KOHLI ಎಂಟ್ರಿ.. KL ಔಟ್! – ಸ್ಟಾರ್ಸ್ FAIL.. ಯಂಗ್​ಸ್ಟರ್ಸ್ FIRE
ದುಲೀಪ್ ಟ್ರೋಫಿ TO ಬಾಂಗ್ಲಾ ಟೆಸ್ಟ್

KOHLI ಎಂಟ್ರಿ.. KL ಔಟ್! – ಸ್ಟಾರ್ಸ್ FAIL.. ಯಂಗ್​ಸ್ಟರ್ಸ್ FIREದುಲೀಪ್ ಟ್ರೋಫಿ TO ಬಾಂಗ್ಲಾ ಟೆಸ್ಟ್

ದುಲೀಪ್ ಟ್ರೋಫಿಯ ಪರ್ಫಾಮೆನ್ಸ್ ನೋಡಿ ಬಳಿಕ ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಸ್ಕ್ವಾಡ್ ರಿಲೀಸ್ ಮಾಡೋ ಪ್ಲ್ಯಾನ್​ನಲ್ಲಿದೆ ಬಿಸಿಸಿಐ ಮ್ಯಾನೇಜ್​ಮೆಂಟ್. ಬಟ್ ಲಿಸ್ಟ್​ನಲ್ಲಿದ್ದ ಕೆಲ ಪ್ಲೇಯರ್ಸ್ ಫಸ್ಟ್ ಡೇನೇ ಅಟ್ಟರ್ ಪ್ಲ್ಯಾಪ್ ಶೋ ತೋರಿಸಿರೋದು ಆಯ್ಕೆಗಾರರ ತಲೆ ಬಿಸಿ ಮಾಡಿದೆ. ಟೂರ್ನಿಯ ಆರಂಭಕ್ಕೂ ಮುನ್ನ ಸೆಂಟರ್​ ಆಫ್​ ಅಟ್ರಾಕ್ಷನ್​ ಅನಿಸಿಕೊಂಡಿದ್ದ ಸ್ಟಾರ್​​ಗಳೆಲ್ಲಾ ಮಕಾಡೆ ಮಲಗಿದ್ರೆ, ಯಂಗ್​​ಸ್ಟರ್​​ಗಳ ಆರ್ಭಟ ಜೋರಾಗಿದೆ. ಹೀಗಾಗಿ ಯಾರನ್ನ ಆಯ್ಕೆ ಮಾಡ್ಬೇಕು ಅನ್ನೋ ಗೊಂದಲ ಶುರುವಾಗಿದೆ. ಹಾಗಾದ್ರೆ ಬಾಂಗ್ಲಾ ವಿರುದ್ಧದ ಸರಣಿಗೆ ಲಿಸ್ಟ್​ನಲ್ಲಿ ಇದ್ದವರ್ಯಾರು? ಅಂತಿಮವಾಗಿ ಯಾರು ಟೀಂ ಸೇರಿಕೊಳ್ತಾರೆ? ಹೊಸಬರಿಗೆ ಚಾನ್ಸ್ ಸಿಗುತ್ತಾ? ಕೆಎಲ್ ರಾಹುಲ್​ರನ್ನ ಕೈ ಬಿಟ್ಟಿದ್ದೇಕೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಮ್ಯಾಕ್ಸಿಗೆ ಪುಟ್ಟಕ್ಕನ ಮಗಳ ಮೇಲೆ ಲವ್‌? – ಸಹನಾಗೆ ಕಾಳಿಯೇ ಬೆಸ್ಟ್‌!

ಭಾರತ ಮತ್ತು ಬಾಂಗ್ಲಾದೇಶ ನಡುವಿನ ಟೆಸ್ಟ್ ಸರಣಿ ಸೆಪ್ಟೆಂಬರ್ 19 ರಿಂದ ಆರಂಭವಾಗದ್ದು ಇನ್ನು ಎರಡು ವಾರಗಳೂ ಬಾಕಿ ಉಳಿದಿಲ್ಲ. ಹೀಗಾಗಿ ಟೆಸ್ಟ್​​ ಸರಣಿಗೆ ಯಾರೆಲ್ಲ ಆಯ್ಕೆ ಆಗ್ತಾರೆ ಅನ್ನೋ ಕುತೂಹಲ ಮೂಡಿದೆ. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅಂತೂ ತಂಡದಲ್ಲಿ ಸ್ಥಾನ ಪಡೆಯೋದು ಫಿಕ್ಸ್ ಇದೆ. ಬಟ್ ರೋಹಿತ್ ಶರ್ಮಾ ಜೊತೆ ಓಪನರ್ ಯಾರು ಅನ್ನೋದೇ ಈಗಿರುವ ಪ್ರಶ್ನೆ.

8 ತಿಂಗಳ ಬಳಿಕ ಟೆಸ್ಟ್ ಆಡಲಿದ್ದಾರೆ ವಿರಾಟ್ ಕೊಹ್ಲಿ! 

ಇನ್ನು ವಿರಾಟ್ ಕೊಹ್ಲಿಗೆ ಲಾಂಗ್ ಬ್ರೇಕ್ ಬಳಿಕ ಟೆಸ್ಟ್ ತಂಡಕ್ಕೆ ಕಮ್​ಬ್ಯಾಕ್ ಮಾಡಲಿದ್ದಾರೆ. ಎಂಟು ತಿಂಗಳ ವಿಶ್ರಾಂತಿ ಬಳಿಕ ಇದೇ ಮೊದಲ ಬಾರಿಗೆ ವಿರಾಟ್ ಕೊಹ್ಲಿ ಭಾರತ ಟೆಸ್ಟ್ ತಂಡಕ್ಕೆ ಕಂಬ್ಯಾಕ್ ಮಾಡಲಿದ್ದಾರೆ. ಜನವರಿ 2024 ರಲ್ಲಿ ಅವರು ಕೊನೆಯದಾಗಿ ಟೆಸ್ಟ್ ಆಡಿದ್ದರು. ಇನ್ನೂ ಬಾಂಗ್ಲಾ ವಿರುದ್ಧದ ಸರಣಿಗೆ ಟೀಂ ಇಂಡಿಯಾವನ್ನು ರೋಹಿತ್ ಶರ್ಮಾ ಮುನ್ನಡೆಸಲಿದ್ದಾರೆ. ಆರಂಭಿಕರಾಗಿ ರೋಹಿತ್‌ಗೆ ಯಶಸ್ವಿ ಜೈಸ್ವಾಲ್ ಸಾಥ್ ನೀಡುವ ಸಾಧ್ಯತೆ ಇದೆ. ಶುಭ್‌ಮಾನ್ ಗಿಲ್ ಉಪನಾಯಕ ಹಾಗೂ ಮೂರನೇ ಸ್ಥಾನದಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಇನ್ನು ದೇಸೀಯ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ತೋರಿದ ಬಳಿಕ ಟೀಂ ಇಡಿಯಾದಲ್ಲಿ ಸ್ಥಾನ ಪಡೆದಿರುವ ಸರ್ಫರಾಜ್ ಖಾನ್ ಹಾಗೂ ದೇವದತ್ ಪಡಿಕಲ್ ಇಬ್ಬರೂ ಕಳೆದ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಹೀಗಾಗಿ ತಂಡದಲ್ಲಿ ಉಳಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಇನ್ನು ಆಲ್ ರೌಂಡರ್‌ಗಳ ಪಟ್ಟಿಯಲ್ಲಿ ರವಿಚದ್ರನ್ ಅಶ್ವಿನ್, ರವೀಂದ್ರ ಜಡೇಜಾ ಜೊತೆಗೆ ಮೂರನೇ ಆಲ್ರೌಂಡರ್ ಆಗಿ ಅಕ್ಸರ್ ಪಟೇಲ್ ಅವರ ಆಯ್ಕೆ ಬಹುತೇಕ ಖಚಿತ ಎಂದು ಹೇಳಲಾಗಿದೆ.  ಮತ್ತೊಂದಡೆ ಈಗಾಗ್ಲೇ ಟಿ-20 ಹಾಗೇ ಏಕದಿನ ಪಂದ್ಯಗಳಲ್ಲಿ ಚಾನ್ಸ್ ಗಿಟ್ಟಿಸಿಕೊಂಡಿರೋ ರಿಷಭ್ ಪಂತ್ ಕೂಡ ತಂಡ ಸೇರಿಕೊಳ್ಳೋ ನಿರೀಕ್ಷೆಯಲ್ಲಿದ್ದಾರೆ. ಅಪಘಾತದಿಂದ ಚೇತರಿಕೆ ಬಳಿಕ 634 ದಿನಗಳ ನಂತರ ಟೆಸ್ಟ್ ತಂಡಕ್ಕೆ ಮರಳಲಿದ್ದಾರೆ. ಹಾಗೇ ಜೊತೆಗೆ ಯುವ ವಿಕೆಟ್‌ಕೀಪರ್ ಧ್ರುವ್ ಜುರೆಲ್ ಕೂಡ ತಂಡಕ್ಕೆ ಆಯ್ಕೆಯಾಗುವ ಸಾಧ್ಯತೆ ಇದೆ.

ಬಾಂಗ್ಲಾ ಸರಣಿಯಿಂದ ಕೆಎಲ್ ರಾಹುಲ್ ಹೊರಗೆ?

ಬಿಸಿಸಿಐ ಆಯ್ಕೆ ಕಮಿಟಿ ಮುಂದೆ ಹೆಚ್ಚಿನ ಆಪ್ಶನ್ಸ್ ಇರೋದ್ರಿಂದ ಬಾಂಗ್ಲಾ ಸರಣಿಗೆ ಕನ್ನಡಿಗ ಕೆಎಲ್ ರಾಹುಲ್ ಸೆಲೆಕ್ಟ್ ಆಗೋದು ಡೌಟ್ ಇದೆ. ಲಾಂಗ್ ಗ್ಯಾಪ್ ಬಳಿಕ ಲಂಕಾ ಏಕದಿನ ಸರಣಿಗೆ ಆಯ್ಕೆಯಾಗಿದ್ದ ಕೆಎಲ್ ಮೊದಲ ಎರಡು ಪಂದ್ಯಗಳಲ್ಲಿ ಮಾತ್ರ ಕಣಕ್ಕಿಳಿದಿದ್ರು. ಆದ್ರೆ ಎರಡನೇ ಪಂದ್ಯದಲ್ಲಿ ಡಕೌಟ್ ಆಗ್ತಿದ್ದಂತೆ ಮೂರನೇ ಪಂದ್ಯದಿಂದ ಕೈ ಬಿಡಲಾಗಿತ್ತು. ಹೀಗಾಗಿ ಬಾಂಗ್ಲಾ ಸರಣಿಗೆ ಆಯ್ಕೆಯಾಗೋದು ಅನುಮಾನ ಇದೆ.  ಹಾಗೇ ಈ ಸರಣಿಯಲ್ಲಿ ಜಸ್ಪ್ರೀತ್ ಬುಮ್ರಾ ಅವರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್ ತಂಡದಲ್ಲಿ ತನ್ನ ಸ್ಥಾನವನ್ನು ಉಳಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ.

ರೋಹಿತ್ ಶರ್ಮಾ & ಯಶಸ್ವಿ ಜೈಸ್ವಾಲ್ ಓಪನರ್ಸ್!

ಸೋ ಫೈನಲ್ಲಾಗಿ ಬಾಂಗ್ಲಾದೇಶ ವಿರುದ್ದದ ಭಾರತದ ಸಂಭಾವ್ಯ ತಂಡ ಹೇಗಿರಲಿದೆ ಅನ್ನೋದನ್ನ ನೋಡೋದಾದ್ರೆ ಕ್ಯಾಪ್ಟನ್ ರೋಹಿತ್ ಶರ್ಮಾ ಹಾಗೇ ಯಶಸ್ವಿ ಜೈಸ್ವಾಲ್ ಓಪನರ್ಸ್, ಮಧ್ಯಮ ಕ್ರಮಾಂಕದಲ್ಲಿ ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಸರ್ಫರಾಜ್ ಖಾನ್, ದೇವದತ್ ಪಡಿಕ್ಕಲ್ ಇರಲಿದ್ದಾರೆ. ಆಲ್‌ರೌಂಡರ್‌ಗಳಾಗಿ ರವೀಂದ್ರ ಜಡೇಜಾ, ಅಕ್ಸರ್ ಪಟೇಲ್, ಆರ್ ಅಶ್ವಿನ್ ಸ್ಥಾನ ಪಡೆದ್ರೆ ವಿಕೆಟ್ ಕೀಪರ್‌ಗಳಾಗಿ ರಿಷಬ್ ಪಂತ್ ಮತ್ತು ಧ್ರುವ್ ಜುರೆಲ್​ಗೆ ಚಾನ್ಸ್ ಸಿಗಬಹುದು. ಬೌಲಿಂಗ್ ವಿಭಾಗವನ್ನ ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಆಕಾಶ್ ದೀಪ್ ಅಥವಾ ಅರ್ಷದೀಪ್ ಸಿಂಗ್ ಸೇರಿಕೊಳ್ತಾರೆ.

ಪಾಕ್ ವಿರುದ್ಧ ಗೆದ್ದು ಇತಿಹಾಸ ನಿರ್ಮಿಸಿರುವ ಬಾಂಗ್ಲಾ!

ಭಾರತ ಪುರುಷರ ಕ್ರಿಕೆಟ್ ತಂಡವು ಆರು ತಿಂಗಳ ಬಳಿಕ ಮತ್ತೆ ವೈಟ್ ಜರ್ಸಿಯಲ್ಲಿ ಕಣಕ್ಕಿಳಿಯಲು ಸಜ್ಜಾಗುತ್ತಿದೆ. ಟೀಂ ಇಂಡಿಯಾಗೆ ನೂತನ ಕೋಚ್ ಆಗಿ ಆಯ್ಕೆಯಾಗಿರುವ ಗೌತಮ್ ಗಂಭೀರ್ ಅವರಿಗೆ ರೆಡ್ ಬಾಲ್ ಕ್ರಿಕೆಟ್‌ನಲ್ಲಿ ಇದು ಮೊದಲ ಸರಣಿಯಾಗಿದೆ. 2025 ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಟೇಬಲ್‌ನಲ್ಲಿ ಫಸ್ಟ್ ಪ್ಲೇಸ್ ಬಲಪಡಿಸಿಕೊಳ್ಳುಲು ಟೀಂ ಇಂಡಿಯಾಗೆ ಬಾಂಗ್ಲಾ ವಿರುದ್ದದ ಸರಣಿ ಅತ್ಯಂತ ಮಹತ್ವದ ಸರಣಿಯಾಗಿದೆ.  ಆದ್ರೆ ಬಾಂಗ್ಲಾ ದೇಶದ ವಿರುದ್ಧದ ಸರಣಿಯಲ್ಲಿ ಭಾರತ ಈಸಿಯಾಗಿ ತೆಗೆದುಕೊಳ್ಳೋಕೆ ಆಗಲ್ಲ. ಯಾಕಂದ್ರೆ  ಪಾಕಿಸ್ತಾನ ವಿರುದ್ಧ ನಡೆದ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವ ಮೂಲಕ ದಾಖಲೆ ನಿರ್ಮಿಸಿದೆ. ಇದೇ ಜೋಶ್​ನಲ್ಲೇ ಭಾರತದ ವಿರುದ್ಧವೂ ಉತ್ತಮ ಪ್ರದರ್ಶನ ತೋರುವ ನಿರೀಕ್ಷೆಯಲ್ಲಿದೆ.

Shwetha M