ವ್ಯರ್ಥವಾಯ್ತು RO-KO ಹೋರಾಟ – ಬುಮ್ರಾಗೆ ಪದೇಪದೆ ರೆಸ್ಟ್ ಬೇಕಾ?
ODIನಲ್ಲೂ ಗೆದ್ದು ಬೀಗಿದ ಆಂಗ್ಲರು!

ವ್ಯರ್ಥವಾಯ್ತು RO-KO ಹೋರಾಟ – ಬುಮ್ರಾಗೆ ಪದೇಪದೆ ರೆಸ್ಟ್ ಬೇಕಾ?ODIನಲ್ಲೂ ಗೆದ್ದು ಬೀಗಿದ ಆಂಗ್ಲರು!

ಭಾರತ ಮತ್ತು ಇಂಗ್ಲೆಂಡ್ ನಡುವಿನ ಏಕದಿನ ಸರಣಿಯನ್ನೂ ಭಾರತ ಸೋತಿದೆ. ಗೆಲ್ಲಲೇಬೇಕಿದ್ದ ಸರಣಿಯನ್ನ ಟೀಂ ಇಂಡಿಯಾ ಪ್ಲೇಯರ್ಸ್ ತಮ್ಮದೇ ಕೈಯಿಂದ ಕೈಚೆಲ್ಲಿಕೊಂಡಿದ್ದಾರೆ. ಬೌಲಿಂಗ್ ನಲ್ಲಿ ದುಬಾರಿಯಾಗಿ ಬ್ಯಾಟಿಂಗ್ ನಲ್ಲಿ ಸ್ಟಾರ್ಟ್ ಚೆನ್ನಾಗಿ ಸಿಕ್ರೂ ಅದನ್ನ ಫಿನಿಷ್ ಮಾಡೋಕೆ ಆಗದೆ ಸೋಲೋಪ್ಪಿಕೊಂಡಿದ್ದಾರೆ. ರೋಕೋ ಹೋಗಾಟ ಕೂಡ ವ್ಯರ್ಥವಾಗಿದೆ.

ಇದನ್ನೂ ಓದಿ : RCB ಬಿಟ್ಟು ENGಗೆ ಸೆರ್ತಾರಾ ಕೋಚ್?- ಆ್ಯಂಡಿ ಮೇಲೆ ಇಂಗ್ಲೆಂಡ್‌ಗೆ ಯಾಕೆ ಕಣ್ಣು

ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ನಡೆದ ಏಕದಿನ ಸರಣಿಯ ನಿರ್ಣಾಯಕ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಗೆದ್ದು ಸರಣಿಯನ್ನೂ ಕೈವಶ ಮಾಡಿಕೊಂಡಿದೆ. ಟಿ20 ಸರಣಿ ಜೊತೆಗೆ ಏಕದಿನ ಸರಣಿಯೂ ಇಂಗ್ಲೆಂಡ್ ಪಾಲಾಗಿದೆ. ಟಾಸ್ ಗೆದ್ದು ಫಸ್ಟ್ ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಪರ ಓಪನರ್​ಗಳಲ್ಲಿ ಭರ್ಜರಿ ಪಾಟ್ನರ್​ಶಿಪ್ ನೀಡಿದ್ರು. ಬೆನ್ ಡಕೆಟ್ ಶತಕ, ಜೇಕಬ್ ಬೆಥೆಲ್, ಜೋರೂಟ್ ಅರ್ಧಶತಕ ಹಾಗೇ ಬಟ್ಲರ್ ಹೊಡಿಬಡಿ ಆಟದಿಂದ 387 ರನ್​ಗಳನ್ನ ದಾಖಲು ಮಾಡಿದ್ರು. ಈ ಗುರಿ ಬೆನ್ನಟ್ಟಿದ ಭಾರತ ಗೆಲ್ಲೋ ಥರನೇ ಪ್ರದರ್ಶನ ನೀಡಿತ್ತು. ಆದ್ರೆ ಎಂಡ್ ಮೂಮೆಂಟ್​ನಲ್ಲಿ ಮ್ಯಾಚ್ ಕೈಜಾರಿತ್ತು. 7 ವಿಕೆಟ್ ನಷ್ಟಕ್ಕೆ 360 ರನ್​ಗಳಷ್ಟೇ ಕಲೆ ಹಾಕಿ 27 ರನ್​ಗಳಿಂದ ಸೋಲೊಪ್ಪಿಕೊಳ್ತು. 2018 ರ ನಂತರ ಮೊದಲ ಬಾರಿಗೆ ಇಂಗ್ಲೆಂಡ್, ಭಾರತದ ವಿರುದ್ಧದ ಏಕದಿನ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿತು.

ಭಾರತದ ಸೋಲಿಗೆ ಕಾರಣಗಳು!

ಜಸ್ಪ್ರೀತ್ ಬುಮ್ರಾ ಇಲ್ಲದ ಬೌಲಿಂಗ್ ನಲ್ಲಿ ಕಂಟ್ರೋಲ್ ಸಿಗಲಿಲ್ಲ

ನಿರ್ಣಾಯಕ ಪಂದ್ಯದಲ್ಲೂ ಬುಮ್ರಾಗೆ ರೆಸ್ಟ್ ನೀಡಿದ್ದು ಸರಿನಾ?

ಡೆತ್ ಓವರ್ ನ ಕೊನೆ 5 ಓವರ್ ಗಳಲ್ಲಿ 80+ ರನ್ಸ್ ಕೊಟ್ಟಿದ್ದು

ಜೋಸ್ ಬಟ್ಲರ್ & ಜೋ ರೂಟ್ ಲಾಸ್ಟ್ ಮೂಮೆಂಟ್ ಹೊಡಿಬಡಿ

388 ರನ್ಸ್ ಟಾರ್ಗೆಟ್ ಇದ್ದಿದ್ರಿಂದ ಮೊದಲ ಓವರ್ ನಿಂದಲೇ ಪ್ರೆಷರ್

ಭಾರತದ ಪರ ರೋಹಿತ್, ಕೊಹ್ಲಿ, ಗಿಲ್ ಚೆನ್ನಾನಿ ಆಡಿದ್ರೂ ನಂತ್ರ ಫೇಲ್

ಬ್ಯಾಟಿಂಗ್, ಬೌಲಿಂಗ್ ಎರಡರಲ್ಲೂ ಅದ್ಭುತ ಪ್ರದರ್ಶನ ನೀಡಿದ ಇಂಗ್ಲೆಂಡ್

Shantha Kumari

Leave a Reply

Your email address will not be published. Required fields are marked *