4ನೇ ಪಂದ್ಯಕ್ಕೆ ಟೀಂ ಚೇಂಜ್ – ಪಾಂಡ್ಯ, ಬಿಷ್ಣೋಯ್ ಔಟ್.. ದುಬೆ ಇನ್

4ನೇ ಪಂದ್ಯಕ್ಕೆ ಟೀಂ ಚೇಂಜ್ – ಪಾಂಡ್ಯ, ಬಿಷ್ಣೋಯ್ ಔಟ್.. ದುಬೆ ಇನ್

ಕೈಯಲ್ಲಿದ್ದ ಮ್ಯಾಚ್​​ನ ಕೈ ಚೆಲ್ಲಿಕೊಂಡಿದ್ದ ಟೀಂ ಇಂಡಿಯಾ ಇದೀಗ ನಾಲ್ಕನೇ ಪಂದ್ಯಕ್ಕೆ ರೆಡಿಯಾಗಿದೆ. ಬಟ್ ಈ ಮ್ಯಾಚ್​ ಗೆಲ್ಲೋದು ಭಾರತಕ್ಕೆ ಅಷ್ಟು ಸುಲಭವೂ ಆಗಿಲ್ಲ. ಇಂಗ್ಲೆಂಡ್ ತಂಡದ ವಿರುದ್ಧ ಮೊದಲ 3 ಪಂದ್ಯಗಳಲ್ಲೂ ಬೌಲಿಂಗ್‌ನಲ್ಲಿ ಮಿಂಚಿದ್ದ ಟೀಂ ಇಂಡಿಯಾ ಬ್ಯಾಟಿಂಗ್​ನಲ್ಲಿ ಕೈಕೊಟ್ಟಿತ್ತು. ಫಸ್ಟ್ ಪಂದ್ಯದಲ್ಲಿ ಅಭಿಷೇಕ್ ಕೈ ಹಿಡಿದ್ರೆ ಎರಡನೇ ಪಂದ್ಯದಲ್ಲಿ ತಿಲಕ್ ವರ್ಮಾ ಮ್ಯಾಚ್ ವಿನ್ನರ್ ಆಗಿದ್ರು. ಬಟ್ ಮೂರನೇ ಪಂದ್ಯಕ್ಕೆ ಯಾರೂ ಕೈ ಹಿಡೀಲಿಲ್ಲ. ಬೌಲಿಂಗ್ ಬಲದಿಂದ ಕೋಲ್ಕತ್ತಾ, ಚೆನ್ನೈ ಟಿ20ಐಗಳಲ್ಲಿ ಗೆದ್ದಿರುವ ಭಾರತ ರಾಜ್‌ಕೋಟ್ ನಲ್ಲಿ ಮಕಾಡೆ ಮಲಗಿತ್ತು. ಇದೇ ಈಗ ಆಂಗ್ಲರಿಗೆ ಅಸ್ತ್ರವಾಗೋ ಎಲ್ಲಾ ಲಕ್ಷಣಗಳೂ ಕಾಣ್ತಿವೆ.

ಇದನ್ನೂ ಓದಿ : ಆಂಗ್ಲರು ಗೆಲ್ಲೋಕೆ ಚಾನ್ಸೇ ಇಲ್ವಾ – ರಾಜ್ ಕೋಟ್ ನಲ್ಲಿ ರಾಜ ಯಾರು?  

5 ಪಂದ್ಯಗಳ ಟಿ-20 ಸರಣಿ ಮೂರೇ ಪಂದ್ಯಕ್ಕೆ ಕ್ಲೈಮ್ಯಾಕ್ಸ್ ಪಿಕ್ಚರ್ ಬರುವಂತಿತ್ತು. ರಾಜ್​ಕೋಟ್​ನಲ್ಲಿ ಭಾರತ ಗೆದ್ದಿದ್ರೆ ಇನ್ನೂ ಎರಡು ಮ್ಯಾಚ್ ಇರುವಂತೆಯೇ ಸರಣಿ ಕೈ ವಶವಾಗ್ತಿತ್ತು. ಒಂದೆಡೆ ಸರಣಿ ಕೈವಶ ಮಾಡಿಸಿಕೊಳ್ಳಲು, ಮತ್ತೊಂದೆಡೆ ಸರಣಿ ಜೀವಂತವಾಗಿರಿಸಲು ಉಭಯ ತಂಡಗಳಿಗೂ ಈ ಗೆಲುವು ಅನಿವಾರ್ಯವಾಗಿದೆ. ಜನವರಿ 31ರಂದು ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್‌ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದ್ದು, ಎರಡೂ ತಂಡಗಳು ಗೇಮ್ ಪ್ಲ್ಯಾನ್ ರೆಡಿ ಮಾಡ್ಕೊಂಡಿವೆ.

ಅಷ್ಟಕ್ಕೂ ಕಳೆದ ಪಂದ್ಯದಲ್ಲಿ ಭಾರತದ ಸೋಲಿಗೆ ಕಳಪೆ ಬ್ಯಾಟಿಂಗೇ ಕಾರಣ. ಮೊದಲ ಪಂದ್ಯದಲ್ಲಿ ಅಭಿಷೇಕ್ ಶರ್ಮಾ, 2ನೇ ಪಂದ್ಯದಲ್ಲಿ ತಿಲಕ್ ವರ್ಮಾ ಗೆಲುವು ತಂದುಕೊಟ್ಟಿದ್ದರು. ಆದರೆ 3ನೇ ಟಿ20ಐನಲ್ಲಿ ಇವರಿಬ್ಬರ ಜತೆಗೆ ಉಳಿದ ಬ್ಯಾಟರ್ಸ್ ಕೂಡ ಆಡ್ಲಿಲ್ಲ. ಇತ್ತ ಇಂಗ್ಲೆಂಡ್ ಬೌಲರ್‌ಗಳು ಸರಿಯಾಗಿ ತಿರುಗೇಟು ನೀಡುವ ಮೂಲಕ ಪಂದ್ಯವನ್ನು ಗೆದ್ದು ಬೀಗಿದ್ರು. ಪ್ರಸ್ತುತ ಸರಣಿಯಲ್ಲಿ ಭಾರತ 2-1ರಿಂದ ಮುನ್ನಡೆ ಪಡೆದಿದ್ದರೂ ನಾಲ್ಕನೇ ಟಿ20ಐ ಗೆಲುವೇ ನಿರ್ಣಾಯಕವಾಗುತ್ತೆ. ಹೀಗಾಗಿ ಟೀಂ ಇಂಡಿಯಾ ಪ್ಲೇಯಿಂಗ್ 11 ನಲ್ಲಿ ಕೆಲ ಬದಲಾವಣೆ ಮಾಡೋ ಚಿಂತನೆಯಲ್ಲಿದೆ.

ಮೂರನೇ ಪಂದ್ಯದಲ್ಲಿ ಮೊಹಮ್ಮದ್ ಶಮಿ ಟೀಂ ಇಂಡಿಯಾ ಪರ ಕಣಕ್ಕಿಳಿದಿದ್ರು. ಈ ವೇಳೆ ಅರ್ಶದೀಪ್  ಸಿಂಗ್ ರನ್ನ ಡ್ರಾಪ್ ಮಾಡಲಾಗಿತ್ತು. ಇದೀಗ ಪುಣೆ ಪಂದ್ಯಕ್ಕೆ ಅರ್ಶದೀಪ್ ಕಮ್ ಬ್ಯಾಕ್ ಮಾಡೋ ನಿರೀಕ್ಷೆ ಇದೆ. ಹಾಗಂತ ಶಮಿ ಅವ್ರನ್ನ ಕೈಬಿಡೋಕೆ ಚಾನ್ಸೇ ಇಲ್ಲ. ಯಾಕಂದ್ರೆ 2023ರ ಏಕದಿನ ವಿಶ್ವಕಪ್ ಬಳಿಕ ಮೊದಲ ಅಂತಾರಾಷ್ಟ್ರೀಯ ಪಂದ್ಯವಾಡಿದ ಶಮಿ, ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಕಂಪ್ಲೀಟ್ ಫಿಟ್ ಆಗ್ಬೇಕಿದೆ. ಹೀಗಾಗಿ ಸ್ಪಿನ್ನರ್ ರವಿ ಬಿಷ್ಟೋಯ್ ಬದಲಿಗೆ ವೇಗಿ ಅರ್ಷದೀಪ್ ಮರಳಬಹುದು. ಹಾಗೇ ಮೊದಲ ಮೂರು ಪಂದ್ಯಗಳಲ್ಲೂ ಕಣಕ್ಕಿಳಿದಿರುವ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯಗೆ ಉಳಿದ ಎರಡು ಟಿ20ಐಗಳಿಗೆ ವಿಶ್ರಾಂತಿ ನೀಡ್ಬೋದು. ಯಾಕಂದ್ರೆ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಮತ್ತು ಐಸಿಸಿ ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಹೀಗಾಗಿ ಪಾಂಡ್ಯಗೆ ವಿಶ್ರಾಂತಿ ನೀಡಬಹುದು. ಹೀಗಾಗಿ, ಪಾಂಡ್ಯ ಬದಲಿಗೆ ಶಿವಂ ದುಬೆ ಆಡುವ 11ರ ಬಳಗಕ್ಕೆ ಬರಬಹುದು. ಬೆನ್ನುನೋವಿನ ಕಾರಣದಿಂದ 2ನೇ ಮತ್ತು ಮೂರನೇ ಟಿ20ಐ ಪಂದ್ಯಗಳಿಂದ ಹೊರಗುಳಿದಿದ್ದ ರಿಂಕು ಸಿಂಗ್ ಕೂಡ ಸೇರಿಕೊಳ್ಬೋದು. ಸೋ ಅಂತಿಮವಾಗಿ ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ , ಶಿವಂ ದುಬೆ, ರಿಂಕು ಸಿಂಗ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ, ವರುಣ್ ಚಕ್ರವರ್ತಿ ಕಣಕ್ಕಿಳಿಯೋ ನಿರೀಕ್ಷೆ ಇದೆ.

Shantha Kumari

Leave a Reply

Your email address will not be published. Required fields are marked *