ENG ಚೆಂಡಾಡಿದ ಸಿರಾಜ್ & ಪ್ರಸಿದ್ಧ್ – T20I ಬ್ಯಾಟಿಂಗ್ ನಂಬಿ ಕೆಟ್ಟ ಆಂಗ್ಲರು!
ಒಂದೇ ದಿನ 15 ವಿಕೆಟ್.. ಗೆಲ್ಲೋದ್ಯಾರು?

ENG ಚೆಂಡಾಡಿದ ಸಿರಾಜ್ & ಪ್ರಸಿದ್ಧ್ – T20I ಬ್ಯಾಟಿಂಗ್ ನಂಬಿ ಕೆಟ್ಟ ಆಂಗ್ಲರು!ಒಂದೇ ದಿನ 15 ವಿಕೆಟ್.. ಗೆಲ್ಲೋದ್ಯಾರು?

ಓವಲ್ ಮೈದಾನದಲ್ಲಿ ನಡೆದ ಐದನೇ ಪಂದ್ಯದ ಎರಡನೇ ದಿನದಾಟದಲ್ಲಿ ಕೆಲ ಇಂಟ್ರೆಸ್ಟಿಂಗ್ ವಿಚಾರಗಳು ನಡೆದ್ವು. ಪಂದ್ಯ ಆರಂಭವಾದ ಅರ್ಧಗಂಟೆಯೊಳಗೆ ನಾಲ್ಕು ವಿಕೆಟ್​ಗಳನ್ನ ಕಳ್ಕೊಂಡು ಟೀಂ ಇಂಡಿಯಾ ಆಲೌಟ್ ಆಗಿತ್ತು. ಟೋಟಲ್ಲಾಗಿ ಫಸ್ಟ್ ಇನ್ನಿಂಗ್ಸ್​ ನಲ್ಲಿ 224 ರನ್ಸ್ ಕಲೆ ಹಾಕಿತ್ತು. ಈ ಟಾರ್ಗೆಟ್ ಬೀಟ್ ಮಾಡಿ ಲೀಡ್ ಪಡೆಯಬೇಕು ಅಂತಾ ಫೀಲ್ಡಿಗಿಳಿದ ಇಂಗ್ಲೆಂಡ್ ಬ್ಯಾಟರ್ಸ್​ ಆರಂಭದಲ್ಲಿ ಸಿಕ್ಸ್, ಫೋರ್ ಟಿ20ಐ ಸ್ಟೈಟಲ್ಲಿ ಬ್ಯಾಟಿಂಗ್ ಶುರು ಮಾಡಿದ್ರು. ಬಟ್ ಈ ಆಟ ಹೆಚ್ಚು ಹೊತ್ತು ನಡೀಲೇ ಇಲ್ಲ.

ಇದನ್ನೂ ಓದಿ : 28 ನಿಮಿಷ.. 34 ಬಾಲ್.. 4 ವಿಕೆಟ್ – 224 ರನ್ ಗಳಿಗೆ ಇಂಡಿಯಾ ಆಲೌಟ್

ಭಾರತದ ಪರ ವೇಗಿಗಳ ಕಂಪ್ಲೀಟ್ ಡಾಮಿನೇಟ್ ಮಾಡಿದ್ರು. ಪರಿಣಾಮ 5ನೇ ಟೆಸ್ಟ್ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್​​ನಲ್ಲಿ ಇಂಗ್ಲೆಂಡ್ 247 ರನ್​ಗಳಿಗೆ ಆಲೌಟ್ ಆಯ್ತು. ಮೊದಲ ವಿಕೆಟ್​ಗೆ ಜ್ಯಾಕ್ ಕ್ರಾಲಿ ಹಾಗೂ ಬೆನ್ ಡಕೆಟ್ 92 ರನ್​ಗಳ ಸ್ಫೋಟಕ ಇನ್ನಿಂಗ್ಸ್ ಆಡಿದ್ರು. ಅದೂ ಕೂಡ ಕೇವಲ 78 ಎಸೆತಗಳಲ್ಲಿ 92 ರನ್​ ಸೇರಿಸಿದರು. ತುಂಬಾನೇ ಡೇಂಜರಸ್ ಆಗಿದ್ದ ಈ ಜೋಡಿಯನ್ನ ಆಕಾಶ್ ದೀಪ್ ಬ್ರೇಕ್ ಮಾಡಿದರು. 38 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್ ಸಹಿತ 43 ರನ್​ಗಳಿಸಿದ್ದ ಡಕೆಟ್​​ ಕ್ಯಾಚ್ ನೀಡಿ ಔಟ್ ಆದರು. ಜ್ಯಾಕ್ ಕ್ರಾಲಿ 64, ಹ್ಯಾರಿ ಬ್ರೂಕ್ 53  ಹಾಗೂ ಬೆನ್ ಡಕೆಟ್ 43 ರನ್​ಗಳಿಸಿ ತಂಡದ ಗರಿಷ್ಠ ಸ್ಕೋರರ್​ ಎನಿಸಿಕೊಂಡರು. ಮೊದಲ ವಿಕೆಟ್​ಗೆ 92 ರನ್​ಗಳಿಸಿ ಉತ್ತಮ ಸ್ಟಾರ್ಟ್ ಪಡೆದ್ರೂ ಮಿಡಲ್ ಆರ್ಡರ್ ಬ್ಯಾಟರ್​ಗಳ ಕ್ರೀಸ್ ಕಚ್ಚಿ ನಿಲ್ಲಲಿಲ್ಲ. ಹೀಗಿದ್ರೂ ಅಂತಿಮವಾಗಿ 23 ರನ್​ಗಳ ಮುನ್ನಡೆ ಪಡೆಯುವಲ್ಲಿ ಯಶಸ್ವಿಯಾದ್ರು.

ಮೊದಲ 12 ಓವರ್​ಗಳಲ್ಲಿ 92ರನ್​ಗಳಿಸಿದ್ದ ಇಂಗ್ಲೆಂಡ್ ಮೊದಲ ವಿಕೆಟ್ ಪತನದ ನಂತರ ಒಂದೇ ಒಂದು ಅರ್ಧಶತಕದ ಜೊತೆಯಾಟ ಕಾಣಲು ಸಾಧ್ಯವಾಗಲಿಲ್ಲ. ಟೆಸ್ಟ್​​ ಪಂದ್ಯವನ್ನ ಟಿ20 ಮಾದರಿಯಲ್ಲಿ ಆಡಲು ಹೋಗಿ ಇಂಗ್ಲೆಂಡ್ ಕೈ ಸುಟ್ಟುಕೊಂಡ್ರು. ಬ್ಯಾಟಿಂಗ್ ನಲ್ಲಿ ಫ್ಲ್ಯಾಪ್ ಆಗಿದ್ದ ಭಾರತ ತಂಡದ ಪರ ಬೌಲರ್​ಗಳು ಅದ್ಭುತ ಪ್ರದರ್ಶನ ನೀಡಿದ್ರು. ಅದ್ರಲ್ಲೂ ಮೊಹಮ್ಮದ್ ಸಿರಾಜ್ ಮತ್ತು ಪ್ರಸಿದ್ಧ್ ಕೃಷ್ಣ ಕಂಪ್ಲೀಟ್ ಅಟ್ಯಾಕಿಂಗ್ ಮೋಡ್​ನಲ್ಲೇ ಬೌಲಿಂಗ್ ಮಾಡಿದ್ರು.  ಮೊಹಮ್ಮದ್ ಸಿರಾಜ್ 86 ರನ್​ಗಳನ್ನ ನೀಡಿ 4 ವಿಕೆಟ್ ಪಡೆದರೆ, ಪ್ರಸಿಧ್ ಕೃಷ್ಣ 62 ರನ್​ಗಳನ್ನ ನೀಡಿ 4 ವಿಕೆಟ್ ಪಡೆದು ಇಂಗ್ಲೆಂಡ್ ಪತನಕ್ಕೆ ಕಾರಣರಾದರು. ಇನ್ನು ಆಕಾಶ್ ದೀಪ್ 1 ವಿಕೆಟ್ ಪಡೆದರು. ಇನ್ನು ಭಾರತದ ಬ್ಯಾಟಿಂಗ್ ವೇಳೆ ಫೀಲ್ಡಿಂಗ್​ನಲ್ಲಿದ್ದ ಕ್ರಿಸ್ ವೋಕ್ಸ್ ಗಾಯಗೊಂಡಿದ್ದಾರೆ. ಪರಿಣಾಮ ಇಡೀ ಪಂದ್ಯದಿಂದ ರೂಲ್ಡ್ ಔಟ್ ಆಗಿದ್ದಾರೆ. ಹೀಗಾಗಿ ಇಂಗ್ಲೆಂಡ್ ತಂಡದ ಪರ ಒಟ್ಟಾರೆಯಾಗಿ 10 ಆಟಗಾರರು ಮಾತ್ರ ಬ್ಯಾಟ್ ಬೀಸಿದ್ರು.

ಶುಕ್ರವಾರ ಎರಡನೇ ದಿನದ ಟೆಸ್ಟ್‌ ಪಂದ್ಯದಲ್ಲಿ ಒಟ್ಟಾರೆಯಾಗಿ 15 ವಿಕೆಟ್​​ಗಳು ಉರುಳಿವೆ. ಪಂದ್ಯ ಆರಂಭವಾದಾಗ ಭಾರತ ಮೊದಲ ಸೆಷನ್​ನಲ್ಲಿ 4 ವಿಕೆಟ್​​ಗಳನ್ನ ಕಳ್ಕೊಳ್ತು. ಬಳಿಕ ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್‌ ಮೊದಲ ಇನಿಂಗ್ಸ್‌ನಲ್ಲಿ 9 ವಿಕೆಟ್​​ಗಳನ್ನ ಕಳ್ಕೊಳ್ತು. ಕ್ರಿಸ್ ವೋಕ್ಸ್ ಆಡದ ಕಾರಣ ಆಂಗ್ಲರ ಟೀಮ್​ನಲ್ಲಿ 10 ಪ್ಲೇಯರ್ಸ್ ಅಷ್ಟೇ ಇದ್ರು. ಇನ್ನು ಎರಡನೇ ಇನಿಂಗ್ಸ್‌ ಆರಂಭಿಸಿದ ಭಾರತ 2 ವಿಕೆಟ್‌ ಗಳನ್ನ ಕಳೆದುಕೊಂಡಿತು. ಈ ಮೂಲಕ ಉಭಯ ತಂಡಗಳು ಎರಡನೇ ದಿನದಾಟದಲ್ಲಿ ಒಟ್ಟಾರೆಯಾಗಿ 15 ವಿಕೆಟ್​​ಗಳನ್ನ ಕಳೆದುಕೊಂಡವು. ಸದ್ಯ ಭಾರತ 52 ರನ್​ಗಳ ಮುನ್ನಡೆ ಸಾಧಿಸಿದೆ. ದಿನದಾಟದ ಅಂತ್ಯಕ್ಕೆ ಯಶಸ್ವಿ ಜೈಸ್ವಾಲ್‌ ಅಜೇಯ 51 ರನ್‌ ಬಾರಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ. ಆಕಾಶ್ ದೀಪ್ ನಾಲ್ಕು ರನ್ ಗಳಿಸಿದ್ದು ಮೂರನೇ ದಿನ ಬ್ಯಾಟಿಂಗ್ ಕಂಟಿನ್ಯೂ ಮಾಡ್ತಾರೆ. ಒಟ್ಟಾರೆ ಮೊದಲ ಇನ್ನಿಂಗ್ಸ್​ನಲ್ಲಿ ಉಭಯ ತಂಡಗಳ ನಡುವೆ ಒಂದೇ ರೀತಿಯ ಪ್ರದರ್ಶನ ಬಂದಿದೆ. ಈಗ ಎರಡನೇ ಇನ್ನಿಂಗ್ಸ್​ನಲ್ಲಿ ಯಾರು ಅದ್ಭುತ ಪ್ರದರ್ಶನ ನೀಡ್ತಾರೋ ಅವ್ರ ಗೆಲುವು ಫಿಕ್ಸ್ ಆಗಲಿದೆ.

Shantha Kumari