ENG ಗೆಲ್ಲೋದು INDಗೆ ಕಷ್ಟನಾ? – IPL ಸ್ಟಾರ್ಸ್ ವಿಶ್ವಕಪ್ ನಲ್ಲಿ ವಿಲನ್
ಸೆಮೀಸ್ ಫೈಟ್.. ಭಾರತಕ್ಕೆ ಸವಾಲೇನು?

ENG ಗೆಲ್ಲೋದು INDಗೆ ಕಷ್ಟನಾ? – IPL ಸ್ಟಾರ್ಸ್ ವಿಶ್ವಕಪ್ ನಲ್ಲಿ ವಿಲನ್ಸೆಮೀಸ್ ಫೈಟ್.. ಭಾರತಕ್ಕೆ ಸವಾಲೇನು?

ಟಿ20 ವಿಶ್ವಕಪ್ ಟೂರ್ನಿ ರೋಚಕ ಘಟ್ಟಕ್ಕೆ ಬಂದು ನಿಂತಿದೆ. ಈಗಾಗ್ಲೇ ಆಫ್ಘನಿಸ್ತಾನವನ್ನ ಮಣಿಸಿ ಸೌತ್ ಆಫ್ರಿಕಾ ಫೈನಾಲೆಗೆ ಎಂಟ್ರಿ ಕೊಟ್ಟಿದೆ. ಮತ್ತೊಂದ್ಕಡೆ ಗುರುವಾರದ ಎರಡನೇ ಸೆಮೀಸ್ ಫೈಟ್​ನಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ಹೈವೋಲ್ಟೇಜ್ ಫೈಟ್ ನಡೆಯಲಿದೆ. ಇಲ್ಲಿ ಗೆದ್ದ ತಂಡ ಸೀದಾ ಫಿನಾಲೆ ತಲುಪಲಿದೆ. ಈ ಪಂದ್ಯದಲ್ಲಿ ಭಾರತಕ್ಕೆ ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆಯೋ ಚಾನ್ಸ್ ಇದೆ. 2022ರ ಸೋಲಿಗೆ ಸೇಡು ತೀರಿಸಿಕೊಳ್ಳೋದ್ರ ಜೊತೆಗೆ ಫಿನಾಲೆಗೆ ತಲುಪೋ ಸುವರ್ಣಾವಕಾಶ ಇದೆ. ಆದ್ರೆ ಈ ಪಂದ್ಯವನ್ನ ಅಷ್ಟು ಈಸಿಯಾಗಿ ತೆಗೆದುಕೊಳ್ಳೋಕೆ ಸಾಧ್ಯನೇ ಇಲ್ಲ. ಯಾಕೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಗೆದ್ದ ಕಲ್ಕಿ, ಎದ್ದ ಪ್ರಭಾಸ್ – ಎಂಥಾ ಕ್ಲೈಮ್ಯಾಕ್ಸ್ ಅದು ಅಬ್ಬಬ್ಬಾ…

2024ರ ಎರಡನೇ ಸೆಮಿಫೈನಲ್‌ನಲ್ಲಿ ಭಾರತ ತಂಡವು ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ಸೆಣಸಾಟ ನಡೆಸಲಿದೆ. ಗಯಾನಾದ ಪ್ರಾವಿಡೆನ್ಸ್​​​ನಲ್ಲಿರುವ ಗಯಾನಾ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ರಣರೋಚಕ ಫೈಟ್ ನಡೆಯಲಿದೆ. ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಕಳೆದ ಆವೃತ್ತಿಯ ಟೂರ್ನಿಯಲ್ಲಿ ಇಂಗ್ಲೆಂಡ್ ವಿರುದ್ಧದ ಹಿಂದಿನ ಸೋಲಿಗೆ ಸೇಡು ತೀರಿಸಿಕೊಳ್ಳಲು ಸಜ್ಜಾಗಿದೆ.  ನವೆಂಬರ್ 10, 2022ರಂದು ನಡೆದ ಸೆಮಿ ಫೈನಲ್​​ನಲ್ಲಿ ಇಂಗ್ಲೆಂಡ್ 10 ವಿಕೆಟ್​ಗಳ ಗೆಲುವು ಸಾಧಿಸಿತ್ತು. ಹೀಗಾಗಿ ಭಾರತ ತಂಡಕ್ಕೆ ಇದು ಸೇಡಿನ ಹಾಗೂ ಪ್ರತಿಷ್ಠೆಯ ಪಂದ್ಯವಾಗಿದೆ. ಈ ಬಾರಿ ಲೀಗ್​ ಮತ್ತು ಸೂಪರ್​-8 ಸುತ್ತಿನಲ್ಲಿ ಅಜೇಯವಾಗಿ ಅಗ್ರಸ್ಥಾನ ಪಡೆದು ಭಾರತ ತಂಡ ಸೆಮಿಫೈನಲ್​​ನಲ್ಲೂ ಭರ್ಜರಿ ಗೆಲುವು ಸಾಧಿಸಿ ಫೈನಲ್​ಗೇರುವ ನಿರೀಕ್ಷೆಯಲ್ಲಿದೆ. ಹಿಂದಿನ ಪಂದ್ಯಗಳಲ್ಲಿ ಫಾರ್ಮ್ ಕಂಡುಕೊಳ್ಳಲು ಹೆಣಗಾಡುತ್ತಿದ್ದ ರೋಹಿತ್ ಶರ್ಮಾ ಮತ್ತೆ ಲಯಕ್ಕೆ ಮರಳಿದ್ದಾರೆ. ಆಸೀಸ್ ವಿರುದ್ಧ ಕೇವಲ 41 ಎಸೆತಗಳಲ್ಲಿ 92 ರನ್ ಗಳಿಸಿ ಮಿಂಚಿದರು. ಹೀಗಾಗಿ ಇಂಗ್ಲೆಂಡ್ ಬೌಲರ್ಸ್​ ಎದುರು ಮತ್ತೊಮ್ಮೆ ಅಬ್ಬರಿಸೋಕೆ ರೆಡಿಯಾಗಿದ್ದಾರೆ.

ಇನ್ನು ಇಂದಿನ ಪಂದ್ಯದಲ್ಲಿ ಪ್ಲೇಯಿಂಗ್ 11 ಹೇಗಿರಲಿದೆ ಅನ್ನೋದನ್ನ ನೋಡೋದಾದ್ರೆ, ಭಾರತ ತಂಡವು ವಿಶ್ವಕಪ್​​ನಲ್ಲಿ ಅಜೇಯ ತಂಡವಾಗಿ ಮುನ್ನುಗ್ಗುತ್ತಿರೋದ್ರಿಂದ ತಂಡದಲ್ಲಿ ಯಾವುದೇ ಬದಲಾವಣೆಯ ನಿರೀಕ್ಷೆ ಇಲ್ಲ. ಆರಂಭಿಕ ಬ್ಯಾಟ್ಸಮನ್​​, ಕ್ಯಾಪ್ಟನ್ ಫಾರ್ಮ್​ಗೆ ಮರಳಿರೋದು ತಂಡಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ಇತ್ತ ಕೊಹ್ಲಿ ಫಾರ್ಮ್​​ಗೆ ಬಂದರೆ ತಂಡ ಮತ್ತಷ್ಟು ಬಲಿಷ್ಠವಾಗಲಿದೆ. ಈ ಬಾರಿ ಕಳೆದ 6 ಪಂದ್ಯಗಳಿಂದ 2 ಬಾರಿ ಶೂನ್ಯಕ್ಕೆ ವಿಕೆಟ್ ಕೈಚೆಲ್ಲಿರುವ ವಿರಾಟ್, 6 ಪಂದ್ಯಗಳಲ್ಲಿ 100ರ ಸ್ಟ್ರೈಕ್​ರೇಟ್​​ನಲ್ಲಿ ಬ್ಯಾಟ್​​ ಬೀಸಿದ್ದು ಗಳಿಸಿರೋದು  ಜಸ್ಟ್​ 66 ರನ್ ಮಾತ್ರ. ಟಿ20 ವಿಶ್ವಕಪ್ ಇತಿಹಾಸದ ಪೈಕಿ ಆರಂಭಿಕನಾಗಿ ಅತಿ ಕೆಟ್ಟ ಪರ್ಫಾಮೆನ್ಸ್​ ನೀಡಿದ ಕುಖ್ಯಾತಿಗೆ ವಿರಾಟ್ ಒಳಗಾಗಿದ್ದಾರೆ. ಸತತ 6 ಪಂದ್ಯಗಳಿಂದ ವೈಫಲ್ಯ ಅನುಭವಿಸುತ್ತಿದ್ದು, ಟೀಕಾಕಾರರಿಗೂ ಆಹಾರವಾಗಿದ್ದಾರೆ. ಆದ್ರೀಗ ಈ ಎಲ್ಲದಕ್ಕೂ ಉತ್ತರ ನೀಡಲು ಎರಡೇ 2 ಅವಕಾಶ ಮಾತ್ರವಿದೆ. ಅದು ಕೂಡ ಇಂಗ್ಲೆಂಡ್ ಎದುರು ಟೀಮ್ ಇಂಡಿಯಾ ಗೆದ್ದರಷ್ಟೇ. ಇಲ್ಲ ಅಂದ್ರೆ ಸೆಮೀಸ್​​ ಅವಕಾಶ ಕೊನೆ ಆಗಲಿದೆ. ಹೀಗಾಗಿ ಬಿಗ್ ಮ್ಯಾಚ್ ಪ್ಲೇಯರ್ ವಿರಾಟ್​​, ಇಂಗ್ಲೆಂಡ್ ಪಂದ್ಯದಲ್ಲೇ ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್ ನೀಡಬೇಕಿದೆ. ಇಲ್ಲಾಂದ್ರೆ, ಈ ಟಿ20 ವಿಶ್ವಕಪ್​ ಕೊಹ್ಲಿ ಪಾಲಿಗೆ ಕರಾಳವಾಗೋದು ಗ್ಯಾರಂಟಿ.

ಆದ್ರೆ ಇಂಗ್ಲೆಂಡ್ ತಂಡವನ್ನ ಸುಲಭವಾಗಿ ಪರಿಗಣಿಸೋಕೆ ಸಾಧ್ಯನೇ ಇಲ್ಲ. ಅದ್ರಲ್ಲೂ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್. ಐಪಿಎಲ್​ನಲ್ಲಿ ಅಬ್ಬರಿಸಿ ದ್ವಿತೀಯಾರ್ಧದಲ್ಲಿ ಫಾರ್ಮ್​ ಕಳೆದುಕೊಂಡಿದ್ದ ಬಟ್ಲರ್, ಇದೀಗ ಸೆಮಿಫೈನಲ್ಗೆ ಮುಂಚಿತವಾಗಿ ಒಳ್ಳೆಯ ಫಾರ್ಮ್​ಗೆ ಮರಳಿದ್ದಾರೆ. ಟೂರ್ನಿ ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡದ ಬಟ್ಲರ್, ಯುಎಸ್ ವಿರುದ್ಧದ ಕೊನೆ ಪಂದ್ಯದೊಂದಿಗೆ ಅದ್ಭುತ ಫಾರ್ಮ್​ಗೆ ಮರಳಿದ್ದಾರೆ. ಯುನೈಟೆಡ್ ಸ್ಟೇಟ್ಸ್ ವಿರುದ್ಧ 38 ಎಸೆತಗಳಲ್ಲಿ 83 ರನ್ ಗಳಿಸಿದರು. 6 ಬೌಂಡರಿಗಳು, ಹಾಗೇ 8 ಸಿಕ್ಸರ್ ಗಳನ್ನು ಸಿಡಿಸಿದ್ದರು. ಭಾರತವು ಇಂಗ್ಲೆಂಡ್ ವಿರುದ್ಧ ಗೆಲ್ಲಬೇಕೆಂದರೆ ಜೋಸ್​ ಬಟ್ಲರ್ ಆದಷ್ಟು ಬೇಗ ಔಟ್ ಆಗಬೇಕಿದೆ.  ಬಟ್ಲರ್ ಅಲ್ದೇ ಮತ್ತೊಬ್ಬ ಆರಂಭಿಕ ಆಟಗಾರ ಫಿಲ್ ಸಾಲ್ಟ್​ರನ್ನು ಸುಲಭವಾಗಿ ಪರಿಗಣಿಸೋಕೆ ಆಗಲ್ಲ.  ಹೆಚ್ಚು ಹೊತ್ತು ಕ್ರೀಸ್ ನಲ್ಲಿದ್ದರೆ ಆಕ್ರಮಣಕಾರಿಯಾಗಿ ಆಡಬಲ್ಲರು. ವಿಂಡೀಸ್ ವಿರುದ್ಧದ ಪಂದ್ಯದಲ್ಲಿ 87 ರನ್ ಸಿಡಿಸಿ ಅಬ್ಬರಿಸಿದ್ದರಯ. ಅಲ್ದೇ ಈ ವರ್ಷದ ಐಪಿಎಲ್​ನಲ್ಲಿಯೂ ಅವರು ಕೆಕೆಆರ್ ಪರ ಆರಂಭಿಕರಾಗಿ ಉತ್ತಮ ರನ್​ ಗಳಿಸಿದ್ದರು. ಹಾಗಾಗಿ ಸೆಮಿಫೈನಲ್​ನಲ್ಲಿ ಭಾರತ ಸ್ಪೆಷಲ್ ಪ್ಲಾನ್​ನೊಂದಿಗೆ ಕಣಕ್ಕಿಳಿಯಬೇಕಿದೆ.

ಇನ್ನು ಗಯಾನಾ ನ್ಯಾಷನಲ್ ಸ್ಟೇಡಿಯಂನಲ್ಲಿನ ಪಿಚ್ ಸ್ಪಿನ್ನರ್ಸ್​​ಗಳ ಸ್ವರ್ಗವಾಗಿದೆ. ಹೀಗಾಗಿ ರೋಹಿತ್ ಪಡೆ ಮೂವರು ಸ್ಪಿನ್ನರ್​​​​​ಗಳನ್ನು ಕಣಕ್ಕಿಳಿಸಬಹುದು. ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್ ಮತ್ತು ಅಕ್ಷರ್ ಪಟೇಲ್ ಅವರಂತಹ ಮೊದಲ ದರ್ಜೆಯ ಸ್ಪಿನ್ನರ್​ಗಳು ಇಂಗ್ಲೆಂಡ್ ವಿರುದ್ಧ ಅಟ್ಯಾಕ್ ಮಾಡಬಹುದು.  ಈ ಸ್ಪಿನ್ ಟ್ರ್ಯಾಕ್​​ನ ಪ್ರಯೋಜನ ಪಡೆಯಲು ಟೀಮ್ ಇಂಡಿಯಾ ಮುಂದಾಗಿದೆ. ಇಂಗ್ಲೆಂಡ್ ತಂಡದಲ್ಲೂ ಸ್ಪೆಷಲಿಸ್ಟ್ ಸ್ಪಿನ್ನರ್​​ಗಳೇ ಇದ್ದು, ರೋಹಿತ್​ ಪಡೆ ಎಚ್ಚರಿಕೆಯ ಹೆಜ್ಜೆಯನ್ನಿಡಬೇಕಿದೆ. ಈ ಸೋಲು ಗೆಲುವಿನ ಲೆಕ್ಕಾಚಾರದ ನಡುವೆ  ಸೆಮಿಫೈನಲ್​ನಲ್ಲಿ ಇಂಗ್ಲೆಂಡ್ ಮತ್ತು ಭಾರತ ನಡುವಿನ ಆಟಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಹೆಚ್ಚಿದೆ. ಏಕೆಂದರೆ ಈಗಾಗಲೇ ಗಯಾನಾದಲ್ಲಿ ಸತತ 12 ಗಂಟೆಗಳ ಕಾಲ ಮಳೆಯಾಗಿದ್ದು, ಪಂದ್ಯದ ಅವಧಿಯಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಈ ವಾರವಿಡೀ ಮಳೆಯಾಗುವ ನಿರೀಕ್ಷೆ ಇದೆ. ಮಳೆ ಕಾಣಿಸಿಕೊಂಡರೂ ಪಂದ್ಯಕ್ಕೆ 120 ನಿಮಿಷಗಳ ಹೆಚ್ಚುವರಿ ಸಮಯ ನೀಡಲಾಗಿದೆ. 5 ಓವರ್ ಅಥವಾ ಸೂಪರ್​ ಓವರ್​ ಆಡಲು ಅವಕಾಶ ಸಿಕ್ಕರೂ ಪಂದ್ಯ ನಡೆಸಲಾಗುತ್ತದೆ. ಆದ್ರೆ ಅದಕ್ಕೂ ಮಳೆ ಅವಕಾಶ ನೀಡದೆ ಪಂದ್ಯ ಸ್ಥಗಿತಗೊಂಡರೆ ಸೂಪರ್​​-8 ಗ್ರೂಪ್ 1ರಲ್ಲಿ ಭಾರತ ಅಗ್ರಸ್ಥಾನಿಯಾಗಿ ಫೈನಲ್​ಗೇರಲಿದೆ. ಏಕೆಂದರೆ ಇಂಗ್ಲೆಂಡ್​ಗಿಂತ ಹೆಚ್ಚು ಅಂಕ, ರನ್ ರೇಟ್ ಹೊಂದಿದೆ. ಸೋ ಮಳೆ ಬಂದ್ರೆ ಭಾರತಕ್ಕೆ ನೋ ಲಾಸ್.

2024ರ ಟಿ-20 ಟೂರ್ನಿಯಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ಸೋಲಿಲ್ಲದ ತಂಡಗಳಾಗಿ ಸೆಮಿಫೈನಲ್ ಪ್ರವೇಶಿಸಿದ್ವು. ಅದ್ರಂತೆ ಈಗ ಸೌತ್ ಆಫ್ರಿಕಾ ಆಫ್ಘನ್ ತಂಡವನ್ನ ಮಣಿಸಿ ಫೈನಲ್​ಗೆ ಎಂಟ್ರಿ ಕೊಟ್ಟಿದೆ.  ಇತ್ತ ಭಾರತ ಕೂಡ ಫಿನಾಲೆಗೆ ಎಂಟ್ರಿ ಕೊಡೋ ಫೇವರೆಟ್ ಟೀಂ ಎನಿಸಿಕೊಂಡಿದೆ..

Shwetha M

Leave a Reply

Your email address will not be published. Required fields are marked *