ಬಾಂಗ್ಲಾ 2ನೇ ಟೆಸ್ಟ್ ಗಿಲ್ಲ ಬುಮ್ರಾ – ಕುಲ್ದೀಪ್ ಗೆ ಚಾನ್ಸ್ ಕೊಡಿ ಎಂದಿದ್ದೇಕೆ?
ಪ್ಲೇಯಿಂಗ್ 11 ನಿಂದ ಸ್ಟಾರ್ಸ್ ಔಟ್?

ಬಾಂಗ್ಲಾ 2ನೇ ಟೆಸ್ಟ್ ಗಿಲ್ಲ ಬುಮ್ರಾ – ಕುಲ್ದೀಪ್ ಗೆ ಚಾನ್ಸ್ ಕೊಡಿ ಎಂದಿದ್ದೇಕೆ?ಪ್ಲೇಯಿಂಗ್ 11 ನಿಂದ ಸ್ಟಾರ್ಸ್ ಔಟ್?

ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯ ಗೆದ್ದಿರುವ ಭಾರತ, ಇದೀಗ ಎರಡನೇ ಟೆಸ್ಟ್ ಕೂಡಾ ಗೆದ್ದು ಸರಣಿ ಕ್ಲೀನ್ ಸ್ವೀಪ್ ಮಾಡಲು ರಣತಂತ್ರ ರೂಪಿಸ್ತಿದೆ. ಉಭಯ ತಂಡಗಳ ನಡುವಿನ ಎರಡನೇ ಟೆಸ್ಟ್ ಮ್ಯಾಚ್ ಶುಕ್ರವಾರದಿಂದ ಪ್ರಾರಂಭ ಆಗಲಿದೆ. ಕಾನ್ಪುರದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಗೆದ್ದು ಮ್ಯಾಚ್ ಡ್ರಾ ಮಾಡಿಕೊಳ್ಳೋಕೆ ಬಾಂಗ್ಲಾ ಬಾಯ್ಸ್ ಕೂಡ ಭರ್ಜರಿ ಪ್ರಾಕ್ಟೀಸ್ ಮಾಡ್ತಿದ್ದಾರೆ. ಆದ್ರೆ ಬಾಂಗ್ಲಾಗೆ ಮತ್ತೆ ಸೋಲಿನ ಶಾಕ್ ಕೊಡೋಕೆ ಟೀಂ ಇಂಡಿಯಾ ಅಂತಿಮವಾಗಿ ಯಾರ್ಯಾರನ್ನ ಕಣಕ್ಕಿಳಿಸುತ್ತೆ? ಯಾರನ್ನ ಡ್ರಾಪ್ ಮಾಡಿ ಯಾರಿಗೆ ಪ್ಲೇಯಿಂಗ್ 11ನಲ್ಲಿ ಚಾನ್ಸ್ ಕೊಡ್ತಾರೆ ಅನ್ನೋ ಬಗ್ಗೆ ಚರ್ಚೆಯಾಗಿದೆ. ಅದ್ರಲ್ಲೂ ಈ ಪ್ಲೇಯರ್​​ಗೆ ರೆಸ್ಟ್ ಕೊಡೋ ಸಾಧ್ಯತೆ ಇದೆ. ಹಾಗಾದ್ರೆ ಶುಕ್ರವಾರದ ಮ್ಯಾಚ್​ನಲ್ಲಿ ಅಂತಿಮ ಬಳಗದಲ್ಲಿ ಯಾರು ಕಣಕ್ಕಿಳೀತಾರೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಲಕ್ಷ್ಮೀ ಮೇಲೆ ಕೀರ್ತಿ ಆತ್ಮ – ಡ್ರಾಮಾ ಮಾಡಲು ಹೋಗಿ ದೆವ್ವ ಹಿಡಿತಾ?

ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ 280 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ರಿಷಭ್ ಪಂತ್ ಮತ್ತು ಶುಭ್ಮನ್ ಗಿಲ್ ಅದ್ಭುತ ಪ್ರದರ್ಶನ ನೀಡುವ ಮೂಲಕ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ಆದ್ರೆ ಇದೇ ಮ್ಯಾಚ್​ನಲ್ಲಿ ತಮ್ಮ ಕಳಪೆ ಪ್ರದರ್ಶನದ ಮೂಲಕ ಕೆಲವರು ಬಾರೀ ನಿರಾಸೆ ಮೂಡಿಸಿದ್ರು. ಇಂತವ್ರಿಗೆ ಎರಡನೇ ಟೆಸ್ಟ್​ನ ಪ್ಲೇಯಿಂಗ್​ 11ನಲ್ಲಿ ಸ್ಥಾನ ಸಿಗುತ್ತೋ ಇಲ್ವೋ ಅನ್ನೋ ಡೌಟ್ ಇದೆ. ಹಾಗೇ ಸೆಕೆಂಡ್ ಮ್ಯಾಚ್​ಗೆ ಜಸ್ಪ್ರೀತ್ ಬುಮ್ರಾರನ್ನ ಡ್ರಾಪ್ ಮಾಡ್ಬೇಕು ಅಂತಾ ಮಾಜಿ ಕ್ರಿಕೆಟರ್ಸ್ ಹೇಳಿದ್ದಾರೆ. ಯಾಕೆ ಅನ್ನೋದನ್ನೇ ಹೇಳ್ತೇನೆ ನೋಡಿ.

ಬುಮ್ರಾ ಔಟ್.. ಕುಲ್ದೀಪ್ ಇನ್!

ಬಾಂಗ್ಲಾ ವಿರುದ್ಧದ ಮೊದಲನೇ ಟೆಸ್ಟ್‌ ಪಂದ್ಯಕ್ಕೆ ಭಾರತ ತಂಡದ ಪ್ಲೇಯಿಂಗ್‌ XIನಲ್ಲಿ ಮೂವರು ವೇಗಿಗಳು ಹಾಗೂ ಇಬ್ಬರು ಸ್ಪಿನ್ನರ್‌ಗಳನ್ನು ಕಣಕ್ಕೆ ಇಳಿಸಲಾಗಿತ್ತು. ಜಸ್‌ಪ್ರೀತ್‌ ಬುಮ್ರಾ, ಮೊಹಮ್ಮದ್‌ ಸಿರಾಜ್‌ ಮತ್ತು ಆಕಾಶ್‌ ದೀಪ್ ವೇಗಿಗಳಾಗಿ ಆಡಿದ್ದರೆ, ಸ್ಪಿನ್‌ ಆಲ್‌ರೌಂಡರ್‌ಗಳಾಗಿ ರವೀಂದ್ರ ಜಡೇಜಾ ಮತ್ತು ಆರ್‌ ಅಶ್ವಿನ್ ಅವರನ್ನು ಆಡಿಸಲಾಗಿತ್ತು. ಆದ್ರೆ ಎರಡನೇ ಟೆಸ್ಟ್‌ ಪಂದ್ಯ ಕಾನ್ಪುರದ ಗ್ರೀನ್‌ ಫೀಲ್ಡ್‌ ಕ್ರೀಡಾಂಗಣದಲ್ಲಿ ನಡೆಯೋದ್ರಿಂದ ಈ ಪಿಚ್‌ ಸ್ಪಿನ್ನರ್‌ಗಳ ಸ್ನೇಹಿ. ಹೀಗಾಗಿ ಭಾರತ ತಂಡದ ಪ್ಲೇಯಿಂಗ್‌ XIನಲ್ಲಿ ಬದಲಾವಣೆಯಾಗಬಹುದು. ಭಾರತ ತಂಡದ ಮಾಜಿ ಆಟಗಾರ ಸಂಜಯ್‌ ಮಾಂಜ್ರೇಕರ್‌ ಕೂಡ ಟೀಂ ಇಂಡಿಯಾದಲ್ಲಿ ಮಾಡಬಹುದಾದ ಒಂದು ಬದಲಾವಣೆಯನ್ನ ತಿಳಿಸಿದ್ದಾರೆ.  ಮೊದಲನೇ ಟೆಸ್ಟ್‌ ಪಂದ್ಯದಲ್ಲಿ ಜಸ್‌ಪ್ರೀತ್ ಬುಮ್ರಾ ಅವರು 5 ವಿಕೆಟ್‌ಗಳನ್ನು ಕಬಳಿಸಿದ್ದರು. ಪ್ರಥಮ ಇನಿಂಗ್ಸ್‌ನಲ್ಲಿ 4 ಮತ್ತು ದ್ವಿತೀಯ ಇನಿಂಗ್ಸ್‌ನಲ್ಲಿ ಒಂದು ವಿಕೆಟ್‌ ಪಡೆದಿದ್ದರು. ಹೇಳಿ ಕೇಳಿ ಬೂಮ್ರಾ ಭಾರತ ತಂಡಕ್ಕೆ ಕೀ ಆಟಗಾರ. ಹೀಗಾಗಿ ಅವ್ರನ್ನ ಸರಿಯಾಗಿ ಬಳಸಿಕೊಳ್ಳೋದ್ರ ಜೊತೆ ಉಳಿಸಿಕೊಳ್ಳೋದು ಕೂಡ ತುಂಬಾ ಮುಖ್ಯ. ಹಾಗಾಗಿ ಅವರಿಗೆ ಎರಡನೇ ಟೆಸ್ಟ್‌ನಲ್ಲಿ ವಿಶ್ರಾಂತಿ ನೀಡಬೇಕೆಂದು ಸಂಜಯ್‌ ಮಾಂಜ್ರೇಕರ್‌ ಸಲಹೆ ನೀಡಿದ್ದಾರೆ. ಇದೇ ವೇಳೆ ಕುಲ್ದೀಪ್ ಯಾದವ್​ಗೆ ಚಾನ್ಸ್ ನೀಡಬೇಕು ಎಂದಿದ್ದಾರೆ. ಚೆನ್ನೈ ಟೆಸ್ಟ್‌ನಲ್ಲಿ ಚೇನಾಮನ್ ಸ್ಪಿನ್ನರ್ ಕುಲ್ದೀಪ್‌ ಯಾದವ್ ಅವರನ್ನು ಆಡಿಸಿದ್ದರೆ ತಂಡಕ್ಕೆ ಲಾಭವಾಗುತ್ತಿತ್ತು. ಎಡಗೈ ಲೆಗ್‌ ಸ್ಪಿನ್ನರ್‌ ಅನ್ನು ಸುಲಭವಾಗಿ ಕೈ ಬಿಡಲು ಸಾಧ್ಯವಿಲ್ಲ. ಏಕೆಂದರೆ ಚೆನ್ನೈನಲ್ಲಿ ಒಂದೂವರೆ ದಿನ ಮಾತ್ರ ಪಿಚ್‌ ಫಾಸ್ಟ್‌ ಬೌಲರ್‌ಗಳಿಗೆ ನೆರವು ನೀಡಿತ್ತು. ಒಂದು ವೇಳೆ ಚೆನ್ನೈನಲ್ಲಿ ಕುಲ್ದೀಪ್‌ ಆಡಿದ್ದರೆ ಚೆನ್ನಾಗಿರುತ್ತಿತ್ತು. ಹೀಗಾಗಿ ಎರಡನೇ ಟೆಸ್ಟ್‌ ಪಂದ್ಯಕ್ಕೆ ಜಸ್‌ಪ್ರೀತ್‌ ಬುಮ್ರಾಗೆ ವಿಶ್ರಾಂತಿ ನೀಡಿದ್ರೆ ಕುಲ್ದೀಪ್‌ ಯಾದವ್‌ ಅವರನ್ನು ಪ್ಲೇಯಿಂಗ್‌ XIನಲ್ಲಿ ಆಡಿಸ್ಬೇಕು ಎಂದಿದ್ದಾರೆ. ಮಾಂಜ್ರೇಕರ್ ಅವ್ರ ಪ್ರಕಾರ ಪ್ಲೇಯಿಂಗ್ 11ನಲ್ಲಿ ರೋಹಿತ್‌ ಶರ್ಮಾ, ಯಶಸ್ವಿ ಜೈಸ್ವಾಲ್‌, ಶುಭಮನ್ ಗಿಲ್‌, ವಿರಾಟ್‌ ಕೊಹ್ಲಿ, ಕೆಎಲ್‌ ರಾಹುಲ್‌, ರಿಷಭ್‌ ಪಂತ್‌, ರವೀಂದ್ರ ಜಡೇಜಾ, ಆರ್‌ ಅಶ್ವಿನ್‌, ಕುಲ್ದೀಪ್ ಯಾದವ್‌, ಮೊಹಮ್ಮದ್‌ ಸಿರಾಜ್, ಆಕಾಶ್‌ ದೀಪ್‌ ಗೆ ಚಾನ್ಸ್ ನೀಡಬೇಕು.

ಸದ್ಯ ಬಾಂಗ್ಲಾ ವಿರುದ್ಧದ ಎರಡನೇ ಟೆಸ್ಟ್ ಮ್ಯಾಚ್​ಗೆ ಕೌಂಟ್​ಡೌನ್ ಶುರುವಾಗಿದೆ. ಉಭಯ ತಂಡಗಳ ಆಟಗಾರರು ಮೈದಾನದಲ್ಲಿ ಕಸರತ್ತು ನಡೆಸ್ತಿದ್ದಾರೆ. 2025ರ ವಿಶ್ವಟೆಸ್ಟ್ ಚಾಂಪಿಯನ್​ಶಿಪ್​ನ ಭಾಗವಾಗಿರುವ ಈ ಪಂದ್ಯ ಭಾರತಕ್ಕೂ ಕೂಡ ತುಂಬಾನೇ ಇಂಪಾರ್ಟೆಂಟ್ ಆಗಿದೆ. ಹೀಗಾಗಿ ಬಾಂಗ್ಲಾ ಬಾಯ್ಸ್​ಗೆ ಮತ್ತೊಮ್ಮೆ ಸೋಲಿನ ಆಘಾತ ನೀಡಿ ಸರಣಿ ಕ್ಲೀನ್ ಸ್ವೀಪ್ ಮಾಡೋ ಜೋಶ್​ನಲ್ಲಿದ್ದಾರೆ.

Shwetha M

Leave a Reply

Your email address will not be published. Required fields are marked *