3ನೇ ಟೆಸ್ಟ್ನಿಂದ ರಿಷಭ್ OUT – ಪಂತ್ ಇಂಜುರಿಯಿಂದ ಮಿಡಲ್ ಆರ್ಡರ್ ಕಷ್ಟ?

ಇಂಗ್ಲೆಂಡ್ ವಿರುದ್ಧ ರಿಷಬ್ ಪಂತ್ ಸಾಲಿಡ್ ಪ್ರದರ್ಶನ ನೀಡುತ್ತಿದ್ದಾರೆ. ಸೆಂಚುರಿ ಮೇಲೆ ಸೆಂಚುರಿ ಹೊಡೆದು ತಂಡಕ್ಕೆ ಆಸರೆ ಆಗುತ್ತಿದ್ದಾರೆ. ಆದ್ರೆ 3ನೇ ಟೆಸ್ಟ್ ನಲ್ಲಿ ಪಂತ್ಗೆ ಬಿಗ್ ಶಾಕ್ ಎದುರಾಗಿದೆ. ಲಾರ್ಡ್ಸ್ ಟೆಸ್ಟ್ ಪಂದ್ಯದ ಮೊದಲ ದಿನವೇ ವಿಕೆಟ್ ಕೀಪರ್ ಬ್ಯಾಟರ್ ರಿಷಬ್ ಪಂತ್ ಗಾಯಗೊಂಡಿದ್ದಾರೆ. ಇದು ಟೀಂ ಇಂಡಿಯಾದ ಬ್ಯಾಟಿಂಗ್ಗೆ ಸಾಕಷ್ಟು ಪೆಟ್ಟು ಕೊಡಲಿದೆ. ಪಂತ್ಗೆ ಬೆರಳಿಗೆ ಪೆಟ್ಟಾದ ಕಾರಣ ಧ್ರುವ್ ಜುರೆಲ್ ವಿಕೆಟ್ ಕೀಪಿಂಗ್ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಸದ್ಯ ವೈದ್ಯಕೀಯ ತಂಡದ ನಿಗಾದಲ್ಲಿರೋ ಪಂತ್ ಬ್ಯಾಟಿಂಗ್ ಆಡುತ್ತಾರಾ? ಪಂತ್ ಆಟದಲ್ಲಿದ್ರೆ ಏನೆಲ್ಲಾ ಪ್ಲೆಸ್ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಮೂರನೇ ಟೆಸ್ಟ್ ದಿಢೀರ್ STOP ಆಗಿದ್ಯಾಕೆ – ಒಂದೇ ಒಂದು ರನ್ಗಾಗಿ ನಿದ್ದೆಗೆಟ್ಟ ರೂಟ್
ಇಂಡಿಯಾ ತನ್ನ ವಿಕೆಟ್ ಕೀಪರ್ ಅನ್ನು ಬದಲಾಯಿಸಿದೆ. ಇದ್ದಕ್ಕೆ ಕಾರಣ.. ರಿಷಭ್ ಪಂತ್ ಕೀಪಿಂಗ್ ಮಾಡುವಾಗ ಗಾಯಗೊಂಡಿದ್ದು, ಇದರಿಂದಾಗಿ ಅವರು ಮೈದಾನವನ್ನು ಹೊರ ನಡೆದಿದ್ದಾರೆ. ಹೀಗಾಗಿ ಪಂತ್ ಬದಲಿಗೆ ಧ್ರುವ್ ಜುರೆಲ್ ವಿಕೆಟ್ ಕೀಪರ್ ಆಗಿ ಕಣಕ್ಕಿಳಿದಿದ್ದಾರೆ. ಪಂದ್ಯದ ಮೊದಲ ದಿನವೇ ಪಂತ್ ಗಾಯಗೊಂಡಿರುವುದು ಗಿಲ್ ಪಡೆಯನ್ನ ಆತಂಕಕ್ಕೆ ತಳ್ಳಿದೆ.
ರಿಷಬ್ ಪಂತ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು ಅವರು ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿದ್ದಾರೆ” ಎಂದು ಬಿಸಿಸಿಐ ತಿಳಿಸಿದೆ. ಜೊತೆಗೆ ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ, ಪಂತ್ ಅವರ ಗಾಯದ ತೀವ್ರತೆ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಈ ಬಗ್ಗೆ 2ನೇ ದಿನದಾಟ ಪ್ರಾರಂಭ ಆಗುವ ಮೊದಲು ಬಿಸಿಸಿಐ ಅಪ್ ಡೇಟ್ಸ್ ತಿಳಿಸಲಿದೆ ಎಂದಷ್ಟೇ ತಿಳಿಸಿದ್ದಾರೆ. ಹೀಗಾಗಿ ಪಂತ್ ಮೈದಾನಕ್ಕೆ ಇಳಿಯುತ್ತರೋ ಇಲ್ಲವೋ ತಿಳಿದಿಲ್ಲ. ಅವರು ಬ್ಯಾಟಿಂಗ್ ಮಾಡಲು ಸಾಧ್ಯವಾಗುತ್ತಾ ಎಂಬ ಬಗ್ಗೆಯೂ ಸ್ಪಷ್ಟತೆಯಿಲ್ಲ.
ಇಂಗ್ಲೆಂಡ್ ತನ್ನ ಸಹಜ ಭಾಝ್ ಬಾಲ್ ಶೈಲಿಯನ್ನಬದಿಗಿಟ್ಟು ಎಚ್ಚರಿಕೆಯ ಬ್ಯಾಟಿಂಗ್ ನಡೆಸುತ್ತಿದೆ. ದ್ವಿತೀಯ ದಿನ ರನ್ ವೇಗ ಹೆಚ್ಚಿಸುವ ಸಾಧ್ಯತೆ ಇದ್ದು ದೊಡ್ಡ ಮೊತ್ತ ಪೇರಿಸಿದ್ದೇ ಆದಲ್ಲಿ ಮಧ್ಯಮ ಕ್ರಮಾಂಕದಲ್ಲಿ ರನ್ ಗಳಿಸಲು ರಿಷಬ್ ಪಂತ್ ಅವರ ಅಗತ್ಯ ತಂಡಕ್ಕೆ ಹೆಚ್ಚಿದೆ. ಆದರೆ ಅವರಿಂದ ಬ್ಯಾಟಿಂಗ್ ಸಾಧ್ಯವಾಗುತ್ತದೋ ಇಲ್ಲವೋ ಎಂದೂ ತಿಳಿದಿಲ್ಲ. ಪಂತ್ ಇದ್ರೆ ಸ್ಕೂರ್ ಚೆನ್ನಾಗಿ ಕಲೆ ಹಾಕಬಹುದು. ಕರುಣ್ ನಾಯರ್ ಕೂಡ ಹೇಳಿಕೊಳ್ಳುವಂತಹ ಪ್ರದರ್ಶನ್ ಈ ಟೆಸ್ಟ್ ನೀಡಿಲ್ಲ.. ಹೀಗಾಗಿ ಪಂತ್ ಹೆಗಲಿಗೆ ಸಾಕಷ್ಟು ಜವಾಬ್ದಾರಿ ಇತ್ತು. ಬಟ್ ಈಗ ಪಂತ್ ಗಾಯವಾಗಿದ್ದು ಏನ್ ಆಗುತ್ತೆ ಅನ್ನೋ ಟೆನ್ಶನ್ ಹೆಚ್ಚಾಗಿದೆ.
ಈ ಸರಣಿಯಲ್ಲಿ ಉತ್ತಮ ಫಾರ್ಮ್ನಲ್ಲಿರುವ ರಿಷಭ್ ಪಂತ್ 4 ಇನ್ನಿಂಸ್ಸ್ಗಳಿಂದ 342 ರನ್ ಗಳಿಸಿದ್ದಾರೆ. ಭಾರತದ ಪರವಾಗಿ ಅತಿ ಹೆಚ್ಚು ರನ್ ಗಳಿಸಿದವರಲ್ಲಿ ಅವರು ಎರಡನೇ ಸ್ಥಾನದಲ್ಲಿದ್ದಾರೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಶತಕ ಗಳಿಸಿ ದಾಖಲೆ ಬರೆದಿದ್ದ ಅವರು ನಂತರ ಎರಡನೇ ಟೆಸ್ಟ್ ಪಂದ್ಯದಲ್ಲಿ 25 ಮತ್ತು 65 ರನ್ ಗಳಿಸಿದ್ದರು. ಹೀಗಾಗಿ ಲಾರ್ಡ್ಸ್ ಟೆಸ್ಟ್ ನಲ್ಲಿ ಸಹ ಅವರು ಉತ್ತಮ ರನ್ ಗಳಿಸುವ ನಿರೀಕ್ಷೆ ಇದೆ. ಬಟ್ ಬೇಗ ಗುಣವಾಗಿ ಬರಬೇಕಾಗಿದೆ.
ಇನ್ನು ಧ್ರುವ್ ಜುರೆಲ್ ಅವರು ರಿಷಬ್ ಪಂತ್ ಗಾಯಾವಾದಾಗ, ಪಂತ್ ಅನುಪಸ್ಥಿತಿಯಲ್ಲಿ ಯಶಸ್ವಿಯಾಗಿ ವಿಕೆಟ್ ಕೀಪರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಈ ಹಿಂದೆ ನ್ಯೂಜಿಲೆಂಡ್ ತಂಡ ಭಾರತ ಪ್ರವಾಸ ಕೈಗೊಂಡಿದ್ದಾಗ ಪಂತ್ ಗಾಯಗೊಂಡ ಸಂದರ್ಭದಲ್ಲಿ ಧ್ರುವ್ ಜ್ಯುರೆಲ್ ಅವರು ವಿಕಟ್ ಕೀಪಿಂಗ್ ಮಾಡಿದ್ದರು. ಬೆಂಗಳೂರು ಟೆಸ್ಟ್ ನಲ್ಲಿ ಈ ರೀತಿ ಆಗಿತ್ತು. ಆದರೆ ಬ್ಯಾಟಿಂಗ್ ಗೆ ಪಂತ್ ಆಗಮಿಸಿ ತಂಡವನ್ನು ಆಧರಿಸಿದ್ದರು. ಧ್ರುವ್ ಜ್ಯುರೆಲ್ ಕೇವಲ ಒಂದು ಟೆಸ್ಟ್ ಪಂದ್ಯವನ್ನು ಆಡಿದ್ದಾರೆ. ಬಲಗೈ ಬ್ಯಾಟ್ಸ್ಮನ್ ಆಗಿರುವ ಜುರೆಲ್, ಆಸ್ಟ್ರೇಲಿಯಾ ವಿರುದ್ಧ ಪರ್ತ್ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಆಡಿದ್ದರು. ರಿಷಬ್ ವಾಪಸಾದ ನಂತರ ಹೆಚ್ಚಾಗಿ ಬೆಂಚ್ಗೆ ಸೀಮಿತವಾಗಿದ್ದರು. ಹೀಗಾಗಿ ಜುರೆಲ್ ಮೇಲೆ ಯಾವ ನಂಬಿಕೆ ಇಡೋಕೆ ಆಗಲ್ಲ.. ಪಂತ್ ಬಂದ್ರೆ ಭಾರತಕ್ಕೆ ಆನೆ ಬಲ ಬರೋದು ಪಕ್ಕಾ.

ನೋಡಿರಿ

