BCCI ಕೆಣಕಿದ್ರೆ ಬಾಂಗ್ಲಾ ಬಾಲ ಕಟ್ – IPLಗೂ ಸಮ ಇಲ್ಲ BCB ಆದಾಯ
ಸರಣಿ ಇರಲ್ಲ.. ಹಣ ಬರಲ್ಲ.. ಎಷ್ಟು ನಷ್ಟ?

ಭಾರತ ಮತ್ತು ಬಾಂಗ್ಲಾ ನಡುವೆ ಕ್ರಿಕೆಟ್ ವಿಚಾರವಾಗಿ ಸಾಕಷ್ಟು ಡವಲಪ್ಮೆಂಟ್ಸ್ ಆಗ್ತಿದೆ. ಬಾಂಗ್ಲಾದಲ್ಲಿ ಹಿಂದೂಗಳ ನರಮೇಧದಿಂದ ಶುರುವಾದ ಕಿಚ್ಚು ಈಗ ಮೈದಾನಗಳಿಗೂ ಕಾಲಿಟ್ಟಿದೆ. ಐಪಿಎಲ್, ಟಿ-20 ವಿಶ್ವಕಪ್, ದ್ವಿಪಕ್ಷೀಯ ಸರಣಿಗಳಿಗೂ ಹೊಡೆತ ಬಿದ್ದಿದೆ. ಆದ್ರೆ ಬಿಸಿಸಿಐ ಮತ್ತು ಬಿಸಿಬಿ ಅಂತಾ ಬಂದಾಗ ಭಾರತವೇ ಬಾಸ್. ಕ್ರಿಕೆಟ್ ಲೋಕದ ದೊಡ್ಡಣ್ಣನಾಗಿರೋ ಭಾರತವನ್ನ ಎದುರು ಹಾಕಿಕೊಂಡ್ರೆ ಬಾಂಗ್ಲಾ ಹೆಜ್ಜೆ ಹೆಜ್ಜೆಗೂ ನಷ್ಟ ಅನುಭವಿಸಬೇಕಾಗುತ್ತೆ.
ಇದನ್ನೂ ಓದಿ : ಆಟಕ್ಕೆ ಮೂರು ಪಕ್ಷ, ಲೆಕ್ಕಕ್ಕೆ ಮಾತ್ರ ಎರಡು ಪಕ್ಷ – BJP & JDSಗೆ ಟಾಂಗ್ ಕೊಟ್ಟ ಡಿಕೆೆಶಿ
ಬಿಸಿಸಿಐ.. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿ ಅನ್ನೋದು ಎಲ್ರಿಗೂ ಗೊತ್ತಿರೋದೇ. ಅದ್ರಲ್ಲೂ ಕಳೆದ ಐದು ವರ್ಷಗಳಲ್ಲಿ ರಾಕೆಟ್ ಸ್ಪೀಡಲ್ಲಿ ಇನ್ಕಂ ಏಕರಿಯಾಗ್ತಾ ಬಂದಿದೆ. ವರ್ಷದಿಂದ ವರ್ಷಕ್ಕೆ ಐಪಿಎಲ್ಗೆ ಸಿಕ್ತಿರೋ ನೇಮ್, ಫೇಮ್ ಬಿಸಿಸಿಐಗೆ ದೊಡ್ಡಮಟ್ಟದಲ್ಲೇ ಲಾಭ ತಂದುಕೊಡ್ತಿದೆ. 2019 ರ ₹6059 ಕೋಟಿ ರೂಪಾಯಿ ಇದ್ದ ವಹಿವಾಟು ಐದು ವರ್ಷಗಳಲ್ಲೇ 20,686 ಕೋಟಿಗೆ ಏರಿಕೆಯಾಗಿದೆ. 5 ವರ್ಷಗಳಲ್ಲಿ ಬಿಸಿಸಿಐನ ಬ್ಯಾಂಕ್ ಬ್ಯಾಲೆನ್ಸ್ 14,627 ಕೋಟಿ ರೂ.ಗಳಷ್ಟು ಹೆಚ್ಚಾಗಿದೆ.
ಟಾಪ್ -5 ಸಂಸ್ಥೆಗಳು!
ಸಂಸ್ಥೆ ವಹಿವಾಟು
ಬಿಸಿಸಿಐ ₹18,760 ಕೋಟಿ
ಆಸ್ಟ್ರೇಲಿಯಾ ₹658 ಕೋಟಿ
ಇಂಗ್ಲೆಂಡ್ ₹492 ಕೋಟಿ
ಪಾಕಿಸ್ತಾನ ₹458 ಕೋಟಿ
ಬಾಂಗ್ಲಾದೇಶ ₹425 ಕೋಟಿ
ಬಿಸಿಸಿಐ ಆದಾಯದ ಮೂಲಗಳು!
ಐಪಿಎಲ್ ನಿಂದಲೇ 59% ಆದಾಯ ಗಳಿಸುವ ಬಿಸಿಸಿಐ
ಐಸಿಸಿಯಿಂದಲೂ ಭಾರತದ ಪಂದ್ಯಗಳಿಗೆ ಹಣ
ಭಾರತದ ಸರಣಿಗಳಿಗೆ ಪ್ರಸಾರ ಮತ್ತು ಡಿಜಿಟಲ್ ರೈಟ್ಸ್
ಸ್ಪಾನ್ಸರ್ ಶಿಪ್ ಮತ್ತು ಪಾಟ್ನರ್ ಶಿಪ್ ಗಳಿಂದ ಆದಾಯ
ಪಂದ್ಯಗಳ ವೇಳೆ ಟಿಕೆಟ್ ಮಾರಾಟ, ಕಮರ್ಷಿಯಲ್ಸ್
ಬಿಸಿಸಿಐನ ಫಿಕ್ಸೆಡ್ ಡೆಪಾಸಿಟ್ಸ್ ಮತ್ತು ಇನ್ವೆಸ್ಟ್ ಮೆಂಟ್ಸ್
ಇನ್ನು ಇದಿಷ್ಟೇ ಅಲ್ಲದೇ ರಾಯಲ್ಟಿ, ಸ್ಟೇಜಿಂಗ್ ಫೀಸ್, ಟೂರ್ನಮೆಂಟ್ ಗಳನ್ನ ಹೋಸ್ಟ್ ಮಾಡೋದು ಹಾಗೇ ಕಮರ್ಷಿಯಲ್ ಡೀಲ್ಸ್ ಗಳಿಂದಲೂ ಹಣ ಬರುತ್ತೆ. ಇನ್ನು ಬಾಂಗ್ಲಾದ ನೆಟ್ವರ್ತ್ 55 ಮಿಲಿಯನ್ ಇದೆ. ಅಂದ್ರೆ ಇಂಡಿಯನ್ ಕರೆನ್ಸಿ ಪ್ರಕಾರ ಹೇಳೋದಾದ್ರೆ 458 ಕೋಟಿ. ಅದೇ 2025ರಲ್ಲಿ ಐಪಿಎಲ್ನಲ್ಲೇ ಭಾರತ ಸಾವಿರಾರು ಕೋಟಿ ಗಳಿಸಿದೆ. 2025ರಲ್ಲಿ 18.5 ಬಿಲಿಯನ್ ಅಂದ್ರೆ 1.56 ಲಕ್ಷ ಕೋಟಿ ಬ್ಯುಸಿನೆಸ್ ವ್ಯಾಲ್ಯೂ ಇದೆ. ಹೀಗಾಗಿ ಹೆಜ್ಜೆಹೆಜ್ಜೆಗೂ ಹಣದ ಹೊಳೆಯೇ ಹರಿಯೋ ಬಿಸಿಸಿಐನ ಎದುರು ಹಾಕಿಕೊಂಡ್ರೆ ನಷ್ಟ ಕಟ್ಟಿಟ್ಟ ಬುತ್ತಿ.
ಬಾಂಗ್ಲಾಗೆ ನಷ್ಟ!
ಐಪಿಎಲ್ ನಿಂದ ಬ್ಯಾನ್.. ಆಟಗಾರರ ಆದಾಯಕ್ಕೆ ಹೊಡೆತ
ದ್ವಿಪಕ್ಷೀಯ ಸರಣಿಗಳು ಕ್ಯಾನ್ಸಲ್ ಆದ್ರೆ ಆದಾಯ ಖೋತಾ
ಮುಂದಿನ ದಿನಗಳಲ್ಲಿ ಐಪಿಎಲ್ ನಲ್ಲಿ ಅವಕಾಶಗಳೇ ಕಷ್ಟ
ಐಪಿಎಲ್ ನಿಷೇಧ ಮಾಡಿದ್ರೆ ಬಿಸಿಸಿಐಗೆ ಯಾವುದೇ ನಷ್ಟ ಇಲ್ಲ
ಹೀಗೆ ಬಿಸಿಸಿಐನ ಎದುರು ಹಾಕಿಕೊಂಡ್ರೆ ಬಾಂಗ್ಲಾಗೇ ನಷ್ಟ. ಹೀಗಾಗಿ ಟಿ-20 ವಿಶ್ವಕಪ್ ಆಡೋಕೆ ಭಾರತಕ್ಕೆ ಬರಲ್ಲ, ಐಪಿಎಲ್ನ ಬ್ಯಾನ್ ಮಾಡ್ತೀವಿ, ಪ್ರಸಾರ ಮಾಡಲ್ಲ ಅನ್ನೋದನ್ನೆಲ್ಲಾ ಬಿಡಬೇಕು. ಮೊದ್ಲೇ ಫೈನಾನ್ಶಿಯಲಿ ಸ್ಟ್ರಾಂಗ್ ಇಲ್ಲ. ಈಗ ಭಾರತದ ಜೊತೆಗಿನ ವೈರತ್ವ ಮತ್ತಷ್ಟು ಹೊಡೆತ ಕೊಡೋದ್ರಲ್ಲಿ ಅನುಮಾನನೇ ಇಲ್ಲ.

ನೋಡಿರಿ

