80 ಎಸೆತ.. ಸೆಂಚುರಿ.. ಸ್ಮಿತ್ ಸಿಡಿಲು.. ಟೆಸ್ಟ್ ನಲ್ಲಿ ಮೆಕಲಂ ರೆಕಾರ್ಡ್ ಹೇಗಿದೆ? – ಫಾಸ್ಟೆಸ್ಟ್ ಸೆಂಚುರಿ ಲಿಸ್ಟ್ ನಲ್ಲಿ ಯಾರೆಲ್ಲಾ? 

80 ಎಸೆತ.. ಸೆಂಚುರಿ.. ಸ್ಮಿತ್ ಸಿಡಿಲು.. ಟೆಸ್ಟ್ ನಲ್ಲಿ ಮೆಕಲಂ ರೆಕಾರ್ಡ್ ಹೇಗಿದೆ? – ಫಾಸ್ಟೆಸ್ಟ್ ಸೆಂಚುರಿ ಲಿಸ್ಟ್ ನಲ್ಲಿ ಯಾರೆಲ್ಲಾ? 

ಇಂಗ್ಲೆಂಡ್ ತಂಡವನ್ನ ಯಾಕೆ ಡೇಂಜರಸ್ ಅಂತಾರೆ ಅನ್ನೋದಕ್ಕೆ ಶುಕ್ರವಾರದ ಇನ್ನಿಂಗ್ಸ್​​ ಬೆಸ್ಟ್ ಎಕ್ಸಾಂಪಲ್. 84ಕ್ಕೆ 5 ವಿಕೆಟ್ ಇದ್ದವ್ರು ನೆಕ್ಸ್​​ಟ್ 250+ ಆದ್ರೂ ವಿಕೆಟ್ ಲೆಸ್. ಅದೂ ಅಗ್ರೆಸ್ಸಿವ್ ಬ್ಯಾಟಿಂಗ್ ಸ್ಟೈಲ್. ಅದ್ರಲ್ಲೂ ಇಂಗ್ಲೆಂಡ್ ಬ್ಯಾಟರ್ ಜೇಮಿ ಸ್ಮಿತ್ ಅಕ್ಷರಶಃ ಫಿಯರ್​ಲೆಸ್ ಬ್ಯಾಟಿಂಗ್ ಮಾಡಿದ್ರು. ರಿಸ್ಕ್ ಫ್ರೀ ಸ್ಕೋರ್ ಮಾಡಿದ್ರು. 80 ಎಸೆತಗಳಲ್ಲೇ ಸೆಂಚುರಿ ಕಂಪ್ಲೀಟ್ ಮಾಡಿದ್ರು.

ಇದನ್ನೂ ಓದಿ: ಸಿರಾಜ್, ಆಕಾಶ್ ದೀಪ್ ಬೆಂಕಿ ಬೌಲಿಂಗ್ – 244 ರನ್ ಮುನ್ನಡೆಯಲ್ಲಿ ಭಾರತ

ಎಡ್ಜ್​ಬಾಸ್ಟನ್​ನಲ್ಲಿ ನಡೆಯುತ್ತಿರೋ ಎರಡನೇ ಪಂದ್ಯದಲ್ಲಿ ಟಾಸ್ ಸೋತ ಭಾರತ ಮೊದಲನೇ ಇನ್ನಿಂಗ್ಸ್​ನಲ್ಲಿ 587 ರನ್ಸ್ ಕಲೆ ಹಾಕಿತ್ತು. ಈ ಸ್ಕೋರ್ ಬೆನ್ನತ್ತಿದ ಇಂಗ್ಲೆಂಡ್ ತಂಡ ಎರಡನೇ ದಿನದಾಟ ಮುಗಿಯೋ ಹೊತ್ತಿಗೆ 77 ರನ್ ಗಳಿಸಿ ಮೂರು ವಿಕೆಟ್​​ಗಳನ್ನ ಕಳ್ಕೊಂಡಿತ್ತು. ಮೂರನೇ ದಿನದಾಟದಲ್ಲಿ ಬ್ಯಾಟಿಂಗ್ ಕಂಟಿನ್ಯೂ ಮಾಡಿದ ಇಂಗ್ಲೆಂಡ್​ಗೆ ಮೊಹಮ್ಮದ್ ಸಿರಾಜ್ ಬ್ಯಾಕ್ ಟು ಬ್ಯಾಕ್ ಶಾಕ್ ಕೊಟ್ರು. ಜೋ ರೂಟ್ ಮತ್ತು ಬೆನ್ ಸ್ಟೋಕ್ಸ್​ಗೆ ಪೆವಿಲಿಯನ್ ದಾರಿ ತೋರಿಸಿದ್ರು. 84 ರನ್​ಗಳಿಗೆ ಇಂಗ್ಲೆಂಡ್ 5 ವಿಕೆಟ್ ಕಳ್ಕೊಂಡಿತ್ತು. ಟಾಪ್ ಆರ್ಡರ್ ಬ್ಯಾಟರ್ಸ್ ಎಲ್ರೂ ಔಟ್ ಆಗ್ತಿದ್ದಂತೆ 200 ರನ್​​ಗಳ ಹೊತ್ತಿಗೆಲ್ಲಾ ಆಂಗ್ಲರು ಆಲೌಟ್ ಆಗ್ತಾರೆ ಅಂತಾನೇ ಎಲ್ರೂ ಅನ್ಕೊಳ್ತಿದ್ರು. ಬಟ್ 6ನೇ ವಿಕೆಟ್​​ಗೆ ಹ್ಯಾರಿ ಬ್ರೂಕ್ ಜೊತೆ ಜೊತೆಯಾದ ಜೇಮಿ ಸ್ಮಿತ್ ಪಂದ್ಯದ ಗತಿಯನ್ನೇ ಬದಲಿಸಿದ್ರು. ಅಲ್ಲೀವರೆಗೂ ಕಂಟ್ರೋಲ್​ನಲ್ಲೇ ಇದ್ದ ಭಾರತೀಯ ಬೌಲರ್​ಗಳನ್ನ ಅಟ್ಟಾಡಿಸಿ ಹೊಡೆದ್ರು. ಸಿಕ್ಸ್, ಫೋರ್ ಅಂತಾ ಭಾರತೀಯ ಬ್ಯಾಟರ್​ಗಳನ್ನ ಕಾಡಿ ನೋಡ ನೋಡುತ್ತಲೇ ಸೆಂಚುರಿಯನ್ನೂ ಕಂಪ್ಲೀಟ್ ಮಾಡಿದ್ರು.

80 ಎಸೆತಗಳಲ್ಲಿ ಸೆಂಚುರಿ ಸಿಡಿಸಿದ ಜೇಮಿ ಸ್ಮಿತ್!

ಭಾರತ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಜೇಮೀ ಸ್ಮಿತ್ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ್ರು. 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದ ಜೇಮಿ ಸ್ಮಿತ್ ಫಸ್ಟ್ ಬಾಲ್​ನಿಂದಲೇ ಡಾಮಿನೇಟಿಂಗ್ ಶುರು ಮಾಡಿದ್ರು. ಫೋರ್ ಮೂಲಕವೇ ಖಾತೆ ತೆರೆದ ಸ್ಮಿತ್ ಬಳಿಕ ಸಿಕ್ಸ್, ಫೋರ್ಸ್ ಮೂಲಕವೇ ಡೀಲ್ ಮಾಡಿದ್ರು. ಹಾಗೇ ಕೇವಲ 80 ಎಸೆತಗಳಲ್ಲೇ 14 ಫೋರ್, 3 ಸಿಕ್ಸರ್​ಗಳೊಂದಿಗೆ 102 ರನ್ ಕಲೆ ಹಾಕಿದ್ರು. ಇಂಗ್ಲೆಂಡ್ ಬ್ಯಾಟ್ಸ್‌ಮನ್ ಗಳಿಸಿದ ಮೂರನೇ ಅತಿ ವೇಗದ ಶತಕದ ದಾಖಲೆ ಇದು. 1902 ರಲ್ಲಿ ಜಿಎಲ್ ಜೆಸ್ಸಾಪ್ 76 ಎಸೆತಗಳಲ್ಲಿ ಶತಕ ಗಳಿಸಿದ್ದರು. ಇಂಗ್ಲೆಂಡ್ ಬ್ಯಾಟ್ಸ್‌ಮನ್ ಗಳಿಸಿದ ಅತ್ಯಂತ ವೇಗದ ಶತಕ ಇದಾಗಿದೆ. ಜಾನಿ ಬೈರ್ ಸ್ಟೋವ್ 77 ಎಸೆತಗಳಲ್ಲಿ ಸೆಂಚುರಿ ಕಂಪ್ಲೀಟ್ ಮಾಡಿದ್ರು. ಇದೀಗ ಜೇಮಿ ಇಂಗ್ಲೆಂಡ್ ಪರ ಮೂರನೇ ಫಾಸ್ಟೆಸ್ಟ್ ಸೆಂಚುರಿ ಸಿಡಿಸಿದ್ರು.

ಟೆಸ್ಟ್ ನ ವೇಗದ ಶತಕಗಳು!

ನ್ಯೂಜಿಲೆಂಡ್​ನ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಆಗಿರುವ ಬೆಂಡನ್ ಮೆಕಲಂ 2015 ರಲ್ಲಿ ಸ್ಫೋಟಕ ಇನ್ನಿಂಗ್ಸ್ ಆಡಿದ್ರು. ಆಸ್ಟ್ರೇಲಿಯಾ ವಿರುದ್ದದ ಟೆಸ್ಟ್ ಪಂದ್ಯದಲ್ಲಿ ಕೇವಲ 54 ಎಸೆತಗಳಲ್ಲಿ ಶತಕ ಬಾರಿಸಿ ವಿಶ್ವ ದಾಖಲೆ ಬರೆದಿದ್ದರು. ಟೆಸ್ಟ್ ಕ್ರಿಕೆಟ್​​ನಲ್ಲಿ ಅತೀವೇಗದ ಶತಕ ಗಳಿಸಿದ ನಂಬರ್ 1 ಬ್ಯಾಟರ್ ಆಗಿದ್ದಾರೆ. ಇನ್ನು ಸೆಕೆಂಡ್ ಪ್ಲೇಸ್​ನಲ್ಲಿ ವಿವ್ ರಿಚರ್ಡ್ಸ್ ಇದ್ದಾರೆ. ವೆಸ್ಟ್ ಇಂಡೀಸ್​ನ ರಿಚರ್ಡ್ಸ್ 1985 ರಲ್ಲಿ ಕೇವಲ 56 ಎಸೆತಗಳಲ್ಲಿ ಶತಕ ಸಿಡಿಸಿದ್ದರು. 3 ದಶಕಗಳ ಕಾಲ ವಿಶ್ವ ದಾಖಲೆಯಾಗಿ ಉಳಿದಿದ್ದ ಈ ಇನಿಂಗ್ಸ್ ದಾಖಲೆಯನ್ನು 2015 ರಲ್ಲಿ ಮೆಕಲಂ ಅಳಿಸಿ ಹಾಕಿದ್ದರು. ಇನ್ನು ನಂಬರ್ 3 ಸ್ಥಾನದಲ್ಲಿ ಪಾಕಿಸ್ತಾನದ ಮಿಸ್ಬಾ ಉಲ್ ಹಕ್ ಇದ್ದಾರೆ. 2014 ರಲ್ಲಿ ಮಿಸ್ಬಾ ಉಲ್ ಹಕ್ ಆಸ್ಟ್ರೇಲಿಯಾ ವಿರುದ್ದದ ಟೆಸ್ಟ್ ಪಂದ್ಯದಲ್ಲಿ 56 ಎಸೆತಗಳಲ್ಲಿ ಶತಕ ಸಿಡಿಸಿದ್ರು. ಇನ್ನು ನಾಲ್ಕನೇ ಸ್ಥಾನದಲ್ಲಿ ಆ್ಯಡಂ ಗಿಲ್​ಕ್ರಿಸ್ಟ್ ಇದ್ದಾರೆ. ಆಸ್ಟ್ರೇಲಿಯಾ ಮೂಲದ ಈ ಆಟಗಾರ 2006 ರಲ್ಲಿ ಇಂಗ್ಲೆಂಡ್ ವಿರುದ್ದದ ಟೆಸ್ಟ್​ ಇನಿಂಗ್ಸ್​ನಲ್ಲಿ ಕೇವಲ 57 ಎಸೆತಗಳಲ್ಲಿ ಶತಕ ಪೂರೈಸಿದ್ರು. 5ನೇ ಸ್ಥಾನದಲ್ಲಿ ಜ್ಯಾಕ್ ಗ್ರೆಗೊರಿ ಇದ್ದಾರೆ. ಆಸ್ಟ್ರೇಲಿಯಾ ಆಟಗಾರ ಗ್ರೆಗೊರಿ 1921 ರಲ್ಲಿ ಸೌತ್ ಆಫ್ರಿಕಾ ವಿರುದ್ದ  ಕೇವಲ 67 ಎಸೆತಗಳಲ್ಲಿ ಶತಕ ಬಾರಿಸಿ ಹೊಸ ಇತಿಹಾಸ ನಿರ್ಮಿಸಿದ್ದರು.

ಟೆಸ್ಟ್ ಕ್ರಿಕೆಟ್ ಅಂದ್ರೇನೇ ಹಾಗೆ. 5 ದಿನಗಳು ಸುದೀರ್ಘವಾಗಿ ನಡೆಯೋ ಪಂದ್ಯ. ಬ್ಯಾಟ್ಸ್​ಮನ್​ಗಳಿಗೆ ತಾಳ್ಮೆಯೇ ಅಸ್ತ್ರ. ಎಷ್ಟು ಬಾಲ್ಸ್ ಫೇಸ್ ಮಾಡ್ತಾರೆ ಅನ್ನೋದಕ್ಕಿಂತ ಎಷ್ಟು ರನ್ಸ್ ಬಂತು ಅನ್ನೋದೇ ಮ್ಯಾಟ್ರ್ ಆಗುತ್ತೆ. 60, 70ರ ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟ್ ಬೀಸೋದೇ ಗ್ರೇಟ್.

Shwetha M