350+ ರನ್ಸ್ ಬಂದ್ರೆ IND ಸೇಫ್? – 10 ಬ್ಯಾಟರ್ಸ್.. ENG ಸೋಲುತ್ತಾ?
5ನೇ ಪಂದ್ಯದಲ್ಲಿ ಹೇಗಿದೆ ಲೆಕ್ಕಾಚಾರ?

ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯ ತುಂಬಾನೇ ಇಂಟ್ರೆಸ್ಟಿಂಗ್ ಆಗಿದೆ. ಮೂರನೇ ದಿನದಾಟದಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್ ಕಂಟಿನ್ಯೂ ಮಾಡ್ತಿದೆ. ಆರಂಭದಲ್ಲೇ ಇಬ್ಬರು ಟಾಪ್ ಆರ್ಡರ್ ಬ್ಯಾಟರ್ಗಳ ವಿಕೆಟ್ ಕಳ್ಕೊಂಡಿದ್ದ ಟೀಂ ಇಂಡಿಯಾಗೆ ಯಶಸ್ವಿ ಜೈಸ್ವಾಲ್ ಮತ್ತು ಆಕಾಶ್ ದೀಪ್ ಆಧಾರವಾಗಿದ್ದಾರೆ. ಇಂಗ್ಲೆಂಡ್ಗೆ ಮತ್ತೊಂದು ಸೆಟ್ಬ್ಯಾಕ್ ಅಂದ್ರೆ ಹತ್ತು ಆಟಗಾರರ ಜೊತೆಯೇ ಪಂದ್ಯ ಆಡ್ಬೇಕಾಗಿದೆ.
ಇದನ್ನೂ ಓದಿ : ಜಾರಿ ಬಿದ್ದ INDಗೆ ಕರುಣ್ ಆಸರೆ – ನಾಯರ್ ಕೈ ಹಿಡಿದ Dear ಕ್ರಿಕೆಟ್
ಭಾರತ ಮತ್ತು ಇಂಗ್ಲೆಂಡ್ ನಡುವಿನ 5ನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ಭಾರತ ಎರಡನೇ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ಮುಂದುವರಿಸಿತು. ಇದ್ರಲ್ಲಿ ಜೈಸ್ವಾಲ್ ಮತ್ತು ಆಕಾಶ್ ದೀಪ್ ಬ್ಯಾಟಿಂಗ್ ಪ್ರದರ್ಶನಕ್ಕೆ ಆಂಗ್ಲರು ಹೈರಾಣಾಗಿದ್ರು. ಅಷ್ಟಕ್ಕೂ ಇಲ್ಲಿ ಟೀಂ ಇಂಡಿಯಾಗೆ ಮಸ್ಟ್ ಌಂಡ್ ಶುಡ್ ಗೇಮ್ ಇದು. ಸರಣಿ ಡ್ರಾ ಆಗ್ಬೇಕು ಅಂದ್ರೆ ಪಂದ್ಯವನ್ನ ಗೆಲ್ಲಲೇಬೇಕು.
ಸರಣಿಯನ್ನ ಸಮಬಲದೊಂದಿಗೆ ಮುಗಿಸಬೇಕು ಅಂದ್ರೆ ಭಾರತ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಡಾಮಿನೇಟ್ ಮಾಡಲೇಬೇಕಿದೆ.ಪಂದ್ಯ. ಡ್ರಾ ಅಥವಾ ಸೋತರೂ ಸರಣಿಯನ್ನು ಕಳೆದುಕೊಳ್ಳುತ್ತಾರೆ. ಹೀಗಾಗಿ ಮೂರನೇ ದಿನ ಟೀಂ ಇಂಡಿಯಾ ಕಂಪ್ಲೀಟ್ ಬ್ಯಾಟಿಂಗ್ ಮಾಡ್ಬೇಕಾಗುತ್ತೆ. ದಿನಪೂರ್ತಿ ಬ್ಯಾಟಿಂಗ್ ಮಾಡಿದ್ರೆ 300+ ರನ್‌ಗಳ ಮುನ್ನಡೆ ಪಡೆದುಕೊಳ್ಳೋದು ಗ್ಯಾರಂಟಿ. ಕೇವಲ ಟಾಪ್ ಆರ್ಡರ್, ಮಿಡಲ್ ಆರ್ಡರ್ ಮಾತ್ರ ಅಲ್ಲ ಟೇಲ್ ಎಂಡರ್ಸ್ ಕೂಡ ಅಟ್ಲೀಸ್ಟ್ ರನ್ಸ್ ಆದ್ರೂ ಗಳಿಸ್ಬೇಕಾಗುತ್ತೆ. ಹೀಗೆ ಮಾಡಿದ್ರೆ ಭಾರತ 350ರಿಂದ 400 ರನ್‌ಗಳ ಟಾರ್ಗೆಟ್ ಸೆಟ್ ಮಾಡಬಹುದು. ಇಷ್ಟು ಸ್ಕೋರ್ ಇದ್ರೆ ಇಂಗ್ಲೆಂಡ್ ತಂಡ ಚೇಸಿಂಗ್ ಮಾಡೋದು ಕಷ್ಟ ಆಗ್ಬೋದು. ಯಾಕಂದ್ರೆ ಇಂಗ್ಲೆಂಡ್ ಪರ ಇರೋದೇ ಹತ್ತು ಬ್ಯಾಟರ್ಗಳು.
ಇಂಗ್ಲೆಂಡ್ ತಂಡಕ್ಕೆ ಐದನೇ ಪಂದ್ಯದಲ್ಲಿ ದೊಡ್ಡ ಹೊಡೆತ ಅಂದ್ರೆ ಐಸಿಸಿ ನಿಯಮ. ಯಾಕಂದ್ರೆ ಇಡೀ ಪಂದ್ಯದಿಂದ ಆಲ್ರೌಂಡರ್ ಕ್ರಿಸ್ ವೋಕ್ಸ್ ಹೊರಬಿದ್ದಿದ್ದಾರೆ. 2ನೇ ದಿನದಾಟದ ವೇಳೆ ಫೀಲ್ಡಿಂಗ್ ಮಾಡುವಾಗ ಕ್ರಿಸ್ ವೋಕ್ಸ್ ಅವರ ಭುಜಕ್ಕೆ ಗಂಭೀರ ಗಾಯವಾಗಿದ್ದು, ಹೀಗಾಗಿ ಪಂದ್ಯದಿಂದ ರೂಲ್ಡ್ ಔಟ್ ಆಗಿದ್ರು. ಹೀಗಾಗಿ ಮೊದಲ ಇನಿಂಗ್ಸ್ನಲ್ಲಿ ಬ್ಯಾಟಿಂಗ್ ಮಾಡದ ಕ್ರಿಸ್ ವೋಕ್ಸ್ ಎರಡನೇ ಇನಿಂಗ್ಸ್ ವೇಳೆ ಬೌಲಿಂಗ್ಗೂ ಇರೋದಿಲ್ಲ. ಹೀಗಾಗಿ ಇಂಗ್ಲೆಂಡ್ ತಂಡವು ದ್ವಿತೀಯ ಇನಿಂಗ್ಸ್ನಲ್ಲಿ 10 ಬ್ಯಾಟರ್ಗಳೊಂದಿಗೆ ಕಣಕ್ಕಿಳಿಯಬೇಕಿರುವುದು ಅನಿವಾರ್ಯ. ಕ್ರಿಸ್ ವೋಕ್ಸ್ ಬದಲಿಗೆ ಕನ್ಕ್ಯುಶನ್ ಸಬ್ಸ್ಟಿಟ್ಯೂಟ್ ಆಯ್ಕೆಯನ್ನು ಇಂಗ್ಲೆಂಡ್ ತಂಡಕ್ಕೆ ನೀಡಲಾಗಿಲ್ಲ.
ಆಟಗಾರರ ಕನ್ಕುಶನ್ ವಿಚಾರವಾಗಿ ಐಸಿಸಿಯಲ್ಲಿ ಕೆಲ ನಿಮಯಗಳಿವೆ. ಪಂದ್ಯದ ನಡುವೆ ಆಟಗಾರನ ತಲೆಯ ಭಾಗಕ್ಕೆ ಅಥವಾ ಕುತ್ತಿಗೆಯ ಭಾಗಕ್ಕೆ ಗಾಯವಾದರೆ ಕನ್ಕ್ಯುಶನ್ ಸಬ್ಸ್ಟಿಟ್ಯೂಟ್ ಆಯ್ಕೆ ಮೂಲಕ ಬದಲಿ ಆಟಗಾರನನ್ನು ಕಣಕ್ಕಿಳಿಸಬಹುದು. ಆದ್ರೆ ದೇಹದ ಇತರೆ ಯಾವುದೇ ಭಾಗಕ್ಕೆ ಗಾಯಗಳಾದ ವೇಳೆ ಬದಲಿ ಆಟಗಾರನನ್ನು ಕಣಕ್ಕಿಳಿಸುವ ಆಯ್ಕೆ ಇಲ್ಲ. ಹೀಗಾಗಿಯೇ ಲಾರ್ಡ್ಸ್ ಟೆಸ್ಟ್ ಪಂದ್ಯದ ವೇಳೆ ಇಂಗ್ಲೆಂಡ್ ಸ್ಪಿನ್ನರ್ ಶೊಯೆಬ್ ಬಶೀರ್ ಅವರ ಕೈಗೆ ಗಂಭೀರ ಗಾಯವಾಗಿದ್ದರೂ, ಪಂದ್ಯದಿಂದ ಹೊರಗುಳಿದಿರಲಿಲ್ಲ. ಅಲ್ಲದೆ ಕೊನೆಯ ದಿನದಾಟದಂದು ಕೈಗೆ ಬ್ಯಾಂಡೇಜ್ ಹಾಕಿ 5.5 ಓವರ್ಗಳನ್ನು ಎಸೆದಿದ್ದರು. ಆದ್ರೆ ಹೆಚ್ಚುವರಿ ಫೀಲ್ಡರ್ನನ್ನು ಮಾತ್ರ ಕಣಕ್ಕಿಳಿಸಬಹುದು. ಇನ್ನು ರಿಷಭ್ ಪಂತ್ ವಿಚಾರದಲ್ಲೂ ಹೀಗೇ ಆಗಿತ್ತು. ಕಾಲ್ಬೆರಳು ಮುರಿದಿದ್ರೂ ಪಂತ್ ಅವ್ರೇ ಬಂದು ಬ್ಯಾಟಿಂಗ್ ಮಾಡಿದ್ರು. ಬಟ್ ಫೀಲ್ಡಿಂಗ್ಗೆ ಅವಕಾಶ ಇದ್ದ ಕಾರಣಕ್ಕೆ ಧ್ರುವ್ ಜುರೇಲ್ಗೆ ಚಾನ್ಸ್ ನೀಡಲಾಗಿತ್ತು. ಸದ್ಯ ಇಂಗ್ಲೆಂಡ್ ಪರ ಫೀಲ್ಡಿಂಗ್ನಲ್ಲಿ 11 ಆಟಗಾರರು ಇದ್ರೂ ಕೂಡ ಬ್ಯಾಟಿಂಗ್ ಮಾಡಲು ಕೇವಲ 10 ಮಂದಿಗೆ ಮಾತ್ರ ಅವಕಾಶ ಇರಲಿದೆ. ಕ್ರಿಸ್ ವೋಕ್ಸ್ ಆಲ್ ರೌಂಡರ್ ಆಗಿದ್ದರಿಂದ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಇಂಗ್ಲೆಂಡ್ ಹಿನ್ನಡೆ ಅನುಭವಿಸಲಿದೆ.

ನೋಡಿರಿ

