ಆಂಗ್ಲರ ಬೆನ್ನೆಲುಬು ಮುರಿದ ಜಸ್ಪ್ರೀತ್ ಬುಮ್ರಾ – ಭಾರತದ ಬ್ಯಾಟಿಂಗ್ ವೀಕ್ ಆಯ್ತಾ?
ENG ‘ಆಲ್ ರೌಂಡ್’ ಪ್ಲ್ಯಾನ್ ಹೇಗಿದೆ?

ಲೀಡ್ಸ್ನಲ್ಲಿ ನಡೆಯುತ್ತಿರೋ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತದ ಪರ ಮೂವರು ಸೆಂಚುರಿ ಸಿಡಿಸಿದ್ರು. ಬಟ್ ಉಳಿದವ್ರಿಂದ ನಿರೀಕ್ಷಿತ ಸಪೋರ್ಟ್ ಸಿಗ್ಲಿಲ್ಲ. ಇದ್ರಿಂದಾಗಿ ಭಾರತ 471 ರನ್ಗಳಿಗೆ ಆಲೌಟ್ ಆಗಿತ್ತು. ಈ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಪಡೆ 465 ರನ್ಗಳಿಸಿ ಕೇವಲ 6 ರನ್ಗಳಿಂದ ಹಿನ್ನಡೆ ಅನುಭವಿಸಿತು. ಸೋ ಸೆಕೆಂಡ್ ಇನ್ನಿಂಗ್ಸ್ ಆರಂಭ ಮಾಡಿರೋ ಭಾರತಕ್ಕೆ ಆರಂಭದಲ್ಲೇ ಶಾಕ್ ಎದುರಾಯ್ತು.
ಇದನ್ನೂ ಓದಿ : ಫಸ್ಟ್ ಮ್ಯಾಚ್ ಗಳಲ್ಲೇ ಪಾಕ್ ಬೆಂಡೆತ್ತಿದ ಭಾರತ – ಟೆಸ್ಟ್, ಏಕದಿನ, ಟಿ-20ಯಲ್ಲೂ ಭಾರತವೇ ಬಾಸ್!
6 ರನ್‌ಗಳ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಭಾರತಕ್ಕೆ ಆರಂಭಿಕ ಆಘಾತ ಎದುರಾಯಿತು. ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಬಾರಿಸಿದ್ದ ಯಶಸ್ವಿ ಜೈಸ್ವಾಲ್ ಕೇವಲ 4 ರನ್‌ಗಳನ್ನು ಗಳಿಸಿ ಬ್ರೈಡನ್ ಕಾರ್ಸೆಗೆ ಬಲಿಯಾದರು. ಇದಾದ ನಂತರ ಕೆಎಲ್ ರಾಹುಲ್ ಮತ್ತು ಸಾಯಿ ಸುದರ್ಶನ್ ತಂಡದ ಇನ್ನಿಂಗ್ಸ್ ಮುಂದುವರಿಸಿದ್ದು ಒಳ್ಳೆ ಪಾರ್ಟ್ನರ್ಶಿಪ್ ಬಿಲ್ಡ್ ಆಗ್ತಿತ್ತು. 66 ರನ್‌ಗಳ ಜೊತೆಯಾಟವಾಡಿದ್ರು. ಆದ್ರೆ ಈ ಜೋಡಿ ಕಂಪ್ಲೀಟ್ ಸೆಟ್ ಆಗೋಕೆ ಬಿಡದ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್, ಸಾಯಿ ಸುದರ್ಶನ್ ಅವರನ್ನು 30 ರನ್ಗಳಿಗೆ ಔಟ್ ಮಾಡಿದ್ರು.
ಎರಡೂ ಇನ್ನಿಂಗ್ಸ್ಗಳಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ಮಾಡ್ತಿರೋ ಕನ್ನಡಿಗ ಕೆಎಲ್ ರಾಹುಲ್ ವಿಶೇಷ ಮೈಲುಗಲ್ಲು ದಾಟಿದ್ದಾರೆ. ಸಾವಿರ ರನ್ ಸರದಾರರ ಪಟ್ಟಿಗೆ ಸೇರಿಕೊಂಡಿದ್ದಾರೆ. ಈ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ರಾಹುಲ್ ಪ್ರಥಮ ಇನಿಂಗ್ಸ್ನಲ್ಲಿ 42 ರನ್ ಬಾರಿಸಿದರು. ಹಾಗೇ ಎರಡನೇ ಇನ್ನಿಂಗ್ಸ್‌ನಲ್ಲಿ ಮೂರನೇ ದಿನದಾಟದ ಅಂತ್ಯದ ವೇಳೆಗೆ ಅಜೇಯ 47 ರನ್ ಬಾರಿಸಿದ್ದಾರೆ. ಇಂಗ್ಲೆಂಡ್ ವಿರುದ್ಧ ಈವರೆಗೆ 14 ಟೆಸ್ಟ್ ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಕೆಎಲ್ ರಾಹುಲ್ 26 ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿದ್ದಾರೆ. 3 ಶತಕ ಹಾಗೂ 2 ಅರ್ಧಶತಕಗಳ ಜೊತೆ 1,044 ರನ್ಗಳನ್ನ ಕಲೆ ಹಾಕಿದ್ದಾರೆ. ಈ ಸಾಧನೆ ಮಾಡಿದ ಭಾರತದ 14ನೇ ಬ್ಯಾಟ್ಸ್‌ಮನ್ ಎಂಬ ಹಿರಿಮೆಗೂ ಪಾತ್ರರಾಗಿದ್ದಾರೆ. ಸೋ ಪ್ರಸ್ತುತ ಶುಭ್ಮನ್ ಗಿಲ್ ಮತ್ತು ರಾಹುಲ್ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಭಾರತ ತಂಡ 96 ರನ್ಗಳಿಂದ ಮುನ್ನಡೆ ಸಾಧಿಸಿದೆ. ಌಕ್ಚುಲಿ ಭಾರತದ ಪರ ಫಸ್ಟ್ ಇನ್ನಿಂಗ್ಸ್‌ನಲ್ಲಿ ಮತ್ತಷ್ಟು ರನ್ಸ್ ಬರ್ಬೇಕಿತ್ತು. ಬಟ್ ಎಲ್ಲರಿಂದಲೂ ನಿರೀಕ್ಷಿತ ಪ್ರದರ್ಶನ ಬರ್ಲಿಲ್ಲ. ಬಟ್ ಇಂಗ್ಲೆಂಡ್ ಆಟಗಾರರು ಈ ತಪ್ಪನ್ನ ಮಾಡ್ಲಿಲ್ಲ.
ಫಸ್ಟ್ ಇನ್ನಿಂಗ್ಸ್‌ನಲ್ಲಿ ಭಾರತ 471 ರನ್ಗಳನ್ನ ಕಲೆ ಹಾಕಿತ್ತು. ಇಂಟ್ರೆಸ್ಟಿಂಗ್ ಅಂದ್ರೆ ಆ ಮ್ಯಾಚಲ್ಲಿ ಜೈಸ್ವಾಲ್, ಗಿಲ್ ಮತ್ತು ಪಂತ್ ಸೆಂಚುರಿ ಹೊಡೆದಿದ್ದರಿಂದಾಗಿ ಬಿಗ್ ಸ್ಕೋರ್ ಬಂತು. ಸಾಯಿ ಸುದರ್ಶನ್, ಕರುಣ್ ನಾಯರ್ ಡಕ್ ಔಟ್ ಆಗಿದ್ರು. ಅಲ್ದೇ ಆಲ್ರೌಂಡರ್ಸ್ ಕೋಟಾ ಪ್ಲೇಯರ್ಗಳಿಂದಲೂ ಬಿಗ್ ಸ್ಕೋರ್ ಬರ್ಲಿಲ್ಲ. ಬಟ್ ಇಂಗ್ಲೆಂಡ್ ಪರ ಹಾಗಲ್ಲ ಮೊದಲ ಇನ್ನಿಂಗ್ಸ್‌ನಲ್ಲಿ ಜಾಕ್ ಕ್ರಾವ್ಲಿ 4 ರನ್ಗಳಿಗೆ ಔಟಾಗಿದ್ದು ಬಿಟ್ರೆ ಉಳಿದವ್ರೆಲ್ಲಾ ಚೆನ್ನಾಗೇ ಬ್ಯಾಟ್ ಮಾಡಿದ್ದಾರೆ. ಡಬಲ್ ಡಿಜಿಟ್ ರನ್ಸ್ ಕಲೆ ಹಾಕಿದ್ದಾರೆ. ಓಲಿ ಪೋಪ್ ಸೆಂಚುರಿ ಬಾರಿಸಿದ್ದು ಒಬ್ರೇ ಆದ್ರೂ ಎಲ್ಲರಿಂದಲೂ ಸಪೋರ್ಟ್ ಬಂದಿದ್ದಕ್ಕಾಗಿಯೇ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 6 ರನ್‌ಗಳ ಹಿನ್ನಡೆ ಸಾಧಿಸಿದ್ರು. ಇಲ್ಲಿ ಇನ್ನೊಂದು ವಿಚಾರ ಮೆನ್ಶನ್ ಮಾಡ್ಲೇಬೇಕು. ಬೌಲಿಂಗ್ನಲ್ಲಿ ಬುಮ್ರಾ ಒಬ್ಬರೇ ಕಂಪ್ಲೀಟ್ ಇನಿಶಿಯೇಟ್ ತಗೊಂಡು ಬೌಲಿಂಗ್ ಮಾಡಿದಂತಿತ್ತು.
ಅಷ್ಟಕ್ಕೂ ಇಂಗ್ಲೆಂಡ್ ತಂಡ ನಮ್ಮ ಸ್ಕೋರ್ಗೆ ಹತ್ತಿರ ಬರೋಕೆ ಕಾರಣವೇ ಭಾರತದ ಫೀಲ್ಡಿಂಗ್ ಫೇಲ್ಯೂರ್. ಬೌಲಿಂಗ್ನಲ್ಲಿ ಪ್ರಸಿದ್ಧ್ ಕೃಷ್ಣ ಮತ್ತು ಮೊಹಮ್ಮದ್ ಸಿರಾಜ್ ಸಿಕ್ಕಾಪಟ್ಟೆ ದುಬಾರಿಯಾದ್ರು. ಪ್ರಸಿದ್ಧ್ ಕೃಷ್ಣ ಅಂತೂ 120 ಎಸೆತಗಳಲ್ಲಿ ಬರೋಬ್ಬರಿ 128 ರನ್ಗಳನ್ನ ಬಿಟ್ಟು ಕೊಟ್ಟಿದ್ರು. ಆದ್ರೂ 3 ವಿಕೆಟ್ ಪಡೆದ್ರಲ್ಲ ಅನ್ನೋದೇ ಸಮಾಧಾನ. ಹಾಗೇ ಮೊಹಮ್ಮದ್ ಸಿರಾಜ್ ಕೂಡ ರನ್ಗಳನ್ನ ಬಿಟ್ಟುಕೊಟ್ರು. 27 ಓವರ್ಗಳಲ್ಲಿ ಇಂಗ್ಲೆಂಡ್ ಬ್ಯಾಟರ್ಸ್ 122 ರನ್ ಕಲೆಹಾಕಿದರು. ಸಿರಾಜ್ 2 ವಿಕೆಟ್ ತೆಗೆದ್ರು. ಬಟ್ ಏಕಾಂಗಿಯಾಗಿ ಇಂಗ್ಲೆಂಡ್ ಬ್ಯಾಟರ್ಸ್ನ ಕಾಡಿದ ಜಸ್ಪ್ರೀತ್ ಬುಮ್ರಾ 24.4 ಕೇವಲ 83 ರನ್ ನೀಡಿ 5 ವಿಕೆಟ್ ಕಬಳಿಸಿದರು. ಈ ಮೂಲಕ ಇಂಗ್ಲೆಂಡ್ ತಂಡವನ್ನು ಮೊದಲ ಇನಿಂಗ್ಸ್ನಲ್ಲಿ 465 ರನ್ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾದರು.

ನೋಡಿರಿ

