ಭಾರತ ಗೆದ್ರೂ ಟ್ರೋಫಿ ಇಂಗ್ಲೆಂಡ್ ಪಾಲು – ಇಕ್ಕಟ್ಟಿನಲ್ಲಿ ಟೀಂ ಇಂಡಿಯಾ

ಭಾರತ ಗೆದ್ರೂ ಟ್ರೋಫಿ ಇಂಗ್ಲೆಂಡ್ ಪಾಲು – ಇಕ್ಕಟ್ಟಿನಲ್ಲಿ ಟೀಂ ಇಂಡಿಯಾ

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಕೊನೇ ಪಂದ್ಯದಲ್ಲಿ ಟೀಂ ಇಂಡಿಯಾಗೆ ಡಬಲ್ ಟಾಸ್ಕ್ ಇದೆ. ಒಂದ್ಕಡೆ ಮ್ಯಾಚ್ ಸೋಲಂಗೂ ಇಲ್ಲ. ಪಂದ್ಯ ಡ್ರಾ ಮಾಡಿಕೊಳ್ಳೋಕೂ ಬಿಡಂಗಿಲ್ಲ. ಗೆಲ್ಲಬೇಕು.. ಗೆಲ್ಲಲೇಬೇಕು. ಗೆದ್ರಷ್ಟೇ ಸರಣಿ ಸಮಬಲ. ಇಲ್ಲದೇ ಇದ್ರೆ ಸೋಲು ಫಿಕ್ಸ್ ಆಗಲಿದೆ.

ಇದನ್ನೂ ಓದಿ: ಸತ್ತಿದ್ದು ಕಿಟ್ಟಿ.. ರಾಮಾಚಾರಿ ಎಲ್ಲಿ? – ಕೃಷ್ಣನನ್ನ ಸಾಯಿಸಿದ್ಲಾ ರುಕ್ಮಿಣಿ?

ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯ ಕ್ಲೈಮ್ಯಾಕ್ಸ್ ಘಟ್ಟಕ್ಕೆ ಬಂದಿದೆ. ಈಗಾಗ್ಲೇ ನಾಲ್ಕು ಪಂದ್ಯಗಳು ಮುಗಿದಿದ್ದು ಕೊನೇ ಪಂದ್ಯ ಜುನೈ 31 ಅಂದ್ರೆ ಗುರುವಾರದಿಂದ ಕೆನ್ನಿಂಗ್ಟನ್ನ ಓವಲ್ ಮೈದಾನದಲ್ಲಿ ನಡೆಯಲಿದೆ. ಎರಡೂ ತಂಡಗಳು ಕೆನ್ನಿಂಗ್ಟನ್ನಲ್ಲಿ ಭರ್ಜರಿ ಪ್ರಾಕ್ಟೀಸ್ನಲ್ಲಿವೆ. ಇಂಗ್ಲೆಂಡ್ ತಂಡಕ್ಕೆ ಸರಣಿ ಕೈವಶಕ್ಕೆ ಇನ್ನೊಂದೇ ಹೆಜ್ಜೆ ದೂರದಲ್ಲಿದೆ. ಬಟ್ ಭಾರತದ ಸ್ಥಿತಿ ಹೀಗಿಲ್ಲ. ಯಾಕಂದ್ರೆ ಕಳೆದ ನಾಲ್ಕು ಪಂದ್ಯಗಳಲ್ಲಿ ಭಾರತ ಗೆದ್ದಿರೋದು ಒಂದೇ ಮ್ಯಾಚ್.

ಸರಣಿಯಲ್ಲಿ 2 ಗೆಲುವಿನೊಂದಿಗೆ ಲೀಡ್ ನಲ್ಲಿದೆ ಇಂಗ್ಲೆಂಡ್!

ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯ ಅತ್ಯಂತ ರಣರೋಚಕವಾಗಿತ್ತು. ಕೊನೆಯ ದಿನದವರೆಗೂ ನಡೆದ ಸರಣಿ ಅಂತಿಮವಾಗಿ ಡ್ರಾನಲ್ಲಿ ಕೊನೆಗೊಂಡಿತು.  ಹೆಡಿಂಗ್ಲಿಯಲ್ಲಿ ನಡೆದ ಸರಣಿಯ ಮೊದಲ ಟೆಸ್ಟ್ ಪಂದ್ಯವನ್ನು ಇಂಗ್ಲೆಂಡ್ ಗೆದ್ದಿತು. ಆದರೆ ಭಾರತ ತಂಡವು ಎರಡನೇ ಟೆಸ್ಟ್ನಲ್ಲಿ ಗೆದ್ದು ಸರಣಿ ಸಮಬಲ ಮಾಡಿಕೊಂಡಿತು. ಅದಾದ ನಂತರ, ಇಂಗ್ಲೆಂಡ್ ಮೂರನೇ ಟೆಸ್ಟ್ ಪಂದ್ಯವನ್ನು ಗೆದ್ದು ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿತು. ನಾಲ್ಕನೇ ಟೆಸ್ಟ್ ಡ್ರಾ ಆಗಿದೆ. ಸದ್ಯ, ಕೊನೆಯ ಮತ್ತು 5ನೇ ಟೆಸ್ಟ್ ಪಂದ್ಯ ಉಭಯ ತಂಡಗಳ ಟ್ರೋಫಿ ಗೆಲುವನ್ನು ನಿರ್ಧರಿಸಲಿದೆ. ಅಂತಿಮ ಟೆಸ್ಟ್ ಪಂದ್ಯ ಡ್ರಾ ಆದರೆ ಅಥವಾ ಇಂಗ್ಲೆಂಡ್ ಪಂದ್ಯ ಗೆದ್ರೆ ಸರಣಿಯೂ ಕೂಡ ಕೈವಶವಾಗುತ್ತೆ. ಯಾಕಂದ್ರೆ ಈಗಾಗ್ಲೇ 2 ಪಂದ್ಯಗಳನ್ನ ಗೆದ್ದು ಇಂಗ್ಲೆಂಡ್ ಲೀಡ್ನಲ್ಲಿದೆ.

ಭಾರತ ಗೆದ್ರೂ ಇಂಗ್ಲೆಂಡ್ ಬಳಿಯೇ ಉಳಿಯುತ್ತೆ ಟ್ರೋಫಿ!

ನಿಯಮಗಳ ಪ್ರಕಾರ ಹೇಳೋದಾದ್ರೆ ಎರಡು ತಂಡಗಳ ನಡುವೆ ಟೆಸ್ಟ್ ಸರಣಿ ಡ್ರಾ ಆದಾಗ, ಟ್ರೋಫಿ ಕಳೆದ ಬಾರಿ ಟ್ರೋಫಿ ಗೆದ್ದ ತಂಡದ ಬಳಿಯೇ ಉಳಿಯುತ್ತದೆ. ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿದ್ದ ಆಂಡರ್ಸನ್-ತೆಂಡೂಲ್ಕರ್ ಟ್ರೋಫಿಯನ್ನು ಹಿಂದೆ ಪಟೌಡಿ ಟ್ರೋಫಿ ಎಂದು ಕರೆಯಲಾಗುತ್ತಿತ್ತು. ಭಾರತ ಮತ್ತು ಇಂಗ್ಲೆಂಡ್ ಕೊನೆಯ ಬಾರಿಗೆ ಪಟೌಡಿ ಟ್ರೋಫಿಯನ್ನು ಆಡಿದ್ದು 2021-22ರಲ್ಲಿ. ಆಗ ಸರಣಿ ಡ್ರಾ ಆಗಿತ್ತು. ಆದರೆ ಅದಕ್ಕೂ ಮೊದಲು, 2018 ರಲ್ಲಿ, ಎರಡು ತಂಡಗಳ ನಡುವೆ ಸರಣಿ ನಡೆದಾಗ, ಫಲಿತಾಂಶ ಇಂಗ್ಲೆಂಡ್ ಪರವಾಗಿತ್ತು, ಇಂಗ್ಲೆಂಡ್ ಸರಣಿಯನ್ನು 4-1 ಅಂತರದಿಂದ ಗೆದ್ದಿತು. ಅಂದಿನಿಂದ, ಈ ಟ್ರೋಫಿ ಇಂಗ್ಲೆಂಡ್ ಬಳಿಯೇ ಇದೆ. ಪ್ರಸ್ತುತ ಸರಣಿ ಡ್ರಾ ಆದಲ್ಲಿ ಟ್ರೋಫಿ ಇಂಗ್ಲೆಂಡ್ ಬಳಿಯೇ ಉಳಿಯುತ್ತದೆ. ಸದ್ಯ ಭಾರತ ಮತ್ತು ಇಂಗ್ಲೆಂಡ್ ನಡುವಿನ ಕೆನ್ನಿಂಗ್ಟನ್ ಟೆಸ್ಟ್ ಡ್ರಾ ಆದರೆ ಭಾರತ ಸರಣಿಯನ್ನು ಕಳೆದುಕೊಳ್ಳುತ್ತದೆ. ಏಕೆಂದರೆ ಇಂಗ್ಲೆಂಡ್ ಈಗಾಗಲೇ ಸರಣಿಯಲ್ಲಿ ಭಾರತಕ್ಕಿಂತ ಮುಂದಿದೆ. ಕೆನ್ನಿಂಗ್ಟನ್ನಲ್ಲಿ ಇಂಗ್ಲೆಂಡ್ ಗೆದ್ದರೆ, ಅವರು ಸರಣಿಯನ್ನು 3-1 ರಿಂದ ಗೆಲ್ತಾರೆ. ಅಥವಾ  ಸರಣಿ 2-2 ರಿಂದ ಡ್ರಾ ಆಗಿದ್ದರೂ, ಟ್ರೋಫಿ ಇಂಗ್ಲೆಂಡ್ ವಶದಲ್ಲಿ ಉಳಿಯುತ್ತದೆ. ಸೋ ಟೋಟಲಿ ಹೇಳ್ಬೇಕು ಅಂದ್ರೆ ರಿಸಲ್ಟ್ ಏನೇ ಬಂದ್ರೂ ಟ್ರೋಫಿ ಮಾತ್ರ ಇಂಗ್ಲೆಂಡ್ನಲ್ಲೇ ಉಳಿಯುತ್ತೆ. ಅಥವಾ  ಆಂಡರ್ಸನ್-ತೆಂಡೂಲ್ಕರ್ ಟ್ರೋಫಿಯ ಮೊದಲನೇ ಆವೃತ್ತಿಯಾಗಿರೋದ್ರಿಂದ ಉಭಯ ತಂಡಗಳು ಈ ಟ್ರೋಫಿಯನ್ನು ಹಂಚಿಕೊಳ್ಳುವ ಸಾಧ್ಯತೆಯೂ ಇದೆ. ಈ ಬಗ್ಗೆ ಇಸಿಬಿ ಅಥವಾ ಬಿಸಿಸಿಐ ಇದುವರೆಗೆ ಯಾವುದೇ ಸ್ಪಷ್ಟತೆಯನ್ನು ನೀಡಿಲ್ಲ.

ಒಟ್ನಲ್ಲಿ ಕೊನೇ ಪಂದ್ಯದಲ್ಲಿ ಎರಡು ಆಪ್ಶನ್ಸ್ ಅಷ್ಟೇ ಇದೆ. ನಂಬರ್ 1 ಇಂಗ್ಲೆಂಡ್ ಸರಣಿ ಗೆಲ್ಲಬಹುದು ಅಥವಾ ಸರಣಿ ಡ್ರಾ ಆಗಬಹುದು. ಇಲ್ಲಿ ಭಾರತಕ್ಕೆ ಸಿರೀಸ್ ಸಮಬಲ ಮಾಡೋದನ್ನ ಬಿಟ್ರೆ ಬೇರೆ ದಾರಿ ಇಲ್ಲ ಅಷ್ಟೇ.

Shwetha M