ಬಿಗ್ ಚೇಸ್.. IND ಗೆಲುವು ಫಿಕ್ಸ್? – ಓವಲ್ ನಲ್ಲಿ 270+ ರನ್ಸ್ ಗೆದ್ದೇ ಇಲ್ಲ!
ಭಾರತಕ್ಕೆ ಅಡ್ವಾಂಟೇಜ್.. ಸರಣಿ ಸಮಬಲ?  

ಬಿಗ್ ಚೇಸ್.. IND ಗೆಲುವು ಫಿಕ್ಸ್? – ಓವಲ್ ನಲ್ಲಿ 270+ ರನ್ಸ್ ಗೆದ್ದೇ ಇಲ್ಲ!ಭಾರತಕ್ಕೆ ಅಡ್ವಾಂಟೇಜ್.. ಸರಣಿ ಸಮಬಲ?  

ಕಳೆದ ಕೆಲ ಇನ್ನಿಂಗ್ಸ್​ಗಳಿಂದ ಕಂಪ್ಲೀಟ್ ಡಲ್ ಆಗಿದ್ದ ಯಶಸ್ವಿ ಜೈಸ್ವಾಲ್ ಫೈನಲ್ ಫೈಟ್​ನಲ್ಲಿ ಕೊನೆಗೂ ಕಮ್ ಬ್ಯಾಕ್ ಮಾಡಿದ್ರು. ಅದ್ಭುತ ಶತಕ ಸಿಡಿಸಿ ಮಿಂಚಿದ್ರು. ಹಾಗೇ ಆಕಾಶ್‌ದೀಪ್ ಸಿಂಗ್, ರವೀಂದ್ರ ಜಡೇಜಾ ಮತ್ತು ವಾಷಿಂಗ್ಟನ್ ಸುಂದರ್ ಅವರ ಅರ್ಧಶತಕಗಳು ಓವಲ್ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಸ್ಕೋರ್ ಹೆಚ್ಚು ಮಾಡಿತು. ಎರಡನೇ ಇನ್ನಿಂಗ್ಸ್‌ನಲ್ಲಿ 396 ರನ್ ಗಳಿಸುವ ಮೂಲಕ ಭಾರತ ತಂಡವು ಇಂಗ್ಲೆಂಡ್‌ಗೆ 374 ರನ್‌ಗಳ ಟಾರ್ಗೆಟ್ ನೀಡಿತು. ಈ ಗುರಿ ಬೆನ್ನಟ್ಟಿದ ಆಂಗ್ಲರು ಮೂರನೇ ದಿನದಾಟದ ಅಂತ್ಯಕ್ಕೆ ಮೊದಲ ವಿಕೆಟ್ ಕಳ್ಕೊಂಡಿದ್ದಾರೆ.

ಇದನ್ನೂ ಓದಿ : KKRಗೆ KL ರಾಹುಲ್ ನಾಯಕ? – ಡೆಲ್ಲಿಯಿಂದ 25 ಕೋಟಿಗೆ ಡೀಲ್!?

5 ಪಂದ್ಯಗಳ ಆಂಡರ್‌ಸನ್-ತೆಂಡುಲ್ಕರ್ ಟ್ರೋಫಿ ಸರಣಿಯಲ್ಲಿ ಇಂಗ್ಲೆಂಡ್ ತಂಡವು 2-1ರ ಮುನ್ನಡೆ ಸಾಧಿಸಿದೆ. ಕೊನೆಯ ಟೆಸ್ಟ್‌ನಲ್ಲಿ ಭಾರತ ಗೆಲುವು ಸಾಧಿಸಿದರೆ 2-2ರೊಂದಿಗೆ ಸರಣಿ ಸಮಬಲದೊಂದಿಗೆ ಕೊನೆಯಾಗಲಿದೆ. ಸದ್ಯ 3ನೇ ದಿನವಾದ ಶನಿವಾರ ಸ್ಫೋಟಕ ಬ್ಯಾಟಿಂಗ್‌ ನಡೆಸಿದ ಭಾರತ 396 ರನ್‌ಗೆ ಆಲೌಟ್‌ ಆಯಿತು. ಬಿಗ್ ಟಾರ್ಗೆಟ್ ಬೆನ್ನಟ್ಟಿದ ಇಂಗ್ಲೆಂಡ್ ಮೂರನೇ ದಿನದಾಟದಂತ್ಯಕ್ಕೆ ಒಂದು ವಿಕೆಟ್ ಕಳೆದುಕೊಂಡು 50 ರನ್ ಕಲೆಹಾಕಿದೆ. ಪಂದ್ಯ ಗೆಲ್ಲಬೇಕು ಅಂದ್ರೆ ಇನ್ನೂ 324 ರನ್ ಗಳಿಸಬೇಕಿದೆ. ದಿನದಾಟದ ಕೊನೆಯಲ್ಲಿ ಜಾಕ್ ಕ್ರಾಲಿಯನ್ನು ಕ್ಲೀನ್ ಬೌಲ್ಡ್ ಮಾಡುವಲ್ಲಿ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ಯಶಸ್ವಿಯಾಗಿದ್ದಾರೆ. ಅದೆಲ್ಲಕ್ಕಿಂತ ಹೆಚ್ಚಾಗಿ ಭಾರತ ನೀಡಿರೋ ಗುರಿ ಬೆನ್ನಟ್ಟಬೇಕು ಅಂದ್ರೆ ಓವಲ್ ಮೈದಾನದಲ್ಲಿ ಆಂಗ್ಲರು ಇತಿಹಾಸವನ್ನೇ ಸೃಷ್ಟಿಸಬೇಕು.

ಭಾರತಕ್ಕೆ ಈ ಪಂದ್ಯ ಗೆಲ್ಲುವ ಅಡ್ವಾಂಟೇಜ್ ಜಾಸ್ತಿ ಇದೆ. ಯಾಕಂದ್ರೆ ಓವಲ್ ಮೈದಾನದಲ್ಲಿ ಯಾವ ತಂಡವು 300+ ರನ್ಸ್ ಚೇಸ್ ಮಾಡಿ ಗೆದ್ದೇ ಇಲ್ಲ. ಹೀಗಾಗಿ ಭಾರತ ತಂಡವು ಕೊನೆಯ ಟೆಸ್ಟ್ ಪಂದ್ಯ ಗೆಲ್ಲೋ ಕಾನ್ಫಿಡೆನ್ಸ್​ನಲ್ಲಿದೆ. ಈ ಮೈದಾನದಲ್ಲಿ ಚೇಸ್ ಮಾಡಿ ಗೆದ್ದಿರೋ ಐದು ಹೈಯೆಸ್ಟ್ ಟಾರ್ಗೆಟ್ ಬಗ್ಗೆ ನೋಡ್ತಾ ಹೋಗೋಣ.

ಹೈಯೆಸ್ಟ್ ರನ್ಸ್ ಚೇಸ್!

1902ರಲ್ಲಿ ಆಸ್ಟ್ರೇಲಿಯಾ ನೀಡಿದ್ದ 263 ರನ್‌ ಗುರಿ ಬೆನ್ನಟ್ಟಿದ ಇಂಗ್ಲೆಂಡ್

1963ರಲ್ಲಿ ಇಂಗ್ಲೆಂಡ್ ನೀಡಿದ್ದ 253 ರನ್ ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್

1972ರ ಆಶಸ್ ಸರಣಿಯ ಕೊನೆಯ ಟೆಸ್ಟ್‌ ನಲ್ಲಿ ಆಸ್ಟ್ರೇಲಿಯಾ ಟಾರ್ಗೆಟ್ ರೀಚ್

1988ರಲ್ಲಿ ವೆಸ್ಟ್ ಇಂಡೀಸ್ ಇಂಗ್ಲೆಂಡ್‌ ತಂಡ ನೀಡಿದ್ದ 225 ರನ್‌ ಗಳ ಯಶಸ್ವಿ ಗುರಿ

2024ರಲ್ಲಿ  ಶ್ರೀಲಂಕಾ ಇಂಗ್ಲೆಂಡ್‌ ತಂಡ ನೀಡಿದ್ದ 219 ರನ್‌ ಗುರಿ ಬೆನ್ನಟ್ಟಿತ್ತು

ಸದ್ಯದ ಸಿಚುಯೇಷನ್​ನಲ್ಲಿ ಇಡೀ ಪಂದ್ಯ ಭಾರತದ ಕಡೆಯೇ ಇದೆ. ಒಂದು ವಿಕೆಟ್ ಆಲ್ರೆಡಿ ಬಿದ್ದಿರೋದ್ರಿಂದ ನಾಲ್ಕನೇ ದಿನವಾದ ಭಾನುವಾರ ಇನ್ನು 9 ವಿಕೆಟ್ ಬೇಟೆಯಾಡಿದ್ರೆ ಭಾರತದ ಗೆಲುವು ಫಿಕ್ಸ್ ಆಗುತ್ತೆ.

Shantha Kumari