸ್ಯಾಮ್ ಕರನ್ ಇಡೀ ಸ್ಟೇಡಿಯಂ ಸೈಲೆಂಟ್ ಮಾಡ್ತೀವಿ ಅಂದಿದ್ರು. ಆದ್ರೆ ಅದು ಸಾಧ್ಯವಾಗಲೇ ಇಲ್ಲ.

Shantha Kumari

Leave a Reply

Your email address will not be published. Required fields are marked *